ಊರಾಶೀಮ ತಾರೊ ಮತ್ತು ಆಮೆ
ಊರಾಶೀಮ ತಾರೊ ಜಪಾನ್‍ನಲ್ಲಿ ಜನಿಸಿದನು. ಅವನು ಸಮುದ್ರದ ತೀರದಲ್ಲಿ ಒಂದು ಚಿಕ್ಕ ಹುಲ್ಲಿನ ಗುಡಿಸಿನಲ್ಲಿ ಅವನ ತಂದೆ ಹಾಗೂ ತಾಯಿಯ ಜೊತೆ ವಾಸವಾಗಿದ್ದನು. ಊರಾಶೀಮ ತಾರೊ ಆ ಗುಡಿಸಿಲಿನಲ್ಲೇ ಬೆಳೆದನು. ಅವನಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ತುಂಬ ಕಾಳಜಿಯಿತ್ತು. ಒಂದು ದಿನ ಅವನು ಸಮುದ್ರದ ತೀರದಲ್ಲಿ ನಡೆದುಕೊಂಡು ಹೂಗುತ್ತಿದ್ದನು. ಆಗ ಅವನಿಗೆ ಕೆಲವು ಮಕ್ಕಳು ಕಂಡರು. ಅವನು ಆ ಮಕ್ಕಳ ಬಳಿ ಹೊದನು.ಮಕ್ಕಳು ಒಂದು ಆಮೆಯನ್ನು ಹಿಡಿದುಕೊಂಡು ತೊಂದರೆ ಕೊಡುತ್ತಿದ್ದರು. ಆ ಆಮೆ ಜಗತ್ತಿನಲ್ಲಿದ್ದ ಏಕೈಕ ಆಮೆ.
ಅವನು ಆ ಮಕ್ಕಳಿಗೆ “ಮಕ್ಕಳೇ ಈ ಪ್ರಾಣಿ ಜಗತ್ತಿನಲ್ಲೇ ಇರುವ ಏಕೈಕ ಹಾಗು ಅಮೊಲ್ಯವಾದದ್ದು” ಎಂದನು. ಇದನ್ನು ಕೇಳಿದ ಆ ಮಕ್ಕಳು ಆಮೆಯನ್ನು ಊರಾಶೀಮ ತಾರೊಗೆ ಕೊಟ್ಟಿಬಿಟ್ಟರು. ಊರಾಶೀಮ ತಾರೊ ಆ ಆಮೆಯನ್ನು ಸಮುದ್ರದಲ್ಲಿ ಬಿಟ್ಟನು. ಆಮೆಯು ಸಮುದ್ರದೊಳಗೆ ಈಜಿದ ತಕ್ಷಣ ಒಂದು ಆಮೆಯ ಆಕಾರದ ದೊಡ್ಡ ಹಡಗು ಸಮುದ್ರದೊಳಗಿಂದ ಮೇಲೆ ಬಂತು. ಆ ಹಡಗು ತೇಲಿಕೊಂಡು ಸಮುದ್ರದ ತೀರಕ್ಕೆ ಬಂತು.
ಆ ಹಡಗಿನಿಂದ ಇಬ್ಬರು ಸೈನಿಕರು ಕೆಳಗಿಳಿದು”ನೀವು ನಮ್ಮ ರಾಜಕುಮಾರಿಯ ಸಾಕು ಪ್ರಾಣಿ ಆಮೆಯನ್ನು ಉಳಿಸಿದ್ದಕ್ಕೆ ನಿಮ್ಮನ್ನು ಅವರು ಸಮುದ್ರದ ಲೊಕಕ್ಕೆ ಬರಲು ಸ್ವಾಗತ ಕೊರಿದ್ದಾರೆ ಎಂದರು”. ಇದಕ್ಕೆ ಒಪ್ಪಿಕೊಂಡು ಊರಾಶೀಮ ತಾರೊ ಹಡಗಿನಲ್ಲಿ ಸಮುದ್ರದ ಲೊಕಕ್ಕೆ ಹೊದನು.
ರಾಜಕುಮಾರಿ ಅವನನ್ನು ಸ್ವಾಗತಿಸಿದಳು. ಊರಾಶೀಮ ತಾರೊವಿಗೆ ಸ್ವಾದಿಷ್ಟ ಭೊಜನವನ್ನು ಕೊಟ್ಟರು. ಅವನು ಅಲ್ಲಿ 2 ತಿಂಗಳು ವಾಸವಾಗಿದ್ದನು. ಅನಂತರ ಅವನಿಗೆ ಅವನ ಮನೆಗೆ ಹಿಂದಿರುಗಲು ಆಸೆಯಾಯಿತು. ಅವನು ಈ ಮಾತನ್ನು ರಾಜಕುಮಾರಿಗೆ ತಿಳಿಸಿದನು.
ಅವನು ಹಡಗನ್ನು ಹತ್ತುತ್ತಿದ್ದಾಗ ರಾಜಕುಮಾರಿ ಅವನಿಗೆ ಒಂದು ಚಿಕ್ಕ ಪೆಟ್ಟಿಗೆಯನ್ನು ಕೊಟ್ಟು “ಆ ಪೆಟ್ಟಿಗೆಯನ್ನು ಯಾವತ್ತು ತೆಗೆಯಬಾರದು ಎಂದಳು”.ಹಾಗೂ ಅಮೆಯನ್ನು ಉಳಿಸಿದ್ದಕ್ಕೆ ಅವನಿಗೆ ಬೇಕಾದಷ್ಟು ಚಿನ್ನ ಬೆಳ್ಳಿ ಮುತ್ತುರತ್ನವನ್ನು ಕೊಟ್ಟುಕಳಿಸಿದಳು ಅವನು ಅದೇ ಆಮೆಯ ಆಕಾರದ ಹಡಗಿನಲ್ಲಿ ಸಮುದ್ರದ ತೀರಕ್ಕೆ ಬಂದನು. ಆ ಹಡಗು ಸಮುದ್ರದ ಒಳಗೆ ಹೊರಟುಹೊಯಿತು. ರಾಜಕುಮರಿ ಕೊಟ್ಟ ಚಿನ್ನಬೆಳ್ಳಿಯನ್ನು ಮಾರಿ ಸುಖವಾದ ಜೀವನವನ್ನು ಸಾಗಿಸುತ್ತಿದ್ದನು.
ಅದರೆ ಅವನಿಗೆ ಯಾವಾಗಲು ರಾಜಕುಮಾರಿ ಕೊಟ್ಟ ಪೆಟ್ಟಿಗೆಯೊಳಗೆ ಏನಿರಬಹುದು ಎಂದು ಕುತೂಹಲ. ಕುತೂಹಲ ಹೆಚ್ಚಾಗಿ ಒಂದು ದಿನ ಆ ಪೆಟ್ಟಿಗೆಯನ್ನು ತೆಗೆದೇಬಿಟ್ಟನು. ಆ ಪೆಟ್ಟಿಗೆ ತೆಗೆಯುತ್ತಿದ್ದಂತೆ ಕರಿಯ ಹೊಗೆ ಆಚೆ ಬಂದು ಅವನು ಮುದುಕನಾಗಿ ಬಿಟ್ಟನು. ಕೂಡಲೆ ಸಮುದ್ರದಿಂದ ಒಂದು ಮತ್ಸ್ಯ ಕನ್ಯ ಆಚೆ ಬಂದು ಸಮುದ್ರದ ಲೊಕದಲ್ಲಿ ಒಂದು ದಿನ ಒಂದು ವರ್ಷಕ್ಕೆ ಸಮ, ನೀನು ಅಲ್ಲಿ ಅರವತ್ತೊಂದು ದಿನ ಕಳೆದಿದ್ದೆ, ಈ ಪೆಟ್ಟಿಗೆ ನಿನ್ನ ವಯಸ್ಸನ್ನು ಹಿಡಿತದಲ್ಲಿಟ್ಟಿತ್ತು, ನೀನು ಅದನ್ನು ತೆಗೆದಾಕ್ಷಣ ನೀನು ಮುದುಕನಾಗಿಬೆಟ್ಟೆ, ಹಾಗಾಗಿಯೆ ರಾಜಕುಮಾರಿ ಆ ಪೆಟ್ಟಿಗೆಯನ್ನು ಕೊಟ್ಟಿದ್ದಳು, ಅದರಿಂದ ನೀನು ಇದ್ದಹಾಗೆ ಇದ್ದೆ, ಈಗ ನೀನು ಈ ಪೆಟ್ಟಿಗೆಯನ್ನು ತೆಗೆದದ್ದರಿಂದ ನೀನು ಈಗ ಮುದುಕನಾಗಿರುವೆ,ನೀನು ಆ ಪೆಟ್ಟಿಗೆಯನ್ನು ತೆಗೆಯಬಾರದಾಗಿತ್ತು ಎಂದು ಹೇಳಿ ಮಾಯವಾದಳು.
ಕೆಲವೊಮ್ಮೆ ಬೇಡ ಅಂದ ಕೆಲಸ ಮಾಡಬಾರದು ಎಂದು ದೊಡ್ಡವರು ಇದಕ್ಕೆ ಹೇಳುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
