fbpx
ದೇವರು

ಮಾಡಿದ ತಪ್ಪು ದೇವರಾದ ಕೃಷ್ಣನ್ನೇ ಬಿಟ್ಟಿಲ್ಲ ನಾವು ಮನುಷ್ಯರು ಯಾವ ಲೆಕ್ಕ ? ನಿನ್ನ ವಂಶ ನಿರ್ವಂಶವಾಗಲಿ ಅಂತ ಗಾಂಧಾರಿ ಕೂಡ ಶಾಪ ಹಾಕಿದ್ಲು..

ಶ್ರೀಕೃಷ್ಣಾವತಾರದ ಪರಿಸಮಾಪ್ತಿ ಗೊತ್ತಾ?

ಇಡೀ ಬ್ರಹ್ಮಾಂಡವನ್ನೇ ತನ್ನ ಬೆರಳ ತುದಿಯಿಂದ ಕುಣಿಸುವ ಶ್ರೀ ಕೃಷ್ಣ ಕೂಡಾ ಅಂತ್ಯ ಕಂಡಿದ್ದಾನೆ. ಪರಮ ಪತಿವೃತೆ ಗಾಂಧಾರಿ ಶಾಪಕ್ಕೆ ಕೃಷ್ಣ ತುತ್ತಾಗಿ ಅಂತ್ಯ ಕಾಲದಲ್ಲಿ ಬಹಳ ಸಂಕಷ್ಟ ಎದುರಿಸಿದ್ದಾನೆ. ತನ್ನ ನೂರು ಮಕ್ಕಳ ಸಾವಿನಿಂದ ದುಃಖಿತಳಾಗಿ ಗಾಂಧಾರಿಯು ಸಂಪೂರ್ಣ ರಕ್ತಪಾತಕ್ಕೆ ಶ್ರೀ ಕೃಷ್ಣನನ್ನು ಆರೋಪಿಸಿದಳು. ಶ್ರೀ ಕೃಷ್ಣನು ಸ್ವತಃ ದೇವರಾಗಿದ್ದರಿಂದ ಕುರು ಕ್ಷೇತ್ರಯುದ್ಧವನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತೆಂದು ಗಾಂಧಾರಿಯು ಹೇಳಿದಳು. ಆದರೆ ಅವನು ಸಹೋದರರು ಒಬ್ಬರೊನ್ನೊಬ್ಬರು ಪರಸ್ಪರ ಕೊಲ್ಲಲು ಅವಕಾಶ ಮಾಡಿದನು.

ಹಾಗಾಗಿ, ಗಾಂಧಾರಿಯು ಕೃಷ್ಣನಿಗೆ ಯಾದವ ಕುಲವೂ ಕೂಡ ಕುರುವಂಶವು ನಾಶವಾದ ರೀತಿಯಲ್ಲಿ ನಾಶವಾಗಿಹೋಗಲಿ ಎಂದು ಶಪಿಸಿದಳು. ಯಾದವ ಕುಲದಲ್ಲಿಯೂ ಸಹೋದರರು ಪರಸ್ಪರ ಕೊಂದು ಕೃಷ್ಣನ ರಾಜ್ಯವು ಅಂತ್ಯವಾಗಲಿಯೆಂದು ಹೇಳಿದಳು. ಹಾಗೆಯೇ ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವನೆಂದು ಮತ್ತು ದ್ವಾರಕಾ ಪಟ್ಟಣವನ್ನು ಸಮುದ್ರವು ನುಂಗಿ ಹಾಕಲಿಯೆಂದೂ ಸಹ ಶಾಪ ಕೊಟ್ಟಳು. ಶ್ರೀ ಕೃಷ್ಣನು ಎಷ್ಟಾದರೂ ಗಾಂಧಾರಿಯು ತನ್ನ ಉತ್ಕಟ ಭಕ್ತಳೆಂದು ಮುಗುಳ್ನಗೆಯಿಂದ ಶಾಪವನ್ನು ಸ್ವೀಕರಿಸಿದನು.


ದ್ವಾರಕಾ ಪಟ್ಟಣವು ಮುಳುಗಿಹೋದದ್ದು ಶ್ರೀ ಕೃಷ್ಣನು ದ್ವಾರಕಾ ಪಟ್ಟಣವನ್ನು ಬಿಟ್ಟಮೇಲೆ ಪಟ್ಟಣವನ್ನು ಸಮುದ್ರವು ಆವರಿಸಿ ಕೊನೆಗೆ ಸಂಪೂರ್ಣವಾಗಿ ಮುಳುಗಿಹೋಯಿತು. ಆ ನೈಜ ದ್ವಾರಕಾ ಪಟ್ಟಣವು ಈಗಲೂ ಸಹ ಅರೇಬಿಯನ್ ಸಮುದ್ರದೊಳಗೆ ಅಡಗಿದೆ.


ಕೃಷ್ಣನ ಸಾವು ಕೃಷ್ಣನು ಅರಣ್ಯದೊಳಗೆ ತನ್ನ ಅಣ್ಣ ಬಲರಾಮನ ಜೊತೆ ಹೋದ ಕೆಲವು ಸಮಯದ ನಂತರ ಬಲರಾಮನು ಮೃತನಾದನು. ಕೃಷ್ಣನು ಬಹಳ ದುಃಖಿತನಾಗಿ ಒಂದು ಮರದಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನು. ಒಬ್ಬ ಬೇಡನು ದೂರದಿಂದ ಕೃಷ್ಣನ ಪಾದದಲ್ಲಿ ಕಾಣುತ್ತಿದ್ದ ಕಮಲದ ಚಿಹ್ನೆಯನ್ನು ಒಂದು ಪ್ರಾಣಿಯೆಂದು ತಪ್ಪಾಗಿ ಅರಿತುಕೊಂಡನು. ಬೇಡನು ಆ ಕಮಲದ ಮೇಲೆ ಗುರಿಯಿಟ್ಟು ಬಾಣ ಬಿಟ್ಟಾಗ ಅದು ಕೃಷ್ಣನ ಪಾದಕ್ಕೆ ಹೊಡೆಯಿತು. ತನ್ನ ತಪ್ಪು ಅರಿವಾದ ತಕ್ಷಣವೇ ಬೇಡನು ಕೃಷ್ಣನ ಬಳಿ ಬಂದು ಕ್ಷಮೆಯಾಚಿಸಿದನು.

ಶ್ರೀ ಕೃಷ್ಣನು ಇದೆಲ್ಲ ವಿಧಿನಿಯಮವೆಂದು ಹೇಳಿದನು. ಹೀಗೆ ಶ್ರೀ ಕೃಷ್ಣನು ಇಹಲೋಕವನ್ನು ತೊರೆದು ದ್ವಾಪರಯುಗದ ಅಂತ್ಯವಾಗುವಂತಾಯಿತು.
ಬೇಡನ ನಿಜವಾದ ಸ್ವರೂಪ ಪುರಾಣಗಳ ಪ್ರಕಾರ ಶ್ರೀ ಕೃಷ್ಣನನ್ನು ಕೊಂದ ಬೇಡನು ಮತ್ತೆ ಯಾರೂ ಅಲ್ಲದೆ ಬೇಡನಾಗಿ ಜನ್ಮ ತಾಳಿದ ವಾನರ ರಾಜ ವಾಲಿ. ಶ್ರೀ ಕೃಷ್ಣನ ಹಿಂದಿನ ಜನ್ಮದಲ್ಲಿ ಶ್ರೀ ರಾಮನಾಗಿ ವಾನರ ರಾಜ ವಾಲಿಯನ್ನು ಮರಗಳ ಹಿಂದೆ ನಿಂತು ಯಾವ ನಿರ್ದಿಷ್ಟ ಕಾರಣವಿಲ್ಲದೆ ಕೊಂದಿದ್ದರಿಂದ ಈ ಜನ್ಮದಲ್ಲಿ ಬೇಡನ ಜನ್ಮತಾಳಿದ ವಾಲಿಯಿಂದ ಸಾಯಬೇಕೆಂದು ಪೂರ್ವ ನಿಯೋಜಿತವಾಗಿತ್ತು.

ಹೀಗಾಗಿರುವುದನ್ನು ನೋಡಿದರೆ ಪರಮಾತ್ಮನೂ ಸಹ ಕರ್ಮ ಫಲದಿಂದ ಹೊರಗಿಲ್ಲವೆಂದು ಸ್ಪಷ್ಟವಾಗಿ ಗೋಚರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top