fbpx
ದೇವರು

ಆಂಜನೇಯ ಸ್ವಾಮಿಯ ಸಿಂಧೂರ ಅಥವಾ ಅಂಜನದ ಮಹತ್ವ ಏನು ಗೊತ್ತಾ ?

ಸ್ತ್ರೀಯರು ಹಣೆಗೆ ಏನನ್ನು ಇಟ್ಟುಕೊಂಡರೆ ಒಳ್ಳೆಯದು.

ಪ್ರತಿಯೊಬ್ಬ ಸ್ತ್ರೀಯರು ಕೂಡ ಇದನ್ನು ಇಟ್ಟುಕೊಳ್ಳಲೇಬೇಕು. ಇಲ್ಲ ವೆಂದರೆ ದೃಷ್ಟಿದೋಷ ತಪ್ಪಿದಲ್ಲ. ನೋಡುವವರ ದೃಷ್ಟಿ ಅಪವಿತ್ರ ವಾಗುವುದಕ್ಕೆ ಸಾಧ್ಯತೆ ಹೆಚ್ಚಿದೆ.

ಯಾರಾದರೂ ಸರಿ ಪ್ರತಿ ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ.ಹಾಗಂತ  ಸುಮ್ಮನೇ ಹೋಗಬಾರದು ನೀವು ದೇವಸ್ಥಾನಕ್ಕೆ ಹೋಗಬೇಕಾದರೆ ಸಿಂಧೂರವನ್ನು ತೆಗೆದು ಕೊಂಡು ಹೋಗಿ ಅರ್ಚಕರಲ್ಲಿ ಕೊಟ್ಟು  ಪೂಜೆ ಮತ್ತು ಅರ್ಚನೆ ಮಾಡಿಸಿ ಎಲ್ಲಾ ಸ್ತ್ರೀಯರು ಬೈತಲೆಗೆ  ಸಿಂಧೂರವನ್ನು ಇಟ್ಟುಕೊಳ್ಳಬೇಕು.

ಹೀಗೆ ಸಿಂಧೂರವನ್ನು ಬೈತಲೆಗೆ ಇಟ್ಟುಕೊಳ್ಳುವುದರಿಂದ ಎಂಥದ್ದೇ ದೃಷ್ಟಿದೋಷವಿದ್ದರೂ,ಅಪವಿತ್ರ ದೋಷ ವಿದ್ದರೂ  ಸರಿಯೇ ಎಲ್ಲಾ ನಿವಾರಣೆಯಾಗಿ ಬಿಡುತ್ತದೆ.

ನೆನಪಿಡಿ ಶನಿವಾರದಂದೇ ಹನುಮಂತನ ದೇವಾಲಯಕ್ಕೆ  ಸಿಂಧೂರವನ್ನು ತೆಗೆದುಕೊಂಡು ಹೋಗಬೇಕು.ಅಂದೇ ಬೈತಲೆಗೆ ಇಟ್ಟುಕೊಳ್ಳಬೇಕು.

ಮನುಷ್ಯನ  ಕಣ್ಣು ಮತ್ತು ಆ  ಕೆಟ್ಟ ದೃಷ್ಟಿ  ಮೃಗಕ್ಕಿಂತ ಕೆಟ್ಟದ್ದು, ನಾನು,ನನ್ನದು, ನನಗೆ ಮಾತ್ರ ಬೇಕು ಅನ್ನುವಂತದ್ದು ಬರೀ ಮೋಸವೇ ತುಂಬಿರುವ ಈ ಕಲಿಯುಗದಲ್ಲಿ  ಕೆಟ್ಟ ಕಣ್ಣಿನ ದೃಷ್ಟಿ ಸಾಮಾನ್ಯ. ಅಂತಹ ಕೆಟ್ಟ ದೃಷ್ಟಿಯನ್ನು ತೆಗೆದುಹಾಕುವಂತಹ ಶಕ್ತಿ ಈ ಹನುಮಂತನ ಸಿಂಧೂರಕ್ಕೆ ಇದೆ.

ಹನುಮಂತನ ಸಿಂಧೂರಕ್ಕಿರುವ ಇನ್ನೊಂದು ಹೆಸರೇ ‘ ಅಂಜನ’  ಯಾಕೆಂದರೆ ಹನುಮಂತನಿಗೆ ‘ ಅಂಜನಿ ಸುತ’ ಎಂದೂ ಕೂಡ ಕರೆಯುತ್ತಾರೆ.

ಅಂಜನಿ ಸುತ ಎಂದರೆ ಅಂಜನ ಹನುಮಂತನ ( ಮಾರುತಿ) ತಾಯಿ,ಸುತ ಎಂದರೆ ಮಗ ಎಂದರ್ಥ.ಅದಕ್ಕಾಗಿ ಅಂಜನಿ ಸುತ (ಅಂಜನಾಳ ಮಗ) ಎಂದು ಸಹ ಕರೆಯುತ್ತಾರೆ, ಆದುದರಿಂದಲೇ  ಸಿಂಧೂರಕ್ಕೆ ಅಂಜನ ಎಂಬ ಹೆಸರು ಸಹ ಬಂತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top