fbpx
ಆರೋಗ್ಯ

ಬಾದಾಮಿ ಬರಿ ಶ್ರೀಮಂತರಿಗೆ ಮಾತ್ರ ಅಲ್ಲ ಆರೋಗ್ಯ ಶ್ರೀಮಂತರಿಗೂ ಬೇಕು , ದಿನಕ್ಕೆ ಹಂಗೆ ಎರಡು ಬಾದಾಮಿ ಬಾಯ್ಗೆ ಹಾಕ್ಕೊಳ್ಳಿ..

ಮೆದುಳಿನ ಆರೋಗ್ಯಕ್ಕೆ ಬಾದಾಮಿ

ಬಾದಾಮಿ ಒಣಹಣ್ಣುಗಳ ಗುಂಪಿಗೆ ಸೇರಿದ್ದು, ರುಚಿಕರವಾಗಿರುತ್ತದೆ. ಸಿಹಿ ಮತ್ತು ಕಹಿ ರುಚಿಯ ವೈವಿಧ್ಯತೆಯಲ್ಲಿ ದೊರೆಯುತ್ತದೆ. ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲು ಬಳಸಿದರೆ, ಸಿಹಿ ಬಾದಾಮಿ ಖಾದ್ಯಗಳಿಗೆ, ತಿನ್ನಲು ಬಳಕೆಯಾಗುತ್ತದೆ. ಇವೆರಡೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೊಳ್ಳುವಾಗ ಎಚ್ಚರಿಕೆಯಂತೂ ಅಗತ್ಯ.

ಬಾದಾಮಿಯನ್ನು ನೇರವಾಗಿ ತಿನ್ನಬಹುದು, ಇಲ್ಲವೇ ರಾತ್ರಿ ನೀರಿನಲ್ಲಿ ನನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನಬಹುದು.ಬಾದಾಮಿಯಲ್ಲಿ ಉತ್ಕøಷ್ಟ ಪೋಷಕಾಂಶಗಳಿದ್ದು ಉತ್ತರ ಪ್ರೋಟಿನ್, ವಿಟಮಿನ್ ಇ, ಮೆಗ್ನಿಷಿಯಮ್, ನಾರು ಒಳಗೊಂಡಂತೆ ಅಗತ್ಯ ಅಮಿನೋ ಅಸಿಡ್‍ಗಳಿವೆ. ತಾಮ್ರ, ಬಿ ವಿಟಮಿನ್, ಸುಣ್ಣ, ಪೊಟಾಷಿಯಂ, ಫಾಸ್ಪರಸ್, ಕಬ್ಬಿಣ ಹಾಗೂ ಹಲವಾರು ಆರೋಗ್ಯಕರ ಕೊಬ್ಬನ್ನು ಇದರಿಂದ ಪಡೆಯಬಹುದು. ಇದರಲ್ಲಿ ಉತ್ತಮ ಗುಣಮಟ್ಟದ ಏಕಪರ್ಯಾಪ್ತ ಕೊಬ್ಬು ಹಾಗೂ ಕ್ಯಾಲೊರಿಗಳಿದ್ದು ಇದನ್ನು ಅತಿಯಾಗಿ ತಿನ್ನಬಾರದು.

ಮಲಬದ್ಧತೆಯಿಂದ ಕ್ಯಾನ್ಸರ್‍ವರೆಗೆ, ಕೂದಲಿನಿಂದ ಮೂಳೆಯವರೆಗೆ ಬಾದಾಮಿ ನಮ್ಮನ್ನು ಹಲವು ವಿಧದಲ್ಲಿ ರಕ್ಷಿಸುವ ಶಕ್ತಿ ಹೊಂದಿದೆ.

ಬಾದಾಮಿಯ ನಿಯಮಿತ ಸೇವನೆ ಕೆಟ್ಟ ಕೊಬ್ಬಿನ ಮಟ್ಟವನ್ನು ನಿಯಂತ್ರಿಸಿ ಒಳ್ಳೆಯ ಕೊಬ್ಬಿನ ಮಟ್ಟ ಹೆಚ್ಚಿಸುತ್ತದೆ.

ಬಾದಾಮಿ ರಕ್ತದ ಸಕ್ಕರೆಮಟ್ಟ ಹೆಚ್ಚಳದಿಂದ ಉಂಟಾಗುವ ಅಪಾಯವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬು, ವಿಟಮಿನ್, ನಾರು ಮತ್ತಿತರ ಖನಿಜಗಳು ಗ್ಲೂಕೋಸ್ ಹೀರಿಕೆ-ಸಂಸ್ಕರಣೆಯನ್ನು ನಿಯಂತ್ರಿಸುತ್ತದೆ.

ಸುಂದರ ಹಾಗೂ ಕೋಮಲ ತ್ವಚೆಗೆ ಬಾದಾಮಿ ಒಳ್ಳೆಯದು. ಚರ್ಮವನ್ನು ಕೋಮಲವಾಗಿಸುವ ವಿಟಮಿನ್ ಇ ಇದರಲ್ಲಿದ್ದು, ಬಾದಾಮಿ ಎಣ್ಣೆಯ ಮಾಲಿಷ್‍ನಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಬಿಸಿಲಿನಿಂದ ಉಂಟಾದ ತೊಂದರೆಯೂ ನಿವಾರಣೆಯಾಗುತ್ತದೆ.

ಹೃದಯದ ಆರೋಗ್ಯ ವರ್ಧಿಸುವ ಪೌಷ್ಠಿಕಾಂಶ ಇದರಲ್ಲಿದೆ.

ಇದರಲ್ಲಿರುವ ಉತ್ತಮ ಮೆಗ್ನಿಷಿಯಮ್ ಅಂಶವು ದೇಹದಲ್ಲಿ ರಕ್ತ, ಆಮ್ಲಜನಕ ಹಾಗೂ ಪೌಷ್ಟಿಕಾಂಶದ ಚಲನೆಯನ್ನು ವೃದ್ಧಿಸುವುದರ ಮೂಲಕ ಹೃದಯದ ಆರೋಗ್ಯವನ್ನು ಬಲಿಷ್ಠಗೊಳಿಸುತ್ತದೆ.

ಬಾದಾಮಿಯನ್ನು ಮೆದುಳಿನ ಉತ್ತಮ ಆಹಾರ ಎಂದೇ ಪರಿಗಣಿಸಲಾಗಿದೆ. ಇದರಲ್ಲಿರುವ ವಿಟಮಿನ್ ಇ ಮೆದುಳಿನ ಅರಿವಿನ ಕುಸಿತವನ್ನು ತಗ್ಗಿಸಿ ಎಚ್ಚರಿಕೆಯಿಂದ ಮೆದುಳು ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಮೆದುಳಿನ ಜೀವಕೋಶಗಳನ್ನು ರ್ಯಾಡಿಕಲ್ ಹಾನಿಯಿಂದ ರಕ್ಷಿಸುವ ಸತುವಿನ ಅಂಶ ಹೊಂದಿದೆ. ಮೆದುಳಿನ ಜೀವಕೋಶದ ದುರಸ್ತಿಗೆ ಅಗತ್ಯವಾದ ಪ್ರೋಟಿನ್‍ಗಳ ಮೆಟಬಾಲಿಸಮ್‍ಗೆ ಬಾದಾಮಿಯಲ್ಲಿರುವ ಬಿ-6 ಸಹಾಯ ಮಾಡುತ್ತದೆ.

ವಿಶೇಷವಾಗಿ ಬಾದಾಮಿ ಫಿನಿಲಾಲನೈನ್ ಹೊಂದಿದ್ದು, ಇದು ಪಾರ್ಕಿನ್‍ಸನ್ ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ.

ಡೊಪಾಮೈನ್ ಮತ್ತು ಅಡ್ರಿನಾಲಿನ್ ಮುಂತಾದ ಮೆದುಳಿನ ರಾಸಾಯನಿಕಗಳ ಉತ್ಪಾದನೆ ಹೆಚ್ಚಿಸುತ್ತದೆ. ಈ ರಾಸಾಯನಿಕಗಳು ಗಮನ ಮತ್ತು ನೆನಪಿಗೆ ಅಗತ್ಯವಾಗಿದ್ದು, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಸುಧಾರಿಸುತ್ತದೆ.

ನಿತ್ಯ ನಾಲ್ಕೈದು ಬಾದಾಮಿ ಸೇವಿಸುವುದರಿಂದ ಮೆದುಳೂ ಸೇರಿದಂತೆ ದೇಹದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top