fbpx
ಸಾಧನೆ

ಐಐಟಿ ,ಐಐಮ್ ನಲ್ಲಿ ಓದಿ ,ಕಾರ್ಪೊರೇಟ್ ಕಂಪನಿಲಿ ಆರಾಮಾಗಿ ಲಕ್ಷಾಂತರ ರೂಪಾಯಿ ದುಡಿತಾ ಇದ್ದವನು ಎಲ್ಲಾ ಬಿಟ್ಟು ಹಳ್ಳಿ ಜನರ ಉದ್ದಾರ ಮಾಡಿದ ಕಥೆ..

ಐಐಟಿ ,ಐಐಮ್ ನಲ್ಲಿ ಓದಿ ,ಕಾರ್ಪೊರೇಟ್ ಕಂಪನಿಲಿ ಆರಾಮಾಗಿ ಲಕ್ಷಾಂತರ ರೂಪಾಯಿ ದುಡಿತಾ ಇದ್ದವನು ಎಲ್ಲಾ ಬಿಟ್ಟು ಹಳ್ಳಿ ಜನರ ಉದ್ದಾರ ಮಾಡಿದ ಕಥೆ..

ಗ್ರಾಮೀಣ ವಲಯದಿಂದ ಬಂದ ಹೆಚ್ಚಿನ ಯುವಜನರು ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಸುಧಾರಿತ ಜೀವನಶೈಲಿಯನ್ನು ಹುಡುಕುವಲ್ಲಿ ನಗರಗಳ ಮೊರೆ ಹೋಗುತ್ತಾರೆ  , ಕೆಲವು ಉತ್ತಮ ವಿದ್ಯಾಭ್ಯಾಸ ಹೊಂದಿದ ಮತ್ತು ಪ್ರತಿಭಾನ್ವಿತ ಯುವಕರು ನಗರದ ಜೀವನ ಮತ್ತು ಲಾಭದಾಯಕ ಕೆಲಸದ ಆಯ್ಕೆಗಿಂತ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮಗಳ ಆರ್ಥಿಕ ಸ್ಥಿತಿಯನ್ನು ಬದಲಿಸುವಲ್ಲಿ ಮತ್ತು ಗ್ರಾಮದ ಜನರಿಗೆ ಮೌಲ್ಯಯುತ ಉದ್ಯೋಗ ಅವಕಾಶಗಳನ್ನು ಒದಗಿಸುವಲ್ಲಿ ಕಷ್ಟ ಪಡುತ್ತಾರೆ.
ಅಂತಹ ಹೆಚ್ಚಿನ ಪ್ರಯತ್ನಗಳು ಭವಿಷ್ಯದಲ್ಲಿ ಭಾರತವನ್ನು ಒಂದು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬಲ್ಲವು ಅಂತಹದ್ದೇ ಕಥೆ ಇಂದು ನಾವು ನಿಮಗೆ ಪ್ರಸ್ತುತ ಪಡಿಸುತ್ತೇವೆ.

ನಲವತ್ತೊಂದು ವರ್ಷದ ವಯಸ್ಸಿನ ವಿಗ್ಯಾನ್ ಗಡೋಡಿಯಾ ಈ ದೇಶದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ನಲ್ಲಿ ಒಂದಾದ ಭಾರತೀಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನಿಂದ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು ಆದರೆ ಅಂತಿಮವಾಗಿ ಅವರು ತಮ್ಮ ಯಶಸ್ವೀ ಕಾರ್ಪೋರೆಟ್ ವೃತ್ತಿಜೀವನಕ್ಕೆ ವಿದಾಯವನ್ನು ಹೇಳಿ ತಮ್ಮ ಸ್ವಂತ ಗ್ರಾಮದ ಸುಧಾರಣೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಗಡೋಡಿಯಾ ಯಸ್ ಬ್ಯಾಂಕ್ನ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. 2005 ರಲ್ಲಿ ಅವರು ಗ್ರಾಮೀಣ ಪ್ರದೇಶದ ಬ್ಯಾಂಕ್ನಲ್ಲಿ ಮೈಕ್ರೋ ಫೈನಾನ್ಸ್ನ ಮುಖ್ಯಸ್ಥರಾಗಿ ನೇಮಕಗೊಂಡರು. ಗ್ರಾಮೀಣ ಜನರನ್ನು ಬಡತನದಿಂದ ಹೊರಗೆ ತರಲು ಕಿರುಬಂಡವಾಳವು ವಿಫಲ ಪ್ರಯತ್ನ ಎಂದು ಶೀಘ್ರದಲ್ಲೇ ಅರಿತುಕೊಂಡರು. ನೆಲದ ನೈಜ ಚಿತ್ರಣ ಅರ್ಥಮಾಡಿಕೊಂಡ ನಂತರ ಅವರು ನಿರಾಶೆಗೊಂಡರು ಆದರೆ ಈ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸ್ವಂತ ಪ್ರಯತ್ನದಿಂದ ಪರಿಹರಿಸಲು ನಿರ್ಧರಿಸಿದರು, ತಮ್ಮ ಕೆಲಸವನ್ನು ಬಿಟ್ಟು ಜುಲೈ 2006 ರಲ್ಲಿ ತಮ್ಮ ಗ್ರಾಮಕ್ಕೆ ತೆರಳಿದರು.

2006 ರಿಂದ 2011 ರ ವರೆಗೆ ಅವರು ಸಾವಯವ ಎರೆಹುಳು ಗೊಬ್ಬರ , ಬಿಪಿಓ ಮತ್ತು ಸ್ವಯಂ ಸೇವಾ ಘಟಕಗಳನ್ನು ತೆರೆಯಲು ದಣಿವರಿಯದ ಕೆಲಸ ಮಾಡಿದರು , ಈ ಸಮಯದಲ್ಲಿ ಗ್ರಾಮದಲ್ಲಿ ಹಸು ಹಾಲಿನ ಅಸ್ತವ್ಯಸ್ತವಾದ ವಿತರಣಾ ವ್ಯವಸ್ಥೆಯ ಲೋಪಗಳ ಬಗ್ಗೆ ಅರಿತುಕೊಂಡರು, ಜೈಪುರದಿಂದ 70 ಕಿಲೋಮೀಟರ್ ದೂರ ಇರುವ ಲೀಸರಿಯಾ ಎಂಬ ಹಳ್ಳಿಯಲ್ಲಿ ಸುಮಾರು ಒಂದು ವರೆ ಎಕರೆ ಭೂಮಿಯನ್ನು 2012 ರಲ್ಲಿ ಕೊಂಡುಕೊಂಡು ಒಂದು ಡೈರಿ ಉದ್ಯಮ ಪ್ರಾರಂಭಿಸಿದರು.

ಗಡೋಡಿಯದ ಸಹಜ ಕೃಷಿ ಫಾರ್ಮ್ ಈಗ ಜೈಪುರದಲ್ಲಿ ಸುಮಾರು 250 ಮನೆಗಳಿಗೆ ಹಾಲು ಒದಗಿಸುತ್ತಿದೆ ಅಲ್ಲದೆ ಸುಮಾರು 25 ಹತ್ತಿರದ ಗ್ರಾಮಗಳ ಎಲ್ಲಾ ರೈತರು ತಮ್ಮ ಯಶಸ್ಸಿನ ಸೂತ್ರವನ್ನು ಅನುಸರಿಸಲು ಪ್ರೋತ್ಸಾಹಿಸಿದ್ದಾರೆ.

ಪ್ರಸ್ತುತ ಗಡೋಡಿಯರವರ ಫಾರ್ಮ್ನಲ್ಲಿ 50 ಹಸುಗಳು ಪ್ರತಿದಿನ 500 ಲೀಟರ್ ಹಾಲು ಉತ್ಪಾದಿಸುತ್ತವೆ ಅಷ್ಟೇ ಅಲ್ಲದೆ ಹಾಲಿನ ಸಂಗ್ರಹಣಾ ವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಾಲಿನ ಸಂಸ್ಕರಣೆ ಘಟಕವನ್ನು ಸ್ಥಾಪಿಸಿ ಹತ್ತಿರದ ಹಾಲಿನ ರೈತರಿಂದ ನೇರವಾಗಿ ಹಾಲು ಸಂಗ್ರಹಿಸುವುದನ್ನು ಪ್ರಾರಂಭಿಸಿದರು . ತಮ್ಮದೇ ಆದ ಹಾಲಿನ ಬ್ರಾಂಡ್ ಮಾಡಿದ್ದಾರೆ ಮತ್ತು ದೇಶದ ಇತರ ನಗರಗಳಲ್ಲಿ ಅವುಗಳನ್ನು ಒದಗಿಸಲು ಆಲೋಚನೆ ಮಾಡುತ್ತಿದ್ದಾರೆ .

ಇದಕ್ಕೆ ಹೇಳುವುದು ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅಂತ .

ನಿಮಗೆ ಈ ಕಥೆ ಇಷ್ಟ ಆದ್ರೆ ನಮ್ಮ ಫೇಸ್ ಬುಕ್ ಪುಟ fb.com/Aralikattez

ಲೈಕ್ ಮಾಡೋದು ಮರೀಬೇಡಿ ಯಾಕಂದ್ರೆ ನಿಮ್ಮ ಲೈಕ್ ನಮಗೆ ಬಹಳ ಮುಖ್ಯ ಅಷ್ಟೇ ಅಲ್ಲದೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡೋದು ಮರೀಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top