fbpx
ಜೀವನ ಕ್ರಮ

ನೀವು ನಿಮ್ಮ ಹೆಂಡತಿ ಜಗಳ ಆಡ್ತಿರ್ತೀರಾ ? ಇದನ್ನು ಓದಿ ಪರಿಹಾರ ಕಂಡ್ಕೊಳ್ಳಿ..

ನಿಮ್ಮ ದಾಂಪತ್ಯಕ್ಕೆ ಆದ್ಯತೆ ನೀಡಿ


ನಿಷ್ಠೆಯಿಲ್ಲದ ದಾಂಪತ್ಯ ಬೇರಿಲ್ಲದ ಮರದಂತೆ. ಅಷ್ಟೇ ಅಲ್ಲದೆ, ನಿಷ್ಠೆಯೇ ನಂಬಿಕೆಗೆ ಭದ್ರ ಬುನಾದಿ. ವಿವಾಹದಲ್ಲಿ ಪ್ರೀತಿಯನ್ನು ಬಲಗೊಳಿಸಲು ಈ ನಂಬಿಕೆ ಅವಶ್ಯಕ. ಗಂಡ-ಹೆಂಡತಿ ಪ್ರಾಮಾಣಿಕರಾಗಿದ್ದರೆ, ಅವರ ಮದುವೆ ಜೀವನ ಚೆನ್ನಾಗಿರುತ್ತದೆ. ಅವರು ಜೀವನದ ಮುಂದಿನ ದಿನಗಳ ಬಗ್ಗೆ ಯೋಚಿಸುವಾಗ ಇಬ್ಬರೂ ಜೊತೆಯಾಗಿ, ಸಂತೋಷವಾಗಿ ಇರೋದನ್ನು ಊಹಿಸಿಕೊಳ್ಳಬಹುದು.

ನಿಮ್ಮ ಜೀವನದ ಅತಿ ಪ್ರಾಮುಖ್ಯ ವಿಷಯಗಳಲ್ಲಿ ನಿಮ್ಮ ವಿವಾಹವೂ ಒಂದು. ಆದ್ದರಿಂದ ಅದಕ್ಕೆ ಆದ್ಯತೆ ನೀಡಿ. ಸಂಗಾತಿಯನ್ನು ಎಂದಿಗೂ ಕಡೆಗಣಿಸದೆ, ನೀವಿಬ್ಬರೂ ಒಬ್ಬರನ್ನೊಬ್ಬರು ಸಂತೋಷಪಡಿಸಲು ಮಾರ್ಗಗಳನ್ನು ಹುಡುಕಿ. ನಿಮಗೆ ನಿಮ್ಮ ಸಂಗಾತಿಯ ಅಗತ್ಯವಿದೆ, ನೀವು ಅವರನ್ನು ತುಂಬಾ ಗಣ್ಯಮಾಡುತ್ತೀರಿ ಎಂದು ತೋರಿಸಿಕೊಡಿ.
ನಿಮ್ಮ ಸಂಗಾತಿಯೊಂದಿಗೆ ಮಾತಾಡಲು ಪ್ರತಿದಿನ ತಪ್ಪದೇ ಸಮಯ ಮಾಡಿಕೊಳ್ಳಿ. “ನಾನು, ನನ್ನದು” ಅಂತಲ್ಲ “ನಾವು, ನಮ್ಮದು” ಅಂತ ಯೋಚಿಸಿ.

ನಿಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಿ. ಸ್ತ್ರೀಯನ್ನು ಎಂದಿಗೂ ಮೋಹದಿಂದ ನೋಡುವುದಿಲ್ಲ ಎಂದು ತನ್ನ ಕಣ್ಣುಗಳೊಂದಿಗೆ ನಿಬಂಧನೆ ಮಾಡಿಕೊಳ್ಳಿ. ಕಾಮ ಪ್ರಚೋದಕ ಚಿತ್ರಗಳನ್ನು ಎಂದಿಗೂ ನೋಡದಿರಲು ಮತ್ತು ಸಂಗಾತಿಯಲ್ಲದೆ ಇತರರೊಂದಿಗೆ ಪ್ರಣಯಾತ್ಮಕ ಒಲವನ್ನು ಬೆಳೆಸಿಕೊಳ್ಳದಿರಲು ದೃಢಸಂಕಲ್ಪ ಮಾಡಿ.

ನಿಮ್ಮ ಸಂಗಾತಿಗೆ ನೀವು ಸಂಪೂರ್ಣ ಬದ್ಧರಾಗಿದ್ದೀರೆಂಬುದನ್ನು ಇತರರು ಗುರುತಿಸಲಿ. ನೀವು ಯಾರೊಂದಿಗಾದರೂ ಸಲಿಗೆಯಿಂದಿರುವುದು ನಿಮ್ಮ ಸಂಗಾತಿಗೆ ಇಷ್ಟವಾಗದಿದ್ದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಪರಿಗಣಿಸುತ್ತಾ ತಕ್ಷಣ ಅಂಥವರೊಂದಿಗಿನ ಸಹವಾಸ ಬಿಟ್ಟುಬಿಡಿ.

ಪ್ರಾಮಾಣಿಕತೆಯಿಂದ ಸ್ವಪರೀಕ್ಷೆ ಮಾಡಿಕೊಳ್ಳುತ್ತಾ ನಿಮ್ಮ ಬಲಹೀನತೆಗಳನ್ನು ಗುರುತಿಸಿ. ಸಹಾಯ ಕೇಳಲು ಮುಜುಗರ ಪಡಬೇಡಿ. ಅನೈತಿಕ ಯೋಚನೆಗಳು ನಿಮ್ಮ ಮನಸ್ಸಿಗೆ ಬರುವುದಾದರೆ ಅವುಗಳ ವಿರುದ್ಧ ಹೋರಾಡುತ್ತಾ ಇರಿ, ಪ್ರಯತ್ನ ಬಿಡಬೇಡಿ. ನಿಮ್ಮ ಸಂಗಾತಿಯೊಂದಿಗೆ ನಿಷ್ಠೆಯಿಂದಿರಲು ನೀವು ಹಾಕುವ ಪ್ರಯತ್ನವನ್ನು ಭಗವಂತ ಖಂಡಿತ ಆಶೀರ್ವದಿಸುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top