fbpx
ದೇವರು

ಲಕ್ಷ್ಮಣ ಹೆಂಡತಿ ಊರ್ಮಿಳಾ 14 ವರ್ಷ ನಿದ್ದೆ ಮಾಡಿದ್ರ ಹಿಂದೆ ಇಷ್ಟೊಂದು ದೊಡ್ಡ ತ್ಯಾಗ ಇದೆ ಅಂತ ಈಗ್ಲೇ ಗೊತ್ತಾಗಿದ್ದು..

ರಾಮಾಯಣದ ಪೌರಾಣಿಕ  ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು ? ಸೀತೆಗೆ ಒಬ್ಬಳು ತಂಗಿಯಿದ್ದಳು,ಅವಳೇ ಲಕ್ಷ್ಮಣನ ಹೆಂಡತಿ ಎಂದು ಗೊತ್ತೇ ?

ರಾಮಾಯಣದಲ್ಲಿ ಊರ್ಮಿಳೆಯನ್ನು ಸದಾ ಕಾಲಕ್ಕೂ ಎಲ್ಲರಿಂದಲೂ  ಮರೆಯಲ್ಪಟ್ಟಿರುವ  ನಾಯಿಕಿಯೆಂದು ಪರಿಗಣಿಸಲಾಗಿದೆ. ಆದರೂ ಸಹ ವಾಲ್ಮೀಕಿ ಮಹರ್ಷಿಗಳು ಮರೆಯದೇ  ಅವಳ ಬಗ್ಗೆ ಒಂದೆರಡು ಸಾಲುಗಳನ್ನು ಅವರ ಪುಸ್ತಕವಾದ ವಾಲ್ಮೀಕಿ  ರಾಮಾಯಣದಲ್ಲಿ ಬರೆದಿದ್ದಾರೆ.ಅವಳ ತ್ಯಾಗವೂ ಯಾವುದಕ್ಕೂ  ಸರಿಸಾಟಿಯಿಲ್ಲದ್ದಾಗಿದೆ.

ಇಲ್ಲಿ ಊರ್ಮಿಳೆಯ ಬಗ್ಗೆ ಇರುವ ಎಲ್ಲಾ ವಿಷಯಗಳನ್ನು ನಿಮ್ಮ ಜೊತೆ ನಾವು ಹಂಚಿಕೊಳ್ಳುತ್ತಿದ್ದೇವೆ. ಎಷ್ಟೋ ಕಾಲದಿಂದ ವಾಲ್ಮೀಕಿ ಮಹರ್ಷಿಗಳು ಮತ್ತು ಅವರಷ್ಟೇ ಸಮಕಾಲೀನ ಬರಹಗಾರರು ಅವಳ ಕಥೆಯನ್ನೇ ಮುಚ್ಚಿಹಾಕಿದ್ದಾರೆ.

1.ಊರ್ಮಿಳ  ಜನಕ  ಮಹಾರಾಜನ  ಎರಡನೇಯ  ಮಗಳಾಗಿದ್ದಳು.

ಮಹಾರಾಜ ಜನಕ ಮತ್ತು ರಾಣಿ ಸುನನ್ಯಗೆ ಸೀತೆಯು ಸಾಕು ಮಗಳಾಗಿದ್ದಳು. ಒಂದು ಯಜ್ಞ ಮಾಡುವುದಕ್ಕೋಸ್ಕರ  ಭೂಮಿಯನ್ನು ಉಳುಮೆ ಮಾಡುವ ಸಮಯದಲ್ಲಿ ಒಂದು ಚಿಕ್ಕ ಮಗುವಾಗಿ ಸೀತೆಯು ಸಿಕ್ಕಳು. ಊರ್ಮಿಳೆಯು  ರಾಜ ಜನಕ ಮತ್ತು ರಾಣಿ ಸುನನ್ಯ ಅವರ ಸ್ವಂತ ಮಗಳಾಗಿದ್ದಳು.ಅವಳು ವಯಸ್ಸಿನಲ್ಲಿ ಸೀತೆಗಿಂತಲೂ ಬಹಳ ವರ್ಷ ಚಿಕ್ಕವಳು.

2.ಊರ್ಮಿಳೆಯು ರಾಮ ಮತ್ತು ಸೀತೆಯ ಮದುವೆ ನಿಶ್ಚಯ ಮಾಡುವ ಸಂದರ್ಭದಲ್ಲಿ , ರಾಮನ ತಮ್ಮನಾದ  ಲಕ್ಷ್ಮಣನಿಗೆ ಮನಸೋತಳು.

ರಾಮನು ಬಿಲ್ಲನ್ನು ಮುರಿದಾಗ ತಕ್ಷಣವೇ ಸೀತೆಯನ್ನು ಮದುವೆಯಾಗುವುದಕ್ಕೆ ಅರ್ಹತೆಯನ್ನು ಪಡೆದು ತಕ್ಕ  ವ್ಯಕ್ತಿಯಾದನು.ನಂತರ ದಶರಥ ಮಹಾರಾಜರು ಮಿತಿಲಾ ಸಾಮ್ರಾಜ್ಯಕ್ಕೆ ಬಂದು ಜನಕ ಮಹಾರಾಜನ ಬಳಿ ಹೋಗಿ ರಾಮ ಮತ್ತು ಸೀತೆಯ ಮದುವೆಯ  ದಿನ ಮತ್ತು ಸಮಯ ನಿಗದಿ ಮಾಡಿದರು.ನಂತರ ಇದೇ ಸಮಯದಲ್ಲಿ ರಾಜ ಕುಮಾರಿ ಊರ್ಮಿಳ ಮತ್ತು ರಾಜ ಕುಮಾರ ಲಕ್ಷ್ಮಣರ ವಿವಾಹವನ್ನು ನಿಶ್ಚಯ ಮಾಡಿ ,ಶ್ರೀ ರಾಮ ಮತ್ತು ಸೀತೆ ಮದುವೆಯಾದ ದಿನದಂದೇ  ಊರ್ಮಿಳೆ ಮತ್ತು ಲಕ್ಷ್ಮಣರ ವಿವಾಹವು ಕೂಡ  ನೆರವೇರಿತು.

3.ಊರ್ಮಿಳ ಲಕ್ಷ್ಮಣನ 14 ವರ್ಷಗಳ  ವನವಾಸದಲ್ಲಿಯೂ ಸಹ ಅವನ ಜೊತೆಗೆ ಇರಲು ಬಯಸಿದ್ದಳು,ಆದರೆ ಲಕ್ಷ್ಮಣ ನಿರಾಕರಿಸಿದನು.

ವಾಲ್ಮೀಕಿ ರಾಮಾಯಣದ ಪ್ರಕಾರ ಊರ್ಮಿಳೆಯು ತನ್ನ ಭಾವನಾದ ರಾಮ, ಪತಿಯಾದ ಲಕ್ಷ್ಮಣ ಮತ್ತು ತನ್ನ ಅಕ್ಕನಾದ ಸೀತೆಯ ಜೊತೆ  14 ವರ್ಷಗಳ ವನವಾಸಕ್ಕೆ ಕಾಡಿಗೆ ತೆರಳಲು  ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಳು.ಆದರೆ ಲಕ್ಷ್ಮಣ ಅವಳನ್ನು ಇಲ್ಲೇ ಉಳಿಯಲು ಹೇಳಿದ.ಹಾಗೆ ಅರಮನೆಯಲ್ಲಿ ಇನ್ನುಳಿದವರ ಯೋಗಕ್ಷೇಮವನ್ನು  ನೋಡಿಕೊಂಡು ಇಲ್ಲೇ ಉಳಿಯಲು  ಹೇಳಿದ.ಇನ್ನು ಮುಂದೆ ನಾನು ನನ್ನ ಅಣ್ಣನ ಜೊತೆಯಲ್ಲಿಯೇ  ಇದ್ದುಕೊಂಡು  ಅವರ ಸೇವೆ ಮಾಡುತ್ತಾ ನಿನ್ನನ್ನು ಸಹ ನೋಡಿಕೊಳ್ಳಲು ನನಗೆ ಸಮಯ ಸಿಗುವುದಿಲ್ಲ,ನಿನ್ನ ಕಡೆ ಗಮನ ಕೊಟ್ಟು,ನಿನ್ನ ರಕ್ಷಣೆಗೆ ಕೂಡ  ಮಾಡಲು ನನ್ನ ಬಳಿ ಸಮಯವಿರುವುದಿಲ್ಲ.ಆದ್ದರಿಂದ ನೀನು ಇಲ್ಲಿಯೇ ಉಳಿದುಕೊ ನಮ್ಮ ಜೊತೆ ಬರುವುದು ಬೇಡ ಎಂದು ಪರಿಪರಿಯಾಗಿ ಬೇಡಿಕೊಂಡನು. ಊರ್ಮಿಳೆಯು ಹೆಂಡತಿಯಾಗಿ ತನ್ನ ಗಂಡನ ಆಜ್ಞೆಯನ್ನು ಪಾಕಿಸಬೇಕಾಗಿದ್ದರಿಂದ  ಇದಕ್ಕೆ ಒಪ್ಪಿಕೊಂಡಳು.

4.ಊರ್ಮಿಳ 14 ವರ್ಷಗಳ ತನಕ ನಿದ್ರೆಯಲ್ಲಿಯೇ ಸಮಯ ಕಳೆದಳು.ಆದುದರಿಂದ ಲಕ್ಷ್ಮಣ ಅವನ ಕಾರ್ಯವನ್ನು  ಯಾವುದೇ ಅಡ್ಡಿ ಆತಂಕವಿಲ್ಲದೆ ಸಂಪೂರ್ಣವಾಗಿ ತನ್ನ ಕರ್ಥವ್ಯವನ್ನು ನಿರ್ವಹಿಸಿದನು.

14 ವರ್ಷಗಳ ವನವಾಸದಲ್ಲಿ ಮೊದಲ ರಾತ್ರಿಯೇ ಕಾಡಿನಲ್ಲಿ ರಾಮ ಸೀತೆಯರಿಬ್ಬರು  ನಿದ್ರೆಗೆ ಜಾರಿದರು.ಆಗ ಲಕ್ಷ್ಮಣನು ಕೂಡ ಇವರ ಜೊತೆ ಹೋದನು.ಆದರೆ ಅವರಿಬ್ಬರನ್ನು ನೋಡಿಕೊಂಡೇ  ಕುಳಿತು ಬಿಟ್ಟನು ಆಗ ನಿದ್ರಾದೇವಿಯನ್ನು ಆಹ್ವಾನಿಸಿ ತನ್ನ ಕರ್ಥವ್ಯದ ಬಗ್ಗೆ ಗಮನ ಹರಿಸುವ ಸಲುವಾಗಿ ಲಕ್ಷ್ಮಣನು ನಿದ್ರಾದೇವಿಯನ್ನು ಪರಿಪರಿಯಾಗಿ ಬೇಡಿಕೊಂಡು. 14 ವರ್ಷಗಳ ವರೆಗೆ ನನ್ನನ್ನು ನಿದ್ರೆಯಿಂದ ದೂರ ಉಳಿಯುವಂತೆ ಬಿಟ್ಟುಬಿಡಬೇಕಾಗಿ ಕೇಳಿಕೊಂಡ,ಆಗ ನಾನು ನನ್ನ  ಧರ್ಮವನ್ನು ಪಾಲಿಸಲು ಸಹಕಾರಿಯಾಗುತ್ತದೆ ಮತ್ತು ಯಾವುದೇ ಅಡ್ಡಿ, ಆತಂಕಗಳು ಇಲ್ಲದೆ  ತನ್ನ ಕರ್ತವ್ಯವನ್ನು ಸಹ ನಿರ್ವಹಿಸಬಹುದು ಎಂದನು.

ನಿದ್ರಾ ದೇವಿಯು ಅವನ ಈ ಭಕ್ತಿಯನ್ನು ಮೆಚ್ಚಿ ಅವನ ಇಚ್ಛೆಯನ್ನು ಒಪ್ಪಿಕೊಂಡು ಲಕ್ಷ್ಮಣನಿಗೆ 14 ವರ್ಷಗಳು ಕಳೆಯುವ ತನಕ ನಿದ್ರೆಯು ಬಾರದೇ ಇರಲಿ ಎಂದು ಆಶೀರ್ವದಿಸಿದಳು.

ಆದರೆ ಇದು ಪ್ರಕೃತಿಗೆ ವಿರುದ್ಧವಾಗಿರುವುದರಿಂದ , ಲಕ್ಷ್ಮಣನ ನಿದ್ರೆಯನ್ನು  ಯಾರಾದರು ಒಬ್ಬರು ಇದರಲ್ಲಿ ಪಾಲನ್ನು ತೆಗೆದುಕೊಳ್ಳಬೇಕಾಗಿತ್ತು. ಆದುದರಿಂದ ನಿದ್ರಾದೇವಿಯನ್ನು ಒಪ್ಪಿಸಿ ತನ್ನ ನಿದ್ರೆಯ ಪಾಲನ್ನು ತನ್ನ ಹೆಂಡತಿಯಾದ ಊರ್ಮಿಳೆಗೆ ಕೊಡಿ,ಅವಳು ಖಂಡಿತವಾಗಿಯೂ ಇದಕ್ಕೆ ಒಪ್ಪಿಕೊಳ್ಳುತ್ತಾಳೆ ಎಂದನು.ಆಗ ನಿದ್ರಾದೇವಿಯು ಊರ್ಮಿಳೆಯ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿದಳು ಇದಕ್ಕೆ ಊರ್ಮಿಳೆಯು ಸಹ ಒಪ್ಪಿಕೊಂಡಳು.ಇದರಿಂದಲೇ ಲಕ್ಷ್ಮಣನು ಯಾವಾಗಲೂ ಎಚ್ಚರದಿಂದ ಇದ್ದು  ಯಾವುದೇ  ಒತ್ತಡ ,ಯೋಚನೆಗಳು ಇಲ್ಲದೆ ತನ್ನ ಕರ್ಥವ್ಯ ಮತ್ತು ಧರ್ಮ ಪಾಲನೆಯನ್ನು   ಹಗಲು ಇರುಳು ಎನ್ನದೇ  ತನ್ನ ಸೇವೆಯನ್ನು  ಮಾಡಿದನು.ಆಗ ಊರ್ಮಿಳೆಯು ಈ ಕಾರಣದಿಂದಲೇ ಸದಾ ಹಗಲು ರಾತ್ರಿ ಕೂಡ  14 ವರ್ಷಗಳ ಸಹ ನಿದ್ರೆಯಲ್ಲಿಯೇ  ಕಾಲ ಕಳೆದಳು.

5.ಲಕ್ಷ್ಮಣನು ಊರ್ಮಿಳೆಯ ಸಹಾಯವಿಲ್ಲದೆ ಮೇಘನಾದನನ್ನು ಎಂದಿಗೂ ಸೋಲಿಸಲು ಆಗುತ್ತಿರಲಿಲ್ಲ.

ರಾವಣನ ಮಗ ಮೇಘನಾದ ಅತ್ಯಂತ ಶಕ್ತಿಶಾಲಿ  ಮತ್ತು ಪ್ರಭಲನಾಗಿದ್ದನು.  ಯಾವುದೇ ತರದ ಯುದ್ಧದಲ್ಲಿಯೂ ಸಹ ಯಾರು ಕೂಡ ಅವನನ್ನು ಸೋಲಿಸಲು ಆಗುತ್ತಿರಲಿಲ್ಲ.ಆದರೆ ಲಕ್ಷ್ಮಣ ಒಬ್ಬನಿಂದ ಮಾತ್ರ ಈ ಕೆಲಸ ಸಾಧ್ಯವಾಯಿತು ಯಾಕೆಂದರೆ ಅವನಿಗೆ 14 ವರ್ಷಗಳ ನಿದ್ರೆಯಿಲ್ಲದ್ದಿದ್ದರಿಂದ,  ಇದೇ ಕಾರಣದಿಂದಾಗಿಯೇ  ಸುಲಭವಾಗಿ ಅಜೇಯನಾದ  ಮೇಘನಾದಾನನ್ನು ಸೋಲಿಸಿ ಒಡೆದು ಉರುಳಿಸಿದನು ಕೊನೆಗೆ ಲಕ್ಷ್ಮಣನ ಕೈಯಿಂದಲೇ ಹತನಾದನು.ಇದ್ಯಾವುದೂ ಕೂಡ ಅಷ್ಟು ಸುಲಭವಾಗಿರಲಿಲ್ಲ ಇದೆಲ್ಲವೂ ಆಗಿದ್ದು ಊರ್ಮಿಳೆಯ ಆ ಒಂದು ಸಹಾಯದಿಂದಲೇ.

6.ಊರ್ಮಿಳೆಯು ನಿದ್ರೆಯಿಂದ ಎಚ್ಚರವಾದಾಗ ರಾಮನು ಕೀರಿಟವನ್ನು ತೊಟ್ಟು  ಅಯೋದ್ಯೆಯ ರಾಜನಾಗಿ ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಂಡಳು.

14 ವರ್ಷಗಳ ಕಾಡಿನ ವನವಾಸದ ನಂತರ  ರಾಮ ಲಕ್ಷ್ಮಣರು  ಸೀತೆಯ ಸಮೇತ  ಅಯೋದ್ಯೆಗೆ ಮರಳಿ ಬಂದಾಗ ,ನಿದ್ರಾದೇವಿಯು ಮತ್ತೆ ಬಂದು ಲಕ್ಷ್ಮಣನ  ಆ ಒಂದು ವಚನದ ಬಗ್ಗೆ  ಜ್ಞಾಪಕ ಮಾಡಿಸಿದಳು.ಆಗ ಲಕ್ಷ್ಮಣ ನಿದ್ರೆಗೆ ಜಾರಿದ ಮತ್ತು ಊರ್ಮಿಳೆಯು  ನಿದ್ರೆಯಿಂದ ಎಚ್ಚರಗೊಂಡಳು. ಆಗ ರಾಮನು ಅಯೋದ್ಯೆಯ ರಾಜನಾಗಿ ಕೀರಿಟ ತೊಟ್ಟು ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಂಡಳು.

ಊರ್ಮಿಳೆಯು ಕೂಡ ರಾಮಾಯಣದಲ್ಲಿ ನಿಜವಾಗಿಯೂ ಶ್ಲಾಘಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದಳು.ವಾಲ್ಮೀಕಿ ಮಹರ್ಷಿಗಳು ಅವರ ಪುಸ್ತಕದಲ್ಲಿ  ಹೇಳಿರುವ ಪ್ರಕಾರ  ಅವಳು ಅವಳ ಪರಿವಾರವನ್ನು ಭಕ್ತಿ ಭಾವದಿಂದಲೇ ನೋಡುತ್ತಿದ್ದಳು ಮತ್ತು ತನ್ನ ಗಂಡನ ಶ್ರೇಯೋಭಿವೃದ್ಧಿಗೆ ಸಹಾಯ ಮಾಡಿದ್ದಾಳೆ.ಅವಳು ಮಾಡಿರುವ ಕೆಲಸ ಕೇವಲ ಪ್ರಶಂಸನೀಯ ಮಾತ್ರವಲ್ಲ ಅದು ಎಲ್ಲರಿಗೂ ಮಾದರಿಯಂತಿದೆ.ಇದೇ ಕಾರಣಕ್ಕಾಗಿಯೇ ಅವಳನ್ನು ಆಗಾಗ್ಗೆ ರಾಮಾಯಣದ ನಾಯಕಿಯೆಂದು ಕರೆಯುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top