ದೇವರ ಪೂಜೆ ,ಮಂತ್ರ ಪಠನೆ ಮಾಡೋವಾಗ ಈ ವಿಷಯಗಳು ನೆನಪಲ್ಲಿ ಇರ್ಬೇಕು ಅನ್ನುತ್ತೆ ಶಾಸ್ತ್ರ..
ಮಂತ್ರದ ಶುದ್ಧಾರ್ಥ ಮನನ ಮಾಡುವುದು ಎಂಬುದು. ಮನನ ಎಂದರೆ ನಮ್ಮ ಆಲೋಚನೆಗಳು ಹಾಗು ಅವುಗಳ ಪ್ರತಿಫಲನಾ ಶಕ್ತಿ. ಮಂತ್ರವನ್ನು ಪಠಿಸುವಾಗ ಶುದ್ಧವಾದ ಉಚ್ಛಾರವರಬೇಕು ಇದರ ರೀತಿಯನ್ನು ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿದ್ದಾರೆ. ಮಂತ್ರೋಚ್ಛಾರಣೆಯ ಶಬ್ದದಿಂದ ಉಂಟಾಗುವ ಅಂಶಸ್ವರದ ಕಂಪನವು ಸಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಈ ಕಂಪನಾಂಶವು ಬ್ರಹ್ಮಾಂಡದಲ್ಲಿ ಸೇರಿ ಪ್ರತಿಧ್ವನಿಸಿದಾಗ ಆ ಸಕಾರಾತ್ಮಕ ಶಕ್ತಿ ನಮ್ಮಲ್ಲಿ ಸೇರ್ಪಡೆಯಾಗುತ್ತದೆ. ಇದನ್ನೇ ಮಂತ್ರ ಸಿದ್ಧಿ ಎನ್ನುತ್ತಾರೆ. ನಾವು ಈಗ ಯಾವುದೇ ಮಂತ್ರವನ್ನು ಸಿದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.
1. ಆಸನ ಸ್ಥಿತಿ: ಮಂತ್ರ ಉಚ್ಛಾರ ಮಾಡುವಾಗ ನಮ್ಮ ಆಸನ ಸ್ಥಿತಿ ಬಹಳ ಮುಖ್ಯವಾಗುತ್ತದೆ. ಸ್ಥಿರವಾಗಿ ಪದ್ಮಾಸನ ಹಾಕಿ ಕುಳಿತು ಶ್ರದ್ಧೆಯಿಂದ ಪಠಣ ಮಾಡುವುದು ಉತ್ತಮ. ಇದಲ್ಲದೇ ವೀರಾಸನ, ವಜ್ರಾಸನ ಹಾಗೂ ಸಿದ್ಧಾಸನವೂ ಸೂಕ್ತವೆಂದು ಪರಿಗಣಿಸಲಾಗಿದೆ.
2. ಸೂಕ್ತವಾದ ಸಮಯ: ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತ ಮಂತ್ರ ಜಪಕ್ಕೆ ಅತ್ಯಂತ ಸೂಕ್ತ. ಅಂದರೆ ಬೆಳಗಿನ ಜಾವ 4 ರಿಂದ 5 ಸೂರ್ಯೋದಯದ ಮುನ್ನ. ಸಾಯಂಕಾಲ ಹಾಗೂ ರಾತ್ರಿಯಲ್ಲಿ ಮಂತ್ರ ಸಿದ್ಧಿಗಾಗಿ ಜಪಿಸಬಾರದು. ಬ್ರಾಹ್ಮೀ ಮುಹೂರ್ತದಲ್ಲಿ ಸಾಧ್ಯವಾಗದಿದ್ದಲ್ಲಿ ಮಲಗುವ ಮುನ್ನ ಮಾಡಬಹುದು.
3. ಕಾಲ ಮತ್ತು ಸ್ಥಳ : ಇದು ದಿನನಿತ್ಯದ ಕಾರ್ಯದಲ್ಲಿ ಒಂದಾಗಬೇಕು. ಸಮಯ ಮತ್ತು ಸ್ಥಳ ಬದಲಾವಣೆ ಮಾಡಬಾರದು.
4. ಜಪಮಾಲೆ: ನಿಮ್ಮ ಜಪಮಾಲೆಯನ್ನು ಎಲ್ಲರಿಗೂ ತೋರಿಸಬಾರದು. ಜಪಮಾಲೆಯನ್ನು ನೆಲಕ್ಕೆ ತಾಕದಂತೆ ನೋಡಿಕೊಳ್ಳಬೇಕು.
5. ಜಪಮಣಿ: ಗಂಧದ ಜಪಮಣಿ ಅಥವಾ ರುದ್ರಾಕ್ಷಿಯ ಜಪಮಾಲೆ ಶ್ರೇಷ್ಠ. ನಿತ್ಯ 108 ಬಾರಿ ಮಂತ್ರವನ್ನು ಸ್ಪಷ್ಟವಾಗಿ ಉಚ್ಛಾರ ಮಾಡಬೇಕು.
6. ದಿಕ್ಕು: ನೀವು ಬೆಳಿಗ್ಗೆ ಸಾಧನೆ ಮಾಡುವುದಾದರೆ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವುದು ಉತ್ತಮ. ರಾತ್ರಿಯಲ್ಲಿಯಾದರೆ ಉತ್ತರಾಭಿಮುಖವಾಗಿ ಕೂರಬೇಕು. ನೀವು ಪ್ರಶಾಂತ ಸ್ಥಳವನ್ನು ಆರಿಸಿಕೊಳ್ಳಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
