ಜೀವನದಲ್ಲಿ ಸೋತು ಸೋತು ಸಾಕಾಗಿದೆ ಅನ್ನೋರು ಸೋತು ಗೆದ್ದವನ ಈ ಕಥೆ ಓದಿ ಹೆಂಗೆ ಅನ್ನಕ್ಕೂ ಇಲ್ಲದವ ಶ್ರೀಮಂತ ಆದ ಅಂತ..
ಆತ ಹುಟ್ಟಿದ್ದು ಚೀನಾದ ಒಂದು ಬಡ ಕುಟುಂಬದಲ್ಲಿ ಚೀನಾ ಮಹಾಕ್ರಾಂತಿಯ ಸಮಯವದು ,
ಬಡತನವಿದ್ದ ಕಾರಣ ಆತನು ವಿದ್ಯಾಭ್ಯಾಸವನ್ನು ಮುಂದುವರಿಸಲು ಆಗಲಿಲ್ಲ , ಅದಕ್ಕೆ ಆತನು ಹುಡುಕಿದ ಉಪಾಯವೇನೆಂದರೆ ಚೀನಾಕ್ಕೆ ಬರುವ ಪ್ರವಾಸಿಗರನ್ನು ಉಚಿತವಾಗಿ ಗೈಡ್ ಮಾಡಲು ಶುರು ಮಾಡಿದ್ದ ತಾನು ಹೀಗಾದರೂ ಮಾಡಿ ಇಂಗ್ಲಿಷ್ ಕಲಿಯಬೇಕೆಂಬ ಉದ್ದೇಶ ಅದರಲ್ಲಿ ಇತ್ತು .
ಆದರೆ ತನ್ನ ಬಡತನವನ್ನು ಹೋಗಲಾಡಿಸಲು ತನಗಿದ್ದ ಏಕೈಕ ಅಸ್ತ್ರ ವಿದ್ಯಾಭ್ಯಾಸ ಎಂಬುದು ಗೊತ್ತಿತ್ತು , ತನಗೆ ತಿಳಿದ ಎಲ್ಲಾ ಕಾಲೇಜು ಗಳಿಗೂ ಅರ್ಜಿಹಾಕಲು ಶುರು ಮಾಡಿದ ಆದರೆ ಎಲ್ಲೆಡೆ ನಿರಾಶೆ , ಹೀಗಿರುವಾಗ ಹತ್ತು ಬಾರಿ ಅಮೆರಿಕಾದ ಜಗತ್ಪ್ರಸಿದ್ದ ಹತ್ತು ಕಾಲೇಜುಗಳಲ್ಲಿ ಒಂದಾದ ಹಾರ್ವಾರ್ಡ್ ಯೂನಿವರ್ಸಿಟಿಗೆ ಅರ್ಜಿ ಹಾಕಿದ ಅದು ಕೂಡ ತಿರಸ್ಕಾರಗೊಂಡಿತು , ಹೀಗೆ ಪ್ರತಿ ಬಾರಿ ಅರ್ಜಿ ಹಾಕುತ್ತ ಹಾಕುತ್ತ ಅದು ಹತ್ತನೇ ಬಾರಿಯೂ ತಿರಸ್ಕಾರಗೊಂಡಿತು ಆಗ ಆತ ಅಂದುಕೊಳ್ಳುತ್ತಾನೆ “ಒಂದಲ್ಲ ಒಂದು ದಿನ ಈ ಕಾಲೇಜ್ ನಲ್ಲಿ ಮಕ್ಕಳಿಗೆ ಪಾಠ ಮಾಡಲೇ ಬೇಕು” ಅಂತ .
30 ವಿವಿಧ ಕೆಲಸಗಳಿಗೆ ಅರ್ಜಿ ಹಾಕ್ಕಿದರು ಸಹ ಎಲ್ಲವು ತಿರಸ್ಕಾರಗೊಂಡವು , ಎಷ್ಟೆಲ್ಲ ಆದಮೇಲೆ KFC ಯಲ್ಲಿ ಕೆಲ್ಸಕ್ಕೆ ಸೇರಿಕೊಂಡವು ಅಲ್ಲೂ ಸಹ ಕೆಲವು ದಿನಗಳಾದ ಮೇಲೆ ಕೆಲಸದಿಂದ ತೆಗೆಯಲಾಯಿತು .
ಸೋಲು ಅವನನ್ನು ಕಂಗಾಲು ಮಾಡಿರಲಿಲ್ಲ ಬದಲಾಗಿ ಆತನು ಇನ್ನು ಹಠ ತೊಟ್ಟು ನಿಲ್ಲುವಂತೆ ಮಾಡಿತು , 1995 ರಲ್ಲಿ ಆಗಷ್ಟೇ ಇಂಟರ್ನೆಟ್ ಮೆಲ್ಲಗೆ ಜನರ ನಿತ್ಯ ಜೀವನವಾಗುತಿತ್ತು .
ಏನೋ ಹುಡುಕುವ ಸಂಧರ್ಭದಲ್ಲಿ ಜಾಲ ತಾಣದಲ್ಲಿ ‘ಬಿಯರ್’ ಗೋಸ್ಕರ ಹುಡುಕಾಟ ನಡೆಸಿದನು ಆದರೆ ಚೀನಾದಲ್ಲಿ ಎಲ್ಲೆಯೂ ಬಿಯರ್ ಸಿಗುವುದಿಲ್ಲ ಎಂಬ ಸತ್ಯ ಅರ್ಥವಾಯಿತು , ಆಗ ಬಂದ ಐಡಿಯಾ ನೇ ಅಲಿಬಾಬಾ .ಕಾಂ , ಇದು ಒಂದು ಆನ್ಲೈನ್ ಮಾರ್ಕೆಟ್ ಕಂಪನಿ .
ಅದು ಸಹ ಹೆಚ್ಚು ಲಾಭಗಳಿಸಲಿಲ್ಲ ಇನ್ನೇನು ಕಂಪನಿ ಮುಚ್ಚಿ ಹೋಯಿತು ಅನ್ನುವಷ್ಟರಲ್ಲಿ , ಆತ ತನ್ನ ಈ ಪೊಜೆಕ್ಟ್ ಬಗ್ಗೆ ಬಹಳ ನಂಬಿಕೆ ಹೊಂದಿ ಇವತ್ತಲ್ಲ ನಾಳೆ ಹೆಚ್ಚು ಲಾಭ ಗಳಿಸಿಯೇ ತೀರುತ್ತೇನೆ ಎಂದು ಭರವಸೆ ಹೊಂದಿ ತನ್ನ ಏಳು ಸ್ನೇಹಿತರಿಗೆ ಹಣ ಹೂಡುವಂತೆ ಕೇಳಿಕೊಳ್ಳುತ್ತಾನೆ .ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕಂಪನಿಯಾಗಿ ಹೊರ ಹೊಮ್ಮುತ್ತದೆ , ಆ ವ್ಯಕ್ತಿಯ ಹೆಸರು ‘ಜಾಕ್ ಮಾ’ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿ , ಡಾಲರ್ 31.4 ಬಿಲಿಯನ್ ಕಂಪನಿಯ ಒಡೆಯ .
ಸೋಲು ಸೋಲು ಸಾಕೆಂದುಕೊಂಡವರು ಈ ಕಥೆ ಓದಿ ನಿಮಗೆ ಮರು ಚೈತನ್ಯ ಬಂದೆ ಬರುತ್ತದೆ ಎಂದು ನಾವು ಆಶಿಸುತ್ತೇವೆ ನಮ್ಮ ಈ ಪುಟ್ಟ ಅಂಕಣ ನಿಮಗೆ ಇಷ್ಟವಾದಲ್ಲಿ ನಮ್ಮ ಫೇಸ್ ಬುಕ್ ಪುಟ
FB.COM/ARALIKATTEZ ಲೈಕ್ ಮಾಡೋಕೆ ಮರೀಬೇಡಿ ಏಕೆಂದರೆ ನಿಮ್ಮ ಲೈಕ್ ಗಳು ನಮಗೆ ಬಹಳ ಮುಖ್ಯ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
