ಯಾಕೆ ಒಂದೇ ಗೋತ್ರದ ಹುಡುಗ ಹುಡುಗಿ ಮದುವೆ ಆಗ್ಬಾರ್ದು ಅಂತ ಹೇಳ್ತಾರೆ ?ವೈಜ್ಞಾನಿಕ ಕಾರಣಗಳು..
ಗೋತ್ರ ಅಂದ್ರೆ ಏನು ?
ಗೋತ್ರ ಎಂಬುದು ಒಬ್ಬ ವ್ಯಕ್ತಿಯು ಅವನ ಅತ್ಯಂತ ಪುರಾತನ ವಂಶಾವಳಿಯೊಂದಿಗೆ ಇಟ್ಟುಕೊಂಡು ಬಂದ ಸಂಬಂಧವನ್ನು ತಿಳಿಸುತ್ತದೆ.
ಉದಾಹರಣೆಗೆ ವ್ಯಕ್ತಿಯೊಬ್ಬ ತಾನು ಭಾರದ್ವಾಜ ಗೋತ್ರಕ್ಕೆ ಸೇರಿದವನು ಎಂದರೆ ಅವನ ವಂಶದ ಮೂಲ ಪುರುಷ ಭಾರದ್ವಾಜ ಋಷಿಯಾಗಿರುತ್ತಾನೆ.

ಬ್ರಾಹ್ಮಣರು ತಮ್ಮ ಪುರುಷ ವಂಶಾವಳಿಯನ್ನು 8 ಶ್ರೇಷ್ಠ ಋಷಿಗಳ ಮೂಲ ಗೋತ್ರಗಳ ಪಟ್ಟಿ ಮಾಡುತ್ತಾರೆ
ಅಂಗೀರಸ
ಅತ್ರಿ
ಗೌತಮ
ಕಶ್ಯಪ
ಭೃಗು
ವಸಿಷ್ಠ
ಕುತ್ಸ
ಭಾರದ್ವಾಜ
ಗೋತ್ರ ಎಂಬ ಪದವು ಎರಡು ಸಂಸ್ಕೃತ ಶಬ್ದಗಳಾದ ಗೌ (ಹಸು) ಮತ್ತು ತ್ರ ಹಿ (ಕೊಟ್ಟಿಗೆ ) ಇಂದ ರಚನೆಯಾಗಿದೆ.
ಒಂದೇ ಗೋತ್ರಕ್ಕೆ ಸೇರಿದವರು ಮದುವೆಯಾಗಬಾರದು ಎಂದು ಏಕೆ ಹೇಳಲಾಗುತ್ತದೆ ? ವೈಜ್ಞಾನಿಕ ಕಾರಣಗಳು
ಒಬ್ಬ ಹುಡುಗ ಅಂಗೀರಸ ಗೋತ್ರಕ್ಕೆ ಸೇರಿದಾವನಾಗಿ ಹುಡುಗಿ ವಸಿಷ್ಠ ಗೋತ್ರಕ್ಕೆ ಸೇರಿದವಳಾದರೆ ಹುಡುಗಿಯ ಗೋತ್ರ ಬದಲಾಗಿ ಅಂಗೀರಸ ಗೋತ್ರ ಎಂದಾಗುತ್ತದೆ.
ಹಲವಾರು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ರಕ್ತ ಸಂಬಂಧಿಗಳ ನಡುವಿನ ಮದುವೆಯು ಆನುವಂಶಿಕ ಅಸಾಮರಸ್ಯ ಮತ್ತು ಹೈಬ್ರಿಡ್ ಡಿಎನ್ಎ ಸಂಯೋಜನೆಯ ಕಾರಣದಿಂದ
ಅಸಹಜ ಸಂತತಿಗೆ ಕಾರಣವಾಗಬಹುದು ಅಂದರೆ ಹುಟ್ಟುವ ಮಗುವಿಗೆ ಬಹಳಷ್ಟು ಕ್ರೋಮೋಸೋಮ್ ಅಂದರೆ ವಂಶವಾಹಿಯ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.
ವೈಜ್ಞಾನಿಕ ಕಾರಣಗಳು..
ಮನುಷ್ಯನಲ್ಲಿ 23 ಜೋಡಿ ಕ್ರೊಮೊಸೋಮ್ಗಳು ಇದ್ದು ಪ್ರತಿ ಜೋಡಿಯಲ್ಲೂ ಒಂದು ಕ್ರೋಮೋಸೋಮ್ ತಂದೆನಿಂದ ಬರುತ್ತದೆ ಮತ್ತು ಇನ್ನೊಂದು ತಾಯಿಯಿಂದ ಬರುತ್ತದೆ ಆದ್ದರಿಂದ ಪ್ರತಿ ಕೋಶದಲ್ಲಿ 46 ವರ್ಣತಂತುಗಳು(ಕ್ರೊಮೊಸೋಮ್ಗಳು) ಇವೆ.
ಒಬ್ಬ ವ್ಯಕ್ತಿಯ ಲಿಂಗವನ್ನು ನಿರ್ಧರಿಸುವ ಸೆಕ್ಸ್ ಕ್ರೊಮೊಸೋಮ್ಗಳು ಸಹ ಒಂದು ಜೋಡಿ .
XX ಲೈಂಗಿಕ ವರ್ಣತಂತುಗಳನ್ನು ಹೊಂದಿದ್ದರೆ ಆ ಮಗುವನ್ನು ಹೆಣ್ಣೆಂದು XY ಆಗಿದ್ದರೆ ಮಗುವು ಗಂಡು ಎಂದು ನಿರ್ಧಾರ ಮಾಡಲಾಗುತ್ತದೆ.
Y ಕ್ರೊಮೊಸೋಮ್ ವಂಶಾವಳಿಯಲ್ಲಿ ಪುರುಷರ ನಡುವೆ ಮಾತ್ರ ಮುಂದೆ ರವಾನಿಸಲಾಗುತ್ತದೆ, ಮಹಿಳೆಯರಿಗೆ ಇದಕ್ಕೂ ಏನೂ ಸಂಬಂಧವಿರುವುದಿಲ್ಲ ಆದ್ದರಿಂದ ವ್ಯಕ್ತಿಯ ಪೂರ್ವಜರನ್ನು ಗುರುತಿಸಿ ಸುಲಭವಾಗಿ ವ್ಯಕ್ತಿಯ ಮೂಲವನ್ನು ಕಂಡುಹಿಡಿಯಲು ಗೋತ್ರ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.
ಎರಡು ಒಂದೇ ವಿಧದ ವಂಶವಾಹಿಗಳು ಸೇರಿದಾಗ ಅಂದರೆ ಒಂದೇ ಕುಟುಂಬದಲ್ಲಿ ಅಥವಾ ಗೋತ್ರದಲ್ಲಿ ಮದುವೆಯಾದಾಗ ಸಿಸ್ಟಿಕ್ ಫೈಬ್ರೊಸಿಸ್, ಫೆನಿಲ್ಕೆಟೋನೂರ್ಯಾ (ಪಿಕೆಯು), ಗ್ಯಾಲಕ್ಟೋಸೆಮಿಯ, ರೆಟಿನೊಬ್ಲಾಸ್ಟೊಮಾ, ಅಲ್ಬಿನಿಸಮ್, ಕುಡಗೋಲು-ಕಣ ರಕ್ತಹೀನತೆ, ಥಲಸ್ಸೆಮಿಯಾ, ಟೇ-ಸಾಚ್ಸ್ ಕಾಯಿಲೆ, ಸ್ವಲೀನತೆ, ಬೆಳವಣಿಗೆಯ ಹಾರ್ಮೋನ್ ಕೊರತೆ, ಅಡೆನೊಸಿನ್ ಡೀಮಿನೇಸ್ ಕೊರತೆ , ಸ್ನಾಯುಕ್ಷಯ ಹೀಗೆ 1,000 ಕ್ಕಿಂತಲೂ ಹೆಚ್ಚು ರೋಗಗಳು ಬರುತ್ತವೆ ಆದ್ದರಿಂದ ಒಂದೇ ಕುಟುಂಬದಲ್ಲಿ ಅಥವಾ ಗೋತ್ರದಲ್ಲಿ ಮದುವೆಯಾಗಬಾರದು
ಎಂದು ಹೇಳುತ್ತಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
