fbpx
ದೇವರು

ಸಂಪತ್ತು ,ಆಯಸ್ಸು ,ಆರೋಗ್ಯಕ್ಕೆ ಶ್ರೀ ಮಹಾಲಕ್ಷ್ಮೀ ಅಷ್ಟಕಂ ಪಠಣೆ ಮಾಡಿ..

 ಮಹಾಲಕ್ಷ್ಮೀ ಪದದ ಅರ್ಥ  ಮತ್ತು ಮಹಾಲಕ್ಷ್ಮೀ ಅಷ್ಟಕಂ..

ಮಹಾಲಕ್ಷ್ಮೀ ಎನ್ನುವ ನಾಲ್ಕು ಅಕ್ಷರದಲ್ಲಿ ಅಡಗಿರುವ ಮಹಿಮಾ ಭಕ್ತಿ ಶ್ಲೋಕ

ಮ -ಎನ್ನೆ ಮಮತಾಮಯಿ ನೀನಾಗಿ ನಂಬಿದ  ಭಕ್ತರನ್ನು ಪೋರೆಯುತ್ತಾ.

ಹಾ-ಎನ್ನೆ ಹಾಲಿನೋಪಾದಿಯಾಗಿ ಭಕ್ತರಿಗೆ ಭಕ್ತಿಯ ಸವಿಯನ್ನು  ಉಣಬಡಿಸುತ್ತಾ.

ಲ-ಎನ್ನೆ ಲಕ್ಷ್ಯ ವಿಟ್ಟು ಧ್ಯಾನಿಸುವ ಭಕ್ತರ ಭಕ್ತಿಯ ಕೂಗಿಗೆ ಮನಸೋತು.

ಕ್ಷ್ಮೀ-ಎನ್ನೆ  ಕ್ಷಿಪ್ರದಲ್ಲಿ  ಓಡೋಡಿ ಬಂದು ಭಕ್ತರನ್ನುದ್ದರಿಸಲು ಅವತರಿಸಿರುವ ಕಲಿಯುಗದ ದೇವತೆ ಕಮಲಾಮಾತೆ ಪ್ರಸನ್ನ ವದನೆಯೇ  ಲಲಿತಾಪರಮೇಶ್ವರಿಯೇ ಗೊರವನಹಳ್ಳಿಯ ಮಹಾಲಕ್ಷ್ಮೀಯೇ ಪಾಹಿಮಾಂ ಪಾಹಿಮಾಂ ಪಾಹಿಮಾಂ ರಕ್ಷಮಾಂ ರಕ್ಷಮಾಂ ರಕ್ಷಮಾಂ ರಕ್ಷಮಾಂ ಭಕ್ತ ಮಹಾಶಯರೇ ಮೇಲೆ ಕಾಣಿಸುವ ಭಕ್ತಿ  ಶ್ಲೋಕವನ್ನು ಪಠಿಸುವುದರಿಂದ ಭಕ್ತರ ಬಾಳು ಹಸನಾಗುವುದು.ಮನಸ್ಸಿಗೆ ನೆಮ್ಮದಿ ತರುವುದು .  ದಿವ್ಯ ಚೇತನ ಮೂಡುವುದು ,ಮುಖದಲ್ಲಿ ತೇಜಸ್ಸು  ಬರುವುದು.ಬಡತನ ನಿವಾರಣೆಯಾಗುವುದು.ಮನೆಯಲ್ಲಿನ ಕಲಹಗಳು ನಿವಾರಣೆಯಾಗುವುದು.ತಾಯಿಯ ನಾಮಸ್ಮರಣೆ ಮಾಡುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುವುದು.

“ಸರ್ವೇಜನ ಸುಖಿನೋಭವಂತು,ಸನ್ಮಗಳಾನಿ ಭವಂತು”

ಶ್ರೀ ಮಹಾಲಕ್ಷ್ಮೀ ಆಷ್ಟಕಮ್.

“ನಮಸ್ತೇಸ್ತು  ಮಹಾಮಾಯೇ, ಶ್ರೀ ಪೀಟೇ ಸುರಪೂಜಿತೇ  ಶಂಖ ಚಕ್ರ ಗದಾಹಸ್ತೆ  ಮಹಾಲಕ್ಷ್ಮೀ ನಮೋಸ್ತುತೇ.(1).

ನಮಸ್ತೇ ಗರುಡಾರುಡೇ ಕೋಲಾಸುರ ಭಯಂಕರಿ, ಸರ್ವಪಾಪ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೇ.(2)

ಸರ್ವಜ್ಞೇ ಸರ್ವವರದೇ   ಸರ್ವದುಷ್ಟ ಭಯಂಕರಿ, ಸರ್ವದುಃಖ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೇ.(3).

ಸಿದ್ದಿಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ,ಮಂತ್ರ ಮೂರ್ತೆ ಸದಾದೇವೀ ಮಹಾಲಕ್ಷ್ಮೀ ನಮೋಸ್ತುತೇ.(4).

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರೀ, ಯೋಗಜ್ಞೇ ಯೋಗಸಂಭೂತೇ ಮಹಾಲಕ್ಷ್ಮೀ ನಮೋಸ್ತುತೇ.(5).

ಸ್ಥೂಲ ಸೂಕ್ಷ್ಮ ಮಹಾರೌದ್ರೆ ಮಹಾಶಕ್ತಿ ಮಹೋದರೇ, ಮಹಾಪಾಪ ಹರೇ ದೇವೀ ಮಹಾಲಕ್ಷ್ಮೀ ನಮೋಸ್ತುತೇ.(6).

ಪದ್ಮಾಸನಸ್ಥಿತೇ ದೇವೀ ಪರಬ್ರಹ್ಮ ಸ್ವರೂಪಿಣೀ, ಪರಮೇಶಿ ಜಗನ್ಮಾರ್ತ  ಮಹಾಲಕ್ಷ್ಮೀ ನಮೋಸ್ತುತೇ.(7).

ಶ್ವೇತಾಂಬರದರೇ ದೇವಿ ನಾನಾಲಂಕಾರ ಭೂಷಿತೇ, ಜಗತಸ್ಥಿತೇ  ಜಗನ್ಮಾರ್ತ ಮಹಾಲಕ್ಷ್ಮೀ ನಮೋಸ್ತುತೇ.(8)

ಮಹಾಲಕ್ಷ್ಮಯಾಷ್ಟಕಮ್ ಸ್ತ್ರೋತ್ರಂ ಯಃ  ಪಟೇದ್ಭಕ್ತಿಮಾನ್ನರಃ, ಸರ್ವಸಿದ್ಧಿಮವಾಪ್ನೋತಿ ರಾಜ್ಯಾಮಪ್ರಾಪ್ನೋತಿ ಸರ್ವದಾ.(9).

ಏಕಕಾಲೇ  ಪಟೇನ್ನಿತ್ಯಂ ಮಹಾಪಾಪ ವಿನಾಶನಂ, ದ್ವಿಕಾಲಂ ಯಃ ಪಟೇನ್ನಿತ್ಯಂ ಧನ ಧಾನ್ಯ ಸಮನ್ವಿತಂ.(10).

ತ್ರಿಕಾಲಂ ಯಃ ಪಟೇನ್ನಿತ್ಯಂ ಮಹಾಶತ್ರು ವಿನಾಶನಂ, ಮಹಾಲಕ್ಷ್ಮೀ ಭವೇನ್ನಿತ್ಯಂ ಪ್ರಸನ್ನಾ ವರದಾಶುಭಂ”.(11).

ಈ ಮಹಾಲಕ್ಷ್ಮೀ ಆಷ್ಟಕಮ್ ಇದನ್ನು ಪ್ರತೀ ದಿನ 3 ಬಾರಿ ಅಥವಾ 2 ಬಾರಿ ಅಥವಾ ಒಂದು ಬಾರಿ ಯಾದರು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಠಿಸಬಹುದು.ಇಲ್ಲವಾದರೇ  ನೀವು  ಪೂಜೆ ಮಾಡಿದ ನಂತರವೂ ಹೇಳಬಹುದು.ನಿಮ್ಮ ಎಲ್ಲ ಕಷ್ಟಗಳು ನಿವಾರಣೆಯಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top