fbpx
ಉಪಯುಕ್ತ ಮಾಹಿತಿ

ನಿಮ್ಮ ಕೈಬರಹ ನಿಮ್ ಬಗ್ಗೆ ಸಕ್ಕತ್ತಾಗಿ ಹೇಳುತ್ತೆ..

ನಿಮ್ಮ ಕೈಬರಹ ನಿಮ್ಮ ಬಗ್ಗೆ ಏನು ಹೇಳುತ್ತೆ???

ಅಮೆರಿಕಾದ ರಾಷ್ಟ್ರೀಯ ಪೆನ್ ಕಂಪನಿ ಮಾಡಿರುವ ಸಂಶೋಧನೆಯ ಪ್ರಕಾರ ನಮ್ಮ ಕೈಬರಹ ನಮ್ಮಲ್ಲಿನ ವ್ಯಕ್ತಿತ್ವವನ್ನು ಗುರುತಿಸುತ್ತದೆ. ಇದುವರೆಗೂ 5000 ಬೇರೆ ಬೇರೆ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಕೇವಲ ಕೈಬರಹದ ಮೂಲಕ ಸಂಶೋಧನೆ ಮಾಡಿದ್ದಾರೆ !!
ಕೈಬರಹದಲ್ಲಿ ಗಣನೆಗೆ ತೆಗೆದುಕೊಳ್ಳುವ ಅಂಶವೆಂದರೆ ಅಕ್ಷರ ವಿನ್ಯಾಸದ ಶೈಲಿ. ಅಕ್ಷರಗಳು ನೇರವಾದಗಿವೆಯೇ, ಕೂಡಿಸಿ ಬರೆಯುತ್ತಾರೆಯೇ, ವೋರೆಯಾಗಿ ಬರೆಯುವರೇ, ಎಡಕ್ಕೆ ಅಥವಾ ಬಲಕ್ಕೆ ವಾಲಿಸಿ ಬರೆಯುವರೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.
ಅಕ್ಷರಗಳು ಸಣ್ಣದಾದದವೋ ಅಥವಾ ದೊಡ್ಡದಾದವೋ ಎಂಬುದೂ ಮುಖ್ಯವಾಗುತ್ತದೆ. ಅಲ್ಲದೇ ಬರೆಯುವ ಗತಿಯನ್ನು ಸಹ ಗಮನಿಸುತ್ತಾರೆ. ಉದಾಹರಣೆಗೆ ವೇಗವಾಗಿ ಬರೆಯವವರಿಗೆ ತಾಳ್ಮೆ ಸ್ವಲ್ಪ ಕಡಿಮೆ. ಎಲ್ಲವೂ ಬೇಗ ಮುಗಿದುಬಿಡಬೇಕು. ನಿಧಾನವಾಗಿ ಬರೆಯವವರಿಗೆ ಸಮಾಧಾನ ಹೆಚ್ಚು. ಅವರು ತಮ್ಮ ಕಾರ್ಯದಲ್ಲಿ ಯೋಜನಾತ್ಮಕವಾಗಿರುತ್ತಾರೆ.
ಈಗ ಕೈಬರಹದ ಶೈಲಿಯನ್ನು ಆಧರಿಸಿ ವ್ಯಕ್ತಿಯ ವ್ಯಕ್ತಿತ್ವವನ್ನು ಸಂಶೋಧಕರು ಹೇಗೆ ಊಹೆ ಮಾಡುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.
1. ಬಿಡಿಯಾದ ಅಕ್ಷರಗಳನ್ನು ಬರೆಯುವವರು: ಸಾಮಾನ್ಯವಾಗಿ ಇಂತಹವರ ಮನಸ್ಸು ಎಲ್ಲರಿಗೂ ಬೇಗ ಅರ್ಥವಾಗುತ್ತದೆ. ಇವರು ಸಾಹಸಮಯ ವ್ಯಕ್ತಿತ್ವ ಉಳ್ಳವರು. ಆದರೆ ಆಗಿಂದಾಗ್ಗೆ ಭಯಾನಕ ದಾಳಿಗೆ ಒಳಗಾಗುತ್ತಾರೆ.

2. ಕೂಡಿಸಿ ಬರೆಯುವವರು: ಇವರು ಕ್ರಮಬದ್ಧವಾಗಿರಲು ಬಯಸುವವರು. ಮುಖ್ಯವಾದ ನಿರ್ಧಾರಗಳನ್ನು ಆಲೋಚನೆ ಮಾಡಿ ತೆಗೆದುಕೊಳ್ಳುತ್ತಾರೆ. ಇವರ ಕಲ್ಪನಾ ಶಕ್ತಿ ಸೃಜನಾತ್ಮಕವಾಗಿರುತ್ತದೆ.

3. ಅಲೆ ಅಲೆಯಾಗಿ ಬರೆಯುವವರು: ಇವರ ಆಲೋಚನೆಗಳು ಇವರು ಬರೆಯುವ ಅಕ್ಷರಗಳಂತೆ ಏರುಪೇರಾಗಿರುತ್ತದೆ. ಇಂತಹವರಿಗೆ ಭಾವನಾತ್ಮಕ ಹಾಗೂ ಮಾನಸಿಕ ಅಸ್ಥಿರತೆಯನ್ನು ಹೊಂದಿರುತ್ತಾರೆ.

4. ಅಕ್ಷರಗಳನ್ನು ಎಡಕ್ಕೆ ವಾಲಿಸಿ ಬರೆಯುವವರು: ಇವರು ಸದಾ ಅಂತರ್ಮುಖಿ. ಬಂಡಾಯ ವ್ಯಕ್ತಿತ್ವ. ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ.

5. ಅಕ್ಷರಗಳನ್ನು ಮೇಲಕ್ಕೆತ್ತರಿಸಿ ಬರೆಯುವವರು: ಇವರು ಆಶಾವಾದಿಗಳು. ನಿರಾತಂಕವಾಗಿರುತ್ತಾರೆ. ಇವರು ಸದಾ ಉಲ್ಲಾಸಭರಿತ ಪ್ರವೃತ್ತಿಯನ್ನು ಹೊಂದಿರುತ್ತಾರೆ.

6. ನೇರವಾಗಿ ಬರೆಯುವವರು: ಇವರದು ನೇರ ನಡೆ ನುಡಿ. ಭಾವನೆಗಳನ್ನು ಹಿಡಿದಿಡುತ್ತಾರೆ. ಭಾವನಾತ್ಮಕತೆಗಿಂತ ವ್ಯವಹಾರಿಕವಾಗಿ ಆಲೋಚಿಸುತ್ತಾರೆ.

7. ಬಲಕ್ಕೆ ವಾಲಿಸಿ ಬರೆಯುವವರು: ಇವರು ಜೀವನದಲ್ಲಿ ಹೊಸ ಹೊಸ ಅನುಭವವನ್ನು ಪಡೆಯಲು ಇಚ್ಛಿಸುತ್ತಾರೆ. ಇವರು ಉಲ್ಲಾಸಭರಿತ ವ್ಯಕ್ತಿತ್ವದವರಾದರೂ ಸಹ ಇವರ ಸ್ವಭಾವ ಆಗಾಗ ಬದಲಾಗುತ್ತಿರುತ್ತದೆ.

8. ದೊಡ್ಡದಾದ ಅಕ್ಷರಗಳನ್ನು ಬರೆಯುವವರು: ಸಾಮಾನ್ಯವಾಗಿ ಇವರು ಬಹಿರ್ಮುಖರು. ಇವರಿಗೆ ಸುಲಭದಲ್ಲಿ ಬೇಜಾರಾಗುವುದಿಲ್ಲ. ತಾವು ಬಹುಜನರ ನಡುವೆ ಗಮನಾರ್ಹವಾಗಿರಬೇಕು ಎಂದು ಬಯಸುತ್ತಾರೆ. ತಮಗೆ ಮಾನ್ಯತೆ ಸಿಗಬೇಕೆಂಬ ಆಸೆ ಇವರಿಗಿರುತ್ತದೆ.

9. ಸಣ್ಣದಾದ ಅಕ್ಷರಗಳನ್ನು ಬರೆಯುವವರು: ಇವರು ಸಂಕುಚಿತ ಸ್ವಭಾವದವರು. ಇವರಿಗೆ ಏಕಾಗ್ರತೆ ಹೆಚ್ಚು. ಇವರ ಆಲೋಚನೆ ಸಂಕುಚಿತವಾಗಿರುತ್ತದೆ.

10. ಅಕ್ಷರಗಳನ್ನು ಒತ್ತಿ ಬರೆಯುವವರು: ಅಕ್ಷರಗಳನ್ನು ಬರೆಯುವಾಗ ಬಹಳ ಒತ್ತಡವನ್ನು ಹಾಕಿದರೆ ಅವರು ಅತಿ ಭಾವುಕರು. ಬಹಳ ಬೇಗ ಪ್ರತಿಕ್ರಿಯೆ ನೀಡುತ್ತಾರೆ.

11. ಅಕ್ಷರಗಳನ್ನು ಲಘುವಾಗಿ ಬರೆಯುವವರು: ಇವರು ಪರಿಸರದ ಬದಲಾವಣೆಗೆ ಬಹಳ ಬೇಗ ಒಗ್ಗಿಕೊಳ್ಳುತ್ತಾರೆ. ಬಹಳ ಸುಲಭವಾಗಿ ಭಾವುಕರಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top