fbpx
ಆರೋಗ್ಯ

ಗರ್ಭ ನಿರೋಧಕಗಳನ್ನು ಬಳಸದೆ ಗರ್ಭ ಉಂಟಾಗದ ಹಾಗೆ ಲೈಂಗಿಕ ಕ್ರಿಯೆ ಮಾಡಲು ತಾಪಮಾನ ವಿಧಾನ..

ಗರ್ಭ ನಿರೋಧಕಗಳನ್ನು ಬಳಸದೆ ಗರ್ಭ ಉಂಟಾಗದ ಹಾಗೆ ಲೈಂಗಿಕ ಕ್ರಿಯೆ ಮಾಡಲು ತಾಪಮಾನ ವಿಧಾನ..

ನಾನು ತಾಪಮಾನ ವಿಧಾನವನ್ನು ಹೇಗೆ ಬಳಸುವುದು?

ನಿಮ್ಮ ಶರೀರದ ತಾಪಮಾನವು ನೈಸರ್ಗಿಕವಾಗಿ ನಿಮ್ಮ ಋತುಚಕ್ರದ ಉದ್ದಕ್ಕೂ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಹೋಗುತ್ತದೆ. ಇದು ನಿಮ್ಮ ಚಕ್ರದ ಮೊದಲ ಭಾಗದಲ್ಲಿ ಕಡಿಮೆಯಾಗಿರುತ್ತದೆ ಅಂದರೆ ಮುಟ್ಟಿನ ಮೊದಲ ಎರಡು ವಾರ ಮತ್ತು ಅಂಡಾಣು ಬಿಡುಗಡೆಯಾಗುವ ಸಮಯ ಏರುತ್ತದೆ. ಹೆಚ್ಚಿನ ಜನರಿಗೆ ಅಂಡೋತ್ಪತ್ತಿಗಿಂತ ಮೊದಲು 96-98 ಡಿಗ್ರಿ ಫ್ಯಾರನ್ಹೀಟ್ ತಾಪಮಾನವಾಗಿರುತ್ತದೆ. ನೀವು ಅಂಡಾಣು ಬಿಡುಗಡೆಯಾದ ನಂತರ, ಇದು 97-99 ° F ವರೆಗೆ ಹೋಗುತ್ತದೆ.

ತಾಪಮಾನ ವಿಧಾನವನ್ನು ಬಳಸಲು, ಪ್ರತಿ ದಿನವೂ ನಿಮ್ಮ ದೇಹದ ತಾಪಮಾನವನ್ನು ಬರೆದುಕೊಳ್ಳುತ್ತಾ ಹೋಗಬೇಕು ಇದರ ಬಗ್ಗೆಗಿನ ಸಲಹೆಗೆ ಆರೋಗ್ಯ ಕೇಂದ್ರ, ಅಥವಾ ಕುಟುಂಬ ಯೋಜನಾ ಕೇಂದ್ರ ದಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.
ನಿಮ್ಮ ದೇಹದ ಉಷ್ಣಾಂಶವನ್ನು ನಿಖರವಾಗಿ ಪತ್ತೆಹಚ್ಚಲು, ನೀವು ಹಾಸಿಗೆಯಿಂದ ಹೊರಬರುವುದಕ್ಕಿಂತ ಮುಂಚಿತವಾಗಿ ಅಂದರೆ ಮಾತನಾಡುವುದು, ತಿನ್ನುವುದು, ಕುಡಿಯುವುದು, ಸಂಭೋಗಿಸುವುದಕ್ಕೂ ಮೊದಲೇ ನಿಮ್ಮ ತಾಪಮಾನವನ್ನು ಬರೆದಿಟ್ಟುಕೊಳ್ಳಿ ಸುಮಾರು ಐದು ನಿಮಿಷಗಳ ಕಾಲ ಥರ್ಮಾಮೀಟರ್ ಅನ್ನು ಇರಿಸಿ, ತಾಪಮಾನವನ್ನು ಪುಸ್ತಕದಲ್ಲಿ ದಾಖಲಿಸಿ.

ನಿಮ್ಮ ದೇಹದ ತಾಪಮಾನವನ್ನು ನೀವು ಗಮನಿಸುತ್ತಿರುವಾಗ ಪ್ರತಿ ತಿಂಗಳು ಬದಲಾವಣೆಗಳನ್ನು ನೋಡಬಹುದು ಒಂದು ಮೂರು ನಾಲ್ಕು ಋತು ಅವಧಿಗಳಲ್ಲಿ ಯಾವ ಸಮಯದಲ್ಲಿ ನಿಮ್ಮ ದೇಹದ ತಾಪಮಾನ ಹೆಚ್ಚಾಗುತ್ತಿದೆ ,ಯಾವಾಗ ಕಡಿಮೆಯಾಗುತ್ತಿದೆ ಎಂದು ನಿಮಗೆ ಸರಿಯಾಗಿ ತಿಳಿಯುತ್ತದೆ.
ಧೂಮಪಾನ, ಮದ್ಯ ಸೇವನೆ, ಅನಾರೋಗ್ಯ ಅಥವಾ ಒತ್ತಡಕ್ಕೊಳಗಾದಾಗ ಅಥವಾ ಬೆಡ್ ಶೀಟ್ ಒಳಗೆ ಇರುವಾಗ ದೇಹದ ತಾಪಮಾನ ಹೆಚ್ಚು ,ಕಡಿಮೆಯಾಗುವ ಸಂಭವ ಬರಬಹುದು ಈ ಸಮಯದಲ್ಲಿ ಯಾವುದೇ ತಾಪಮಾನವನ್ನು ಪುಸ್ತಕದಲ್ಲಿನ ದಾಖಲಾತಿಯ ಅವಶ್ಯಕತೆ ಇಲ್ಲ .

 

ನಿಮ್ಮ ತಾಪಮಾನದಲ್ಲಿ ಏರಿಕೆಯು ಕನಿಷ್ಠ 3 ದಿನಗಳವರೆಗೆ ಇರುತ್ತದೆ ಇದನ್ನು ಸುರಕ್ಷಿತ ದಿನಗಳು ಎನ್ನಲಾಗುತ್ತದೆ ಮತ್ತು ಮುಂದಿನ ಋತು ಅವಧಿಯು ಪ್ರಾರಂಭವಾಗುವ ಮೊದಲು ನಿಮ್ಮ ಉಷ್ಣಾಂಶವು ಕಡಿಮೆಯಾಗುತ್ತದೆ. ಈ ಸುರಕ್ಷಿತ ದಿನಗಳಲ್ಲಿ, ನೀವು ಅಸುರಕ್ಷಿತ ಲೈಂಗಿಕತೆಯನ್ನು ಹೊಂದಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top