ಯಪ್ಪಾ ಈ ಬೆವರಿನ ಗಬ್ಬು ವಾಸನೆ ತಡೆಯೋಕೇ ಆಗಲ್ಲ ಅನ್ನೋರು ಹೀಗೆ ಮಾಡಿ..
ಬೆವರುವುದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ದೇಹದಿಂದ ಕಶ್ಮಲಗಳು ಹೊರಗೆ ಹಾಕಿ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ ,
ಆದರೆ ಅನೇಕ ಜನರಿಗೆ ಇದು ಶಾಪವಾಗಿ ಪರಿಣಮಿಸುತ್ತದೆ ಏಕೆಂದರೆ ಇದು ಕೆಟ್ಟ ಕೆಟ್ಟ ದುರ್ವಾಸನೆಯನ್ನು ನೀಡುವುದರ ಜೊತೆಗೆ ಕಂಕುಳದ ಕೆಳಗೆ ಕಲೆಯನ್ನು ಉಂಟುಮಾಡುತ್ತದೆ .
ಉಡುಪುಗಳ ಮೇಲೆ ಕಲೆಗಳನ್ನು ಉಂಟುಮಾಡುತ್ತದೆ , ಅನೇಕರು ಇದನ್ನು ತಡೆಯಲು ಸುಗಂಧ ದ್ರವ್ಯಗಳ ಮೊರೆ ಹೋಗುತ್ತಾರೆ.
ವಿಪರೀತ ಬೆವರುವಿಕೆ ಅಥವಾ ಹೈಪರ್ಹೈಡ್ರೋಸಿಸ್ ಅನ್ನು ಅಸ್ವಸ್ಥತೆ ಎಂದು ಪರಿಗಣಿಸಲಾಗುತ್ತದೆ .
ಹಾರ್ಮೋನುಗಳ ತೊಂದರೆಗಳು , ಋತುಬಂಧ, ಸ್ಥೂಲಕಾಯತೆ, ಥೈರಾಯಿಡ್, ಕಾರಣಗಳಿಂದ ಸಾಮಾನ್ಯವಾಗಿ ಅಂಗೈ , ಹಣೆ, ಕಂಕುಳದ ಅಡಿಯಲ್ಲಿ, ತೊಡೆಸಂದು ಪ್ರದೇಶದಲ್ಲಿ ಅಥವಾ ಬೆನ್ನಿನ ಮೇಲೆ ಬೆವರುವಿಕೆ ಸಂಭವಿಸುತ್ತದೆ. ಬೆವರುವಿಕೆಯನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಬನ್ನಿ ಇದರ ಬಗ್ಗೆ ಮತ್ತಷ್ಟು ಚರ್ಚೆ ಮಾಡೋಣ :
ಶ್ರೀ ಗಂಧದ ಪುಡಿ :
ಶ್ರೀ ಗಂಧದ ಪುಡಿಯಲ್ಲಿ ದೇಹವನ್ನು ತಂಪಾಗಿಸುವ ಗುಣಗಳು ಮತ್ತು ಹಿತವಾದ ಸುಗಂಧಕ್ಕೆ ಹೆಸರುವಾಸಿಯಾಗಿರುವ ಒಂದು ನೈಸರ್ಗಿಕ ಉತ್ಪನ್ನವಾಗಿದೆ ಮತ್ತು ಬೆವರು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅದ್ಭುತ ನೈಸರ್ಗಿಕ ಚಿಕಿತ್ಸೆಯಾಗಿದೆ.
ಶ್ರೀಗಂಧವು ದೇಹದಲ್ಲಿ ಬೆವರು ಉಂಟು ಮಾಡುವ ಸೆಬಮ್ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ ಮಾತು ಹೆಚ್ಚಿನ ನೀರು ದೇಹದಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತದೆ.
ತುಳಸಿ ಎಲೆ :
ಬೆವರು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಒಂದು ಪ್ರಸಿದ್ಧ ಮೂಲಿಕೆ ಇದು , ಈ ಗಿಡದ ರಸವು ಚರ್ಮದ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ
ಅಂಗೈ, ತೋಳುಗಳು, ಪಾದಗಳು ಇತರ ಬೆವರಿಗೆ ಒಳಗಾಗುವ ಎಲ್ಲ ಪ್ರದೇಶಗಳಿಗೆ ತುಳಸಿ ಎಲೆಗಳನ್ನು ಜಜ್ಜಿ ಸ್ವಲ್ಪ ಜೇನು ತುಪ್ಪ ಸೇರಿಸಿ ಹಚ್ಚಬೇಕು.
ಬೆವರು ನಿಯಂತ್ರಣವನ್ನು ಮಾಡುವುದಲ್ಲದೆ ಚರ್ಮದಲ್ಲಿ ಅಧಿಕವಾಗಿ ಉತ್ಪತ್ತಿಯಾಗುವ ತೈಲವನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸ :
ಅಂಗೈ, ತೋಳುಗಳು, ಪಾದಗಳು ಇತರ ಬೆವರಿಗೆ ಒಳಗಾಗುವ ಎಲ್ಲ ಪ್ರದೇಶಗಳಿಗೆ ನಿಂಬೆ ಹಣ್ಣು ಹೋಳು ಮಾಡಿ ಹಚ್ಚಿ , ನಿಂಬೆ ಆಮ್ಲೀಯ ಸ್ವಭಾವದಿಂದಾಗಿ ಬೆವರು ಗ್ರಂಥಿಗಳಿಂದ ಉತ್ಪತ್ತಿಯಾಗುವ ಸ್ರವಿಸುವಿಕೆಯ ಪರಿಣಾಮವನ್ನು ತಟಸ್ಥಗೊಳಿಸುತ್ತದೆ ಮತ್ತು ಚರ್ಮವನ್ನು ಒಣಗಿಸಲು ಸಹಾಯ ಮಾಡುತ್ತದೆ.
ಲೋಳೆ ಸರ :
ಈ ನೈಸರ್ಗಿಕ ಸಸ್ಯವು ದೇಹದ ದುರ್ಗಂಧವನ್ನು ದೂರ ಓಡಿಸಲು ಸಹಾಯ ಮಾಡುತ್ತದೆ , ಅಲೋ ವೆರಾ ಅಥವಾ ಲೋಳೆ ಸರಕ್ಕೆ ಗುಲಾಭಿ ಜಲವನ್ನು ಮಿಶ್ರಣ ಮಾಡಿ ,
ಈ ವಿಧಾನವನ್ನು ವಾರಕ್ಕೆ ಎರಡು ಸಾರಿ ಮಾಡಿದರೆ ದುರ್ಗಂಧದ ಜೊತೆ ಸೋಂಕು ಇನ್ನಿತರ ಚರ್ಮದ ಸಮಸ್ಯೆಗಳು ಸಹ ವಾಸಿಯಾಗುತ್ತದೆ.
ಬೇವು :
ಬೇವು ಎಲ್ಲಾ ವಿಧದ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ , ಬೆಳಗ್ಗೆ ಸ್ನಾನ ಮಾಡುವಾಗ ಬೇವಿನ ಎಲೆಗಳನ್ನು ಬೆರೆಸಿ ಸ್ನಾನ ಮಾಡಿ ಹೀಗೆ ಮಾಡಿದರೆ ಬೆವರು ಸಮಸ್ಯೆ ದೂರವಾಗುತ್ತದೆ.
ಅರಿಶಿನ ಮತ್ತು ಬೇವಿನ 15 ಎಲೆಗಳನ್ನು ಪೇಸ್ಟ್ ತಯಾರಿಸಿ ದೈನಂದಿನ ಸ್ನಾನವನ್ನು ತೆಗೆದುಕೊಳ್ಳುವ ಮೊದಲು ಇದನ್ನು ಅರ್ಧ ಘಂಟೆಯವರೆಗೆ ಇಡೀ ದೇಹಕ್ಕೆ ಹಚ್ಚಿ ಸ್ನಾನ ಮಾಡಿ ಎರಡು ವಾರ ಹೀಗೆ ಮಾಡಿದರೆ ಬೆವರಿನ ತೊಂದರೆ ವಾಸಿಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
