ಕಣ್ಣಿದ್ದು ಕುರುಡಾಗಿರುವ ಈ ಪ್ರಪಂಚದಲ್ಲಿ ತನ್ನ ಅಂಗವೈಕಲ್ಯ ಮೀರಿ ಐಎಎಸ್ ಆಫೀಸರ್ ಆದವಳ ಕಥೆ..
ಕಣ್ಣಿದ್ದು ಕುರುಡಾಗಿರುವ ಈ ಪ್ರಪಂಚದಲ್ಲಿ ,ಕಣ್ಣಿಲ್ಲದೆಯೇ ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಐ.ಎ.ಎಸ್ ಪಾಸ್ ಮಾಡಿದ ಕಥೆ ..
ಪ್ರಾಂಜಲ್ ಪಟೇಲ್ ಆರು ವರ್ಷದ ಬಾಲಕಿಯಾಗಿದ್ದಾಗ ತನ್ನ ಸ್ನೇಹಿತೆಯೊಬ್ಬಳು ಪೆನ್ಸಿಲ್ ನಿಂದ ಕಣ್ಣಿಗೆ ಚುಚ್ಚಿದ ಪರಿಣಾಮ ಒಂದು ಕಣ್ಣು ಕಳೆದುಕೊಂಡ ನತದೃಷ್ಟೆ ಆನಂತರ ಮೆಡಿಸಿನ್ ಗಳ ಅಡ್ಡ ಪರಿಣಾಮಗಳ ಕಾರಣ ಇದ್ದ ಇನ್ನೊಂದು ಕಣ್ಣನ್ನು ಕಳೆದುಕೊಂಡಳು.
ಹತ್ತನೇ ತರಗತಿಯ ವರೆಗೂ ಅಂಧರ ಶಾಲೆಯಲ್ಲಿ ಓದಿದ ಪ್ರಾಂಜಲ್ ತನ್ನ ಭವಿಷ್ಯದ ಬಗ್ಗೆಯಾಗಲಿ ,ಇನ್ನುವುದರ ಬಗ್ಗೆಯೂ ಚಿಂತೆ ಪಡಲಿಲ್ಲ .
ಹೀಗೆ ಇರುವಾಗ ತನ್ನ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಮುಂಬೈ ಹೊರವಲಯದಲ್ಲಿರುವ ಥಾಣೆ ಜಿಲ್ಲೆಯ ಉಲ್ಹಸ್ನಗರದಲ್ಲಿನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪ್ರವೇಶ ಪಡೆದಳು , ತನ್ನ ಮನೆಯಿಂದ ಒಂದು ಗಂಟೆ ಹತ್ತು ನಿಮಿಷ ದೂರವಿತ್ತು ಹೀಗೆ ಇರುವಾಗ ಕಾಲೇಜು ನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಎಷ್ಟೋ ಮಂದಿ ಇದ್ದರು , ಅವರ ಇಂಗ್ಲಿಷ್ ಭಾಷೆ ಇವಳಿಗೆ ಅರ್ಥವಾಗುತ್ತಿರಲಿಲ್ಲ.
ಆಕೆಯ ಸಹ-ಪ್ರಯಾಣಿಕರು ಆಕೆಗೆ, “ಯಾರಾದರೊಬ್ಬರು ನಿಮ್ಮೊಂದಿಗೆ ಯಾಕೆ ಜೊತೆಯಲ್ಲಿ ಬರುವುದಿಲ್ಲ ?” . “ಯಾರಾದರೊಬ್ಬರು ನಿಮಗಾಗಿ ದೈನಂದಿನ ಕೆಲಸ ಮಾಡಲು ನೀವು ಕಂಡುಕೊಳ್ಳುತ್ತೀರಾ?” , “ನೀವು ಸಮೀಪದ ಕಾಲೇಜಿನಲ್ಲಿ ಪ್ರವೇಶವನ್ನು ತೆಗೆದುಕೊಳ್ಳುತ್ತೀರಾ? ” ಈ ರೀತಿಯ ಪ್ರಶ್ನೆಗಳು ಪದೇ ಪದೇ ಕೇಳಿ ಆಕೆಯನ್ನು ಕಂಗಾಲು ಮಾಡಿದ್ದವು ಅಂಗವೈಕಲ್ಯ ಹೊಂದಿರುವ ವ್ಯಕ್ತಿಯು ದೊಡ್ಡದಾಗಿ ಕನಸು ಕಾಣಬಹುದೆಂದು ಅಂದುಕೊಳ್ಳುವ ಯಾವ ವಿಷಯವು ಆಕೆಯ ಜೀವನದಲ್ಲಿ ನಡೆಯಲಿಲ್ಲ.
ಇತರರ ನೋಟ್ಸ್ ಬರೆದುತಂದು ತಾಯಿಗೆ ನೀಡಿ , ತಾಯಿಯವರು ಅದನ್ನು ಗಟ್ಟಿಯಾಗಿ ಓದಿ ಹೇಳುತ್ತಿದ್ದರು ಇದನ್ನು ಮತ್ತೆ ನೆನಪಿಟ್ಟುಕೊಂಡು ಅಭ್ಯಾಡ್ಸ ಮಾಡುವುದು ಪ್ರಾಂಜಲ್ ಳ ನಿತ್ಯ ಕಾಯಕವಾಗಿತ್ತು , ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆದರು ಆಕೆಯ ವಿವಾಹ 2014 ರಲ್ಲಿ ನಡೆಯಿತು. ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗಬೇಕೆಂಬ ನಿರ್ಧಾರಕ್ಕೆ ಬಂದರು
2016 ರಲ್ಲಿ 773 ನೇ ರಾಂಕಿಂಗ್ ನಲ್ಲಿ ಪಾಸ್ ಆದರೂ ರೈಲ್ವೇ ಸೇವೆಗಳಿಗೆ ನೇಮಕಗೊಂಡಿದ್ದರು ಆದರೆ ಇಲಾಖೆಯು 100 ರಷ್ಟು ದೃಷ್ಟಿಹೀನತೆ ಹೊಂದಿದ್ದ ಕಾರಣ ಈ ಕೆಲಸಕ್ಕೆ ಅನರ್ಹ ಎಂದು ಪರಿಗಣಿಸಿತು.
ಈ ವರ್ಷ 124 ನೇ ರಾಂಕಿಂಗ್ ನಲ್ಲಿ ಪಾಸ್ ಆಗಿ ಐಎಎಸ್ ಸೇವೆಗೆ ಆಯ್ಕೆ ಯಾದರು ಅದಕ್ಕೆ ಹೇಳುವುದು ಆಗುವುದೆಲ್ಲ ಒಳ್ಳೆಯದಕ್ಕೆ ಅಂತ .
ದೇಹಕ್ಕೆ ಅಂಗ ವೈಕಲ್ಯ ಇರಬಹುದು ಆದರೆ ಮನಸಿಗೆ ಆ ಅಂಗ ವೈಕಲ್ಯ ಬರಬಾರದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
