ಸಣ್ಣ ಕಾಳುಗಳು ಅಂತ ನಿರ್ಲಕ್ಷ ಮಾಡ್ಬೇಡಿ ಮೊಳಕೆ ಕಾಳುಗಳು ಈ 8 ಅದ್ಬುತ ಮಾಡುತ್ತೆ ಅದಕ್ಕೆ ಹೇಳೋದು ಆರೋಗ್ಯದ ಗಣಿಗಳು ಅಂತ ..
ವಿಟಮಿನ್ ಕೆ, ಫೋಲೇಟ್, ಪಾಂಟೊಥೆನಿಕ್ ಆಮ್ಲ, ನಿಯಾಸಿನ್, ಥಯಾಮಿನ್, ವಿಟಮಿನ್ ಸಿ, ವಿಟಮಿನ್ ಎ, ಮತ್ತು ರಿಬೋಫ್ಲಾವಿನ್
ಖನಿಜಗಳಾದ ಮ್ಯಾಂಗನೀಸ್, ತಾಮ್ರ, ಸತು, ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂಗಳನ್ನು ಒಳಗೊಂಡಿರುತ್ತವೆ. ಇಷ್ಟೇ ಅಲ್ಲದೆ ಆಹಾರದ ಫೈಬರ್ ಅನ್ನು ಹೊಂದಿರುತ್ತವೆ.
1. ಜೀರ್ಣಕ್ರಿಯೆ ಹೆಚ್ಚಿಸುತ್ತದೆ :
ಉತ್ತಮವಾದ ವಿಷಯವೆಂದರೆ ಹೆಚ್ಚಿನ ಸಂಖ್ಯೆಯ ಕಿಣ್ವಗಳನ್ನು ಹೊಂದಿರುತ್ತವೆ. ದೇಹದೊಳಗೆ ವಿವಿಧ ಚಯಾಪಚಯ ಪ್ರಕ್ರಿಯೆಗಳು ಮತ್ತು ರಾಸಾಯನಿಕ ಪ್ರತಿಕ್ರಿಯೆಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗಗಳ ಮೂಲಕ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಹೆಚ್ಚಿಸುತ್ತವೆ.
2. ರಕ್ತಹೀನತೆ ಮತ್ತು ರಕ್ತ ಪರಿಚಲನೆ:
ರಕ್ತಹೀನತೆ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ . ನೀವು ಸಾಕಷ್ಟು ಕಬ್ಬಿಣದ ಅಂಶವಿರುವ ಆಹಾರವನ್ನು ಸೇವಿಸದಿದ್ದರೆ, ನಿಮ್ಮ ಕೆಂಪು ರಕ್ತ ಕಣಗಳ ಎಣಿಕೆಗಳು ಕಡಿಮೆಯಾಗುತ್ತವೆ, ಏಕೆಂದರೆ ಕಬ್ಬಿಣವು ಕೆಂಪು ರಕ್ತಕಣಗಳ ಉತ್ಪಾದನೆಯ ಅಗತ್ಯ ಭಾಗವಾಗಿದೆ.
3. ತೂಕ ಕಡಿಮೆ ಮಾಡಲು :
ಇವು ಪೌಷ್ಟಿಕಾಂಶಗಳಲ್ಲಿ ಅತಿ ಹೆಚ್ಚು ಇರುವ ಆಹಾರಗಳಲ್ಲಿ ಒಂದಾಗಿದೆ ಆದರೆ ಕ್ಯಾಲೋರಿಗಳಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತವೆ ,ಫೈಬರ್ ಹೆಚ್ಚಿಗೆ ಇರುತ್ತದೆ , ಹಸಿವು ಹಾರ್ಮೋನು ಗ್ರೆಲಿನ್ ಬಿಡುಗಡೆಯನ್ನು ಕಡಿಮೆಗೊಳಿಸುತ್ತದೆ.
4. ಹೃದಯದ ತೊಂದರೆ :
ಒಮೆಗಾ -3 ಕೊಬ್ಬಿನಾಮ್ಲಗಳ ಒಂದು ಉತ್ತಮ ಮೂಲವಾಗಿದೆ ಅವುಗಳನ್ನು “ಉತ್ತಮ” ಕೊಲೆಸ್ಟ್ರಾಲ್ (ಎಚ್ಡಿಎಲ್ ಕೊಲೆಸ್ಟರಾಲ್) ಎಂದು ಪರಿಗಣಿಸಲಾಗುತ್ತದೆ ,
ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ
ಹೃದಯಾಘಾತ, ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ತಪ್ಪಿಸುತ್ತದೆ .
5. ಪ್ರತಿರಕ್ಷಣಾ ವ್ಯವಸ್ಥೆ:
ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ , ವಿಟಮಿನ್- ಸಿ ಸೋಂಕಿನಿಂದ ಮತ್ತು ಕಾಯಿಲೆಯಿಂದ ಹೋರಾಡಲು ದೇಹದಲ್ಲಿ ಬಿಳಿ ರಕ್ತ ಕಣಗಳನ್ನ ಉತ್ಪಾದನೆ ಮಾಡಲು ಸಹಕಾರಿ ,
ವಿಟಮಿನ್ ಎ ಹಲವಾರು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.
6. ಕ್ಯಾನ್ಸರ್ ತಡೆಗಟ್ಟುವಿಕೆ:
ವಿಟಮಿನ್ C, ವಿಟಮಿನ್ ಎ, ಅಲ್ಲದೇ ಅಮೈನೊ ಆಮ್ಲಗಳು ಮತ್ತು ಪ್ರೋಟೀನ್ಗಳು (ದೊಡ್ಡ ಪ್ರಮಾಣದಲ್ಲಿ ಕಿಣ್ವಗಳು ಸೇರಿದಂತೆ) ಇನ್ನು ಹಲವಾರು ಸಂಯುಕ್ತಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ .
7. ದೃಷ್ಟಿ ಮತ್ತು ಕಣ್ಣಿನ ಆರೋಗ್ಯ:
ವಿಟಮಿನ್ ಎ ಹಲವು ದೃಷ್ಟಿ ಆರೋಗ್ಯದ ಸುಧಾರಣೆಗೆ ಸಂಬಂಧಿಸಿದೆ, ಕಣ್ಣುಗಳ ಜೀವಕೋಶಗಳನ್ನು ರಕ್ಷಿಸಲು ಆಂಟಿಆಕ್ಸಿಡೆಂಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಗ್ಲುಕೋಮಾ, ಕಣ್ಣಿನ ಪೊರೆ ಮತ್ತು ಮಕ್ಯುಲರ್ ಡಿಜೆನೇಶನ್ಗಳನ್ನು ತಡೆಯಲು ಸಹಾಯ ಮಾಡುತ್ತದೆ.
8. ಅಲರ್ಜಿ ಮತ್ತು ಆಸ್ತಮಾ:
ಉಸಿರಾಟದ ವ್ಯವಸ್ಥೆಯ ಉರಿಯೂತ ಸ್ಥಿತಿಯಾದ ಅಸ್ತಮಾ ಸೇರಿದಂತೆ ಅಲರ್ಜಿಯ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುತ್ತದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
