ಮನೆಯಲ್ಲಿ ಯಾವ ವಸ್ತುವನ್ನು ಇಡಲೇಬಾರದು.
ಮನೆಯಲ್ಲಿ ಕೆಲವು ವಸ್ತುಗಳನ್ನು ಅತಿಯಾಗಿ ಬಳಸಬಾರದು,ಇನ್ನೂ ಕೆಲವನ್ನ ಇದಲೇಬಾರದು ಅಂತ ಹೇಳ್ತಾರೆ. ಯಾಕೆ ಹಾಗೆ ಹೇಳ್ತಾರೆ ? ಅಂತ ನಿಮಗೆ ಗೊತ್ತಾ?ಆ ವಸ್ತುಗಳು ಯಾವುದು ?ಇಟ್ಟಕೊಂಡ್ರೆ ಅಥವಾ ಬಳಸಿದರೆ ಏನಾಗತ್ತೆ ಅಂತ ನಿಮಗೆ ಗೊತ್ತಾ?ಇಲ್ಲಿ ಹೇಳಿದೀವಿ ನೋಡಿ ತಿಳ್ಕೊಳ್ಳಿ …….
ಮನೆಯಲ್ಲಿ ಪದೇ ಪದೇ ಕಲಹಗಳು ಆಗುತ್ತಿದ್ದರೆ ಅದಕ್ಕೆ ಒಂದು ಕಾರಣ ಇರತ್ತೆ.ಹಾಗಂತ ಮನೇಲಿ ಜಗಳ ಆಗೋಕೆ ಹಲವಾರು ಕಾರಣಗಳು ಇವೆ.ಆದರೆ ಈ ಒಂದು ವಸ್ತುವನ್ನು ಮಾತ್ರ ಮನೇಲಿ ಇಟ್ಟಿದ್ದರೆ,ಕಲಹಗಳು,ಅನಾರೋಗ್ಯ ಕಟ್ಟಿಟ್ಟ ಬುತ್ತಿ.
ಅದ್ರಲ್ಲೂ ದಂಪತಿಗಳ ನಡುವೆ ಸ್ನೇಹ,ಪ್ರೀತಿ,ಅನುರಾಗ ಅನ್ನೋದು ಹತ್ತಿರಕ್ಕೆ ಬರಲ್ಲ.ಹಾಗೆ ವಯಸ್ಸಾದವರೂ ಮಲಗಿದ್ದರೆ ಮಲಗೇ ಇರತ್ತಾರೆ,ಮೇಲೆ ಏಳೋದೇ ಇಲ್ಲ, ಅದು ಏನು ಅಂತ ಗೊತ್ತಾ ?ಯಾವುದೇ ಕಾರಣಕ್ಕೂ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ,ಜಾಸ್ತಿ ಬಳಸಿದರೆ ಈ ಮೇಲೆ ಹೇಳಿದ ಅನಾಹುತಗಳು ಸಂಭವಿಸುತ್ತವೆ.
ಕಬ್ಬಿಣದ ಮಂಚ.
ಅಪ್ಪಿ ತಪ್ಪಿಯೂ ಕೂಡ ಮನೆಯಲ್ಲಿ ಯಾವುದೇ ಕಾರಣಕ್ಕೂ ಕಬ್ಬಿಣದ ಮಂಚದ ಮೇಲೆ ಯಾರನ್ನು ಮಲಗಿಸಬಾರದು.ಅಸಲಿಗೆ ಕಬ್ಬಿಣದ ಮಂಚನ ಮನೆಗೇ ತರಬೇಡಿ. ಮನೇಲಿ ಹಿರಿಯರು, ವಯಸ್ಸಾದವರೂ ಮಲುಕೊಳ್ಳಿ ಬಿಡು ನಾವಿಬ್ಬರೂ ಗಂಡ-ಹೆಂಡತಿ ಮರದ ಮಂಚದ ಮೇಲೆ ಆರಾಮಾಗಿ ಮಲಕೊಳ್ಳೋಣ, ಅಂತ ಹೇಳಿ ತಮ್ಮ ಸ್ವಂತ ತಂದೆ-ತಾಯಿಯಾಯಿಗೆ ವಯಸ್ಸಾಗಿದೆ ಅಂತ ಕಬ್ಬಿಣದ ಮಂಚ ತಂದ ಹಾಕಿ ಮಲಗಿಸ್ತಾರೆ.ಎಷ್ಟೋ ಮನೆಗಳಲ್ಲಿ ಹೀಗೆ ಮಾಡ್ತಾರೆ,ಆದ್ರೆ ಅದು ತಪ್ಪು,ಹಾಗೆ ಮಾಡಬಾರದು ಅಂತ ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಬೇಕಾದರೆ ನೀವೇ ಗಮನಿಸಿ ನೋಡಿ.
ಒಂದು ಪುಟ್ಟ ಮಗುನೂ ಕೂಡ ನಾವು ಮರದ ತೊಟ್ಟಿಲಿನಲ್ಲಿ ಹಾಕಿ ತೂಗಿಸ್ತೀವಿ. ಅಂತದ್ರಲ್ಲಿ ಮನೆಯ ಹಿರಿಯರನ್ನು, ಆ ಮನೆಯ ಹಿರಿಯ ಕಿರೀಟಗಳನ್ನು ಆ ಕಬ್ಬಿಣದ ಮಂಚದ ಮೇಲೆ ಮಲಗಿಸೋದೆ! ಬೇಡ ಇಂತಹ ತಪ್ಪು ಮಾಡಬೇಡಿ ಯಾರೇ ಆಗಲಿ.ನೀವ ಹೀಗೆ ಮಾಡಿದರೆ ಇದರ ಜೊತೆ ಇನ್ನು ಅನೇಕ ಸಮಸ್ಯೆಗಳನ್ನು ಸಹ ಎದ್ರಿಸಬೇಕಾಗತ್ತೆ.
ಅದು ಏನೆಂದರೆ ಅಂತಹ ಮನೆಗಳಲ್ಲಿ ಯಾವತ್ತೂ ದಾರಿದ್ರ್ಯವೇ,ಶನಿ ಪ್ರವೇಶ ಆಗತ್ತೆ ಅಂತ ಹೇಳ್ತಾರೆ, ಆದ್ದರಿಂದ ಆದಷ್ಟೂ ಕಬ್ಬಿಣದ ವಸ್ತುಗಳನ್ನು ಸಹ ಕಡಿಮೆ ಬಳಸಿ ಮತ್ತು ಕಬ್ಬಿಣದ ಮಂಚ ಬಳಸದೇ ಇದ್ರೇನೇ ಒಳ್ಳೇದು. ನಿಮಗೂ ಕ್ಷೇಮ,ಮನೆಯಲ್ಲಿರುವ ಹಿರಿಯರಿಗೂ ಕೂಡ ಕ್ಷೇಮ,ಹಾಗೆ ಮನೆಗೂ ಒಳ್ಳೆಯದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
