“ ಶ್ರೀ ರಾಮ ಜಯ ರಾಮ ಜಯ ”
ಹನುಮನಂತನ ಪೂಜಾ ವಿಧಿ.
ಹನುಮಂತನಿಗೆ ಅನೇಕ ಹೆಸರುಗಳಿವೆ ಅವು ಆಂಜುನೇಯ, ಅಂಜನಿ ಸುತ, ಪವನ ಪುತ್ರ, ಮಾರುತಿ, ಭಜರಂಗ ಬಲಿ,ಕಪೀಶ,ಶಿವನ ರುದ್ರವತಾರ, ಸಂಕಟ ಮೋಚನ, ಹನುಮಂತ, ರಾಮದೂತ, ಹೀಗೆ ಇನ್ನೂ ಅನೇಕ ಹೆಸರುಗಳಿವೆ.ಇಂತಹ ಶಕ್ತಿಶಾಲಿ ಹನುಮನನ್ನು ಪೂಜಿಸುವ ವಿಧಾನ ಹೇಗೆಂದು ತಿಳಿಯೋಣ ಬನ್ನಿ…
ಬೆಳ್ಳಗ್ಗೆ ಸ್ನಾನ ಮಾಡಿ ಕೆಂಪು ವಸ್ತ್ರ ಧರಿಸಬೇಕು.ದರ್ಬೆ ಅಥವಾ ಉಣ್ಣೆಯ ಆಸನದಲ್ಲಿ ಕುಳಿತು ಹನುಮಂತನ ಮೂರ್ತಿ ಅಥವಾ ಚಿತ್ರ ಮತ್ತು ಪುಸ್ತಕದಲ್ಲಿರುವ ಯಂತ್ರವನ್ನು ಎದುರಿಗೆ ಇರಿಸಿಕೊಳ್ಳಬೇಕು.
ಅಕ್ಕಿ,ಕುಂಕುಮ, ಕೆಂಪು ಹೂ, ಧೂಪ,ದೀಪ, ಉದುಬತ್ತಿ, ಮತ್ತು ಹಚ್ಚಿದ ದೀಪಗಳನ್ನು ಎದುರಿಗೆ ಇರಿಸಿಕೊಳ್ಳಬೇಕು.
ನೈವೇದ್ಯಕ್ಕಾಗಿ ಮೋತಿಚೂರಿನ ಉಂಡೆ ಮಾಡಬೇಕು.ಕೈಯಲ್ಲಿ ಹೂಗಳನ್ನು ಹಿಡಿದು ಈ ಶ್ಲೋಕವನ್ನು ಹೇಳಿ ಪ್ರಾರ್ಥಿಸಬೇಕು.
“ಅತುಲಿತ ಬಲಧಾಮಂ, ಹೇಮ ಶೈಲಾಭದೇಹಂ
ಧನುಜ-ವನ ಕೃಶಾನುಂ,ಜ್ಞಾನಿನಾಂ ಆಗ್ರಗಣ್ಯಂ
ಸಕಲ ಗುಣನಿಧಾನಂ, ವಾನರಾಣಾಂ ಅಧೀಶಂ,
ರಘುಪತಿ ಪ್ರಿಯ ಭಕ್ತಂ, ವಾತಜಾತಂ ನಮಾಮಿ.
ಈ ಶ್ಲೋಕವನ್ನು ಹೇಳಿದ ನಂತರ ಪುಷ್ಪ ಅರ್ಪಿಸಿ ಮನದಲ್ಲಿ ಹನುಮಂತನನ್ನು ಸ್ಮರಿಸುತ್ತಾ ‘ಹನುಮಾನ ಚಾಲೀಸಾ’ ವನ್ನು ಓದಬೇಕು.
ಕೊನೆಯಲ್ಲಿ ರುದ್ರಾಕ್ಷಿಯನ್ನು ಮೇಲೆ ಹಿಡಿದು “ಹಂ ಹನುಮತೆ ರುದ್ರಾತ್ಮಕಾಯ ಹುಂ ಫಟ್” ಎಂಬ ಮಂತ್ರವನ್ನು ಪ್ರತಿ ದಿನವೂ 108 ಬಾರಿ ಜಪಿಸಬೇಕು.
ಸಂಕಟಮೋಚನ ಹನುಮಾನ ಅಷ್ಟಕ ಮತ್ತು ಅದರ ಅರ್ಥ.
“ಬಾಲ ಸಮಯ ರವಿ ಭಕ್ತಿ ಲಿಯೋ ತಬ ,ಲೇನುಹು ಲೋಕ ಭಯೋ ಅಂಧಿಯಾರೊ, ತಾಸಿ ಸೊ ತ್ರಾಸ ಭಯೊ ಜಗ ಕೊ, ಯಹ ಸಂಕಟ ಕಾಹು ಸೊ ಜಾತ ನ ಠಾರೊ,ಜೀವನ ಆನಿ ಕರೀ ಬಿನಲೇ ತಬ, ಚಾಂಡಿ ದಿಯೊ ರವಿ ಕಷ್ಟ ನಿವಾರೊ, ಕೋ ನಹಿ ಜಾನತ ಹೈ ಜಗ ಮೆ ಕಪಿ, ಸಂಕಟ ಮೋಚನ ನಾಮ ತಿಹಾರೋ.” (1).
ಹೇ ಮಹಾವೀರ ಹನುಮಾನ, ನೀನು ಬಾಲಕನಾಗಿದ್ದಾಗ ಸೂರ್ಯನನ್ನು ಹಣ್ಣೆಂದು ಬಾಯಿತೆರೆದು ಅದರಲ್ಲಿ ಸೂರ್ಯನನ್ನು ಇಟ್ಟುಕೊಂಡೆ.ಮೂರು ಲೋಕ ಭಯ ಭೀತವಾಯಿತು.ಆಗ ಆದ ತೊಂದರೆಯನ್ನು ಯಾರೂ ಪರಿಹರಿಸಲಿಲ್ಲ. ನಿರಾಸೆಯಿಂದ ಎಲ್ಲರೂ ಇದ್ದಾಗ ದೇವತೆಗಳ ವಿನಂತಿಯಂತೆ ನೀನು ಸೂರ್ಯನನ್ನು ಬಿಟ್ಟೆ.ಸಂಕಟ ದೂರವಾಯಿತು.ಈ ರೀತಿಯಲ್ಲಿ ನಿನ್ನ ಹೆಸರು ಸಂಕಟ ಮೋಚನ ಉಂಟಾಗಿದ್ದು ಯಾರಿಗೆ ತಿಳಿದಿಲ್ಲ.
“ ಬಾಲಿ ಕೀ ತ್ರಾಸ ಕಪೀಸ ಬಸೈ ಗಿರಿ, ಜಾತ ಮಹಾಪ್ರಭು ಪಂಥ ನಿಹಾರೊ , ಚಾಂಕಿ ಮಹಾ ಮುನಿ ಸಾಪದಿಯೊ ತಬ, ಚಾಹಿಯ ಕೌನಬಿಚಾರ ಬಿಚಾರೊ, ಕೈ ದ್ವಿಜರೂಪ ಲಿವಾಯ ಮಹಾಪ್ರಭು,ಸೋ ತುಮ ದಾಸಕೆ ಸೋಕ ನಿವಾರೊ ಕೋ ನಹಿ” (2).
ವಾಲಿಯ ಭಯದಿಂದ ಸುಗ್ರೀವನು ಋಷ್ಯಮೂಕ ಪರತ್ವದಲ್ಲಿ ಅಡಗಿದ್ದನು.ಅವನು ಶ್ರೀ ರಾಮಚಂದ್ರನು ಬರುವುದನ್ನು ನೋಡಿದನು ಅವರ ಬಗ್ಗೆ ತಿಳಿಯಲು ನಿನ್ನನ್ನು ಕಳಿಸಿದನು.ನೀನು ಬ್ರಾಹ್ಮಣ ರೂಪದಿಂದ ಹೋಗಿ ಶ್ರೀ ರಾಮಚಂದ್ರನ ಬಗ್ಗೆ ತಿಳಿದು ಸಂಗಡ ಕರೆತಂದೆ.ಸುಗ್ರೀವನ ಭಯ ದುಃಖ ನಿವಾರಣೆ ಮಾಡಿದೆ.ಹೇ ಹನುಮಾನ ನೀನು ಸಂಕಟ ಮೋಚನ ಎಂದು ಈ ಜಗದಲ್ಲಿ ಯಾರಿಗೆ ಗೊತ್ತಿಲ್ಲ ?
“ಅಂಗದ ಕೆ ಸಂಗ ಲೇನ ಗಯೇ ಸಿಯ,ಖೋಜ ಕಪೀಸ ಯಹ ಬೈನ ಉಚಾರೊ, ಜೀವಿತ ನಾ ಬಚಿಹೌ ಹಮ ಸೋ ಜು, ಬಿನಾ ಸುಧಿ ಲಾಯ ಇಹಾ ಪಗು ಧಾರೊ, ಹೇರಿ ಧಕೆ ತಟ ಸಿಂಧು ಸಬೈ ಸಬ, ಲಾಯ ಸಿಯಾ ಸುಧಿ ಪ್ರಾಣ ಉಬಾರೊ”(3).
ಅಂಗದನೊಂದಿಗೆ ಮಾತೆ ಸೀತಾ ದೇವಿಯನ್ನು ಹುಡುಕುತ್ತಾ ವಾನರ ಸೇನೆ ಹೊರಟಿತ್ತು.ಆಗ ಸುಗ್ರೀವನು ಸೀತೆಯನ್ನು ನೋಡದೇ ಬಂದರೆ ಜೀವಿತ ಉಳಿಯುವುದಿಲ್ಲ ಎಂದು ಹೇಳಿದ್ದನು.ಬಹಳ ಹುಡುಕಿದರು,ಸೀತೆ ಸಿಗಲಿಲ್ಲ, ಎಲ್ಲರೂ ಸುಸ್ತಾದರು.ಸಮುದ್ರ ತಟದಲ್ಲಿ ಕುಳಿತರು.ಆಗ ಸೀತೆಯನ್ನು ನೋಡಿ ಬಂದು ಅಮೃತ ಕುಡಿಸಿದಂತೆ ಎಲ್ಲರ ಪ್ರಾಣವನ್ನು ರಕ್ಷಿಸಿದೆ.ಈ ಜಗತ್ತಿನಲ್ಲಿ ಸಂಕಟ ಮೋಚನ ನಾದ ನಿನ್ನನ್ನು ಯಾರು ತಿಳಿದಿಲ್ಲ ?.
ರಾವಾನ ತ್ರಾಸ ದಈ ಸಿಯ ಕೋ ತಬ, ರಾಕ್ಷಸಿ ಸೊ ಕಹಿ ಸೋಕ ನಿವಾರೊ, ತಾಹಿ ಸಮಯ ಹನುಮಾನ ಮಹಾಪ್ರಭು, ಜಾಯ ಮಹಾ ರಾಜನೀಚರ ಮಾರೊ, ಚೌಹತ ಸೀಯ ಅಸೋಕ ಸೋ ಆಗಿ ಸು,ದೈ ಪ್ರಭು ಮುದ್ರಿಕಾ ಸೋಕ ನಿವಾರೊ “(4).
ಹೇ ಸಂಕಟಮೋಚನ ಹನುಮಂತ,ರಾವಣನು ಸೀತೆಗೆ ಹೆದರಿಸಿದಾಗ ಕಷ್ಠ ಕೊಟ್ಟಾಗ,ರಾಕ್ಷಸಿಯರಿಗೆ ಸೀತೆಯನ್ನು ಒಪ್ಪಿಸಲು ಹೇಳಿದಾಗ ನೀನು ರಾಕ್ಷಸರನ್ನು ಕೊಂದು, ಸೀತೆಗೆ ಶ್ರೀ ರಾಮನ ಮುದ್ರಿಕೆಯನ್ನು ಕೊಟ್ಟೆ.ಆತ್ಮಹತ್ಯೆಗೆ ಸಿದ್ಧಳಾದವಳನ್ನು ಚಿಂತೆಯಿಂದ ದೂರಮಾಡಿಸಿ ಬದುಕಿಸಿದೆ.ಈ ಜಗತ್ತಿನಲ್ಲಿ ನಿನ್ನಂತಹವರು ಬೇರೆ ಯಾರಿದ್ದಾರೆ.
“ ಬಾನ ಲಗ್ಯೋ ಊರ ಲಭಿಮನ ಕೆ ತಬ,ಪ್ರಾಣ ತಜೆ ಸುತ ರಾವಣ ಮಾರೊ, ಲೈ ಗೃಹ ವೈದ್ಯ ಸುಷೇನ ಸಮೇತ,ತಬೈ ಗಿರಿ ದ್ರೋಣನ ಸು ಬೀರ ಉಪಾರೊ, ಅನಿ ಸಜೀವನ ಹಾಥ ದಈ ತಬ ,ಲಉ ಮನ ಕೆ ತುಮ ಪ್ರಾಣ ಉಬಾರೊ”(5)
ರಾವಣನ ಮಗನಾದ ಮೇಘನಾದನು ಬಾಣದಿಂದ ಲಕ್ಷ್ಮಣನನ್ನು ಹೊಡೆದಾಗ ಎದೆಯಲ್ಲಿ ನೆಟ್ಟು ಲಕ್ಷ್ಮಣನಿಗೆ ಪ್ರಾಣ ಸಂಕಟ ಉಂಟಾಯಿತು.ನೀನು ಸುಷೇಣ ಗೃಹ ವೈದ್ಯನನ್ನೂ ಕರೆತಂದು ಸಂಜೀವಿನಿ ಇರುವ ದ್ರೋಣ ಪರ್ವತವನ್ನೇ ತಂದು ಲಕ್ಷ್ಮಣನ ಪ್ರಾಣವನ್ನು ಉಳಿಸಿದೆ.ಈ ಜಗತ್ತಿನಲ್ಲಿ ನಿನ್ನಂತಹ ಸಂಕಟ ಮೋಚನ ಬೇರೆ ಯಾರಿದ್ದಾರೆ ?.
ರಾವಣ ಯುದ್ದ ಅಜಾನ ಕಿಯೋ ತಬ ,ನಾಗ ಕಿ ಫಂಸ ಸಬೈ ಸಿರ ಡಾರೋ, ಶ್ರೀ ರಘುನಾಥ ಸಮೇತ ಸಬೈ ದಲ, ಮೋಹ ಭಯೋ ಯಹ ಸಂಕಟ ಭಾರೋ, ಆನಿ ಖಗೇಶ ತಬೈ ಹನುಮಾನ ಜು,ಬಂಧನ ಕಾಟಿ ಸುತ್ರಾಸ ನಿವಾರೊ” ( 6).
ರಾವಣನು ಘೋರ ಯುದ್ಧವನ್ನು ಮಾಡುತ್ತ ಶ್ರೀ ರಾಮ ಸಮೇತ ಸಕಲ ಸೇನೆಯನ್ನು ನಾಗ ಪಾಶದಿಂದ ಕಟ್ಟಿ ಮೋಹಗೊಳಿಸಿದನು.ಆ ಸಮಯದಲ್ಲಿ ಹೇ ಹನುಮಾನ ನೀನು ಗರುಡನನ್ನು ಕರೆತಂದು ನಾಗ ಪಾಶ ಕತ್ತರಿಸಿ ಎಲ್ಲರ ಸಂಕಟವನ್ನು ದೂರ ಗೊಳಿಸಿದೆ.
ಬಂದು ಸಮೇತ ಜಬೈ ಅಹಿರಾವನ,ಲೈ ರಘುನಾಥ ಪಾತಾಲ ಸಿಧರೊ, ದೇವಹಿ ಪೂಜಿ ಬಲಿ ವಿಧಿ ಸೋಬಲಿ, ದೇವ್ರ ಸಬೈ ಮಿಲಿ ಮಂತ್ರ ಬಿಚಾರೋ, ಜಾಯ ಸಹಾಯ ಭಯೋ ತಬ ಹೀ ,ಅಹಿರಾವನ ಸೈನ್ಯ ಸಮೇತ ಸಂಹಾರೊ”(7).
ಅಹಿತ ರಾವಣನು ಶ್ರೀ ರಾಮ ಲಕ್ಷ್ಮಣರನ್ನು ಪಾತಾಳಕ್ಕೆ ಒಯ್ದು ದೇವಿ ಪೂಜೆಗೆ ತೊಡಗಿದನು.ಇವರಿಬ್ಬರು ಬಲಿಕೊಡಲು ನಿರ್ಧರಿಸಿದ್ದನು.ಆಗ ನೀನು ಅಲ್ಲಿಗೆ ಹೋಗಿ ಅವನ ಸೇನೆಯನ್ನು ಅವನನ್ನು ಕೊಂದೆ. ಈ ಜಗತ್ತಿನಲ್ಲಿ ನಿನಗೆ ಸಮಾನರು ಯಾರಿದ್ದಾರೆ ?
ಕಾಜ ಕಿ ಎ ಬಡ ದೇವನ ಕೆ ತುಮ, ಬೀರ ಮಹಾಪ್ರಭು ದೇಖಿ ಬಿಚಾರೆ, ಕೌನ ಸೆ ಸಂಕಟ ಮೋಹ ಗರೀಬ ಕೇ, ಜೋ ತುಮಸೇ ನಹಿ ಜಾತ ಹೈ ಠಾರೋ, ಬೇಗಿ ಹರೋ ಹನುಮಾನ ಮಹಾಪ್ರಭು,ಜೋ ಕಚು ಸಂಕಟ ಹೋ ಯ ಹಮಾರೋ” (8).
ಹೇ ಮಹಾವೀರ ಹನುಮಾನ,ನೀನು ದೊಡ್ಡ ದೊಡ್ಡ ದೇವತೆಗಳ ಕಾರ್ಯ ಮಾಡಿರುವೆ ,ನೀನೇ ನೋಡು ಮತ್ತು ವಿಚಾರಿಸು ನನಗೆ ನೀನು ದೂರ ಮಾಡಲಾರದಂತಹ ಯಾವ ಸಂಕಟವಿದೆ ? ನಮ್ಮ ಯಾವುದೇ ಸಂಕಟವನ್ನು ನೀನು ಶೀಘ್ರ ದೂರಮಾಡು.ಹೇ ಹನುಮಾನ ಈ ಜಗತ್ತಿನಲ್ಲಿ ನೀನು ಸಂಕಟ ಮೋಚನ ಎಂಬುದು ಯಾರಿಗೆ ತಿಳಿದಿಲ್ಲ ?.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
