fbpx
ದೇವರು

ವಿಧವಿಧವಾದ ಯಂತ್ರಗಳ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಿರಲೇಬೇಕಾದ 8 ವಿಷಯಗಳು..

ಯಂತ್ರಗಳ ಮಹತ್ವ

ಶ್ರೀ ಮಹಾಲಕ್ಷ್ಮೀಯಂತ್ರ :

ಈ ಯಂತ್ರವನ್ನು ಐಶ್ವರ್ಯ ಪ್ರಾಪ್ತಿಗೆ, ಸಂಸಾರದಲ್ಲಿ ಸುಖ ಸೌಮ್ಯ ಶಾಂತಿ ಲಭಿಸಲು, ವ್ಯಾಪಾರ ವೃದ್ಧಿಗೆ ಮನೆ ಅಂಗಡಿಯಲ್ಲಿ ಪೂಜಿಸಲು ಯೋಗ್ಯ ಯಂತ್ರ.

ಮಹಾಸುದರ್ಶನಯಂತ್ರ :

ಗೃಹದಲ್ಲಿ ಅಮಂಗಳ ನಿವಾರಣೆಗೆ, ಭಯ ಭೀತಿ ಶತೃಬಾಧೆ ನಿವಾರಣೆಗೆ, ಕಾರ್ಯಸಿದ್ದಿಗೆ ಕೆಟ್ಟ ದೃಷ್ಟಿ ಪ್ರಭಾವ ತಡೆಯಲೂ ಈ ಯಂತ್ರವನ್ನು ಪ್ರತಿ ಮನೆಯಲ್ಲೂ ಇಟ್ಟು ಪೂಜಿಸಿದರೆ ಒಳ್ಳೆಯದು.

ಶ್ರೀ ಮೃತ್ಯುಂಜಯ ಯಂತ್ರ:

ಅನಾರೋಗ್ಯ ಸಮಸ್ಸೆಗೆ, ದೀರ್ಘಕಾಲದ ಕಾಯಿಲೆಗಳಿಗೆ, ಅಪಘಾತಗಳು ಆಗದೇ ಇರಲು ಈ ಯಂತ್ರ ಪೂಜಿಸಿದರೆ ಒಳ್ಳೆಯದು.

ಮತ್ಸ್ಯಯಂತ್ರ :

ಗೃಹದ ಆಯದ ದೋಷ, ಗೃಹದ ಭೂ ದೋಷ, ಜಲ ದೋಷ, ಅಗ್ನಿಮೂಲೆ ನಿವೇಶನ ಇತ್ಯಾದಿಗಳಿಂದುಂಟಾಗುವ ವಾಸಗೃಹದ ಸಮಸ್ತ ದೋಷಗಳಿಗೆ ಈ ಯಂತ್ರ ಉತ್ತಮ.

ಸಂತಾನಗೋಪಾಲ ಯಂತ್ರ :

ಸಂತಾನದೋಷ, ಪುತ್ರದೋಷ, ಸರ್ಪದೋಷ, ನಾಗಶಾಪದಿಂದ ಸಂತಾನವಾಗದಿರುವ ಪತಿ ಪತ್ನಯರಿಗೆ ಉಪಯುಕ್ತವಾಗುತ್ತದೆ.

ಶ್ರೀ ಸುಬ್ರಹ್ಮಣ್ಯ ಯಂತ್ರ :

ಕನ್ಯೆಯರ ಜಾತಕದಲ್ಲಿ ಕುಜ ದೋಷ ನಿವಾರಣೆಗೆ, ಕೋರ್ಟು ಕಚೇರಿಗಳಲ್ಲಿ ಜಯಗಳಿಸಲು ಶತೃಬಾಧೆ ನಿವಾರಣೆಗೆ ವಿಶೇಷವಾಗಿದೆ ಈ ಯಂತ್ರ.

ಬಾಲಗ್ರಹ ಯಂತ್ರ :

ಚಿಕ್ಕ ಮಕ್ಕಳ ಆರೋಗ್ಯ ವೃದ್ಧಿಗೆ, ಯವಾಗಲೂ ಕಾಣಿಸಿಕೊಳ್ಳುವ ಜ್ವರ, ಮತ್ತು ಚಂಡಿ ತಡೆಯಲು ಈ ಯಂತ್ರವನ್ನು ಪೂಜಿಸಿದರೆ ಒಳ್ಳೆಯದು.

ಕುಭೇರ ಯಂತ್ರ :

ಧನಾಕರ್ಷಣೆಗೆ, ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣಲು, ನಷ್ಟಗಳನ್ನು ತಡೆಯಲು ಈ ಯಂತ್ರ ಪೂಜಿಸಿದರೆ ಅಭಿವೃದ್ದಿ ಕಾಣುವಿರಿ.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ. ಮೈಸೂರು
9845371416

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top