ಮಹಾಭಾರತದಲ್ಲಿ ಅರ್ಜುನ ತನ್ನ ದೊಡ್ಡ ಅಣ್ಣನಾದ ಯುಧಿಷ್ಠಿರನನ್ನು ಕೊಲ್ಲಬೇಕೆಂದು ಕೊಂಡಿದ್ದನು ಅದು ಯಾಕೆಂದು ನಿಮಗೆ ನಂಬಲು ಅಸಾಧ್ಯವಾದಂತಹ 10 ಕಾರಣಗಳನ್ನು ಇವೆ.ಅವುಗಳನ್ನು ನೀವೇ ಪರಿಶೀಲಿಸಿ ನೋಡಿ.
ಮಹಾಭಾರತದ ಕಥೆಯಲ್ಲಿ ಆಸಕ್ತಿ ಮತ್ತು ಕುತೂಹಲ ಅಷ್ಟೇ ಅಲ್ಲ , ಅದರ ಜೊತೆಗೆ ತುಂಬಾ ವಿಚಿತ್ರವಾದ ಘಟನೆಗಳು ಇವೆ.ಈ ಪೌರಾಣಿಕ ಕಥೆಯಲ್ಲಿ ಎಷ್ಟೋ ಸತ್ಯಗಳು ಅಡಗಿವೆ ಅವು ಜನ ಸಾಮಾನ್ಯರಿಗೆ ತಿಳಿದಿಲ್ಲ. ಉದಾಹರಣೆಗೆ; ಅರ್ಜುನನು ತನ್ನ ದೊಡ್ಡ ಅಣ್ಣನಾದ ಯುಧಿಷ್ಠಿರನನ್ನು ಕುರುಕ್ಷೇತ್ರ ಯುದ್ದದಲ್ಲಿ ಕೊಲ್ಲಬೇಕೆಂದುಕೊಂಡಿದ್ದ , ಇದು ನಿಜ ಯಾಕೆಂದು ಕಾರಣ ಕೇಳಿ…
ಈ ಘಟನೆಯನ್ನು ಕರ್ಣ ಪರ್ವದ ಮಹಾಭಾರತದಲ್ಲಿ ಪ್ರಸ್ತಾಪಿಸಲಾಗಿದೆ.ಇದರ ಪ್ರಕಾರ ಗುರು ದ್ರೋಣಾಚಾರ್ಯರು ದೈವಾದೀನರಾದ ನಂತರ ಕರ್ಣನನ್ನು ಕೌರವರ ಸೇನೆಗೆ ಸೇನಾಪತಿಯನ್ನಾಗಿ ಮಾಡುತ್ತಾರೆ. ಸೇನೆಯ ಸೇನಾಧಿಪತಿಯಾದ ನಂತರ ಕರ್ಣನು ತಕ್ಷಣವೇ ಅನೇಕ ತೊಂದರೆಗಳನ್ನು ಪಾಂಡವರಿಗೆ ತಂದೊಡ್ಡಿದ್ದ.ತನ್ನ ಸೇನೆಯನ್ನು ಶೌರ್ಯ ಮತ್ತು ಕೌಶಲ್ಯದೊಂದಿಗೆ ಇರಲು ತರಬೇತಿಯನ್ನು ನೀಡಿದ್ದ.ಕರ್ಣ ಮತ್ತು ಅವನ ಸೇನೆಯ ದಾಳಿಯಿಂದ ದಿನದಿಂದ ದಿನಕ್ಕೆ ಪಾಂಡವರ ಸೇನೆಯು ಕುಗ್ಗುವುದನ್ನು ನೋಡುತ್ತಾ ಯುಧಿಷ್ಠಿರನು ಕೋಪಗೊಂಡು ಪ್ರತೀಕಾರವನ್ನು ತೆಗೆದುಕೊಳ್ಳುವ ಸಲುವಾಗಿ ತಿರುಗಿ ಯುದ್ಧ ಮಾಡಲು ನಿರ್ಧರಿಸಿದನು. ಆ ಸಮಯದಲ್ಲಿ ದುರ್ಯೋಧನನು ಕರ್ಣನಿಗೆ ಯುಧಿಷ್ಠಿರನನ್ನು ಸೆರೆಹಿಡಿದು ಬಂಧಿಸಿ ಕಾರಗೃಹದಲ್ಲಿಡಲು ಹೇಳಿದ .
ಅವರಿಬ್ಬರ(ಕರ್ಣ ಮತ್ತು ಯುಧಿಷ್ಠಿರ) ನಡುವೆ ಒಂದು ಘೋರವಾದ ಯುದ್ಧವೇ ನೆಡೆದು ಹೋಯಿತು.ಆಗಲೇ ಕರ್ಣನು ಯುಧಿಷ್ಠಿರನನ್ನು ತನ್ನ ಬಾಣಗಳಿಂದ ಗಾಯಗೊಳಿಸಿ ಅಸಮರ್ಥನಾಗುವಂತೆ ಮಾಡಿದ.ಯುಧಿಷ್ಠಿರನು ಅಸಮರ್ಥವಾದುದನ್ನು ಕಂಡು ಸಾರಥಿಯು ಅವನನ್ನು ಯುದ್ಧ ಭೂಮಿಯಿಂದ ದೂರ ಕರೆದುಕೊಂಡು ಹೋಗುವಾಗ ಇದನ್ನು ನೋಡುತ್ತಿದ್ದ ದುರ್ಯೋಧನನು ಮತ್ತು ಬೇರೆ ಯೋಧರು ಅವನ ರಥವನ್ನೇ ವೇಗವಾಗಿ ಹಿಂಬಾಲಿಸತೊಡಗಿದರು.ಇದನ್ನು ಕಂಡ ನಕುಲ ಮತ್ತು ಸಹದೇವ ಆವರನ್ನು ತಡೆದು ನಿಲ್ಲಿಸದರು.ಯುಧಿಷ್ಠಿರನಿಗೆ ತನ್ನ ಸೋಲನ್ನು ಕಂಡು ನಾಚಿಕೆಯಾಯಿತು.
ಆದರೂ ಅರ್ಜುನನು ಏಕೆ ತನ್ನ ದೊಡ್ಡ ಅಣ್ಣನಾದ ಯುಧಿಷ್ಠಿರನನ್ನು ಕೊಲ್ಲಲ್ಲು ನಿರ್ಧರಿಸಿದ ಎಂದು ಇಲ್ಲಿದೆ ನೋಡಿ.
1.ಯುಧಿಷ್ಠಿರನು ರಣರಂಗದಲ್ಲಿ ಕರ್ಣನಿಂದ ಸೋತುಹೋದನು.
ಮಹಾಭಾರತದಲ್ಲಿ ಇದೇ ಮೊದಲ ಬಾರಿಗೆ ಅಣ್ಣ-ತಮ್ಮಂದಿರು ಒಬ್ಬರ ವಿರುದ್ಧ ಇನ್ನೊಬರು ಹೋರಾಡಿದ್ದು.
2.ಅರ್ಜುನನು ಗಾಯಗೊಂಡಿದ್ದ ಯುಧಿಷ್ಠಿರನನ್ನು ನೋಡಲು ಕೃಷ್ಣನ ಛಾವಣಿಗೆ ಬಂದನು.
ಅರ್ಜುನನಿಗೆ ಈ ಘಟನೆಯ ಬಗ್ಗೆ ನಿಧಾನವಾಗಿ ತಿಳಿಯಿತು ಆಗ ಅವನು ದುಃಖಿತನಾಗಿ ಕೃಷ್ಣನ ಛಾವಣಿಗೆ ಯುಧಿಷ್ಠಿರನನ್ನು ನೋಡಲು ಬಂದನು.ಆಗ ಯುಧಿಷ್ಠಿರನು ತನಗಾಗಿರುವ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದನು. ಅರ್ಜುನ ಮತ್ತು ಕೃಷ್ಣ ಇಬ್ಬರನ್ನು ಒಟ್ಟಿಗೆ ಕಂಡ ಯುಧಿಷ್ಠಿರನು ಅರ್ಜುನನು ಕರ್ಣನನ್ನು ರಣರಂಗದಲ್ಲಿ ಸೋಲಿಸಿ ಸಾಯಿಸಿದ್ದಾನೆ ,ನನಗಾದ ಈ ಗತಿಗೆ ಪ್ರತೀಕಾರವನ್ನು ತೀರಿಸಿಕೊಂಡಿದ್ದಾನೆ ಅಂದುಕೊಂಡಿದ್ದ. ಅದೇ ಯೋಚನೆಯಲ್ಲಿ ಮಂದಹಾಸದಿಂದ ನಗುತ್ತಾ ಅರ್ಜುನನನ್ನು ತಬ್ಬಿಕೊಂಡ.ಆದರೆ ಅಷ್ಟೇ ಬೇಗನೇ ಅವನಿಗೆ ಸತ್ಯವು ಏನೆಂದು ತಿಳಿಯಿತು.
3.ಯುಧಿಷ್ಠಿರನು ಅರ್ಜುನನಿಗೆ ಪ್ರತೀಕಾರವನ್ನು ತೆಗೆದುಕೊಂಡಿಲ್ಲ ಎಂದು ಅವಮಾನ ಮಾಡಿ ನಿನ್ನ ಬಳಿ ಇರುವ ಆಯುಧಗಳನ್ನು ತೆಗೆದು ಬಿಸಾಕು ಎಂದನು.
ಯಾವಾಗ ಯುಧಿಷ್ಠಿರನಿಗೆ ಅರ್ಜುನನು ಕರ್ಣನನ್ನು ಕೊಲ್ಲಲಿಲ್ಲ ಎಂದು ಗೋತ್ತಾಯಿತೋ ಆಗಲೇ ಯುಧಿಷ್ಠಿರನು ಕೋಪಗೊಂಡು ಅರ್ಜುನನ ಮನಸ್ಸಿಗೆ ನೋವಾಗುವಂತೆ ಮಾತನಾಡಲು ಶುರುಮಾಡಿದನು. ಆಗಲೇ ನಿನ್ನ ಎಲ್ಲಾ ಆಯುಧಗಳನ್ನು ತೆಗೆದು ಬಿಸಾಕು ಇಲ್ಲಾಂದ್ರೆ ಬೇರೆ ಯಾರಿಗಾದರೂ ಕೊಡು.ಏನುಕ್ಕೋಸ್ಕರ ಇಟ್ಕೊಂಡಿದ್ದೀಯ ಎಂದು ಹೇಳಿದನು.
4.ಅರ್ಜುನ ಸಿಟ್ಟಿಗೆದ್ದು ತನ್ನ ಕತ್ತಿಯನ್ನು ತೆಗೆದು ಯುಧಿಷ್ಠಿರನನ್ನು ಕೊಲಲ್ಲು ಮುಂದಾದನು.ಅರ್ಜುನನಿಗೆ ಯಾರಾದರೂ ತನ್ನ ಶಾಸ್ತಾಸ್ತ್ರಗಳನ್ನು ತೆಗೆದು ಬಿಸಾಕು ಎಂದು ಹೇಳಿದರೆ ಯಾರನ್ನು ಬೇಕಾದರೂ ಅವನು ಶಿರಚ್ಚೆದನ ಮಾಡಬಹುದು ಎಂಬ ರಹಸ್ಯವಾದ ವಚನವನ್ನು ನೀಡಿದ್ದನು.
ಯುಧಿಷ್ಠಿರನ ಮಾತುಗಳನ್ನು ಕೇಳಿದ ಅರ್ಜುನನು ಉಗ್ರವಾಗಿ ಕೋಪಗೊಂಡು ತನ್ನ ಕತ್ತಿಯನ್ನು ತೆಗೆದು ಯುಧಿಷ್ಠಿರನನ್ನು ಕೊಲ್ಲಲ್ಲು ಮುಂದಾದನು.ತಕ್ಷಣ ಕೃಷ್ಣನು ಮಧ್ಯ ಪ್ರವೇಶಿಸಿ ಅರ್ಜುನನು ದಾಳಿ ಮಾಡುವುದನ್ನು ತಡೆದು ನಿಲ್ಲಿಸಿದನು.
ಆದರೆ ಅರ್ಜುನ ಕೃಷ್ಣನಿಗೆ ಹೇಳಿದ ಯಾರಾದರೂ ತನ್ನ ಆಯುಧಗಳನ್ನು ತೆಗೆದು ಬಿಸಾಕು ಎಂದು ಹೇಳಿದರೆ ಅವನು ಅವರ ಶಿರಚ್ಚೆದನ ಮಾಡುವುದಾಗಿ ರಹಸ್ಯವಾಗಿ ವಚನವನ್ನು ನೀಡಿರುವುದಾಗಿ ಹೇಳಿದನು.ಆದ್ದರಿಂದ ಅವನು ನೈತಿಕತೆಗೆ ಬದ್ಧನಾಗಿ ಕೊಟ್ಟ ವಾಗ್ದಾನವನ್ನು ಉಳಿಸಿಕೊಳ್ಳಲು ಹೀಗೆ ಮಾಡಿದೆ ಎಂದು ಹೇಳಿದನು.
5.ಕೃಷ್ಣನು ಮಧ್ಯಪ್ರವೇಶಿಸಿ ಒಂದು ಸಲಹೆಯನ್ನು ಸೂಚಿಸಿದನು.ತನ್ನ ದೊಡ್ಡ ಅಣ್ಣನಾದ ಯುಧಿಷ್ಠಿರನನ್ನು ಕೊಲ್ಲುವ ಬದಲು ಎಲ್ಲರ ಮುಂದೆ ಅವಮಾನ ಗೊಳಿಸು ಆಗ ಅದು ಧರ್ಮದ ಪ್ರಕಾರ ಅವನನ್ನು ಕೊಂದಷ್ಟೇ ಸಮನಾಗಿರುತ್ತದೆ.
ಆದರೆ ಕೃಷ್ಣನು ಯುಧಿಷ್ಠಿರನನ್ನು ಕೊಲ್ಲುವುದಕ್ಕೆ ಬಿಡಲಿಲ್ಲ.ಅವನು ಒಂದು ಸಲಹೆಯನ್ನು ತೆಗೆದುಕೊಂಡು ಮುಂದೆ ಬಂದು,ಅರ್ಜುನನ ಪ್ರಮಾಣ ವಚನ ವ್ಯರ್ಥವಾಗ ಬಾರದೆಂದು ಆ ವಚನಕ್ಕೆ ಅನುಸಾರವಾಗಿಯೇ ಅದೇ ಸಮಯದಲ್ಲಿ , ನೀನು ಯುಧಿಷ್ಠಿರನನ್ನು ಕೊಲ್ಲಬಾರದು ಎಂದು ಹೇಳಿ.
ಅವನಿಗೆ ಅವನೇ ಬುದ್ದಿವಂತ ಎನಿಸಿಕೊಳ್ಳುವ ವ್ಯಕ್ತಿ ಅವನು ಬದುಕಿರುವವರೆಗೂ ನನಗೆ ಗೌರವ ಇದ್ದೇ ಇರುತ್ತದೆ ಈ ಸಮಾಜದಲ್ಲಿ ಅಂದು ಕೊಳ್ಳುತ್ತಾನೆ. ಒಂದು ವೇಳೆ ಅವನು ಆ ಗೌರವವನ್ನು ಕಳೆದುಕೊಂಡರೆ ಅವನು ಸತ್ತಂತಯೇ ಭಾಸವಾಗುತ್ತದೆ.ಅದಕ್ಕೋಸ್ಕರ ಕೃಷ್ಣನು ಅರ್ಜುನನಿಗೆ ಹೇಳಿದ ತನ್ನ ದೊಡ್ಡ ಅಣ್ಣನಾದ ಯುಧಿಷ್ಠಿರನೊಂದಿಗೆ ಅಗೌರವದಿಂದ ವರ್ತಿಸು,ಅವಮಾನ ಗೊಳಿಸು ಎಂದು ಹೇಳಿದ.
6.ಅರ್ಜುನ ಕೃಷ್ಣನು ಹೇಳಿದಂತೆ ಮಾಡಿದ ಆದರೆ ತಾನು ಮಾಡುತ್ತಿರುವುದು ತಪ್ಪು ಎಂಬ ತಪ್ಪಿತಸ್ಥ ಭಾವನೆ ಅವನ ಮನಸ್ಸಿನಲ್ಲಿ ಮೂಡುತ್ತಿತ್ತು.
ಕೃಷ್ಣನು ಅರ್ಜುನನಿಗೆ ನೀನು ಯುಧಿಷ್ಠಿರನನ್ನು ಅವಮಾನ ಮಾಡು ಅವನ ಜೊತೆ ಅಗೌರವದಿಂದ ಸದ್ಗುಣವಿಲ್ಲದಂತೆ ವರ್ತಿಸು,ಆಗ ಯುಧಿಷ್ಠಿರನಿಗೆ ಎಲ್ಲವೂ ನಾಶವಾಯಿತು ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ.ಹಾಗೆ ಅಗೌರವದಿಂದ ನಡೆದುಕೊಳ್ಳುವುದು ಯುಧಿಷ್ಠಿರನನ್ನು ಕೊಂದಷ್ಟೇ ಸಮಾನ ವಾಗಿರುತ್ತದೆ ಎಂದು ಹೇಳಿದನು.
7.ಅರ್ಜುನನು ತನ್ನ ಕತ್ತಿಯನ್ನು ತೆಗೆದುಕೊಂಡು ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾದನು.
ಅರ್ಜುನನು ಅವನ ಮನಸ್ಸಿನ ಶಾಂತಿ, ನೆಮ್ಮದಿ ಮತ್ತು ಸಹನೆಯನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದನು.ಆಗ ಕೃಷ್ಣನಿಗೆ ಆಶ್ಚರ್ಯವಾಯಿತು ಇವನನ್ನು ಹೇಗೆ ತಡೆಯುವುದು ಎಂದು ಗೊಂದಲಕ್ಕೀಡಾಗಿ ಆ ಸಮಯದಲ್ಲಿ ಮತ್ತೊಂದು ಸಲಹೆಯನ್ನು ತೆಗೆದುಕೊಂಡು ಬಂದನು.
8.ಕೃಷ್ಣನು ಇನ್ನೊಂದು ಸಲಹೆಯನ್ನು ಕೊಡಲು ಅರ್ಜುನನು ಬಳಿ ಬಂದು ಹೀಗೆ ಹೇಳಿದನು.ಒಬ್ಬರನ್ನು ಸಾರ್ವಜನಿಕವಾಗಿ ಎಲ್ಲರ ಮುಂದೆ ಹೊಗಳುವುದು ಧರ್ಮವಲ್ಲ ಅದು ಸಾವು ಬಂದಷ್ಟೇ ಸಮ ಎಂದನು.
ಧರ್ಮದ ಪ್ರಕಾರ ಸಾರ್ವಜನಿಕವಾಗಿ ಒಬ್ಬರನ್ನು ಸ್ವಯಂ ಶ್ಲಾಘನೆ ಮಾಡುವುದು,ಹೊಗಳುವುದು,ಅವರ ಸ್ವಂತ ಸಾಮರ್ಥ್ಯಗಳ ಬಗ್ಗೆ ಹೆಮ್ಮೆ ಪಡುವುದು ಮಹಾ ಪಾಪಕ್ಕೆ ಸಮ.ಹಾಗೆ ಮಾಡಿದರೆ ಅದು ಅವರಿಗೆ ಸಾವು ಬಂದಾಗ ತಂದು ಕೊಡುವ ನೋವಿನಷ್ಟೇ ಸಮಾನವಾಗಿರುತ್ತವೆ.ಅದಕ್ಕೆ ನೀನು ನಿನ್ನ ಸ್ವಂತ ತುತ್ತೂರಿಯನ್ನು ಊದು ಎಂದು ಹೇಳಿದ.ಆದ್ದರಿಂದ ಕೃಷ್ಣ ಹೇಳಿದಂತೆ ಅರ್ಜುನನು ಮಾಡಿದ.
9.ಯುದ್ಧ ಭೂಮಿಯಲ್ಲಿ ಅವಮಾನಗೊಂಡ ಯುಧಿಷ್ಠಿರನು ಎಲ್ಲವನ್ನು ಬಿಟ್ಟು ಕಾಡಿಗೆ ಹೋಗಿ ಅಲ್ಲಿಯೇ ಇರಲು ನಿರ್ಧರಿಸಿದ.
ಅರ್ಜುನನ ಉದ್ರಿಕ್ತ ಭಾವನೆಗಳು ತಣ್ಣಗಾದ ಮೇಲೆ ಅವನು ಅವನ ತಲೆಯ ಮೇಲೆ ಕೈ ಇಟ್ಟುಕೊಂಡು ಯುಧಿಷ್ಠಿರನ ಬಳಿ ಬಂದು ಅಣ್ಣಾ ತಪ್ಪಾಯಿತು ನನ್ನನ್ನು ಕ್ಷಮಿಸಿಬಿಡು ಎಂದು ಕೇಳಿ ಕೊಳ್ಳುತ್ತಾನೆ. ಆದರೂ ಕೂಡ ಯುಧಿಷ್ಠಿರನು ತನಗೆ ಆದ ಅವಮಾನಕ್ಕೆ ಪ್ರಾಯಶ್ಚಿತವಾಗಿ ಯುದ್ಧ ಭೂಮಿಯನ್ನು ಬಿಟ್ಟು ಕಾಡಿಗೆ ತೆರಳಿ ಅಲ್ಲಿಯೇ ಉಳಿಯಲು ನಿರ್ದರಿಸುತ್ತಾನೆ.
ಆದರೆ ಕೃಷ್ಣನು ಯುಧಿಷ್ಠಿರನಿಗೆ ಅರ್ಜುನನ ರಹಸ್ಯವಾದ ವಚನದ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಟ್ಟು ಕಾಡಿಗೆ ಹೋಗುವುದನ್ನು ತಡೆಯುತ್ತಾನೆ.
10.ಕೃಷ್ಣನು ಯುಧಿಷ್ಠಿರನಿಗೆ ಅರ್ಜುನನ ರಹಸ್ಯವಾದ ವಚನದ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಟ್ಟು ಇಲ್ಲೆಯೇ ಇದ್ದು ತನ್ನ ಸಹೋದರರಿಗೆ ಯುದ್ಧದಲ್ಲಿ ಸಹಾಯ ಮಾಡು ಆಗ ಅವರಿಗೂ ಅನುಕೂಲವಾಗುತ್ತದೆ ಎಂದು ಹೇಳುತ್ತಾನೆ.
ಅಂತಿಮವಾಗಿ ಯುಧಿಷ್ಠಿರನು ಇಲ್ಲಿಯೇ ಉಳಿಯಲು ಒಪ್ಪಿಕೊಂಡ ನಂತರ ಯುದ್ಧದಲ್ಲಿ ಕೌರವರ ವಿರುದ್ಧ ಹೋರಾಟ ಮಾಡುವುದಾಗಿ, ಅದು ತನ್ನ ತಮ್ಮಂದಿರಿಗೆ ಸಹಾಯಕವಾಗುತ್ತದೆ ಎಂದು ಅರಿತನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
