fbpx
ಸಾಧನೆ

ಮನೆಗೆ ಕರೆಂಟ್ ಹಾಕಿಸಲು ದುಡ್ಡಿಲ್ಲ , ಇಂಗ್ಲಿಷ್ /ಹಿಂದಿ ಬರ್ದೇ ಇದ್ರೂ ಐ ಎ ಎಸ್ ಅಧಿಕಾರಿಯಾದವನ ಕಥೆ..

ಮನೆಗೆ ಕರೆಂಟ್ ಹಾಕಿಸಲು ದುಡ್ಡಿಲ್ಲ , ಇಂಗ್ಲಿಷ್ /ಹಿಂದಿ ಬರ್ದೇ ಇದ್ರೂ ಐ ಎ ಎಸ್ ಅಧಿಕಾರಿಯಾದವನ ಕಥೆ..

ಆಂಧ್ರ ಪ್ರದೇಶದ ಮುವತ್ತರ ಹರೆಯದ ದಿಟ್ಟ ಯುವಕನ ಹೆಮ್ಮೆಯ ಸಾಧನೆಯ ಕಥೆ ಇದು. ಗೋಪಾಲ ಕೃಷ್ಣ ರೊಲಂಕಿ ಎಂಬ ಆಂದ್ರ ಫ್ರದೇಶದ ಶ್ರಿಕಕುಲಮ್ ಜಿಲ್ಲೆಯ ಪರಸಂಬಾ ಪುಟ್ಟ ಗ್ರಾಮದ ಈ ಯುವಕ ಕಡು ಬಡವ ಕುಟುಂಬದಲ್ಲಿ ಹುಟ್ಟಿದ್ದ. ಕತ್ತಲಾದರೆ ಮನೆಯಲ್ಲಿ ದೀಪ ಹಚ್ಚಲು ಆಗದಿರುವಂಥ ಪರಿಸ್ಥಿತಿ. ಇವರ ಅಪ್ಪ ಅಮ್ಮ ಬೇರೆಯವರ ಹೊಲದಲ್ಲಿ ಅಳಾಗಿ ದುಡಿದು ಮಗನಿಗೆ ಸರಕಾರಿ ಶಾಲೆಯಲ್ಲಿ ಓದಿಸುವುದಕ್ಕೂ ಕಷ್ಟ ಪಡುತ್ತಿದ್ದರು.ಅಂಥಹ ವಾತಾವರಣದಲ್ಲೂ ಕಷ್ಟಪಟ್ಟು ಓದಿದ.

ಗೋಪಾಲನ ತಾಯಿ ಅನಕ್ಷರಸ್ಥಳಾಗಿದ್ದರೂ, ತನ್ನ ಮಗನು ಉತ್ತಮ ಶಾಲೆಯಲ್ಲಿ ಅಧ್ಯಯನ ಮಾಡಲು ಯಾವಾಗಲೂ ಬಯಸಿದ್ದರು ಆದರೆ ಸರ್ಕಾರಿ ಶಾಲೆಯಲ್ಲಿ ಅವರನ್ನು ಕಳುಹಿಸಲು ಮಾತ್ರ ಸಾಧ್ಯವಾಗಿತ್ತು.
ದುಡ್ಡಿನ ಅಭಾವದಿಂದಾಗಿ ದೂರ ಶಿಕ್ಷಣದ ಮೂಲಕ 2 ತಿಂಗಳ ಶಿಕ್ಷಕ ತರಬೇತಿಯನ್ನು ಮುಗಿಸಿ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಕರಾದರು. ಆಲ್ಲಿ 11 ವರ್ಷ ಸೇವೆ ಸಲ್ಲಿಸಿದರು. ಈ ಮಧ್ಯ ಅವರ ಮನದ ಅತೀ ಮಹತ್ವದ ಬಯಕೆಯಾಗಿದ್ದ ಯು ಪಿ ಎಸ್ ಸಿ ಪರೀಕ್ಷೆಯನ್ನು ಪಾಸ್ ಮಾಡುವುದು. ಯು ಪಿ ಎಸ್ ಸಿ ತರಬೇತಿ ಸಂಸ್ಥೆಗಳ ಬಾಗಿಲನ್ನು ತಟ್ಟಿದರು. ಆದರೆ ಇಂಗ್ಲೀಷ್ ಮತ್ತು ಹಿಂದಿ ಬರದ ಕಾರಣ ಎಲ್ಲಿಯೂ ಪ್ರವೇಶ ದೊರಕಲಿಲ್ಲ. 3 ಬಾರಿ ಯು ಪಿ ಎಸ್ ಸಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಲಿಲ್ಲ.

ಅವರು ತೆಲುಗು ಸಾಹಿತ್ಯವನ್ನು ಸಿವಿಲ್ಸ್ (ಮುಖ್ಯ) ಪರೀಕ್ಷೆಯಲ್ಲಿ ತಮ್ಮ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿದರು. ಕುತೂಹಲಕಾರಿಯಾಗಿ, ಅವರು ತೆಲುಗು ಭಾಷೆಯಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಕಾಣಿಸಿಕೊಳ್ಳಲು ಯುಪಿಎಸ್ಸಿಗೆ ಅವಕಾಶ ನೀಡಿತು . “ತೆಲುಗು ಭಾಷಾಂತರಕಾರರ ಸಹಾಯದಿಂದ ನಾನು ಸಂದರ್ಶನವನ್ನು ಧೈರ್ಯದಿಂದ ಎದುರಿಸಬಲ್ಲೆ” ಎಂದು ಅವರು ಹೇಳಿದರು.


ಅಂತೆಯೇ ತೆಲಗು ಭಾಷೆಯಲ್ಲಿ ಯು ಪಿ ಎಸ್ ಸಿ ಪರೀಕ್ಷೆ ಬರೆದು ಪ್ರಯತ್ನ ಬಿಡದೆ ಮುಂದುವರೆದರು. ಈ ಬಾರೀ ದೇಶಕ್ಕೆ 3ನೇಸ್ಥಾನವನ್ನು ಪದೆದು ಐ ಎ ಎಸ್ ಅಧಿಕಾರಿಯಾದರು

ದೇಶಕ್ಕೆ ಮೂರನೇಯ ಸ್ಥಾನವನ್ನು ಪಡೆದಿದ್ದಾರೆ.ಅನೇಕ ಯುವಕರಿಗೆ ಮಾದರಿಯಾಗಿರುವ ಇವರಿಗೆ ನಮ್ಮ ಕಡೆ ಇಂದ ಶುಭ ಹಾರೈಸೋಣ.

ನಮ್ಮ ಈ ಪ್ರೇರಣೆಯ ಕಥೆ ನಿಮಗೆ ಇಷ್ಟ ವಾದರೆ ನಿಮ್ಮ ಅಮೂಲ್ಯವಾದ ಲೈಕ್ ಅನ್ನು ನಮ್ಮ ಪುಟ
fb.com/Aralikattez ಗೆ ಕೊಡಲು ಮರೆಯಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
nagaraj says:

Super bro

To Top