ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಎಲ್ಲರಿಗೂ ಮಾವು ಬಲು ಪ್ರಿಯ.ಭಾರತದ ರಾಷ್ಟ್ರೀಯ ಹಣ್ಣೆಂದು ಹೆಸರು ಪಡೆದಿದೆ. ಬಾದಾಮಿ, ರಸಪುರಿ, ತೋತಾಪುರಿ,ಮಲ್ಲಿಕಾ,ಮಲಗೋವಾ,ನೀಲಂ, ದಶಹರಿ, ಬನೇಶನ್, ಲಾಂಗ್ರ, ಸಿಂಧು, ಆಮ್ರಪಾಲಿ, ನಿಲೀಶಾನ್,ಮುಂತಾದ ಅನೇಕ ವಿಧಗಳಿವೆ.ಪ್ರತಿಯೊಂದು ತನ್ನದೇ ಆದ ರುಚಿ ಹೊಂದಿರುತ್ತದೆ.
ಔಷಧಿಯುಕ್ತ ಭಾಗಗಳು: ತೊಗಟೆ,ಎಲೆ,ಹೂ,ಹಣ್ಣು,ಬೀಜ
ಔಷಧೀಯ ಗುಣಗಳು:
೧) ಮೂಲವ್ಯಾಧಿಯಲ್ಲಿ ರಕ್ತ ಹೋಗುತ್ತಿದ್ದರೆ ತೊಗಟೆಯ ಪುಡಿಯನ್ನು ಜೇನುತುಪ್ಪದೊಂದಿಗೆ ಇಲ್ಲವೇ ತೊಗಟೆಯ ಕಷಾಯ ಮಾಡಿ ಉಪಯೋಗಿಸಬಹುದು.
೨) ಅಂಗಾಲು ಒಡೆದಿದ್ದರೆ ತೊಗಟೆಯ ಅಂಟನ್ನು ಬಿರುಕಿಗೆ ಹಚ್ಚಬೇಕು.
೩) ಬಿಳಿಮುಟ್ಟು ಅತಿಯಾಗಿ ಹೋಗುತ್ತಿದ್ದಲ್ಲಿ ತೊಗಟೆಯ ಕಷಾಯ ಸೇವನೆ ಒಳ್ಳೆಯದು.
೪) ಗಂಟಲು ನೋವಿರುವಾಗ ಎಲೆಗಳ ಕಷಾಯ ತಯಾರಿಸಿ ಕುಡಿಯಬೇಕು. ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಚಿಗುರೆಲೆಯನ್ನು ಅಗಿದು ಉಗಿಯಬೇಕು.
೫) ಅತಿಭೇದಿಯಾಗುತ್ತಿದ್ದಲ್ಲಿ ಹೂವಿನ ಕಷಾಯ ಇಲ್ಲವೇ ಒಣಗಿಸಿದ ಹೂವಿನ ಪುಡಿಯನ್ನು ಜೇನುತುಪ್ಪದೊಂದಿಗೆ ಉಪಯೋಗಿಸಬೇಕು.
೬) ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ರಾತ್ರಿ ಕುರುಡಿನಿಂದ ಬಳಲುವವರಿಗೆ ಉತ್ತಮ.
೭) ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ ಮಾವಿನಕಾಯಿ ಸಿಪ್ಪೆಯನ್ನು ತುಪ್ಪದಲ್ಲಿ ಹುರಿದು ಸೇವಿಸಬೇಕು.
೮) ಒಂದು ಬಟ್ಟಲು ಮಾವಿನ ಹಣ್ಣಿನ ರಸಕ್ಕೆ ಹಾಲು, ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆಯಲ್ಲದೆ ಬಲ, ವೀರ್ಯ ವೃದ್ಧಿಯೂ ಆಗುತ್ತದೆ.
೯)ಮಾವಿನ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಹೆಚ್ಚುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಅಧಿಕವಾಗುತ್ತದೆ.
೧೦) ಹೃದ್ರೋಗಗಳಿಂದ ಬಳಲುವವರಿಗೆ ಮಾವಿನ ಹಣ್ಣು ಒಳ್ಳೆಯದು.
೧೧) ಆಮಶಂಕೆಯಿಂದ ಬಳಲುವವರು ಮಾವಿನ ಬೀಜದ ತಿರುಳನ್ನು ಸೇವಿಸಬೇಕು.
೧೨) ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಮತ್ತು ಜಂತುಹುಳಗಳ ತೊಂದರೆ ಇರುವವರು ಬೀಜದ ತಿರುಳನ್ನು ಉಪಯೋಗಿಸಬೇಕು.
೧೩) ಹಣ್ಣುಗಳಲ್ಲಿ ಶಿಲೀಂಧ್ರ ನಿರೋಧಕ ವಸ್ತುವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
