fbpx
ಸಣ್ಣ ಕಥೆ

ಆಡಿಕೊಳ್ಳೋರ ಮುಂದೆ ಆಡಿ ಕಾರ್ ಅಲ್ಲಿ ಓಡಾಡ ಬೇಕು ! ಓದಿ ಕಪ್ಪೆ ಕಥೆ..

ಕಪ್ಪೆಗಳು. (ನೀತಿಕಥೆ)

ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ “ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು ….. ನೀವು ಅದನ್ನು ಕೊಳ್ಳುವಿರಾ ?” ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಆಘಾತ! ತನ್ನನ್ನು ತಾನೇ ಸವರಿಸಿಕೊಂಡು  “ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ ?” ಎಂದು ಆ ರೈತನನ್ನು ಕೇಳಲು,ರೈತನು ಹೀಗೆ ಉತ್ತರಿಸಿದನು . “ ನನ್ನ ಮನೆಯ ಹತ್ತಿದ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ……ಅವು  ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ, ನೆಮ್ಮದಿ ಹಾಳಾಗಿದೆ….,ಅದಕ್ಕೆ ನಾನು ಅವುಗಳನ್ನು ಹಿಡಿದು ತಂದು  ನಿಮಗೆ ಮಾರುವೆ,ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ…….”ಎಂದನು.

ಉಪಹಾರ ಗೃಹದ  ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ಐನೂರು ರೂಗಳ  ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು.ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರಳಿದನು.

ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ  ರೈತನ ಮುಖ ತೀರ ಸಪ್ಪಗಾಗಿತ್ತು.ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ.  ಅವನ ಕೈಯಲ್ಲಿ ಕೇವಲ ಎರಡು “ಸೊಣಕಲು” ಕಪ್ಪೆಗಳು…ಎಲ್ಲಿ ನಿನ್ನ ಕಪ್ಪೆಗಳು….. ?” ಅಂತ ಕೇಳಲು,ರೈತನು “ ಇಲ್ಲಾ  ಸ್ವಾಮಿ , ನನ್ನ ಲೆಕ್ಕಚಾರ  ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ   ಶಬ್ದವನ್ನು  ನಾನು  ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ  …..  “ ಎಂದು ಪೆಚ್ಚಾಗಿ ಹೇಳಿದನು…….!

ನೀತಿ:ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ ,ಬಹುಶಃ ಮೇಲಿನಂತೆ ಅವರು ಕೇವಲ  “ಕೆಲವು” ಒಟಗುಟ್ಟುವ ಕಪ್ಪೆಗಳಾಗಿರಬಾರದು…….!!!. ನಿಮ್ಮಲ್ಲಿರುವ ಕಪ್ಪೆಗಳನ್ನು ನೀವು ಸ್ವತಃ ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೇ ಕೋಣೆಯ ಮದ್ಯದಲ್ಲಿ ಏನು ಕಾಣದೆ ನಿಂತಿರುವಂತೆ ಭಾಸವಾಗಬಹುದು….ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಅದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನಸ್ಸಿನ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ.

ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತು ಹೋಗಿರುತ್ತೇವೆ ಅಂದರೆ ಅದು ನಮ್ಮ ದಿನ ನಿತ್ಯದ ಕಾರ್ಯ , ಕೆಲವೊಮ್ಮೆ  ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂದು ಮರೆತು ಬಿಡುತ್ತೇವೆಲ್ಲಾ, ಎಂತಹ ವಿಪರ್ಯಾಸ ನೋಡಿ !!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲಿ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ……?

ಸರಳವಾಗಿ ಹೇಳಬೇಕೆಂದರೆ ಇದರಲ್ಲಿರುವ ನೀತಿಪಾಠ “ನಾವು ನಮ್ಮ ಗುರಿಯನ್ನು ಸಾದಿಸಬೇಕೆಂದರೆ ನಮ್ಮ  ಸುತ್ತಲೂ ಇರುವ ಜನಗಳ ಮಾತಿಗೆ ಕಿವಿಗೊಡಬಾರದು ಯಾಕೆಂದರೆ ಬೇರೆ  ಜನ ನಾವು ಏನು ಮಾಡಿದರೂ ಮಾತನಾಡುತ್ತಾರೆ ಉದಾಹರಣೆಗೆ :ಊಟ ಮಾಡಿದರು ಮಾತಾಡ್ತಾರೆ, ಮಾಡಿಲ್ಲ ಅಂದರು ಮಾತಾಡ್ತಾರೆ.ಪ್ರತಿದಿನ ಹೊಸ ಹೊಸ ಬಟ್ಟೆ  ಹಾಕಿಕೊಂಡು  ಓಡಾಡಿದರು, ಹಳೆ ಬಟ್ಟೆ ಹಾಕಿದರು ಮಾತನಾಡುತ್ತಾರೆ ಆದ್ದರಿಂದ ನಾವು ಅವರ ಯಾವುದೇ ಮಾತುಗಳಿಗೆ ಕಿವಿಗೊಡಬಾರದು. ನಮಗೆ ಏನು ಸರಿ ಅನ್ಸುತ್ತೆ ಅದನ್ನ ನಾವು ಮಾಡ್ಬೇಕು ಅಷ್ಟೆ.ಆದ್ದರಿಂದಲೇ ಅವರನ್ನು,ಅಂತಹ ಜನರನ್ನು  ಇಲ್ಲಿ ಓಟಗುಟ್ಟುವ ಕಪ್ಪೆಗಳಿಗೆ ಹೋಲಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top