fbpx
ಕನ್ನಡ

ಹನ್ನೆರಡು ಲಕ್ಷಕ್ಕೂ ಹೆಚ್ಚು ಜನರು ನೋಡಿದ ಕನ್ನಡದ ವೈರಲ್ ಹಾಡು ನೀವು ಕೇಳಿದ್ದೀರಾ ?

ಹನ್ನೆರಡು ಲಕ್ಷಕ್ಕೂ ಹೆಚ್ಚು ಜನರು ನೋಡಿದ ಕನ್ನಡ ವೈರಲ್ ಹಾಡು ನೀವು ಕೇಳಿದ್ದೀರಾ ?

ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ಕನ್ನಡದ ಅದ್ಬುತ ಪ್ರತಿಭೆ ಸುಷ್ಮಾ ಅನಿಲ್ ರವರ ‘Shape of You’ ಹಾಡಿನ ಕನ್ನಡದ ಮ್ಯೂಸಿಕ್ ಮ್ಯಾಶ್ ಅಪ್ .

ಸುಷ್ಮಾ ಅನಿಲ್ ರವರು ಇದಕ್ಕೂ ಮೊದಲು ‘ಕಾವೇರಿಯಿಂದ ಗೋದಾವರಿ ತನಕ ಹರಡಿದ್ದ ಕನ್ನಡ ನಾಡು’ ರನ್ನ ರಾಜನ ಕವಿರಾಜ ಮಾರ್ಗದ ಈ ಸಾಲುಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು

 
ಈ ಹಾಡು ಕನ್ನಡಿಗರ ಹೆಮ್ಮೆಯ ಪ್ರತೀಕ ಮತ್ತು ಈ ತರಹದ ಹಾಡುಗಳು ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಆ ಕಾರಣದಿಂದ ಕನ್ನಡ ಕಲಾ ರಸಿಕರಿಗೆ ಈ ಹಾಡು ಬಹಳ ಇಷ್ಟವಾಗಿತ್ತು .

ಆನಂತರ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ ‘ , ‘ಎಲೆ ಕೋಗಿಲೆ ಇಂಪಾಗಲ’ ,’ಇಂದು ಎನಗೆ ಗೋವಿಂದ’, ಇನ್ನು ಮುಂತಾದ ಹಾಡುಗಳು , ಸಂಗೀತ ಪ್ರಿಯರಿಗೆ ಬಹಳ ಇಷ್ಟವಾಗಿತ್ತು ಈ ಹಾಡಿನ ವಿಡಿಯೋ ಗಳು ಲಕ್ಷ ಲಕ್ಷ ಗಟ್ಟಲೆ ಶೇರ್ ಆದವು.

ಅವರ ಇತ್ತೀಚಿನ ಹಾಡಿನ ವಿಡಿಯೋ ‘Shape of You’ ಹಾಡಿನ ಕನ್ನಡದ ಮ್ಯೂಸಿಕ್ ಮ್ಯಾಶ್ ಅಪ್ ಹದಿನಾರು ಒಳ್ಳೆಯ ಕನ್ನಡ ಹಾಡುಗಳನ್ನು ಒಳಗೊಂಡಿದೆ ಅವರ ಅಧಿಕೃತ ಪುಟ ಒಂದರಲ್ಲೇ ಹನ್ನೆರಡು ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಹಾಗು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ .
ಅವರ ಹಾಡಿನ ತುಣುಕುಗಳು ನಿಮಗಾಗಿ ಅಪ್ಲೋಡ್ ಮಾಡಿದ್ದೇವೆ ಸಂಗೀತದ ರುಚಿಯ ಸವಿಯಿರಿ ಹಾಗು ಒಳ್ಳೆಯ ಕನ್ನಡದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top