fbpx
ಆರೋಗ್ಯ

ದಿನಕ್ಕೆ ಒಂದು ಚಮಚ ಅಲೋವೆರಾ ಲೋಳೆ ತಿಂತಾ ಬನ್ನಿ ಯಾವ್ ಕಾಯಿಲೆಗಳು ಹತ್ರ ಸುಳಿಯಲ್ಲ..

ಅಲೋವೆರಾದ ಆರೋಗ್ಯಕರ ಗುಣಗಳು :

 ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ.

ಕೊಲೆಸ್ಟ್ರಾಲ ಪ್ರಮಾಣವನ್ನು ಕಡಿಮೆ ಮಾಡುತ್ತದೆ , ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ನಿಂದ ದೇಹದ ತೂಕ ಕಡಿಮೆ ಮಾಡಿ ಅದನ್ನು ನಿರ್ವಹಿಸಲು ನೆರವಾಗುತ್ತದೆ. ಇದು ಹೊಟ್ಟೆ ಕ್ಲೀನ್ ಮಾಡಿ ಚಯಾಪಚಯಾ ಕ್ರಿಯೆ ಸರಿಯಾಗಿರಲು ನೆರವಾಗುತ್ತದೆ. ಅಲೋವೆರಾ ಜ್ಯೂಸ್ ನಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿರುವ ಬೊಜ್ಜು ಕಡಿಮೆ ಮಾಡಲು ನೆರವಾಗುತ್ತದೆ.

ರಕ್ತ ಶುದ್ಧೀಕರಣಗೊಳಿಸುತ್ತದೆ. ರಕ್ತದಲ್ಲಿ ಆಮ್ಲಜನಕದ ಉತ್ಪಾದನೆ ಹೆಚ್ಚಿಸುತ್ತದೆ , ಅಲೋವೆರಾ ಜ್ಯೂಸ್ ನಲ್ಲಿ ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಇತರ ಕೆಲವೊಂದು ಪೌಷ್ಠಿಕಾಂಶಗಳಿವೆ. ಇವು ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಶುದ್ದವಾಗಿಡುತ್ತದೆ.

ಅಲೋವೆರಾ ಜ್ಯೂಸ್ ನ್ನು ಪ್ರತೀದಿನ ಶಕ್ತಿ ವರ್ಧಕ ಪಾನೀಯವಾಗಿ ಬಳಸಬಹುದು. ಯಾಕೆಂದರೆ ಇದರಲ್ಲಿ ಪೌಷ್ಠಿಕಾಂಶ, ವಿಟಮಿನ್ ಮತ್ತು ಮಿನರಲ್ ಅಗಾಧ ಪ್ರಮಾಣದಲ್ಲಿದೆ ಮತ್ತು ಇದು ದೇಹದ ವ್ಯವಸ್ಥೆಗೆ ಶಕ್ತಿ ನೀಡುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಅಂಗಾಂಗಗಳ ಚಟುವಟಿಕೆಯನ್ನು ಇದು ಪ್ರಚೋದಿಸುತ್ತದೆ.

ಉರಿಯೂತ ಮತ್ತು ಸಂಧಿವಾತ ಶಮನಗೊಳಿಸುತ್ತದೆ.

ಆಲೋವೆರಾ ಜ್ಯೂಸ್ ನಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳಿವೆ. ಇದು ನಿಮ್ಮ ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಡುತ್ತದೆ. ಅಲೋವೆರಾ ಜ್ಯೂಸ್ ಮೌಥ್ ಪ್ರೆಶನರ್ ರೀತಿ ಕೆಲಸ ಮಾಡಿ, ಬಾಯಿ ದುರ್ವಾಸನೆ ತಡೆಯುತ್ತದೆ. ಅಲೋವೆರಾ ಜ್ಯೂಸ್ ಬಾಯಿಯ ಹುಣ್ಣು ಮತ್ತು ಒಸಡಿನಿಂದ ರಕ್ತ ಬರುವ ಸಮಸ್ಯೆಯನ್ನು ತಡೆಯುತ್ತದೆ.

ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ತಡೆಯುತ್ತದೆ.

ಇತರ ಅಜೀರ್ಣಕಾರಿ ಕಾಯಿಲೆಗಳನ್ನು ಶಮನ ಗೊಳಿಸುತ್ತದೆ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತ್ತದೆ. ನೈಸರ್ಗಿಕವಾಗಿ ಖನಿಜಗಳು, ಜೀವಸತ್ವಗಳು, ಕಿಣ್ವಗಳನ್ನು ದೇಹಕ್ಕೆ ಪೂರೈಸುತ್ತದೆ.
ರಕ್ತದಲ್ಲಿನ ಸಕ್ಕರೆಅಂಶ ಸ್ಥಿರಗೊಳಿಸುತ್ತದೆ. ಡಯಾಬಿಟಿಸ್ ರೋಗಿಗಳಲ್ಲಿನ ಟ್ರೈಗ್ಲಿಸರೈಡ್ ಅನ್ನು ಕುಂಠಿತಗೊಳಿಸುತ್ತದೆ .

ಅಲೋವೆರಾ ಜ್ಯೂಸ್ ಹಾನಿಗೊಳಗಾದ ಚರ್ಮದ ಜೀವಕೋಶಗಳನ್ನು ಸರಿಪಡಿಸಿ, ಚರ್ಮ ಕಾಂತಿಯುಕ್ತ ಮತ್ತು ಸುಂದರವಾಗುವಂತೆ ಮಾಡುತ್ತದೆ. ಅಲೋವೆರಾ ಜ್ಯೂಸ್ ಚರ್ಮ ಸರಿಪಡಿಸಲು ಮತ್ತು ಪುನರ್ಚೇತನ ಪಡೆಯಲು ಬೇಕಾಗುವ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ ಮತ್ತು ಚರ್ಮವು ಯುವ ಹಾಗೂ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಅದೇ ರೀತಿ ಕೂದಲನ್ನು ಕೂಡ. ಅಲೋವೆರಾ ಜ್ಯೂಸ್ ಕೂದಲಿನ ಕಿರುಚೀಲಗಳ ಬೆಳವಣಿಗೆ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ. ಇದು ಅಲೋವೆರಾ ಜ್ಯೂಸ್ ನ ಕೆಲವೊಂದು ಆರೋಗ್ಯ ಲಾಭಗಳು.

ರಕ್ತದಲ್ಲಿ ಆಮ್ಲಜನಕದ ಉತ್ಪಾಧನೆ ಹೆಚ್ಚಿಸುತ್ತದೆ.

ಹುಣ್ಣುಗಳು, IBS, ಕ್ರೋನ್ಸ್ ರೋಗ ಮತ್ತು ಇತರ ಜೀರ್ಣಕಾರಿ ಕಾಯಿಲೆಗಳನ್ನು ಶಮನಗೊಳಿಸುತ್ತದೆ.

ಶಾರೀರಿಕ ಮತ್ತು ವಿಕಿರಣಗಳಿಂದ ಉಂಟಾದ ಸುಟ್ಟಗಾಯಗಳನ್ನು ವೇಗವಾಗಿ ಗುಣಮುಖಗೊಳಿಸುತ್ತದೆ.

ಕೊಲೊನ್ ಕ್ಯಾನ್ಸರ್ ತಡೆಗಟ್ಟುತ್ತದೆ , ಮತ್ತು ಜೀರ್ಣಾಂಗದ ಸಾಮರ್ಥ್ಯ ವೃದ್ಧಿಸುತ್ತದೆ, ಮಲಬದ್ಧತೆಗೆ ಅಂತ್ಯವಾಡುತ್ತದೆ.

ಹೃದಯ ಕಾರ್ಯ ಸಾಮರ್ಥ್ಯ ವೃದ್ಧಿಸುತ್ತದೆ ಮತ್ತು ದೈಹಿಕ ಸಹಿಷ್ಣುತೆ ಹೆಚ್ಚಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top