ಸೊಣಕಲು ದೇಹ ಹೊಂದಿರೋರು ಆದಷ್ಟು ಬೇಗ ದಪ್ಪ ಆಗ್ಬೇಕು ಅಂದ್ರೆ ಈ ಆಯುರ್ವೇದದ ಮನೆ ಮದ್ದು ಬಳಸಿ .
ಕೆಲವರಿಗೆ ದಪ್ಪ ಜಾಸ್ತಿ ಅನ್ನೋ ಚಿಂತೆ ಇನ್ನು ಕೆಲವರಿಗೆ ಅಯ್ಯೋ ನಾನು ದಪ್ಪನೆ ಆಗ್ತಿಲ್ಲ ಅನ್ನೋ ಚಿಂತೆ ,ಚಿಂತೆ ಮಾಡ್ಕೊಂಡೆ ಜೀವನ ಸಾಗಿಸುತ್ತೀವಿ ,
ಆದ್ರೆ ಯಾವಾತ್ತಾದರೂ ಯಾಕೆ ಹೀಗೆ ನಮ್ಮ ದೇಹದ ಪ್ರಕ್ರಿಯೆಗಳಲ್ಲಿ ಕೆಲವು ಬದಲಾವಣೆ ಮಾಡ್ಕೊಬಹುದಾ ಅಂತ ಯೋಚ್ನೆ ಮಾಡೋರು ಕಮ್ಮಿ .
ಮೊದಲಿಗೆ ದೇಹದ ಪ್ರಕೃತಿಯಲ್ಲಿ ಮೂರು ವಿಧ ವಾತ ,ಪಿತ್ತ ,ಕಫ ಅಂತ ಇದಕ್ಕೆ ದೋಷ ಅಂತ ಕರೆಯುತ್ತೇವೆ.
ಇದರ ಆಧಾರದ ಮೇಲೇನೆ ನಾವು ಎಷ್ಟು ತೂಕ ಇದ್ದಿವಿ ಹೇಗೆ ಇದ್ದಿವಿ ಅನಾ ನಿರ್ಧಾರ ಆಗೋದು , ಕೆಲವು ಆಯುರ್ವೇದದ ಮದ್ದುಗಳು ಈ ವಾತ ಪ್ರಕೃತಿಯ ಮೇಲೆ ಕೆಲಸ ಮಾಡಿ ದೇಹದ ತೂಕ ಹೆಚ್ಚಿಸುತ್ತದೆ .
ಅಂತಹದ್ದೇ ಒಂದು ಮದ್ದಿನ ಬಗ್ಗೆ ನಾವು ನಿಮಗೆ ಈಗ ತಿಳಿಸಿ ಕೊಡುತ್ತೇವೆ .
ವಿಧಾನ ಒಂದು :
ಬೇಕಾಗಿರುವ ಸಾಮಾಗ್ರಿಗಳು :
ಜೇನು ತುಪ್ಪ -ಒಂದು ಟೀ ಚಮಚ
ಹಾಲು -ಒಂದು ಗ್ಲಾಸ್
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹದಿನೈದು ದಿನ ಹಾಲು ಹಾಗು ಜೇನುತುಪ್ಪ ಮಿಶ್ರಣ ಮಾಡಿ ತಿನ್ನುತ್ತಾ ಬನ್ನಿ .
ವಿಧಾನ ಎರಡು :
ಬೇಕಾಗಿರುವ ಸಾಮಾಗ್ರಿಗಳು :
ಬಾಳೆ ಹಣ್ಣು -ಎರಡರಿಂದ ಮೂರು
ಹಾಲು -ಒಂದು ಗ್ಲಾಸ್
ಎರಡರಿಂದ ಮೂರು ಬಾಳೆ ಹಣ್ಣು ತಿಂದ ನಂತರ ಒಂದು ಗ್ಲಾಸ್ ಹಾಲು ಕುಡಿಯಿರಿ ಹೀಗೆ ಮಾಡಿದರೆ ಒಂದು ತಿಂಗಳ ಒಳಗೆ ತೂಕ ಹೆಚ್ಚು ಮಾಡಿಕೊಳ್ಳಬಹುದು .
ವಿಧಾನ ಮೂರು :
ನಾಲ್ಕರಿಂದ ಐದು ದ್ರಾಕ್ಷಿಯನ್ನು ದಿನವೂ ಮಲಗುವ ಮುನ್ನ ತಿನ್ನುತ್ತಾ ಬನ್ನಿ ಒಂದು ತಿಂಗಳ ಒಳಗೆ ತೂಕ ಹೆಚ್ಚು ಮಾಡಿಕೊಳ್ಳಬಹುದು .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
