ಪಂಚಭೂತಗಳನ್ನು ಪ್ರತಿನಿಧಿಸುವ ಶಿವ ದೇವಾಲಯಗಳು
ಪಂಚಭೂತ ದೇವಾಲಯ ಸ್ಥಳಗಳು ಶಿವನಿಗೆ ಅರ್ಪಿತವಾಗಿವೆ. ಪಂಚ ಎಂದರೆ ಐದು.ಭೂತ ಎಂದರೆ ಮೂಲಧಾತು. ಪಂಚಭೂತಗಳು ಇಂತಿವೆ. ಪೃಥ್ವಿ, ಜಲ, ಅಗ್ನಿ,ವಾಯು ಮತ್ತು ಆಕಾಶ. ಈ ಸ್ಥಳಗಳು ದಕ್ಷಿಣ ಭಾರತದಲ್ಲಿ ಭಾರೀ ಪ್ರಾಮುಖ್ಯತೆಯನ್ನು ಪಡೆದಿವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.
ಏಕಾಂಬರೇಶ್ವರ :
ಈ ದೇವಾಲಯವು ತಮಿಳುನಾಡಿನ ಕಾಂಚೀಪುರಂನಲ್ಲಿದೆ. ಇಲ್ಲಿನ ಮಖ್ಯ ಮೂರ್ತಿ ಏಕಾಂಬರೇಶ್ವರ. ಇಲ್ಲಿರುವ ಶಿವಲಿಂಗವು ಭೂ ತತ್ವವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಆ ಶಿವಲಿಂಗವು ಪೃಥ್ವಿ ಲಿಂಗ ಎಂದೇ ಪ್ರಸಿದ್ಧಿ ಪಡೆದಿದೆ.
ಜಂಬುಕೇಶ್ವರ:
ಎರಡನೆಯದು ತಿರುವನೈಕದಲ್ಲಿರುವ ಜಂಬುಕೇಶ್ವರ. ಈ ದೇವಾಲಯವು ಶಿವ ಪಾರ್ವತಿಯರಿಗೆ ಅರ್ಪಿತವಾಗಿದೆ. ಇಲ್ಲಿನ ಶಿವಲಿಂಗ ಜಲ ತತ್ವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಶಿವನನ್ನು ಜಂಬುಕೇಶ್ವರನೆಂದೂ ಪಾರ್ವತಿದೇವಿಯನ್ನು ಅಖಿಲಾಂಡೇಶ್ವರಿಯೆಂದು ಆರಾಧಿಸುತ್ತಾರೆ.
ಅಣ್ಣಾಮಲೈ:
ಮೂರನೆಯದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಶಿವಲಿಂಗ. ಇದು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಶಿವನು ತನ್ನ ಭಕ್ತರನ್ನು ಹರಸಲು ಅರ್ಧನಾರೀಶ್ವರನ ರೂಪದಲ್ಲಿ ಪ್ರತ್ಯಕ್ಷನಾಗಿದ್ದನು ಎಂಬ ಪ್ರತೀತಿಯಿದೆ.
ಕಾಳಹಸ್ತೀಶ್ವರ:
ನಾಲ್ಕನೆಯದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀ ಕಾಳಹಸ್ತೀಶ್ವರ. ಇಲ್ಲಿರುವ ಶಿವಲಿಂಗವು ವಾಯು ತತ್ವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಶಿವನನ್ನು ಕಾಳಹಸ್ತೀಶ್ವರನಾಗಿಯೂ, ಪಾರ್ವತಿಯನ್ನು ಜ್ಞಾನಪ್ರಸೂನಾಂವಬಿಕೆಯೆಂದೂ ಆರಾಧಿಸುತ್ತಾರೆ.
ಚಿದಂಬರಂ:
ತಮಿಳುನಾಡಿನ ಚಿದಂಬರಂನಲ್ಲಿ ಶಿವನು ಅಲೌಕಿಕ ನಾಟ್ಯ ವಿಶಾರದ ನಟರಾಜನ ರೂಪದಲ್ಲಿದ್ದು ಆಕಾಶ ತತ್ವವನ್ನು ಪ್ರತಿನಿಧಿಸುತ್ತಾನೆ. ಈ ದೇವಾಲಯವು ಶಿವ-ವಿಷ್ಣು ಇಬ್ಬರಿಗೂ ಅರ್ಪಿತವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
