ನಿಮ್ಮ ಹೆಸರು ‘D’ ಅಕ್ಷರದಿಂದ ಶುರುವಾಗುತ್ತಾ ಹಾಗಾದ್ರೆ ನಿಮ್ಮ ಬಗ್ಗೆ ಸಂಖ್ಯಾ ಶಾಸ್ತ್ರ ಏನ್ ಹೇಳುತ್ತೆ ಕೇಳಿ ..
‘D’ ಅಕ್ಷರ 4 ನೇ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ,ಈವ್ಯಕ್ತಿಗಳು ತಮ್ಮನ್ನು ಹೆಚ್ಚು-ಕೆಲಸ ಮಾಡುವಲ್ಲಿ ಒಳಪಡಿಸಿಕೊಳ್ಳುತ್ತಾರೆ , ಎಲ್ಲವನ್ನು ಸಮನಾಗಿ ಕಾಣುವ ಬಹಳ ಪ್ರಬಲವಾದ ಮನಸ್ಸು ಇವರದ್ದು , ವ್ಯವಹಾರ ಮತ್ತು ಸಂಪತ್ತಿನೊಂದಿಗೆ ಸಂಬಂಧಿಸಿ ಹೆಚ್ಚು ಕಾಲ ಕಳೆಯುತ್ತಾರೆ ,.
ತಮ್ಮ ಆರಂಭಿಕ ಜೀವನದ ಅನುಭವವು ತಮ್ಮನ್ನು ಮತ್ತು ಸುತ್ತಲಿರುವವರಿಗೆ, ವಿಶೇಷವಾಗಿ ಕುಟುಂಬಕ್ಕೆ ಬಲವಾದ ಅಡಿಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
‘D’ ಅಕ್ಷರ ಅಂದ್ರೆ ಸಾಕಷ್ಟು ಇಚ್ಛಾ ಶಕ್ತಿ, ವ್ಯವಹಾರಕ್ಕೆ ಬೇಕಾಗಿರುವ ಗುಣ ಸ್ವಾಭಾವಿಕ ಪ್ರತಿಭೆ, ಪರಿಶ್ರಮ, ಅಧಿಕಾರ ಮತ್ತು ಯಾವುದೇ ಯೋಜನೆ ಹಾಕೊಂಡ್ರು ಆಸಕ್ತಿ ಪಟ್ಟು ಕೆಲಸ ಮಾಡುತ್ತಾರೆ , ವಿಷಯಗಳ ಸಂಗ್ರಹ ಮಾಡೋದ್ರಲ್ಲಿ ಎತ್ತಿದ ಕೈ , ಹೆಚ್ಚುವರಿ ಗಮನ ಹರಿಸಿ ಕೆಲಸ ಮಾಡುತ್ತಾರೆ , ಧಾರ್ಮಿಕವಾಗಿ ಅನುಸರಿಸುವ ಕೆಲವು ತತ್ವಗಳನ್ನು ಹೊಂದಿದ್ದಾರೆ.
ಸ್ವಚ್ಛತೆ ಮತ್ತು ಅಚ್ಚುಕಟ್ಟೆಯ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ , ಈ ವ್ಯಕ್ತಿಗಳು ನಿಷ್ಠಾವಂತ ಮತ್ತು ನಂಬಲರ್ಹವಾದವರು ,ಯಾವಾಗಲೂ ಇತರರಿಗೆ ಸಹಾಯ ಮಾಡುತ್ತಾ ಇರುತ್ತಾರೆ ,ಜೀವನದಲ್ಲಿ ಉದ್ದೇಶದ ದೃಢ ಸಂಕಲ್ಪ ಹೊಂದಿರುತ್ತಾರೆ ಇದೆ ಅವರನ್ನು ಬಹಳ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ.
ಋಣಾತ್ಮಕವಾಗಿ ಹೇಳಬೇಕಾದರೆ ಈ ವ್ಯಕ್ತಿಗಳು ಸ್ವಲ್ಪ ಮೊಂಡುತನದವರಾಗಿರಬಹುದು, ಆಗಾಗ್ಗೆ ತಮ್ಮ ಬಗ್ಗೆಯೇ ಕೀಳರಿಮೆಗೆ ಒಳಗಾಗಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
