fbpx
ಭವಿಷ್ಯ

ಮನೆಯಲ್ಲಿರುವ ಸಾಕು ನಾಯಿ ಸತ್ತರೆ ಈ ಪರಿಹಾರಗಳನ್ನು ಮಾಡಬೇಕು..

ಮನೆಯಲ್ಲಿರುವ  ಸಾಕು ನಾಯಿ ಸತ್ತರೆ  ಮನೆಯಲ್ಲಿ ಇರುವವರಿಗೆ ಅಪಾಯ.

ಮನೆಯಲ್ಲಿ ಕೆಲವೊಂದು ವೈಪರೀತ್ಯಗಳು ಕಂಡು ಕಾಣದೆ ಇರೋ ಹಾಗೆ ನೆಡೀತಾ ಇರ್ತಾವೆ.ಯಾವಾಗ್ಲೂ ಏನಾದರೂ ಸದ್ದು ಅಂದರೆ ಪಾತ್ರೆಗಳು ತಂತಾನೆ ಬೀಳೋದು,ಮಿಕ್ಸಿ ಕೆಟ್ಟೋಯ್ತು,ಗ್ಯಾಸ್ ಖಾಲಿ ಆಯ್ತು, ವಿದ್ಯುತ್ ಉಪಕರಣಗಳಾದ ಟಿ. ವಿ, ರೇಡಿಯೋ  ಕೆಟ್ಟುಹೋದರೆ,ಪದೇ ಪದೇ ಹೀಗೆಲ್ಲಾ ಆಗ್ತಾ ಇದ್ದರೆ ಪ್ರಕೃತಿ ನಿಮ್ಮ ಜೊತೆ ಮಾತಾನಾಡುತ್ತಿದೆ,ಇದು ಅಪಾಯದ ಮುನ್ಸೂಚನೆ ಅಂತ ಅರ್ಥ.ಎಚ್ಚರಿಕೆಯಿಂದ ಇರಿ ಮುಂದಕ್ಕೆ ಅನಾಹುತಗಳು ಬರಬಹುದು ಅನ್ನೋ ಸೂಚನೆ ಕೊಡುತ್ತೆ.

ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬಹುದು,ಜೈಲು ಪಾಲ ಅಗಬಹುದು,ಮನೆ ಹತ್ತಿರ ಕುಡುಕ ಬಂದು ಗಲಾಟೆ ಮಾಡಬಹುದು,ಆತ್ಮಹತ್ಯೆ, ದೊಂಬಿ,ಕಳ್ಳತನ, ಗಲಾಟೆ,ಅಪವಾದಗಳು, ನಿಮ್ಮ ಮನೆಗೆ ಮಾರಿನೇ  ನುಗ್ಗಿ ಬರ್ತಾಳೆ.

ಪ್ರಕೃತಿ ಇದೆಲ್ಲದರ ಬಗ್ಗೆ ನಿಮಗೆ ಮೊದಲೇ ಸೂಚನೆ ಕೊಡುತ್ತೆ.ಅದಕ್ಕೆ ನಮ್ಮ ಹಿರಿಯರು ಮೊದಲೇ ಎಚ್ಚರವಾಗಿ ಇರತಿದ್ರು ಈತರಹದ ಸೂಚನೆಗಳು ಏನಾದರೂ ಬಂದ್ರೆ  ತಕ್ಷಣ ಶಾಂತಿ ಮಾಡಿಸ್ತಿದ್ರು , ಪೂಜೆ, ದೇವಿ ಕಥೆ ಓದಿಸೋದು ಹೀಗೆ ಏನಾದರೂ ಮಾಡತಿದ್ರು.

ಬೇಕಾದರೆ ನಿಮ್ಮ ಮನೆಯಲ್ಲಿ ಇರೋ ಹಿರಿಯರನ್ನು ಕೇಳಿ ನೋಡಿ ಮನೆಗೆ ಬಿದಿರು ಬೊಂಬೆ ಹೊಡೆಸೋದು,ಗಣ ಹೋಮ,ಕುದುರೆ ಲಾಳನ ಮನೆಗೆ ಒಡೆಸೋದು, ಭಜನೆ ,ವ್ರತ, ಹೋಮ , ಹವನ, ಶುಭ ಕಾರ್ಯಗಳು,ದೀಪಾರಾಧನೆ ಮಾಡಸೋದು. ಇತ್ಯಾದಿಗಳನ್ನು ಮಾಡಿಸ್ತಿದ್ರು.

ಆದ್ರೆ ಇತ್ತೀಚಿನ ಕಾಲದಲ್ಲಿ ಅವೆಲ್ಲ ಮೂಢನಂಬಿಕೆ ಅಂತ ಅಂತಾರೆ. ಯಾರು ಕೂಡ ನಮ್ಮ ಹಿರಿಯರ ಮಾತನ್ನು ಕೇಳೋದಿಲ್ಲ, ತಿರಸ್ಕರಿಸಿ ಬಿಡ್ತಾರೆ.ಆದರೆ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಏನೇ ಮಾಡಿದ್ರು ಅದಕ್ಕೊಂದು ಸೂಕ್ತ  ಕಾರಣ ಅಂತೂ ಇರ್ತಿತ್ತು.ಅವ್ರು ಯಾರು ಸುಮ್ಮನೆ ಏನೇನೋ ಹೇಳ್ತಿರಲಿಲ್ಲ.

ಈಗ 25 ವರ್ಷಕ್ಕೆ ಒಂದ ಸರಿ ಸಿಲ್ವರ್ ಜ್ಯೂಬಲಿ ಅಂತ ಮಾಡ್ತಾರೆ. ಆದರೆ ಹಿಂದಿನ ಕಾಲದಲ್ಲಿ ಷಷ್ಠಿ ಪೂರ್ತಿ ಅಂಥ ಮಾಡ್ತಿದ್ರು. ಅವರಿಗೆ ಯಾವಾಗ ,ಏನ ಮಾಡಬೇಕು ಅಂತ ಚೆನ್ನಾಗಿ ಗೊತ್ತಿತ್ತು.

ಮನೆಯಲ್ಲಿ ನೀವು ಪ್ರೀತಿಯಿಂದ  ಒಂದು ನಾಯಿ ಸಾಕಿರತೀರ ಅದು ಏನಾದರೂ ಖಾಯಿಲೆ ಬಂದು ತಕ್ಷಣ ಇದ್ದಕ್ಕಿದ್ದ ಹಾಗೆ ಸತ್ತು ಹೋದರೆ ನಿಮ್ಮ ಮನೆಗೆ ದೊಡ್ಡ ಆಘಾತ , ಗಂಡಾಂತರ ಕಾದಿದೆ ಅಂತ ಅರ್ಥ.ಯಾವುದೋ ಒಂದು ದುಷ್ಟ ಶಕ್ತಿ ನಿಮ್ಮ ಮನೆಗೆ  ನುಗ್ಗಿದೆ,ಅದರ ಆಟ  ಮಿತಿ ಮೀರಿ ಹೋಗಿದೆ.ಮನೆಯಲ್ಲಿ ಒಂದು ನಾಯಿ ಸಾಕಿದರೆ ಅದು ಸಾಕ್ಷಾತ್ ಕಾಲಭೈರವೇಶ್ವರನ ಪ್ರತಿರೂಪ.

ಆದ್ದರಿಂದಲೇ ನೀವು ಯಾವುದೇ ಉರಿನಲ್ಲಾದರು ನೋಡಿ ಒಂದು ಹನುಮಂತನ ದೇವಸ್ಥಾನ, ವೀರಭದ್ರಸ್ವಾಮಿ ದೇವಾಲಯ, ಅಥವಾ  ಕಾಲ ಭೈರವೇಶ್ವರನ ದೇವಸ್ಥಾನವನ್ನ ಆ ಗ್ರಾಮನ ದುಷ್ಟ ಶಕ್ತಿಗಳಿಂದ  ರಕ್ಷಿಸೋದಕ್ಕೆ  ನಿರ್ಮಿಸಿದ್ದಾರೆ.

ನಮ್ಮ ಹಿರಿಯರು ಏನಕ್ಕೆ ನಾಯಿ ಸಾಕ್ತಾ ಇದ್ದರೂ ಅವರ ಒಳ್ಳೆ ಸ್ಥಿತಿಯಲ್ಲಿದ್ದಾರೆ ,ದುಡ್ಡಿದೆ ಅಂತ ತೋರಿಸಿಕೊಳ್ಳೋಕೆ ಅಲ್ಲ.ನಾಯಿಗಳು ಮುಂದೆ ಆಗೋ ಅನಾಹುತನ ಮೊದಲೇ ತಿಳಿಸುತ್ತವೆ ಯಾವುದೋ ಒಂದು ದುಷ್ಟ ಶಕ್ತಿ ಮನೆಗೆ ಬರುತ್ತೆ ಎಚ್ಚರ ಅಂತ ಹೇಳತ್ತೆ.

ಯಾವುದೇ ದುಷ್ಟ ಶಕ್ತಿ ಆಗಲೀ ಮೊದಲು  ನಾಯಿಯ ಕಣ್ಣಿಗೆ ಬೇಗ ಕಾಣಸತ್ತೆ,ಮೊದಲು ದಾಳಿ ಮಾಡೋದೇ ನಾಯಿ ಮೇಲೆ.ಕೆಟ್ಟ ಶಕ್ತಿ ಆಗಲಿ,ಒಳ್ಳೆ ಶಕ್ತಿ ಆಗಲಿ ಮೊದಲು ನಾಯಿಯ ಕಣ್ಣಿಗೆ ಕಾಣಿಸೋದು.

ಯಾವುದೇ ಭೂತ,ಪ್ರೇತ,ಮಾಟ- ಮಂತ್ರ,ತಂತ್ರ ಪ್ರಯೋಗಗಳು ನೆಡೆದಿದ್ದರೆ  ಅದು ಅತೀ ಮುಖ್ಯವಾಗಿ ಮೊದಲು ಮನೆಯಲ್ಲಿರುವ ಪ್ರಾಣಿ ಪಕ್ಷಿಗಳ ಮೇಲೆ ಅದರಲ್ಲೂ ನಾಯಿಯ ಮೇಲೆ ಮೊದಲು ದಾಳಿ ಮಾಡೋದು.ಬೇಕಾದರೆ ಗಮನಿಸಿ ನೋಡಿ ನಾಯಿಗಳಿಗೆ ಬೇಗ ಗೊತ್ತಾಗತ್ತೆ.

ನಮ್ಮ ಮನೆಗೆ ದುಷ್ಟ ಶಕ್ತಿಗಳು ನುಗ್ಗಿದರೆ ಪದೇ ಪದೇ ನಾಯಿಗಳು ಖಾಯಿಲೆ ಬೀಳ್ತವೆ,ಹುಷಾರಿರಲ್ಲ,ಕಳ್ಳತನ ಆಗೋ ಸೂಚನೆ.

ವಿಪರೀತ ಖಾಯಿಲೆ ಬಂದಿದೆ ಎದ್ದೊಳೋದೇ ಇಲ್ಲ,ಮೂಲೆಯಲ್ಲಿ ಕೂತ್ಕೊಂಡ್ ಬಿಟ್ಟಿದೆ ಅಂದರೆ ಮನೆಯಲ್ಲಿ ಯಾರೋ ಹಿರಿಯರಿಗೆ ದೊಡ್ಡದಾದ ಖಾಯಿಲೆ,ಕಳ್ಳತನ,ದುಡ್ಡು ಕಳೆದು ಕೊಳ್ಳೋದು,ಹಣಕಾಸಿನ ಖರ್ಚು, ಹೀಗೆಲ್ಲಾ ಅನಾಹುತಗಳು ಸಂಭವಿಸುತ್ತವೆ.

ಇನ್ನೂ ನಾಯಿನೇ ಸತ್ತು ಹೋಗಿದೆ ಅಂದರೆ ಅಲ್ಲೊಂದು ಅಪಮೃತ್ಯುವಿನ ಸೂಚನೆ,ಮರಣ ಬೀತಿಯ ಸೂಚನೆ ಅಂತ ಅರ್ಥ.

ಪರಿಹಾರಗಳು.

ತಕ್ಷಣ ಇದಕ್ಕೆಲ್ಲಾ ಪರಿಹಾರವನ್ನು ಮಾಡಿಕ್ಕೊಳ್ಳಬೇಕು ಗಣಹೋಮ, ದುರ್ಗಾಹೋಮ, ಮನೆಯ ಸುತ್ತ ದಿಗ್ಬಂದನ ಹಾಕಿಸಬೇಕು,ಅಷ್ಟ ದಿಗ್ಬಂದನ , ಪ್ರತ್ಯಂಗಿರಾ ಹೋಮ, ಮಹಾ ಮೃತ್ಯುಂಜಯ ಹೋಮ, ಪೂಜೆ, ದೇವಿ ಕಥೆ ಓದಿಸೋದು ಹೀಗೆ ಯಾವುದಾದರು ಒಂದನ್ನ ಮಾಡಿಸಿ ಶಾಂತಿ ಮಾಡಿಸಬೇಕು.

ನೀವು ಯಾವುದನ್ನು ಮಾಡಿಸಿಲ್ಲ ಅಂದರೆ 6 ದಿನಗಳ ಒಳಗೆ ,6 ವಾರಗಳ ಒಳಗೆ ಅಥವಾ  8 ವಾರಗಳ ಒಳಗೆ  ಒಂದು ಅವಾಂತರ ದೊಡ್ಡ ಗಲಾಟೆ ನಡೆಯುತ್ತೆ,ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬೇಕಾಗುತ್ತೆ ಜಾಗ್ರತೆ , ಎಚ್ಚರದಿಂದ ಇರಿ.

ನೀವೆಲ್ಲ  ಶಾಂತಿ  ಮಾಡಿಸಿ ಸುಖ,ಶಾಂತಿ,ನೆಮ್ಮದಿಯ ಜೀವನ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top