fbpx
ದೇವರು

ನಾವು ದಿನಕ್ಕೆ ಎಂಟು ಗಂಟೆ ಮಲಗೋಕೆ ಕಷ್ಟ ಪಡ್ತೀವಿ ಅಂತದ್ದು ಕುಂಭಕರ್ಣ ಆರು ತಿಂಗಳು ಹೆಂಗೆ ಮಲಗ್ತಿದ್ದ ಗೊತ್ತಾ ?

ಕುಂಭಕರ್ಣನ ನಿದ್ರೆಯ ಹಿಂದಿರುವ ರಹಸ್ಯ.

ದೇವತೆಗಳ ಸಮೂಹವು ಒಟ್ಟಾಗಿ  ರಾವಣನ ತಮ್ಮನಾದ  ಕುಂಭಕರ್ಣನಿಗೆ ವರವನ್ನು ಕೊಡುವ ಸಮಯದಲ್ಲಿ  ಹೇಗೆ ಮೋಸಮಾಡಿ  ವಂಚಿಸಿದರು ಎನ್ನುವ ಕಥೆ ಇಲ್ಲಿದೆ.

ಪೌರಾಣಿಕ ಕಥೆಯಾದ ರಾಮಾಯಣದಲ್ಲಿ ,ರಾವಣನ ಚಿಕ್ಕ  ತಮ್ಮನಾದ ಕುಂಭಕರ್ಣನ ಪಾತ್ರ ಅತ್ಯಂತ  ಅಸ್ಪಷ್ಟವಾಗಿದೆ. ಜನ ಸಾಮಾನ್ಯರಿಗೆ ಇವರ ಬಗ್ಗೆ ಅಷ್ಟು ಗೊತ್ತಿಲ್ಲ.ಕುಂಭಕರ್ಣನೇ ಅತ್ಯಂತ ಜಾಸ್ತಿ ಹೊಡೆತವನ್ನು ತಿಂದು ಮೋಸ,ವಂಚನೆಯನ್ನು  ಅನುಭವಿಸಿರುವ ಪಾತ್ರವಾಗಿದ್ದು ಮತ್ತು ಕುಂಭಕರ್ಣನು ಆರು ತಿಂಗಳ ನಿದ್ದೆ ಮತ್ತು ಒಂದು ದಿನ ಮಾತ್ರ ಎಚ್ಚರವಾಗಿರುವಂತಹ  ವಿಚಿತ್ರ ವರವನ್ನು ಅದು ಹಸಿವಾಗಿದ್ದರಿಂದ ಬರೀ ತಿಂದು ಹೊಟ್ಟೆಯನ್ನು ತುಂಬಿಸಿಕೊಳ್ಳಲು ಮಾತ್ರ ಒಂದು ದಿನ ಎದ್ದಿರುತ್ತಿದ್ದ.ಆದರೆ ಅವನು ಯಾಕೆ ಹಾಗೆ ಮಾಡುತ್ತಿದ್ದ.ಅವನ ಗಾಡ ನಿದ್ರೆಯ ಹಿಂದಿರುವ ಕಾರಣ ಏನು ? ನಾವು ನಿಮಗೆ ಆ ಕಾರಣ ಹೇಳ್ತೀವಿ ಕೇಳಿ….

ರಾಮಾಯಣದ  ಉತ್ತರ  ಕಾಂಡದಲ್ಲಿ  ಕುತೂಹಲಕಾರಿ  ಯಾಗಿರುವಂತಹ    ವಿಷಯಗಳನ್ನು ಮೂವರು ಸಹೋದರರ ಬಗ್ಗೆ ಹೇಳಿದ್ದಾರೆ. ಮೂವರು ಸಹೋದರರಾದ ರಾವಣ,ಕುಂಭಕರ್ಣ, ಮತ್ತು ವಿಭೀಷಣ, ಅವರ ತಂದೆಯಾದ ವೈಶ್ರವಸ್ಸನು ಇವರಿಗೆ ಆಗಾಗ್ಗೆ ಈ ಭೂಮಿಯ ಮೇಲೆ ದೇವರ ರೀತಿಯಲ್ಲಿ ಇರುವಂತಹ ಅಷ್ಟೇ   ಶ್ರೇಷ್ಠ  ರೆನಿಸಿಕೊಳ್ಳುವಂತಹ  ಹೆಸರನ್ನು ಪಡೆಯಬೇಕು ಎಂದು ಹೇಳುತ್ತಿದ್ದನು.ಅದಕ್ಕೆ ಮೂರು ಜನ ಸಹೋದರರು ಅನೇಕ ವರ್ಷಗಳ ತಪ್ಪಸ್ಸನ್ನಾಚರಿಸುತ್ತಿದ್ದರು ಆದ್ದರಿಂದ ತ್ರಿಮೂರ್ತಿಯಾದ ಬ್ರಹ್ಮನು ಇವರ ಮುಂದೆ ಪ್ರತ್ಯಕ್ಷವಾಗಿ ಪ್ರತಿಯೊಬ್ಬರಿಗೂ ವರಗಳನ್ನು ನೀಡಿದನು.

ಒಮ್ಮೆ ವೈಶ್ರವಣನು ಲಂಕೆಯಿಂದ ತಂದೆಯಾದ ವಿಶ್ರವಸ್ಸನ್ನು  ನೋಡಲು ಬರುತ್ತಿದ್ದನು.ಆಕಾಶದಲ್ಲಿ ಪುಷ್ಪಕ ವಿಮಾನದಲ್ಲಿ ಬರುತ್ತಿರುವಾಗಲೇ ಆಶ್ರಮದಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಸಹ ಕಂಡನು.ಆ ಮಕ್ಕಳ ತಾಯಿ ಕೈಕಸೆ ವೈಶ್ರವಣನನ್ನು ದಶಮುಖನಿಗೆ ತೋರಿಸಿ, “ಮಗನೇ,ನೀನು ಆ ವೈಶ್ರವಣನಿಗಿಂತಲೂ ಹೆಚ್ಚು ಸಂತೃಪ್ತಿ ಉಳ್ಳವನಾಗಬೇಕು ಇಲ್ಲವಾದರೆ ಬ್ರಾಹ್ಮಣನಾಗಿ ಹುಟ್ಟಿದ್ದಕ್ಕೆ ಏನು ಪ್ರಯೋಜನವಿಲ್ಲವೆಂದು ಅವನನ್ನು ಸಿಟ್ಟಿಗೆಬ್ಬಿಸಿದಳು.ಆಗ ದಶಮುಖ,ಕುಂಭಕರ್ಣ ಮತ್ತು ವಿಭೀಷಣ ಮೂವರು ಸಹ ಬ್ರಹ್ಮದೇವನನ್ನು ಕುರಿತು ತಪ್ಪಸ್ಸನ್ನಾಚರಿಸಲು ಹೊರಟರು ಅವರು ಸಮುದ್ರ ತೀರದ ಕ್ಷೇತ್ರ ಗೋಕರ್ಣಕ್ಕೆ ಬಂದರು.

ದಶಮುಖ ವಿಭೀಷಣ ಕುಂಭಕರ್ಣರು ಬೇರೆ ಬೇರೆ ಸ್ಥಳಗಳನ್ನು ಆರಿಸಿಕೊಂಡು ತಪ್ಪಸ್ಸನ್ನಾರಂಭಿಸಿದರು. ದಶಮುಖನ ಕಾಲ ಕಾಲಕ್ಕೆ ಯೋಗ್ಯವಾದ ರೀತಿಯಲ್ಲಿ ತಪ್ಪಸನ್ನು ಆಚರಿಸಿದನು.ಮಳೆಗಾಲದಲ್ಲಿ ನೀರಿನಲ್ಲಿ ನಿಂತರೆ, ಬೇಸಿಗೆಯಲ್ಲಿ ಪಂಚಾಗ್ನಿ ಮದ್ಯೆ ನಿಂತನು.ಪ್ರತಿವರ್ಷಕ್ಕೊಂದರಂತೆ ದಶಮುಖ ತನ್ನ ತಲೆಯನ್ನೇ ಅರ್ಪಿಸಿದನು. ಹೀಗೆ ಹತ್ತನೇ  ವರ್ಷದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ಮಗನೇ, ನಿನ್ನ ಇಚ್ಛೆ ಏನು ಎಂದು ವರಕೇಳಲು ತಿಳಿಸಿದನು.

ದಶಶಿರನು ಬ್ರಹ್ಮದೇವನಿಗೆ ವಂದಿಸಿ,ತನಗೆ ದೇವತೆಗಳು, ಸಿದ್ದರು,ಯಕ್ಷರು,ನಾಗಲೋಕಿಗಳು ರಾಕ್ಷಸರಿಂದ ಮರಣ ಬರಬಾರದೆಂದು ಪ್ರಾರ್ಥಿಸಿದನು. ಮೃಗ, ಪಕ್ಷಿ ಮತ್ತು ಮಾನವರನ್ನು ತನ್ನ ಅಹಂಕಾರದಿಂದ ನಿರ್ಲಕ್ಷಿಸಿದ್ದನು.ಬ್ರಹ್ಮ ದೇವನು ತಿಳಿದು ಇವನು ಮಹಾಪಾಪಿಯು, ಅಹಾಂಕಾರಿಯು,ಇವನಿಷ್ಟದಂತೆಯೇ ಆಗಲಿ ಎಂದು ವರವನ್ನು ಕೊಟ್ಟು ಅವನು ಅರ್ಪಿಸಿದ ಓಂಬ್ಬತ್ತು ತಲೆಗಳನ್ನು ಸಹ ಅನುಗ್ರಹಿಸಿದನು.

ವಿಭೀಷಣನು ಸೂರ್ಯನಿಗೆ ಅಭಿಮುಖವಾಗಿ ನಿಂತು ಭಕ್ತಿ ಭಾವದಿಂದಲೇ ತಪಸ್ಸನ್ನು ಆಚರಿಸಿದನು.ವಿಭೀಷಣನನ್ನು ಕುರಿತು ಕುಲಶಿರೋಮಣಿ, ವಂಶೋದ್ಧಾರಕನೆ,ನಿನಗೇನು ಬೇಕೆಂದು ಕೇಳಿದನು.ವಿಭೀಷಣನು ಕರುಣಾಳುವಾದ ಬ್ರಹ್ಮದೇವನೆ,ನಿನ್ನ ದರ್ಶನದಿಂದಲೇ ನಾನು ಕೃತಾರ್ಥನಾದೆನು.ನಾನು ಅಭ್ಯಾಸ ಮಾಡದಿದ್ದರು ಸಹ ನನಗೆ ದಿವ್ಯಾಸ್ತ್ರಗಳ ಸಿದ್ದಿ ಆಗಲಿ ಎಂದು ಕೇಳಿದನು.ಅದೇ ರೀತಿಯಲ್ಲಿ ಯಾವಾಗಲೂ ನನಗೆ ಧರ್ಮದಲ್ಲಿ ಬುದ್ಧಿಯಿರಲಿ  ಎಂದು ಕೇಳಿಕೊಂಡನು.ವಿಭೀಷಣನ ವರವನ್ನು ಕರುಣಿಸಿದ ಬ್ರಹ್ಮನು ಅವನಿಗೆ ಅಮರತ್ವವನ್ನು ಸಹ ಕರುಣಿಸಿದನು.

ಬ್ರಹ್ಮ ದೇವನು ಕುಂಭಕರ್ಣನ ಕಡೆಗೆ ಸಾಗಿದಾಗ ದೇವತೆಗಳು ಬಂದು ನಿವೇದಿಸಿಕೊಂಡರು.ಬ್ರಹ್ಮದೇವ, ಈಗಾಗಲೇ ಕುಂಭಕರ್ಣನು ಅನೇಕ ಋಷಿ ಮುನಿಗಳನ್ನು ತಿಂದು ಹಾಕಿದ್ದಾನೆ.ಆದುದರಿಂದ ಅವನಿಗೆ ಇನ್ನೂ ಹೆಚ್ಚಿನ ವರ ಕೊಡಬೇಡಿರಿ ಎಂದರು.ಒಂದು ವೇಳೆ ನೀವು ವರ ನೀಡಿದರೆ ಅದು ಈ ಜಗತ್ತಿನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾ  ಬ್ರಹ್ಮದೇವನನ್ನು  ವಿನಂತಿಸಿಕೊಂಡರು.

ದೇವನಾದ ಬ್ರಹ್ಮನು ಕುಂಭಕರ್ಣನಿಗೆ ವರವನ್ನು ಕೊಡುವ ಸಮಯದಲ್ಲಿ  ಒಂದು ತಂತ್ರವನ್ನು ಬಳಸಲು ನಿರ್ಧಾರ ಮಾಡಿದನು.

1.ಕುಂಭಕರ್ಣನ ನಿದ್ದೆಯ ಬಗ್ಗೆ :-ಪುರಾಣದಲ್ಲಿರುವ ರಹಸ್ಯ.

2.ದೇವತೆಗಳ ಕೋರಿಕೆಯ ಮೇರೆಗೆ ಬ್ರಹ್ಮ ದೇವನು  ಸರಸ್ವತಿಗೆ ದೇವತೆಗಳ ಇಚ್ಛೆಯನ್ನು ಈಡೇರಿಸುವಂತೆ ಹೇಳಿದನು.ಕುಂಭಕರ್ಣನು ವರ ಕೇಳುವ ಸಮಯದಲ್ಲಿ ಅವನಲ್ಲಿ ಸೇರಿ ಅವನ ಬುದ್ಧಿಯನ್ನು ಬದಲಾಯಿಸಿದ್ದರಿಂದ ಅವನು “ಇಂದ್ರಾಸನ” ನದ ಬದಲಿಗೆ “ನಿದ್ರಾಸನ” ವನ್ನು ಕೇಳಿದನು.ಆಗ ಬ್ರಹ್ಮದೇವನು ತತಾಸ್ತು ಎಂದು ಅನುಗ್ರಹಿಸಿ ಕುಂಭಕರ್ಣನಿಗೆ ಅನೇಕ ವರ್ಷಗಳ ಕಾಲ ನಿದ್ರೆ ಮಾಡುವ  ವರವನ್ನು ನೀಡಿದನು.

3.ಬ್ರಹ್ಮ ದೇವನು ಆನೇಕ ವರ್ಷಗಳ ಕಾಲ ನಿದ್ದೆ ಮಾಡುವ ವರವನ್ನು ಕೊಟ್ಟಿದ್ದರಿಂದ ರಾವಣನು ಗೊಂಡಲಕ್ಕೀಡಾಗಿ ಮದ್ಯ ಪ್ರವೇಶಿಸಿದನು.ಬ್ರಹ್ಮನನ್ನು ಪರಿಪರಿಯಾಗಿ ಬೇಡಿಕೊಂಡು ಕುಂಭಕರ್ಣನಿಗೆ ಅನೇಕ ವರ್ಷಗಳ ಕಾಲ ನಿದ್ರೆಯನ್ನು ಮಾಡುವುದು ಬೇಡ ಅವನಿಗೆ ಅದಕ್ಕೆಂದೇ ಮಲಗಲು ಮತ್ತು ಎಚ್ಚರವಾಗಿರಲು  ಒಂದು ನಿಗದಿತ ಸಮಯವನ್ನು  ನಿರ್ಧರಿಸಿ ಎಂದನು.

4.ಆಗ ಬ್ರಹ್ಮನ ಇದರ ಬದಲಿಗೆ  ಕುಂಭಕರ್ಣನಿಗೆ ಆರು ತಿಂಗಳ ನಿದ್ದೆಯನ್ನು ಹಾಗೂ  ಒಂದು ದಿನ ಮಾತ್ರ ಎಚ್ಚರವಾಗಿರುವಂತೆ  ಹೇಳಿದನು. ಆ ಎಚ್ಚರವಾಗಿರುವ ಒಂದು ದಿನ ಕುಂಭಕರ್ಣನು 6 ತಿಂಗಳಿನಿಂದ ಹಸಿವಾಗಿದ್ದ ಕಾರಣ  ತನ್ನ ಹಸಿವನ್ನು ನೀಗಿಸಿಕೊಂಡು ಹೊಟ್ಟೆಯನ್ನು ತುಂಬಿಸಿಕೊಳ್ಳಲು  ಭೂಮಿಯ ಮೇಲೆ ತಿರುಗಾಡುತ್ತಾ ಮನುಷ್ಯರನ್ನೇ ತನ್ನ ತೆರೆದ  ದೊಡ್ಡ ಮತ್ತು ಹಗಲವಾದ   ಬಾಯಿಯಿಂದ ಹಿಡಿದು  ತಿನ್ನುತ್ತಿದ್ದನು.

5.ಯುದ್ಧ ಕಾಂಡದ ಪ್ರಕಾರ ರಾಮಾಯಣದಲ್ಲಿ,ಕುಂಭಕರ್ಣನು ರಾವಣನಿಂದ ಓಂಬ್ಬತ್ತು ದಿನಗಳ ವರೆಗೆ ಎಚ್ಚರದಿಂದ  ಎದ್ದಿರುತ್ತಿದ್ದ ಮತ್ತೆ ತಕ್ಷಣ ನಿದ್ರೆಗೆ ಜಾರಿ ಬಿಡುತ್ತಿದ್ದನು ಎಂದು ಹೇಳಲಾಗಿದೆ.

6.ಆದರೆ ಕುಂಭಕರ್ಣನಿಗೆ ಮುಂದೆ ತಾನೇನು ವರ ಪಡೆದೆ ಎಂದು ಅಲೋಚಿಸಿದಾಗ ದೇವತೆಗಳಿಂದ ತನಗೆ ಮೋಸವಾಯಿತೆಂದು ತಿಳಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top