fbpx
ದೇವರು

ತುಂಬಾ ಒಳ್ಳೆಯವನಾಗಕೇ ಹೋದ್ರೆ ನೀನಾಗ್ತಿಯಾ ಏಕಲವ್ಯ , ನಂಬಿದ ಗುರುವೇ ಅನ್ಯಾಯ ಮಾಡಿದ ಕಥೆ..

ಏಕಲವ್ಯನ ಗುರುಭಕ್ತಿ.

ಬೇಡರ ರಾಜ ಹಿರಣ್ಯ ಧನುವಿನ  ಮಗ ಏಕಲವ್ಯನು ಗುರು ದ್ರೋಣರು ವಿಶೇಷತೆಯನ್ನು ಕೇಳಿ ಅವರಿಂದ  ವಿದ್ಯೆಯನ್ನು ಕಲಿಯಲು ಬಯಸಿದನು.

ಜಿಂಕೆಯ ಮರಿಗಳನ್ನು ಕ್ರೂರ  ಪ್ರಾಣಿಗಳಿಂದ ರಕ್ಷಿಸಲು ಬಿಲ್ವಿದ್ಯೆಯನ್ನು ಬಯಸಿ ಬಯಸಿ ಹಸ್ತಿನಾವತಿಗೆ ಬಂದರೆ ರಾಜಕುಮಾರರಿಗೆ ಮಾತ್ರವೇ ಬಿಲ್ವಿದ್ಯೆ ಕಲಿಸುವುದಾಗಿ ದ್ರೋಣರು ನುಡಿದರು.ಆದರೆ ಬಂದ ಏಕಲವ್ಯನನ್ನು ಬಿಲ್ವಾಣನಾಗೆಂದು ಹರಸಿದರು.

ಅವರನ್ನು ದ್ಯಾನಿಸುತ್ತಾ ಬಂದ ಏಕಲವ್ಯ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅದರ ಎದುರಿಗೆ ಅಭ್ಯಾಸವನ್ನು ನಡೆಸಿದನು.ಅನೇಕ ರೀತಿಯ ಬಿಲ್ವಿದ್ಯಾ ಕೌಶಲ್ಯವನ್ನು ತಿಳಿದುಕೊಂಡನು.

ಒಮ್ಮೆ ಬೊಗುಳುವ ನಾಯಿಯ ಶಬ್ದಕೇಳಿ ಶಬ್ದವೇದಿ ವಿದ್ಯೆಯನ್ನು ಪ್ರಯೋಗಿಸಿದ ಏಕಲವ್ಯನು ಬಿಲ್ವಾಣನಾಗಿದ್ದನು. ಅವನ ತಾಯಿ ತಂದೆಯರಿಗೆ ಸಹ ಅತ್ಯಂತ ಸಂತಸವಾಗಿತ್ತು.ಅಂದು ದ್ರೋಣಾಚಾರ್ಯರು ಕೌರವ ಪಾಂಡವರೊಂದಿಗೆ ಆ ವನಕ್ಕೆ ಬಂದಿದ್ದರು.

ಏಕಲವ್ಯನು ನಾಯಿಯ ಬಾಯಿಯನ್ನು ಬಾಣದಿಂದ ಮುಚ್ಚಿದ್ದನ್ನು ನೋಡಿದಾಗ ಅರ್ಜುನನಿಗೆ ಈ ಬಿಲ್ವಾಣನಾರು ? ನಾಯಿಗೆ ಸ್ವಲ್ಪವೂ ಗಾಯವಾಗಿಲ್ಲ ! ಗುರುಗಳೇ ನನ್ನನ್ನೇ ಅದ್ವಿತೀಯ ಬಿಲ್ವಾಣನನ್ನಾಗಿಸುತ್ತೇನೆ ಎಂದಿದ್ದೀರಿ ? ಇವನು ಮಾಡಿರುವುದನ್ನು ನೋಡಿರಿ ಎಂದು ಹೇಳಿದನು.

ಅವರೆಲ್ಲರೂ ಬಿಲ್ಗಾರನನ್ನು ಹುಡುಕುತ್ತಾ ಏಕಲವ್ಯನಿದ್ದಲಿಗೆ ಬಂದಾಗ  ಗುರುವಿನ ಮೂರ್ತಿಯೆದುರಿಗೆ ಅಭ್ಯಾಸ ಮಾಡುತ್ತಿದ್ದ ಏಕಲವ್ಯನನ್ನು ಕಂಡರು.

ದ್ರೋಣಾಚಾರ್ಯರು ಒಂದು ಕ್ಷಣ ಯೋಚನೆ ಮಾಡಿ ಏಕಲವ್ಯನನ್ನೇ ಕಂಡು ಬರೋಣವೆಂದು ಹತ್ತಿರ ನೆಡೆದರು.ಆಗ ಏಕಲವ್ಯನು ತನ್ನ ಗುರುಗಳೇ ತಾನಿದ್ದಲ್ಲಿಗೆ  ಬಂದುದನ್ನು ಕಂಡು ಅತ್ಯಂತ ಆನಂದದಿಂದ ವಂದಿಸಿ ಸ್ವಾಗತಿಸಿದನು.ಗುಡಿಸಿಲಿಗೆ ಕರೆದೊಯ್ದು ಹಣ್ಣು,ಹಂಪಲು,ಹಾಲು,ಜೇನು ನೀಡಿದನು.ಅವನ ಭಕ್ತಿ ಭಾವವನ್ನು  ಕಂಡು ದ್ರೋಣಾಚಾರ್ಯರು ಸಂಕಟಪಟ್ಟರು.

ಸ್ವಲ್ಪ ಸಮಯದ ನಂತರ ದ್ರೋಣಾಚಾರ್ಯರು ಏಕಲವ್ಯನಿಗೆ ಈ ರೀತಿ ಪ್ರಶ್ನಿಸಿದರು. ಏಕಲವ್ಯ ನೀನು ನನ್ನನ್ನೇ ಗುರುವೆಂದು ಭಾವಿಸಿರುವೆ ಅಲ್ಲವೇ ? ಆಗ ಏಕಲವ್ಯನು ಗುರುದೇವ ಈ ಬಗ್ಗೆ ಸಂಶಯವೇ ಬೇಡ  ಎಂದನು.ಆಗ ದ್ರೋಣರು ಹಾಗಾದರೆ ನೀನು ನನಗೆ ಗುರುದಕ್ಷಿಣೆಯನ್ನು ಕೊಡಬೇಕಲ್ಲವೇ ? ಎಂದರು.

ಏಕಲವ್ಯನು ಸಂತಸದಿಂದ  ಗುರುದೇವ ಅಪ್ಪಣೆ ಮಾಡಿರಿ.ನಾನು ಏನು ಬೇಕಾದರೂ ಕೊಡಲು ಸಿದ್ಧನಿದ್ದೇನೆ ಎಂದರು.ಆಗ ದ್ರೋಣರಿಗೆ ವೇದನೆಯಾಯಿತು. ಅರ್ಜುನನನ್ನೇ ವೀರನನ್ನಾಗಿಸುವುದಕ್ಕಾಗಿ ಇನ್ನೊಬ್ಬ ವೀರನನ್ನು ಅಪಮಾನಿಸಬೇಕಾಯಿತೆಂದು ಮರುಗಿದರು. “ನಿನ್ನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ  ಕೊಡು” ಎಂದರು ದ್ರೋಣಾಚಾರ್ಯರು ಹೇಳಿದರು.

ಏಕಲವ್ಯನು ಸಿದ್ಧನಾಗಿಯೇ ಇದ್ದನು.ಆದರೆ ಈ ಕೋರಿಕೆಯಿಂದ ಅರ್ಜುನನು ಬೆಚ್ಚಿ ಬಿದ್ದನು.ಏಕಲವ್ಯನು ಆ ಕ್ಷಣ ಕಟಾರಿಯಿಂದ  ಹೆಬ್ಬೆರಳನ್ನು ಕತ್ತರಿಸಿ ಗುರುಗಳ ಪಾದದಲ್ಲಿ ಇಟ್ಟನು.ದ್ರೋಣರು ಅವನ ಭಕ್ತಿಯನ್ನು ಕಂಡು ಆನಂದದಿಂದ ಕಣ್ಣೀರು ಸುರಿಸಿದರು.ಏಕಲವ್ಯನನ್ನು ಅಪ್ಪಿಕೊಂಡರು. ಮುಂದೆ ಏಕಲವ್ಯನು ಮೊದಲಿನಂತೆ ಬಾಣ ಬಿಡಲಾರದೇ ಹೋದನು.ಅರ್ಜುನನೇ ವೀರನಾದನು.ದ್ರೋಣರು ತಮ್ಮ ಮಾತನ್ನು ಉಳಿಸಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top