2-ದಿನದ ವಿಧಾನ ಗರ್ಭ ನಿರೋಧಕಗಳನ್ನು ಬಳಸದೆ ಗರ್ಭ ಉಂಟಾಗದ ಹಾಗೆ ಲೈಂಗಿಕ ಕ್ರಿಯೆಗೆ..
2-ದಿನದ ವಿಧಾನ ಯಾವುದು?
2-ದಿನ ವಿಧಾನವು ಸರಳವಾದ ರೀತಿಯ ಗರ್ಭಕಂಠದ ಲೋಳೆಯ ವಿಧಾನವಾಗಿದೆ ,ಹೆಂಗಸರ ಗರ್ಭ ಕಂಠದಿಂದ ಲೋಳೆ ರೀತಿಯ ವಸ್ತುವು ಹೊರಗೆ ಬರುವುದು
ಇದಕ್ಕೆ ವೈಜಿನಲ್ ಮ್ಯೂಕಸ್ ಅಥವಾ ಗರ್ಭಕಂಠದ ಲೋಳೆ ಎಂದು ಕರೆಯುತ್ತಾರೆ .
ಋತು ಚಕ್ರದ ದಿನಗಳಲ್ಲಿ ಗರ್ಭಕಂಠದ ಲೋಳೆ ಮುಟ್ಟಿನ ಸ್ರಾವದ ಜೊತೆ ಬೆರೆತುಹೋಗಿರುತ್ತದೆ .
ಆನಂತರ ಕೆಲವು ದಿನಗಳು ಯಾವುದೇ ಲೋಳೆ ಕಂಡು ಬರುವುದಿಲ್ಲ ಇದಕ್ಕೆ ಶುಷ್ಕ ದಿನಗಳು ಎಂದು ಕರೆಯುತ್ತಾರೆ ಈ ಸಮಯದಲ್ಲಿ ಯಾವುದೇ ಗರ್ಭ ನಿರೋಧಕ ಬಳಸದೆ ಲೈಂಗಿಕ ಕ್ರಿಯೆ ಹೊಂದಬಹುದು.
ಅಂಡೋತ್ಪತ್ತಿ ಸಂಭವಿಸುವುದಕ್ಕೆ ಮುಂಚೆ ಹಳದಿ ,ಬಿಳಿ ,ಬಣ್ಣದ ಲೋಳೆ ಸ್ರಾವ ಶುರುವಾಗುತ್ತದೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ಗರ್ಭ ನಿರೋಧಕವಿಲ್ಲದೆ ಮಾಡಬಾರದು.
ಆನಂತರ ಕೆಲವು ದಿನ ಮತ್ತೆ ಶುಷ್ಕ ದಿನಗಳು ಬರುತ್ತವೆ .
ಲೋಳೆ ರೀತಿ ಕಂಡು ಹಿಡಿಯುವುದು ಹೇಗೆ ?
ಮೊದಲಿಗೆ ಮೂತ್ರಕ್ಕೆ ಹೋಗುವ ಮುನ್ನ ಟಿಶ್ಯೂ ಪೇಪರ್ ನಿಂದ ಹೆಂಗಸರ ಜನನಾಂಗವನ್ನು ಒರೆಸಿಕೊಳ್ಳಬೇಕು ಆಗ ಟಿಶ್ಯೂ ಮೇಲೆ ಲೋಳೆ ಸ್ರಾವ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ.
2-ದಿನ ವಿಧಾನವು ಬಳಸಲು ಸುಲಭವಾಗಿದೆ. ಈ ಕೆಳಗಿನ ಪ್ರಶ್ನೆಗಳನ್ನು ಹೆಂಗಸರು ಪ್ರಶ್ನೆ ಮಾಡಿಕೊಳ್ಳಬೇಕು.
ನನಗೆ ಗರ್ಭಕಂಠದ ಲೋಳೆಯು ಇದೆಯೇ?
ನಾನು ನಿನ್ನೆ ಗರ್ಭಕಂಠದ ಲೋಳೆಯನ್ನು ಹೊಂದಿದ್ದೀನಾ?
ನೀವು ಎರಡೂ ಪ್ರಶ್ನೆಗಳಿಗೆ ಉತ್ತರ ಇಲ್ಲ ಎಂದಾದರೆ ಗರ್ಭ ನಿವಾರಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಬಹುದು, ಯೋನಿ ಲೈಂಗಿಕತೆಯನ್ನು ಹೊಂದಲು ಸುರಕ್ಷಿತವಾಗಿದೆ ಎಂಬ ಅರ್ಥ ಕೊಡುತ್ತದೆ ಅಥವಾ ಇಲ್ಲ ಎಂದಾದರೆ ಜನನ ನಿಯಂತ್ರಣವನ್ನು ಬಳಸಿಕೊಳ್ಳಿ.
ಈ ವಿಧಾನವನ್ನು ಬಳಸುವ ಜನರು ಪ್ರತಿ ಚಕ್ರದಲ್ಲಿ 12 ಸುರಕ್ಷಿತ ದಿನಗಳನ್ನು ಮಾತ್ರ ಗರ್ಭ ನಿವಾರಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸ ಬಹುದು.
ಇದಕ್ಕೆ ಮೊದಲ ಮೂರು ತಿಂಗಳು ಚಾರ್ಟ್ ಮಾಡಿಕೊಳ್ಳುವ ಅವಶ್ಯಕತೆ ಇದೆ ಹೆಚ್ಚಿನ ಮಾಹಿತೆಗೆ ನಿಮ್ಮ ಕುಟುಂಬ ಯೋಜನೆ ಕೇಂದ್ರ ಅಥವಾ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
