fbpx
ಆರೋಗ್ಯ

ಸಕ್ಕರೆ ಖಾಯಿಲೆ ಇರೋರು ಮಾವಿನ ಎಲೆ ತಿಂದ್ರೆ ಸಕ್ಕರೆ ಖಾಯಿಲೆ ಬೇಗನೆ ವಾಸಿ ಆಗುತ್ತೆ..

ಇಂದಿನ ದಿನಗಳಲ್ಲಿ ಡಯಾಬಿಟೀಸ್‌ ಅಥವಾ ಮಧುಮೇಹ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಇದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೆ ಬೇಕಾದರೂ ಈ ತೊಂದರೆ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವ ಈ ಕಾಯಿಲೆಯು ವಂಶಪಾರಂಪರ್ಯವಾಗಿಯೂ ಬರಬಹುದು.

ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ಸಾಮಾನ್ಯವಾಗಿ ಮಧುಮೇಹ ದಿಂದ ಬಳಲುತ್ತಿರುವವರು ಮೆಡಿಸಿನ್ ಮೂಲಕ ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಕಾರಣ ಮಧುಮೇಹ ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗುವುದಿಲ್ಲ. ದುಡ್ಡು ಇದ್ದವರಿಗೆ ಸರಳವಾದ ಮಾರ್ಗ ಏನೆಂದರೆ ಮೆಡಿಸಿನ್ ಮೂಲಕ ಕಂಟ್ರೋಲ್ ಮಾಡುವುದು, ದುಡ್ಡು ಎಲ್ಲದವರಿಗೆ ಇಲ್ಲಿದೆ ಒಂದು ಸರಳ ಉಪಾಯ.

ಮೊದಲು ಈ ಕಾಯಿಲೆಯ ಪ್ರಮುಖ ಲಕ್ಷಣಗಳೆನೆಂದು ತಿಳಿಯೋಣ:

  • ಪದೇ ಪದೇ ಮೂತ್ರವಿಸರ್ಜಿಸುವುದು,
  • ತೀವ್ರವಾಗಿ ಬಾಯಾರಿಕೆ ಹಾಗು ಹಸಿವಾಗುವುದು,
  • ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ,
  • ಆಯಾಸ,
  • ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು.

ಮಾವಿನ ಎಲೆಗಳ ಸಹಾಯದಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹೇಗೆ ಮಾವಿನ ಎಲೆಗಳ ಔಷಧೀಯ ಗುಣಗಳು ಯಾವ ರೀತಿಯಲ್ಲಿ ನಮಗೆ ಉಪಯುಕ್ತವಾಗಿವೆ ಎಂಬುದನ್ನು ನೋಡೋಣ…

ಮೊದಲ, 10 ರಿಂದ 15 ಕೋಮಲವಾದ ಮಾವಿನ ಎಲೆಗಳನ್ನು ತೆಗೆದುಕೊಳ್ಳಿ ನಂತರ ಎಲೆಗಳನ್ನು ಚೆನ್ನಾಗಿ ಕುದಿಸಿರಿ ರಾತ್ರಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ನೀರಿನ್ನು ಕುಡಿಯಿರಿ. ಉತ್ತಮ ಫಲಿತಾಂಶಗಳಿಗಾಗಿ ನೀವು ಎರಡು ಅಥವಾ ಮೂರು ತಿಂಗಳ ಕಾಲ ಈ ವಿಧಾನವನ್ನು ಬಳಸಬೇಕು.

ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತ್ರ ಅದನ್ನು ಪುಡಿ ಮಾಡಿ. ಪ್ರತಿದಿನ ಒಂದು ಚಮಚ ಈ ಪುಡಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

ಮಾವುಗಳ ಎಲೆಗಳ ಚಹಾ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜ್ವರ, ಭೇದಿ, ನಿದ್ರಾಹೀನತೆ, ಉಬ್ಬಿರುವ ರಕ್ತನಾಳಗಳು, ಅಸ್ತಮಾ, ಗಂಟಲೂತ ಮತ್ತು ಶೀತಗಳ: ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಮಾಡಬಹುದು. ಈ ಎಲೆಗಳು ನಿಮ್ಮ ರಕ್ತದ ಒತ್ತಡ ಕಡಿಮೆ ಮತ್ತು ನಿಮ್ಮ ರಕ್ತನಾಳಗಳನ್ನು ಬಲಪಡಿಸುವಲ್ಲಿ ಸಹಾಯಮಾಡುತ್ತದೆ.

ಮಾವಿನ ಕಾಯಿ, ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ನಿಮಗೆ ಸಾಮಾನ್ಯವಾಗಿ ಗೊತ್ತು. ಆದ್ರೆ ಮಾವಿನ ಎಲೆಗಳಲ್ಲೂ ಕೂಡ ಸಾಕಷ್ಟು ಔಷಧಿ ಗುಣಗಳಿವೆ. ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಶುಭ ಕಾರ್ಯ ನಡೆಯುವ ಮನೆಯಲ್ಲಿ ಬಹಳ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳಜನ ಸೇರಿದಾಗ ಅಷ್ಠೂ ಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . (ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ) ಅಲ್ಲದೆ ಮಾವಿನ ಎಲೆಗಳಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತವೆ ಮತ್ತು ಚರ್ಮರೋಗಗಳಿಗೆ ರಾಮಬಾಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top