fbpx
ಸಾಧನೆ

ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿ ಕಂಪನಿ ಓನರ್ ಆದ ಕನ್ನಡಿಗ ಒಂದು ಸಣ್ಣ ಐಡಿಯಾ ಬದುಕು ಬದಲಿಸಿದ ಕಥೆ..

ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿ ಕಂಪನಿ ಓನರ್ ಆದ ಕನ್ನಡಿಗ ಒಂದು ಸಣ್ಣ ಐಡಿಯಾ ಬದುಕು ಬದಲಿಸಿದ ಕಥೆ..

ಒಂದು ಸಣ್ಣ ಐಡಿಯಾ ಜೀವನವನ್ನೇ ಬದಲಾಯಿಸಬಹುದು ಹೂ ಅಂತೀರಾ ? ಹೂ ಹೂ ಅಂತೀರಾ ?

ಒಂದು ಕಲ್ಪನೆ ನಿಮ್ಮ ಜೀವನವನ್ನು ಬದಲಾಯಿಸಬಹುದು ಹೌದು ಎಂದರೆ ಕೆಲವರು ಅಂಎಂಬುವುದಿಲ್ಲ ನಿಮಗೆ ನಂಬುವಂತಹ ಕಥೆ ನಾವಿಗೇ ಹೇಳುತ್ತೇವೆ ಕೇಳಿ
ಕೇವಲ ಮೂರು ವರ್ಷಗಳಲ್ಲಿ 100 ಕೋಟಿ ರೂ. ಕಂಪನಿ ಕಟ್ಟಿದ ಕಥೆ..

ನಾವು ಶ್ರೀಧರ್ ಗುಂಡಯ್ಯ ಎಂಬ ಬೆಂಗಳೂರಿನ ಹುಡುಗನ ಬಗ್ಗೆ ಹೇಳಲು ಹೊರಟಿದ್ದೇವೆ , ಈ ಒಂದು ಐಡಿಯಾ ಹೊಳೆಯುವ ಮುನ್ನ ವಿವಿಧ ವ್ಯಾವಹಾರಿಕ ಉದ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ.

2012 ರಲ್ಲಿ ಇ-ಕಾಮರ್ಸ್ ವ್ಯವಹಾರವನ್ನು ಪ್ರಾರಂಭಿಸುವುದು ಶ್ರೀಧರ್ ಅವರ ಉದ್ದೇಶವಾಗಿತ್ತು. ಆಗಷ್ಟೇ ಎಷ್ಟೋ ಕಂಪನಿಗಳು ಭಾರತದಲ್ಲಿ ತಮ್ಮ ನೆಲೆ ಕಂಡಿದ್ದವು
ಇ-ಕಾಮರ್ಸ್ ವ್ಯವಹಾರ ಬಹಳ ಕಷ್ಟಕರವಾಗಿದ್ದು ಅದಾಗಲೇ ಇ-ಕಾಮರ್ಸ್ ವ್ಯವಹಾರಗಳ ದೊಡ್ಡಣ್ಣರಂತೆ ಅಮೆಜಾನ್, ಸ್ನ್ಯಾಪ್ಡೀಲ್, ಫ್ಲಿಪ್ಕಾರ್ಟ್ ಇದ್ದವು ,ಇತರ ಸಾಧಾರಣ ಆನ್ಲೈನ್ ಮಾರಾಟಗಾರರು ದೈತ್ಯರೊಂದಿಗೆ ಸ್ಪರ್ಧಿಸುತ್ತಿರುವುದು ಸವಾಲೇ ಸರಿ.ದುರದೃಷ್ಟವಶಾತ್ ಶ್ರೀಧರ್ ಅವರ ಬಳಿ ಹೆಚ್ಚಿನ ಹಣವು ಸಹ ಇರಲಿಲ್ಲ.

ಆದ್ದರಿಂದ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು, ಶ್ರೀಧರ್ ವಿಭಿನ್ನವಾದದನ್ನು ಮಾಡಬೇಕೆಂದು ಯೋಚಿಸಿ , ಪ್ರಾದೇಶಿಕ ಭಾಷೆಗಳಲ್ಲಿ ಇ-ಕಾಮರ್ಸ್ ಪ್ಲಾಟ್ಫಾರ್ಮ್ನ ನೀಡುವ ವ್ಯವಸ್ಥೆಯನ್ನು ಶುರುಮಾಡಿದರು.
ಇ-ಕಾಮರ್ಸ್ ಸಂಸ್ಥೆ ಸ್ಟೋರ್ಕಿಂಗ್ ಎಂದು ಕರೆಯಲ್ಪಡುತ್ತದೆ. ಶ್ರೀಧರ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಸಂಸ್ಥೆ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ವ್ಯವಹಾರಗಳನ್ನು ಮಾಡಲು ಅವಕಾಶ ನೀಡುತ್ತದೆ

2009 ರಲ್ಲಿ ಸ್ಟೋರ್ಕಿಂಗ್ನ ಐಡಿಯಾ ದೊಂದಿಗೆ ಚೀನಾಗೆ ತೆರಳಿದ್ದಾಗ ಅಲ್ಲಿನ ಜನರು ತಮ್ಮ ಸ್ವಂತ ಭಾಷೆಯಲ್ಲಿ ವ್ಯವಹಾರ ನಡೆಸಲು ಆದ್ಯತೆ ನೀಡುತ್ತಾರೆ ಎಂದು ಅವರು ಗಮನಿಸಿದರು , ತಮ್ಮ ಸ್ವಂತ ಭಾಷೆಯಲ್ಲಿ ಸೇವೆ ನೀಡುವ ಮೂಲಕ ಜನಸಾಮಾನ್ಯರಿಗೆ ತಲುಪಲು ಸಹಾಯವಾಗುತ್ತದೆ ಎಂದು ಅರ್ಥ ಮಾಡಿಕೊಂಡರು.

ಕಂಪನಿಯು ಈ ಒಂದು ಉನ್ನತ ಐಡಿಯಾ ದಿಂದಾಗಿ ಕೇವಲ ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿಗಳ ವಹಿವಾಟು ತಲುಪಿದೆ. ಮಧ್ಯಪ್ರದೇಶದಲ್ಲಿ ವ್ಯವಹಾರವನ್ನು ವಿಸ್ತರಿಸಲು ಶ್ರೀಧರ್ ಯೋಜನೆಗಳನ್ನು ಹೊಂದಿದ್ದಾರೆ.

ಶ್ರೀಧರ್ ಲಂಡನ್ ನ ಗ್ರೀನ್ವಿಚ್ ವಿಶ್ವವಿದ್ಯಾಲಯದಿಂದ ಐಟಿ ಯಲ್ಲಿ ಸ್ನಾತಕೋತ್ತರ ಪದವಿ , ವಾಣಿಜ್ಯ ಪದವಿ ಪಡೆದಿದ್ದಾರೆ, ಪ್ರತಿಯೊಂದು ಹೋರಾಟದ ಹಿಂದೆಯೂ ಪರಿಶ್ರಮವಿದ್ದೆ ಇದೆ ಹೋರಾಟ ಮಾಡಿದ ಫಲ ಸಿಕ್ಕೇ ಸಿಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top