ನಿಮ್ಮ ವೃತ್ತಿ ಜೀವನವನ್ನು ಫೆಂಗ್ ಶುಯ್ ನ ಈ ಸರಳವಾದ 4 ಸಲಹೆಗಳಿಂದ ವೃದ್ಧಿಸಿಕೊಳ್ಳಿ.
ನಿಮ್ಮ ಮನೆಯಲ್ಲಿ ನೀವು ಓದುವ ಕೋಣೆಯು ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಇದೆ ಎಂದು ಉದ್ದೇಶಿಸಲಾಗಿದೆ.ಈ ಕೋಣೆಯು ಜ್ಞಾನವನ್ನು, ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಲು ಸಹಾಯಕವಾಗಿದೆ. ಫೆಂಗ್ ಶುಯ್ ( ಇದು ಒಂದು ಪ್ರಾಚೀನ ಕಲೆಯಾಗಿದ್ದು ನಿಮ್ಮ ಸುತ್ತಮುತ್ತಲೂ ಸಮತೋಲನ ಮತ್ತು ಸಮನ್ವಯವಾದ ಶಕ್ತಿಯನ್ನು ತುಂಬುತ್ತದೆ)ಶಕ್ತಿಯಿಂದ ಭರಿತವಾಗಿದೆ.ಇದು ನಿಮ್ಮಲ್ಲಿ ತೀವ್ರವಾದ ಸುಧಾರಣೆಗಳನ್ನು ನಿಮ್ಮ ಮಗುವಿನ ಓದಿನಲ್ಲಿ ತರುತ್ತದೆ.ನಾವು ನಿಮಗೆ ಸರಳವಾದ ಕೆಲವು ಸಲಹೆಗಳನ್ನು ಇಲ್ಲಿ ಹೇಳಿದ್ದೇವೆ.ನೀವು ಇವುಗಳನ್ನು ಅಳವಡಿಸಿಕೊಳ್ಳಿ, ಸತತ ವೃದ್ಧಿ ಮತ್ತು ನಿಶ್ಚಲವಾದ ವೃತ್ತಿ ಜೀವನಕ್ಕಾಗಿ ಯಾರು ಬೇಕಾದರೂ ಇವುಗಳನ್ನು ಉಪಯೋಗಿಸಬಹುದು.
ಓದುವ ಕೋಣೆಗೆ ಫೆಂಗ್ ಶುಯ್ ನ ಸಲಹೆಗಳು.
ನಿಮ್ಮ ಮೇಜನ್ನು ನೀವು ಓದುವ ಕೋಣೆಯ ಕಿಟಕಿಯ ಬಲ ಭಾಗಕ್ಕೆ ಇರಿಸಿ.ಒಂದು ವೇಳೆ ಕಿಟಕಿಯು ಇಲ್ಲಾ ಅಂದರೆ, ಒಂದು ಕನ್ನಡಿಯನ್ನು ತಂದು ನೇತು ಹಾಕಿ ಅದೂ ಮೇಜಿನ ಎಡಭಾಗಕ್ಕೆ ಇದ್ದರೆ ಒಳ್ಳೆಯದು.
ನೀವು ಓದಲು ಕುಳಿತುಕೊಳ್ಳುವ ಕುರ್ಚಿಯು ಹಿಂದಗಡೆ ಎತ್ತರವಾಗಿರಬೇಕು.
ಓದುವ ಕೋಣೆ ಮತ್ತು ಫೆಂಗ್ ಶುಯ್.
ನೀವು ಓದುವ ಕೋಣೆಯನ್ನು ಅಸ್ತವ್ಯಸ್ತವಾಗಿ ಇಟ್ಟುಕೊಳ್ಳಬಾರದು. ಪುಸ್ತಕಗಳು, ಪ್ರತಿಗಳು, ರಿಜಿಸ್ಟಾರ್ ಗಳು ದೂಳು ಹಿಡಿದಿರಬಾರದು.ದೂಳು ರಹಿತವಾಗಿ ಸ್ವಚ್ಛಗೊಳಿಸಿ ಇಟ್ಟುಕೊಳ್ಳಬೇಕು.
ಒಂದು ಸ್ಪಟಿಕದ ಗೋಳವನ್ನು ಮುಖ್ಯ ಕಿಟಕಿಯ ಬಳಿ ಇಟ್ಟರೆ ಮಗುವನ್ನು ಸಕ್ರಿಯ ಗೊಳಿಸಿ ಓದುವಾಗ ಬುದ್ದಿ ಮತ್ತು ಜ್ಞಾನ ಎರಡನ್ನೂ ಚುರುಕಾಗಿ ಇರುವಂತೆ ಮಾಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
