fbpx
ದೇವರು

ಈ ವಿಷಯಗಳು ನಿಮಗೆ ಗೊತ್ತಿಲ್ಲದೇ ಮನಸಿನ ನೆಮ್ಮದಿ ಕಿತ್ಕೊತಾವೆ ಅನ್ನುತ್ತೆ ವಾಸ್ತು ಶಾಸ್ತ್ರ ..

ಈ ಮೂರು ವಿಷಯಗಳಿಂದ  ನಿಮ್ಮ ಮನೆಯಲ್ಲಿ  ನಿರುಪದ್ರವ ಅಂದರೆ ಏನು ಉಪಯೋಗ ಇಲ್ಲ ಅಂತ ಅನ್ಕೊಂಡಿದ್ದೀರಾ? ಹಾಗೆಲ್ಲ ಯೋಚನೆ ಮಾಡಬೇಡಿ ಅವು ನಿಮ್ಮ ಸ್ವಂತ ಯೋಗಕ್ಷೇಮವನ್ನೇ ಹಾಳು ಮಾಡಿ ನಕಾರಾತ್ಮಕ ಶಕ್ತಿಯನ್ನು ನಮ್ಮ ಸುತ್ತಲೂ ಹೆಚ್ಚಿಸುತ್ತವೆ.ಹೇಗೆ ಅವು ಯಾವುವು? ಅಂತ  ತಿಳ್ಕೊಳ್ಳಿ…

ವಾಸ್ತುಶಿಲ್ಪ ವಿಜ್ಞಾನದ ಪ್ರಕಾರ ಚೀನಾವನ್ನು  ಫೆಂಗ್ ಶುಯ್ ಎಂದು ಕರೆಯುತ್ತಾರೆ. ಫೆಂಗ್ ಶುಯ್ ಅನ್ನು ಇಡೀ ವಿಶ್ವದಲ್ಲಿಯೇ ಬಹಳಷ್ಟು ಜನಗಳು ಪಾಲಿಸುತ್ತಾರೆ. ಇದನ್ನು ಒರಿಎಂಟಲ್  ವಿಭಾಗ ಹೀಗೆ ವಿವರಿಸುತ್ತದೆ.ಈ ಮೂರು ವಿಷಯಗಳು ನಮ್ಮ ಮನೆಯ ಸುತ್ತ ನಕಾರಾತ್ಮಕ ಶಕ್ತಿಯನ್ನು ಎಲ್ಲ ಕಡೆ  ಹರಡುತ್ತವೆ.ಫೆಂಗ್ ಶುಯ್ ಪ್ರಕಾರ ಎಲ್ಲರೂ ಈ ಮೂರು ವಿಷಯಗಳಿಂದ  ದೂರವಿರಿ ಇಲ್ಲದಿದ್ದರೆ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವುದಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ.

1.ಕತ್ತಲು.

ಯಾವ ಜಾಗಕ್ಕೆ ಸೂರ್ಯನ ಕಿರಣದ  ಬೆಳಕು ಬೀಳುವುದಿಲ್ಲವೋ, ಸದಾ ಕಾಲ ಕತ್ತಲಿನಿಂದ ಅವರಿಸಿಕೊಂಡಿರುತ್ತದೋ,  ಆ ಸ್ಥಳವನ್ನು ದೋಷಪೂರಿತ ಸ್ಥಳ ಎಂದು ಪರಿಗಣಿಸಲಾಗುತ್ತದೆ.

ನಿಜ,ಕೆಲವು ಜನರು ಅಭ್ಯಾಸ  ಮಾಡಿಕೊಂಡಿದ್ದಾರೆ ಸಂಜೆಯಾದ ನಂತರ ತಕ್ಷಣ  ವಿದ್ಯುತ್ ದ್ವಿಪಗಳನ್ನು  ಆರಿಸಿ  ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡುತ್ತಾರೆ.(ಸೊಳ್ಳೆಗಳು ಬರಬಾರದೆಂದು ) ಆದರೆ ಹೀಗೆ ಮಾಡಬಾರದು,ಅದು ತಪ್ಪು ಮನೆಯಲ್ಲಿ ನಕಾರಾತ್ಮಕ  ಶಕ್ತಿಯನ್ನು  ತಂದೊಡ್ಡುತ್ತದೆ ಮತ್ತು ಮನೆಯಲ್ಲಿರುವ ಶಾಂತಿ ಮತ್ತು ಸಮೃದ್ಧಿಯನ್ನು ಹಾಳು ಮಾಡಿ ಕಡಿಮೆಯಾಗುವಂತೆ  ಮಾಡುತ್ತದೆ.

2.ಕೊಳಕು.

ಕೊಳಕು ಮತ್ತು ಕೊಳೆತ ವಸ್ತುಗಳು ಯಾವಾಗ್ಲೂ  ಮನೆಯಲ್ಲಿ ನಕಾರಾತ್ಮಕ  ಎಂದು ಪರಿಗಣಿಸಿದ್ದಾರೆ. ಯಾವ ಮನೆ ಒಳಗಿನಿಂದ ಮತ್ತು ಸುತ್ತಮುತ್ತಲಿನ ವಾತಾವರಣ  ಸ್ವಚ್ಛವಾಗಿರುವುದಿಲ್ಲವೋ  ಅಂತಹ ಮನೆಯಲ್ಲಿ ಮನೆಯ ಸಮೃದ್ಧಿ ಮತ್ತು ಏಳಿಗೆಯನ್ನು ಹಾಳು ಮಾಡಿ, ಬೆಳವಣಿಗೆಗೆ ಅಡಚಣೆ ಉಂಟುಮಾಡುತ್ತದೆ ಹಾಗೆಯೇ ಬಡತನವನ್ನು ಹುಟ್ಟು ಹಾಕಲು ನಾವೇ  ದಾರಿ  ಮಾಡಿಕೊಟ್ಟಂತಾಗುತ್ತದೆ.

3.ಕಾಯಿಲೆ/ಅನಾರೋಗ್ಯ.

ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕೇವಲ ದುರ್ಬಲರನ್ನಾಗಿ ಮಾತ್ರ  ಮಾಡುವುದಿಲ್ಲ  ಅದರ ಜೊತೆಗೆ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುವುದಕ್ಕೂ  ಅಡಚಣೆ ಉಂಟುಮಾಡುತ್ತವೆ.  ಯಾವ ಮನೆಯ ಸದಸ್ಯರು ಹೆಚ್ಚಾಗಿ ಅಸ್ವಸ್ಥರಾಗುತ್ತಾರೋ ಅದನ್ನು ಅತ್ಯಂತ ದುಃಖಕರ  ಎಂದು ಪರಿಗಣಿಸಲಾಗಿದೆ. ಅನಾರೋಗ್ಯವು ಬರೀ ನಾಕಾರಾತ್ಮಕತೆಯನ್ನು ಮಾತ್ರ  ಹುಟ್ಟುಹಾಕುತ್ತದೆ ಮತ್ತು ಮನೆಯಲ್ಲಿ ಅನೇಕ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಚಿಕಿತ್ಸೆಯನ್ನು ಎಂದಿಗೂ  ಕಡೆಗಣಿಸಬೇಡಿ  ಯಾವುದೇ ಖಾಯಿಲೆಯಾದರೂ ಸರಿ ಅದರಿಂದ  ಬೇಗ  ಗುಣಮುಖರಾಗಲು ಪ್ರಯತ್ನಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗ  ಗುಣಮುಖರಾಗಿ.

ಫೆಂಗ್ ಶುಯ್ ಅವರ ಪ್ರಕಾರ, ಈ ಮೂರು ಅಂಶಗಳು ಮನೆಯಲ್ಲಿ ಸ್ಥಿತವಿದ್ದರೆ ಕುಟುಂಬ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಗಿ ಅದಕ್ಕೆ ದಾರಿ ಮಾಡಿಕೊಡುತ್ತವೆ ಇದರ ಜೊತೆಗೆ ಒಳ ಮನಸ್ಸಿನ (ಸುಪ್ತ ಮನಸ್ಸಿನ) ಖಿನ್ನತೆಗೂ ಸಹ ಕಾರಣವಾಗಬಹುದು.

ಆದ್ದರಿಂದ ಇವೆಲ್ಲವುಗಳಿಂದ ಇಂದೇ ಮುಕ್ತಿ ಹೊಂದಿರಿ.ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಮನೆಯ ಎಲ್ಲಾ ಕೋಣೆಗಳಿಗೂ ಸೂರ್ಯನ ಕಿರಣ ಬೀಳುವಂತೆ ಮನೆಯನ್ನು ಮರು ನಿರ್ಮಾಣ ಮಾಡಿ,ಅದರಿಂದ ಮನೆ ಮತ್ತು ಮನಸ್ಸು ಎಲ್ಲಾ ಸ್ವಚ್ಛವಾಗಿರುತ್ತದೆ.ಇದರಿಂದ ಮನೆಯಲ್ಲಿ ಸುಖ,ಶಾಂತಿ,ಸಮೃದ್ಧಿಯು ಸಹ ನೆಲೆಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top