fbpx
ಸಾಧನೆ

ತಾನು ಭಿಕ್ಷೆ ಬೇಡಿ ಬಂದ ಹಣದಲ್ಲಿ 1200 ಅನಾಥ ಮಕ್ಕಳನ್ನು ಪೋಷಿಸಿದ ಮಹಾತಾಯಿಯ ಕಥೆ..

ತಾನು ಭಿಕ್ಷೆ ಬೇಡಿ ಬಂದ ಹಣದಲ್ಲಿ 1200 ಅನಾಥ ಮಕ್ಕಳನ್ನು ಪೋಷಿಸಿದ ಮಹಾತಾಯಿಯ ಕಥೆ..

ನಮ್ಮ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರಗಳಲ್ಲಿ ಒಂದು ಮತ್ತು ಜನಸಂಖ್ಯೆಯ ನಡುವೆ ಹೆಚ್ಚಿನ ಭಾಗ ಮಕ್ಕಳದ್ದಾಗಿದೆ.ಆದರೆ ಈ ಮಕ್ಕಳ ಒಂದು ಭಾಗವು ಸಾಮಾನ್ಯವಾಗಿ ಅನಾಥಾಶ್ರಮದಲ್ಲಿಮತ್ತು ಬಡತನದಲ್ಲಿ ವಾಸಿಸುತ್ತಿದೆ ಮತ್ತು ಸಮಾಜದಿಂದ ಸತತವಾಗಿ ಟೀಕೆಗೊಳಗಾಗುತ್ತಿದೆ.

ನಮ್ಮ ಇಂದಿನ ಕಥೆಯು ಕಠಿಣವಾದ ಜಗತ್ತಿನಲ್ಲಿ ದಯೆಯ ಸಾಕ್ಷಿಯಾದ ಮಹಿಳೆಯ ಬಗ್ಗೆ. ಸಿಂಧುತಾಯ್ ಸಪ್ಕಲ್ ಅವರ ಬಗ್ಗೆ ಕಳೆದ 42 ವರ್ಷಗಳಲ್ಲಿ 1200 ಅನಾಥ ಮತ್ತು ತ್ಯಜಿಸಿದ ಮಕ್ಕಳನ್ನು ಸಾಕಿ ಸಲಹುತ್ತಿದ್ದಾರೆ.

1948 ರ ನವೆಂಬರ್ 14 ರಂದು ಜನಿಸಿದ ಸಿಂಧುತಾಯ್ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕುರುಬ ಕುಟುಂಬದವರಾಗಿದ್ದರು. ಮಗುವಾಗಿದ್ದಾಗ ಶಾಲೆಗೆ ಹೋಗಿ ಹೆಚ್ಚು ಕಲಿಯಲು ಬಯಸಿದ್ದರು ಮತ್ತು ಆಕೆಯ ತಂದೆ , ತಾಯಿ ಆಕೆಯ ಶಿಕ್ಷಣವನ್ನು ಬಲವಾಗಿ ವಿರೋಧಿಸಿದರು ಇದರ ಫಲವಾಗಿ ಅವರು ಕೇವಲ 4 ನೇ ದರ್ಜೆಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಮತ್ತು 10 ವರ್ಷದ ವಯಸ್ಸಿನಲ್ಲಿಯೇ ಅವರು 30 ವರ್ಷ ವಯಸ್ಸಿನವರಾಗಿದ್ದ ವ್ಯಕ್ತಿಯ ಜೊತೆ ವಿವಾಹ ಮಾಡಲಾಯಿತು .

ಆನಂತರ ಪತಿಯ ನಿತ್ಯ ಕಿರುಕುಳ ದಿಂದ ಬೇಸತ್ತಿದ್ದ ತಾಯ್ ಅವರನ್ನು ಪತಿಯು ಮನೆಯಿಂದ ಹೊರಗೆ ಹಾಕಿದ ಆಗ ತಾಯ್ ಗರ್ಭಿಣಿಯಾಗಿದ್ದರು ತನ್ನ ತಾಯಿಯಮನೆಯಲ್ಲೂ ಸಹ ಆಶ್ರಯ ದೊರೆಯಲಿಲ್ಲ , ನಿರಾಶ್ರಿತಳಾಗಿದ್ದ ತಾಯ್ ಗೆ ರಸ್ತೆಯ ಬದಿಯ ಪಾಳು ಮನೆಗಳು ,ಬಸ್ ಸ್ಟಾಂಡ್ ,ರೈಲ್ವೆ ಸ್ಟಾಂಡ್ ಆಶ್ರಯ ತಾಣಗಳಾದವು .

ಆತ್ಮ ಹತ್ಯೆ ಮಾಡಿಕೊಳ್ಳಬೇಕೆಂದು ಕೊಂಡಿದ್ದ ತಾಯ್ ಗೆ ಹಾಗೆ ಮಾಡದಿರಲು ಈ ಘಟನೆ ಸಹಾಯ ಮಾಡಿತು ಅದೇನೆಂದರೆ
ಒಬ್ಬ ಭಿಕ್ಷುಕ ರೋಧಿಸುವುದು ಕೇಳಿಸಿತು ಅವನ ಬಳಿಗೆ ನಡೆದ ತಾಯ್ ಗೆ ಆತನು ಹೇಳುತ್ತಾನೆ “ಅಮ್ಮ ನಾನು ಬಹಳ ಸುಸ್ತಾಗಿದ್ದೇನೆ ನಾನು ಸಾಯುತ್ತೇನೆ ಎಂದು ಅನಿಸುತ್ತದೆ , ನನಗೆ ಯಾರು ಇಲ್ಲ , ಒಂದೆರಡು ಹನಿ ನೀರು ಕೊಡು ಅದನ್ನು ಕುಡಿದು ಸಾಯುತ್ತೇನೆ” ಎನ್ನುತ್ತಾನೆ.
ಆಗ ತಾಯ್ “ಅಪ್ಪ ನನ್ನ ಬಳಿ ರೊಟ್ಟಿ ಇದೆ ತಗೋ ತಿನ್ನು ” ಎಂದು ಹೇಳಿ ರೊಟ್ಟಿ ಕೊಡುತ್ತಾಳೆ , ರೊಟ್ಟಿ ತಿಂದ ನಂತ್ರ ಭಿಕ್ಷುಕನು ಸಾಯಲಿಲ್ಲ ,ಮತ್ತೆ ಮೊದಲಿನಂತೆ ಓಡಾಡಲು ಶುರು ಮಾಡಿದ .

ಈ ಘಟನೆ ತಾಯ್ ಅವರಿಗೆ ತಾನು ಜನರನ್ನು ಬದುಕಿಸಬಲ್ಲೆ ನಾನು ಯಾಕೆ ಸಾಯ ಬೇಕು ಎಂಬ ಪ್ರಶ್ನೆಯನ್ನು ಮೂಡಿಸಿತ್ತು ,
ನಿಲ್ದಾಣಗಳಲ್ಲಿ ಭಿಕ್ಷೆ ಮಕ್ಕಾಳನ್ನು ಕಂಡಿದ್ದರು , ಶೀಘ್ರದಲ್ಲೇ ಸಿಂಧು ತಾಯ್ 16 ಮಕ್ಕಳ ತಾಯಿಯಾದರು . ತಮ್ಮ ಸ್ವಂತ ಮಗಳು ಮಮತಾರನ್ನು ಅವರು ಪುಣೆನ ಶ್ರೀಮಂತ್ ದಗದುಸೆತ್ ಹಾಲ್ವಾಯಿ ಟ್ರಸ್ಟ್ಗೆ ಕಳುಹಿಸಿದರು. ಹಲವು ವರ್ಷಗಳ ನಂತರ ಆಕೆ ಆಶ್ರಮವನ್ನು ನಿರ್ಮಿಸಿದರು.

ಅವರು 1200 ಅನಾಥ ಮಕ್ಕಳನ್ನು ಪೋಷಿಸಿದ್ದಾರೆ , ರಾಷ್ಟ್ರಪತಿಯಾದ ಶ್ರೀ ಪ್ರಣಬ್ ಮುಖರ್ಜಿ ಅವರ ಪ್ರಶಸ್ತಿ ಸೇರಿದಂತೆ 750 ಕ್ಕೂ ಅಧಿಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
ಅವರು ಇತ್ತೀಚೆಗೆ ಪುಣೆಯ ಕಾಲೇಜಿನಿಂದ ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ. ಅವರು ಉಪನ್ಯಾಸಗಳನ್ನು ನೀಡಲು ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ ಅಲ್ಲಿ ಸಂಗ್ರಹವಾಗುವ ಹಣವನ್ನು ಮಕ್ಕಳ ಖರ್ಚು ವೆಚ್ಚಗಳಿಗೆ ಬಳಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top