ಕೌರವ- ಪಾಂಡವ ರಾಜಕುಮಾರರ ಶಸ್ತ್ರಾಸ್ತ್ರ ಪರೀಕ್ಷೆ, ಕರ್ಣನು ಅಂಗರಾಜದ ರಾಜನಾದ ಕಥೆ.
ಕೌರವ ಪಾಂಡವರು ಅಶ್ವತ್ಥಾಮನು ದ್ರೋಣಾಚಾರ್ಯರ ಬಳಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು.ಅರ್ಜುನನು ಬಿಲ್ವಿದ್ಯೆಯಲ್ಲಿ ಪರಿಣಿತನಾದರೆ ಭೀಮ ದುರ್ಯೋಧನ ಗದಾಯುದ್ಧದಲ್ಲಿ ನಿಪುಣರಾದರು. ಧರ್ಮ ರಾಜನು ರಥದಲ್ಲಿ ಯುದ್ಧ ಮಾಡುವುದರಲ್ಲಿ ಕುಶಲನಾದನು.ಅಶ್ವತ್ಥಾಮನು ಶಸ್ತ್ರ ವಿದ್ಯೆಯಲ್ಲಿ ನಿಪುಣನಾದನು. ನಕುಲ ಮತ್ತು ಸಹದೇವರು ಖಡ್ಗಯುದ್ಧದಲ್ಲಿ ಕುಶಲತೆಯನ್ನು ಸಾಧಿಸಿದರು. ಅರ್ಜುನನ ಹೆಸರು ದೇಶ ವಿದೇಶಗಳಲ್ಲಿ ಪ್ರಖ್ಯಾತವಾಯಿತು.
ಒಮ್ಮೆ ದ್ರೋಣಾಚಾರ್ಯರು ದೊಡ್ಡ ಮರದ ಮೇಲೆ ಕೃತಕವಾದ ಪಕ್ಷಿಯನ್ನಿಟ್ಟು ಒಬ್ಬೊಬ್ಬರನ್ನಾಗಿ ಕರೆದು ಏನು ಕಾಣುವುದು ಎಂದು ಕೇಳಿದರು. ಕೃತಕ ಪಕ್ಷಿಯ ತಲೆ ಕತ್ತರಿಸಬೇಕೆಂದರು.ಶಿಷ್ಯರೆಲ್ಲರೂ ಪ್ರಯತ್ನಿಸಿದರೂ. ಯುಧಿಷ್ಠಿರನು ಮರಹಕ್ಕಿ ನೀವು ಎಲ್ಲರೂ ಕಾಣುತ್ತಿದ್ದೀರಿ. ನಕುಲ, ಸಹದೇವ, ದುರ್ಯೋಧನ, ದುಶ್ಯಾಸನ, ಹೀಗೆ ಎಲ್ಲರೂ ಬಂದು ಪ್ರಯತ್ನಿಸಿದರೂ ಅವರು ಹಕ್ಕಿಯನ್ನು ಕತ್ತರಿಸಿ ಬೀಳಿಸಲಿಲ್ಲ.
ಕೊನೆಗೆ ಉಳಿದ ಅರ್ಜುನನನ್ನು ಕರೆದಾಗ ಅವನು ನೋಡಿ ಕೇವಲ ಹಕ್ಕಿಯ ಕುತ್ತಿಗೆ ಮಾತ್ರ ಕಾಣುತ್ತಿದೆ ಎಂದನು.ಬಾಣ ಬಿಡು ಎಂದರು.ಗುರುಗಳು ಅರ್ಜುನನ ಬಾಣ ಹಕ್ಕಿಯ ತಲೆ ಕತ್ತರಿಸಿತು.ಲಕ್ಷ್ಯವೆಂದರೆ ಹೀಗಿರಬೇಕು ಎಂದರು.ದ್ರೋಣರು ಉಳಿದ ರಾಜಕುಮಾರರು ಸಹ ಅರ್ಜುನನನ್ನು ಅಭಿನಂದಿಸಿದರು.
ಇನ್ನೊಮ್ಮೆ ದ್ರೋಣಾಚಾರ್ಯರು ನೀರಿನಲ್ಲಿದ್ದಾಗ ಮೊಸಳೆಯೊಂದು ಅವರ ಕಾಲನ್ನು ಹಿಡಿಯಿತು.ಆಗ ಅವರು ಅರ್ಜುನನಿಗೆ ಮೊಸಳೆಯಿಂದ ಬಿಡಿಸಲು ಹೇಳಿದರು.ಆಗ ಅರ್ಜುನನು ಐದು ಬಾಣಗಳನ್ನು ಬಿಟ್ಟನು.ಮೊಸಳೆ ಚೂರು ಚೂರಾಯಿತು.ರಾಜಕುಮಾರರಿಗೆ ಅತ್ಯಂತ ಆಶ್ಚರ್ಯವಾಯಿತು. ದ್ರೋಣರು ಪ್ರೀತಿಯಿಂದ ಬ್ರಹ್ಮ ಶಿರವೆಂಬ ಅಸ್ತ್ರವನ್ನು ಕೊಟ್ಟರು.
ಭೀಮನನ್ನು ಕಂಡರೆ ದುರ್ಯೋಧನನಿಗೆ ಆಗಿ ಬರುತ್ತಿರಲಿಲ್ಲ. ಈಗ ಅರ್ಜುನನ ಹಿರಿಯ ಕಂಡಾಗ ಇನ್ನಷ್ಟು ಅಸುಯೇ ಪಟ್ಟನು.ದುರ್ಯೋಧನನು ಪಾಂಡವರನ್ನು ಶತ್ರುಗಳೆಂದೇ ಭಾವಿಸಿದನು.ದ್ರೋಣಾಚಾರ್ಯರಿಂದ ಕಲಿತ ವಿದ್ಯಾ ಪ್ರದರ್ಶನಕ್ಕೆ ಭೀಷ್ಮಾಚಾರ್ಯರು ಬಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ವಿಶಾಲವಾದ ಭಯಲಿನಲ್ಲಿ ಆಸನ ವ್ಯವಸ್ಥೆ ವಿವಿಧ ಶಸ್ತ್ರಾಸ್ತ್ರಗಳು ಲಕ್ಷ್ಯಗಳು ಎಲ್ಲವನ್ನು ಸಂಗ್ರಹಿಸಿದರು.ಈ ಪ್ರದರ್ಶನವನ್ನು ನೋಡಲು ಪ್ರಜೆಗಳಿಗೂ ಸಹ ಅವಕಾಶ ಕಲ್ಪಿಸಲಾಯಿತು. ಸೂಕ್ತವಾದಂತಹ ವ್ಯವಸ್ಥೆ ಆದ ನಂತರ ಎಲ್ಲರೂ ಆ ದಿನವನ್ನು ಕುತೂಹಲದಿಂದ ನಿರೀಕ್ಷೆ ಮಾಡುತ್ತಿದ್ದರು.
ಶಸ್ತ್ರ ಪರೀಕ್ಷೆಯ ದಿವಸ ಭೀಷ್ಮ, ದ್ರೋಣರಲ್ಲದೇ,ಕೃಪಾ,ದೃತರಾಷ್ಟ್ರ , ಗಾಂಧಾರಿ,ವಿದುರ ,ಕುಂತಿ ಅಲ್ಲಿಗೆ ಬಂದರು.ದೃತರಾಷ್ಟ್ರನಿಗೆ ವಿದುರನು ಎಲ್ಲಾ ಘಟನೆಗಳನ್ನು ವಿವರಿಸುತ್ತಿದ್ದನು.ಗಾಂಧಾರಿಗೆ ಕುಂತಿ ಹೇಳುತ್ತಿದ್ದಳು.ಮೊದಲು ದ್ರೋಣಾಚಾರ್ಯರು ಅಶ್ವತ್ಥಾಮನೊಡನೆ ರಂಗವನ್ನು ಏರಿದಾಗ ಮಂಗಳವಾದ್ಯಗಳನ್ನು ಮೊಳಗಿಸಿದರು.ಕತ್ತಿ, ಬಿಲ್ಲು,ಬಾಣ,ಗದೆ,ಗುರಾಣಿ,ಈಟಿ, ಮುಂತಾದ ಆಯುಧಗಳನ್ನು ತಂದಿರಿಸಿದರು.ದ್ರೋಣಾಚಾರ್ಯರು ಹಿರಿಯರನ್ನು ವಂದಿಸಿ ಎಲ್ಲರಿಗೂ ಶಾಸ್ತ್ರಾಸ್ತ್ರ ಪರೀಕ್ಷೆಯ ಬಗೆಗೆ ತಿಳಿಸಿದರು.
ಅನಂತರ ಒಬ್ಬೊಬ್ಬರಾಗಿ ಬಂದು ತಾವು ಕಲಿತಿರುವುದನ್ನು ತೋರಿಸಲು ಹೇಳಿದರು.ಮೊದಲು ರಾಜಕುಮಾರರು ರಥಗಳನ್ನು ಏರಿ ಬಾಣ ಪ್ರಯೋಗ ಮಾಡಿದರು.ಅಶ್ವಾರೋಹಣ, ಗಜಾರೋಹಣ, ರಾಥಾರೋಹಣಗಳನ್ನು ತೋರಿಸಿದರು.ಖಡ್ಗಯುದ್ದ,ಏಕಕಾಲದಲ್ಲಿ ಅನೇಕ ಆಯುಧ ಹಿಡಿದು ಯುದ್ಧ ಮಾಡುವುದು ಇನ್ನು ಅನೇಕ ಚಮತ್ಕಾರಗಳನ್ನು ತೋರಿಸಿದರು.
ಅನಂತರದಲ್ಲಿ ದ್ವಂದ್ವಯುದ್ದವನ್ನು ಪ್ರದರ್ಶಿಸಿದರು. ದುರ್ಯೋಧನರ ಗದಾಯುದ್ದ ಆರಂಭವಾದಾಗ ಮದಗಜಗಳಂತೆ ಹೋರಾಡಿ ತೋರಿಸಿದರು.ಯಾರು ಗೆಲ್ಲುತ್ತಾರೆಂದು ನೋಡುವ ಕುತೂಹಲ ಜನರಿಗೆ ಇತ್ತು.ಕೆಲವರು ಭೀಮನಿಗೆ ಜಯಕಾರ ಹಾಕಿದರೆ ಕೆಲವರು ದುರ್ಯೋಧನನಿಗೆ ಜಯವಾಗಲಿ ಎಂದರು.ಅವರ ಯುದ್ದವು ವಿರಸದ ಹಂತ ತಲುಪಬಹುದು ಎಂದು ಊಹಿಸಿದ ದ್ರೋಣರು ನಿಲ್ಲಿಸಲು ಆದೇಶ ಮಾಡಿದರು.
ಗದಾಯುದ್ಧದ ನಂತರದಲ್ಲಿ ಅರ್ಜುನನ ಸರದಿ. ಅವನು ಬಿಲ್ಲು ಬಾಣಗಳೊಂದಿಗೆ ರಂಗವನ್ನೇರಿದನು. ಹಿರಿಯರೆಲ್ಲರಿಗೂ ವಂದಿಸಿದನು.ಜನರಿಗೂ ಸಹ ವಂದಿಸಿ ಬಿಲ್ವಿದ್ಯಾ ಕೌಶಲ್ಯವನ್ನು ತೋರಿಸಿದನು.ಮೊದಲು ಆಗ್ನೇಯಾಸ್ತ್ರದಿಂದ ಅಗ್ನಿಯನ್ನು ಹೊತ್ತಿಸಿದನು. ವರುಣಾಸ್ತ್ರದಿಂದ ಮಳೆ ತರಿಸಿದನು.ವಾಯುವ್ಯಾಸ್ತ್ರದಿಂದ ಗಾಳಿ ಬೀಸುವಂತೆ ಮಾಡಿದನು.ನೆಲದಲ್ಲಿ ರಥದಲ್ಲಿ ನೆಡೆದು ಕುದುರೆ ಮೇಲೆ ಕುಳಿತು ಬಾಣಗಳನ್ನು ಬಿಟ್ಟು ತೋರಿಸಿದನು. ವೃತ್ತಾಕಾರಾದಲ್ಲಿ ಸುತ್ತುತ್ತಿದ್ದ ಲೋಹದ ಹಂದಿಯ ಬಾಯಿಗೆ ಏಳು ಬಾಣಗಳನ್ನು ಹೊಡೆದನು.ಎಲ್ಲರೂ ಅತ್ಯಂತ ಸಂತಸದಿಂದ ಕರತಾಡನ ಮಾಡಿದರು. ಪ್ರದರ್ಶನ ಮುಗಿಯಿತೆಂದು ತಿಳಿದರು ಜನರು.
ಆಗ ಮಹಾದ್ವಾರದ ಕಡೆಯಿಂದ ಜನ್ಮದಿಂದಲೂ ಕವಚ ಕುಂಡಲ ದಾರಿಯಾದ ಕರ್ಣನು ಬರಲಾರಂಭಿಸಿದ್ದನು. ಇವನಾರು ? ಎಂದು ಜನರು ಮಾತಾಡಿಕೊಂಡರು.ಅವನು ರಂಗಮಂಟಪಕ್ಕೆ ಬಂದು ನೇರವಾಗಿ “ ಅರ್ಜುನ, ನೀನು ಮಾಡಿ ತೋರಿಸುದ್ದನ್ನೆಲ್ಲಾ ನಾನು ಮಾಡಿ ತೋರಿಸುತ್ತೇನೆ” ಎಂದನು.ತನ್ನ ಪರಾಕ್ರಮವನ್ನೇ ತೀರಿಸಲು ಆರಂಭಿಸಿದನು.ಜನರು ಮೆಚ್ಚಿ ಗೌರವ ಸೂಚಿಸಿದರು.
ಕರ್ಣನು ಅರ್ಜುನನನ್ನು ದ್ವಂದ್ವ ಯುದ್ಧಕ್ಕೆ ಕರೆದನು.ಇಬ್ಬರೂ ಬಿಲ್ಲು ಹಿಡಿದು ಯುದ್ದವನ್ನು ಆರಂಭಿಸಿದಾಗ ಕುಂತಿಯು ಅವರನ್ನು ಕಂಡು ಮೂರ್ಛೆ ಹೋದಳು.ಕುಂತಿಗೆ ಅವನು ತನ್ನ ಮಗ ಕರ್ಣನೇ ಎಂದು ಅರಿವಾಗಿತ್ತು.ಆದರೆ ಉಳಿದವರಿಗೆ ತಿಳಿದಿರಲಿಲ್ಲ.
ಆಗ ಕೃಪಾಚಾರ್ಯರು ಮುಂದೆ ಬಂದು ನೀನು ಯಾರು ? ಯಾರ ಮಗ ? ಯಾವ ರಾಜ ಮನೆತನದವನು ? ಈ ಸಮಯದಲ್ಲಿ ಅರ್ಜುನನು ಕೇವಲ ರಾಜಕುಮಾರರೊಂದಿಗೆ ಮಾತ್ರ ದ್ವಂದ್ವಯುದ್ಧ ಮಾಡುತ್ತಾನೆ ಎಂದಾಗ ಕರ್ಣನಿಗೆ ತಾನು ಸೂತಪುತ್ರ ಎಂದು ಹೇಳಲು ನಾಚಿಕೆಯಾಯಿತು. ನಾನು ಸೂತ ಪುತ್ರ ಕರ್ಣ ಎಂದು ಹೇಳಿ ಕೆಳಗಿಳಿದನು.
ಆಗ ದುರ್ಯೋಧನನು ಅಲ್ಲಿಗೆ ಬಂದು ಕರ್ಣ,ವೀರ,ನೀನು ದುಃಖಿಸಬೇಡ , ನಿನ್ನನ್ನು ಈಗಲೇ ರಾಜನನ್ನಾಗಿಸುತ್ತೇನೆ ಎಂದು ಸಕಲ ರಾಜ್ಯಾಭಿಷೇಕದ ಸಾಮಾಗ್ರಿಗಳನ್ನು ತರಿಸಿ ಅಂಗರಾಜ್ಯದ ಅಧಿಪತಿಯನ್ನಾಗಿಸಿದನು. ದುರ್ಯೋಧನನ ಸ್ನೇಹ ಗೌರವ ಕರ್ಣನ ನೋವನ್ನು ಕಡಿಮೆ ಮಾಡಿತು. ಕೌರವೇಶ್ವರ, ನಾನು ನಿನ್ನ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದನು. ಅಂದಿನಿಂದ ಕರ್ಣ,ದುರ್ಯೋಧನರು ಪ್ರಾಣ ಮಿತ್ರರಾದರು.ಕರ್ಣನು ಸಿಂಹಾಸನದಿಂದ ಇಳಿದು ಬಂದು ಮಿತ್ರ ದುರ್ಯೋಧನನನ್ನು ಅಪ್ಪಿಕೊಂಡು ಸಂತಸಪಟ್ಟನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
