ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆನ ನೀರಲ್ಲಿ ಕುದಿಸಿ ಕುಡೀರಿ ಆಮೇಲೆ ಇದು ಮಾಡೋ 8 ಅದ್ಬುತ ಗಮನಿಸಿ..
1. ಹೊಟ್ಟೆಗೆ ಒಳ್ಳೆಯದು
ಒಂದು ಲೋಟ ಜೀರಿಗೆ ನೀರನ್ನು ಕುಡಿದರೆ ದೇಹದ ಅಸಿಡಿಟಿ ಕಡಿಮೆಯಾಗಿ , ಹೊಟ್ಟೆ ಉಬ್ಬಿದ ಮತ್ತು ಅಜೀರ್ಣಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ತಡೆಯುವ ಮದ್ದಾಗಿ ಬಳಕೆಯಾಗುತ್ತದೆ , ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊಟ್ಟೆ ನೋವು , ಕಿಬ್ಬೊಟ್ಟೆಯ ನೋವನ್ನು ಗುಣಪಡಿಸಲು ಸಹ ಪ್ರಯೋಜನಕಾರಿಯಾಗಿದೆ.
2 . ಚರ್ಮಕ್ಕೆ ಒಳ್ಳೆಯದು
ಜೀರಿಗೆ ನೀರು ಕುಡಿದರೆ ಚರ್ಮದ ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಅನಗತ್ಯವಾದ ಸತ್ತ ಜೀವ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ , ಚರ್ಮಕ್ಕೆ ಬೇಕಾದ ಹೊಳಪು ನೀಡುವಲ್ಲಿ ಇದರ ಪಾತ್ರ ತುಂಬ ಮುಖ್ಯ
ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಸಿಯಮ್, ಸೆಲೆನಿಯಮ್ ಮತ್ತು ತಾಮ್ರವನ್ನು ಹೊಂದಿರುತ್ತದೆ ಅಷ್ಟೇ ಅಲ್ಲದೆ ಅರಿಶಿನಕ್ಕೆ ಸ್ವಲ್ಪ ಜೀರಿಗೆ ನೀರು ಸೇರಿಸಿ ಪೇಸ್ಟ್ ಮಾಡಿ ಮುಖದ ಪ್ಯಾಕ್ ಹಾಕಿ ಕೊಂಡರೆ ಚರ್ಮಕ್ಕೆ ಹೊಳಪನ್ನು ಕೊಡುತ್ತದೆ.
3. ವಯಸ್ಸಾಗುವಿಕೆಯನ್ನು ತಡೆಯುತ್ತದೆ.
ಜೀರಿಗೆ ನೀರು ಹೆಚ್ಚಿನ ವಿಟಮಿನ್ ಗಳನ್ನೂ ಹೊಂದಿದ್ದು ವಿಟಮಿನ್ ಗಳು ಆಕ್ಸಿಡೀಕರಣ ಗೊಳಿಸಲು ಸಹಾಯ ಮಾಡುತ್ತದೆ ,
ಫ್ರೀ ರಾಡಿಕಲ್ ಗಳು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಚರ್ಮದ ಮೇಲೆ ಸುಕ್ಕುಗಳು , ನೆರಿಗೆಗಳು ಮತ್ತು ಕಪ್ಪು ವೃತ್ತಗಳಾಗುವುದನ್ನು ತಪ್ಪಿಸುತ್ತದ್ದೆ.
4. ಆರೋಗ್ಯಕರ ಕೂದಲು
ಜೀರಿಗೆ ನೀರು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ಬುಡದ ಪೋಷಣೆಗೆ ಸಹಾಯ ಮಾಡುತ್ತದೆ. ಇದು ಕೂದಲು ತೆಳುವಾಗುವಿಕೆ ಮತ್ತು ಕೂದಲು ನಷ್ಟವನ್ನು ತಡೆಯುತ್ತದೆ .
5. ಮೊಡವೆ ಕಡಿಮೆಗೊಳಿಸುತ್ತದೆ
ಜೀರಿಗೆ ನೀರು ಮೊಡವೆ ಹೋಗಿಸಲು ನೈಸರ್ಗಿಕ ಪರಿಹಾರವಾಗಿ ಬಳಕೆಯಾಗುತ್ತದೆ . ನೀರಿನಲ್ಲಿ ಕುದಿಸಿದ ಜೀರಿಗೆಯಿಂದ ಮೊಡವೆ ವಿರೋಧಿ ಟೋನರನ್ನು ಸುಲಭವಾಗಿ ತಯಾರಿಸಬಹುದು. ಆದ್ದರಿಂದ ದಿನಕ್ಕೆ ಒಂದು ಲೋಟ ಜೀರಿಗೆ ನೀರು ಕುಡಿದರೆ ಮೊಡವೆ ಮುಕ್ತ ಚರ್ಮ ನಿಮ್ಮದಾಗುತ್ತದೆ.
6. ರಕ್ತಹೀನತೆಯ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ
ನೀವು ಕಬ್ಬಿಣದ ಕೊರತೆ ರಕ್ತಹೀನತೆಯಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕಬ್ಬಿಣ ಭರಿತ ಜೀರಿಗೆ ಸೇರಿಸಿ , ಜೀರಿಗೆ ನೀರು ಕುಡಿಯಿರಿ ಈ ಸಮಸ್ಯೆ ಸರಿಹೋಗುತ್ತದೆ.
7. ರಕ್ತದೊತ್ತಡವನ್ನು ನಿಭಾಯಿಸುತ್ತದೆ:
ಜೀರಿಗೆ ನೀರು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿದೆ, ಇದು ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ, ಇದರಿಂದಾಗಿ ರಕ್ತದೊತ್ತಡವನ್ನು ನಿಭಾಯಿಸಬಹುದು. ನೀವು ಅಧಿಕ ರಕ್ತದೊತ್ತಡದ ಅಪಾಯದಲ್ಲಿದ್ದರೆ ಅಥವಾ ಹೃದ್ರೋಗದಿಂದ ಬಳಲುತ್ತಿದ್ದರೆ, ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯಿರಿ , ನಿಮ್ಮ ಹೃದಯದ ಕಾರ್ಯವನ್ನು ಸುಧಾರಿಸುವ ಜೊತೆಗೆ ಹೃದಯ ಬಡಿತವನ್ನು ಸಹ ನಿರ್ವಹಿಸಲು ಸಹಾಯ ಮಾಡುತ್ತದೆ.
8.ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ :
ಚಯಾಪಚಯವನ್ನು ಉತ್ತೇಜಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಜೀರಿಗೆ ನೀರು ಉತ್ತಮ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
