fbpx
ಆರೋಗ್ಯ

ಕರ್ಬುಜ ಅಂದ್ರೆ ವಾಕರಿಕೆ ಬರ್ಸ್ಕೊಳ್ಳೋರು ಕೆಲವು ಒಳ್ಳೆಯ ಸತ್ಯಗಳು ತಿಳ್ಕೊಳ್ಳಿ ..

ಬೇಸಿಗೆ ಕಾಲದಲ್ಲಿ ಬೇಗೆ ತಣಿಸಿ ಬಾಯಾರಿಕೆ ನೀಗಿಸುವ ಕಲ್ಲಂಗಡಿ ಹಣ್ಣಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಕರಬೂಜ ಹಣ್ಣಿಗೂ ಇದೆ. ಹೌದು, ಬೇಸಿಗೆಯಲ್ಲೇ ಅತೀ ಹೆಚ್ಚು ಬೆಳೆಯಲಾಗುವ ಕರಬೂಜ ಹಣ್ಣು ನೋಡಲೂ ಚೆಂದ. ತಿನ್ನಲು ಅಂದ.
ಅಧಿಕ ನೀರಿನಂಶ ಹೊಂದಿರುವ ಈ ಹಣ್ಣಿನ ಸೇವನೆಯಿಂದ ಬಿಸಿಲಿನ ಆಯಾಸ, ದಣಿವು ಮತ್ತು ಸುಸ್ತು ಮಾಯವಾಗುತ್ತದೆ. ಅದರಲ್ಲೂ ಬಿಸಿಲಿನಲ್ಲಿ ಆಟವಾಡುವ ಮಕ್ಕಳು ಈ ಹಣ್ಣನ್ನು ಪಾನಕದ ರೂಪದಲ್ಲಿ ಅಥವಾ ಹಣ್ಣಿನ ಹೋಳುಗಳಿಗೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಬೆರೆಸಿ ಸೇವಿಸುವುದರಿಂದ ಸುಡು ಬಿಸಿಲಿನಲ್ಲಿ ಆಟವಾಡಿ ದಣಿದ ದೇಹಕ್ಕೆ ತಕ್ಷಣವೇ ಚೈತನ್ಯ ದೊರಕುತ್ತದೆ. ಜೊತೆಗೆ ನಿರ್ಜಲೀಕರಣವೂ ಆಗುವುದಿಲ್ಲ.

ಏನೇನಿದೆ?ಈ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಬೀಟಾ ಕೆರೋಟಿನ್, ಕಬ್ಬಿಣ, ಕಾರ್ಬೋಹೈಡ್ರೇಟ್ ಇದೆ. ಅಲ್ಲದೇ ಇದರ ಬೀಜದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪೊಟ್ಯಾಷಿಯಂ ಅಂಶವಿದೆ.ಲಾಭಗಳೇನು?

ಈ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಬೀಟಾ ಕೆರೋಟಿನ್ ಹೇರಳವಾಗಿರುವುದರಿಂದ ಇದರ ಸೇವನೆ ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ. ನೇತ್ರಜ್ಯೋತಿ ಚುರುಕಾಗುವುದರ ಜೊತೆಗೆ ಕಣ್ಣಿನ ಪೊರೆ ಸಮಸ್ಯೆ ಹೆಚ್ಚಾಗುವುದನ್ನು ತಡೆಯುತ್ತದೆ.

ವಿಟಮಿನ್ ಸಿ ಅಂಶ ಸಮೃದ್ಧವಾಗಿರುವುದರಿಂದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.ಅಲ್ಸರ್ ನಿಯಂತ್ರಣಕ್ಕೆ ಬರುತ್ತದೆ.

ಇದರ ಸೇವನೆ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚಿಸುವುದರಿಂದ ವೈರಾಣು ಮತ್ತು ಬ್ಯಾಕ್ಟೀರೀಯಾಗಳೊಂದಿಗೆ ಹೋರಾಡುವ ದೈಹಿಕ ಕ್ಷಮತೆ ಹೆಚ್ಚಾಗುತ್ತದೆ. ಅಲ್ಲದೇ ಅಕಾಲಿಕ ವೃದ್ಧಾಪ್ಯವನ್ನು ತಡೆಯುವ ಜೀವಕೋಶಗಳ ಸಂಖ್ಯೆ ಹೆಚ್ಚಿಸುತ್ತದೆ.

ಇದರಲ್ಲಿರುವ ಆಕ್ಸಿಕೈನ್ ಅಂಶ ಮೂತ್ರಪಿಂಡದ ಸಕಲ ದೋಷಗಳನ್ನೂ ನಿವಾರಿಸುತ್ತದೆ ಅಲ್ಲದೇ ಕಲ್ಲುಗಳಾಗದಂತೆ ನಿಯಂತ್ರಿಸುತ್ತದೆ.

 

ರಕ್ತವನ್ನು ತೆಳ್ಳಗಾಗಿಸುವ ಗುಣ ಹೊಂದಿರುವ ಕರಬೂಜ ಸೇವನೆ ಹೃದ್ರೋಗವನ್ನೂ ತಡೆಗಟ್ಟಬಲ್ಲದು. ಜೊತೆಗೆ ನಿದ್ರಾಸಂಬಂಧಿ ತೊಂದರೆಗಳನ್ನು ನಿವಾರಿಸಿ ಆರೋಗ್ಯ ವೃದ್ಧಿಸುತ್ತದೆ.

ಹಾಗಿದ್ದರೆ  ಬೇಸಿಗೆಯ ಬೇಗೆ ನೀಗಲು ರಸ್ತೆ ಬದಿ ಮಾರುವ ಆಹಾರ, ತಂಪು ಪಾನೀಯ, ಲಘು ಪಾನೀಯಗಳ ಬದಲು ಕರಬೂಜ ಹಣ್ಣಿನ ಪಾನಕ, ಸೀ ಕರಬೂಜ ಹಣ್ಣಿನ ಪಾನಕ, ಸೀಕರಣೆ ಇತ್ಯಾದಿಗಳನ್ನು ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಬಹುದಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top