ಮನೆಯಲ್ಲಿರುವ ಗೃಹಿಣಿಯರು ಯಾವ ದಿಕ್ಕಿಗೆ ಕುಳಿತು ಊಟ ಮಾಡಿದರೆ ಒಳ್ಳೆಯದು ಮತ್ತು ಯಾವ ಹೊತ್ತಿನಲ್ಲಿ ಹೇಗೆ ಊಟ ಮಾಡಬೇಕು.
ನಿಮ್ಮ ಮನೆಯಲ್ಲಿ ಯಾವತ್ತೂ ಊಟ, ಬಟ್ಟೆಗೆ ಕೊರತೆ ಬರಬಾರದು ಅಂದರೆ ನೀವು ಈ ಕೆಳಗೆ ಹೇಳಿದಂತೆ ಮಾಡಿ.ಯಾವತ್ತಾದರು ನಿಮ್ಮ ಮನೆಗೆ ದಾರಿದ್ರ್ಯ ಬರುತ್ತೆ ಅನ್ನೋ ಭಯ ಇದಯಾ? ಆ ಭಯ, ದಾರಿದ್ರ್ಯ, ನಿಮ್ಮ ಮನಸ್ಸು ಮತ್ತು ಮನೆಯಿಂದ ತೊಲಗಬೇಕು ಅಂದರೆ ಪ್ರತಿಯೊಬ್ಬ ಗೃಹಿಣಿಯು ಕೂಡ ಇದನ್ನು ಮಾಡಲೇಬೇಕು.ಇದನ್ನು ಮಾಡುವುದರಿಂದ ಯಾವತ್ತೂ ನಿಮ್ಮ ಮನೆಗೆ ದಾರಿದ್ರ್ಯ ಅನ್ನೋದು ಹುಡುಕಿಕೊಂಡು ಬರೋದಿಲ್ಲ.
ಪ್ರತಿಯೊಬ್ಬ ಗೃಹಿಣಿಯು ರಾತ್ರಿ ಊಟ ಮಾಡುವಾಗ ಅಡುಗೆ ಮನೆಯಲ್ಲಿ, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು, ಒಂದು ಬಟ್ಟಲಿನಲ್ಲಿ ಊಟ ಮಾಡುವುದರಿಂದ ಪಿತೃ ದೇವತೆಗಳು,ಯಮ ದೇವತೆಗಳು ಸಂತೃಪ್ತರಾಗಿ ಆ ಮನೆಯಲ್ಲಿ ಸದಾ ಕಾಲ ಸಂತೋಷ, ಧನ, ಸಂಪತ್ತು,ಅನ್ನ ಸಂಪತ್ತು ಸದಾ ನೆಲೆಸಿರುತ್ತೆ ಅನ್ನೋದನ್ನ ಧರ್ಮ ಶಾಸ್ತ್ರ ಹೇಳುತ್ತದೆ.
ಗೃಹಿಣಿಯರು ಹೀಗೆ ಮಾಡಿ ನೋಡಿ ಆರು ತಿಂಗಳಿನಲ್ಲೇ ನಿಮ್ಮ ಮನೆಯಲ್ಲಿ ಸಂತೃಪ್ತಿ,ತೃಪ್ತಿ, ಪುರ್ಣ ಆನಂದ, ನೆಲೆಸಿರುತ್ತದೆ. ಊಟ ಬಟ್ಟೆಗೆ ತೊಂದರೆ ಬರಬಾರದು ಅಂದರೆ ಮನೆಯ ಅಡುಗೆ ಕೋಣೆಯಲ್ಲಿ ದಕ್ಷಿಣ ದಿಕ್ಕಿಗೆ ಕುಳಿತು ಒಂದು ಬಟ್ಟಲಿನಲ್ಲಿ ಊಟ ಮಾಡಿ ಎಲ್ಲರಿಗೂ ಒಳ್ಳೆಯದಾಗತ್ತೆ.
ಯಾವ ಹೊತ್ತಿನಲ್ಲಿ ಹೇಗೆ, ಯಾವ ರೀತಿ ,ಊಟ ಮಾಡಬೇಕು.
ನಿಮ್ಮ ಮನೆಯ ಬಾಗಿಲಿಗೆ ಅನಾರೋಗ್ಯ ಬರೋದಿಲ್ಲ,ಬರಬಾರದು ಅಂದರೆ, ಯಾವುದರಲ್ಲಿ ಊಟ ಮಾಡಬೇಕು ? ಹೇಗೆ ಊಟ ಮಾಡಬೇಕು ? ಯಾವ ರೀತಿ ಕಾಲ ಕಾಲಕ್ಕೆ ಏನೇನು ಊಟ ಮಾಡಬೇಕು ? ಅನ್ನೋದನ್ನ ಧರ್ಮ ಶಾಸ್ತ್ರದಲ್ಲಿ ಮೊದಲೇ ತಿಳಿಸಿ ಕೊಟ್ಟಿದ್ದಾರೆ.ಅದು ಹೇಗೆ ಅಂತ ನೋಡೋಣ ಬನ್ನಿ.
ಸೂರ್ಯ ಉದಯಿಸುವ ಕಾಲಕ್ಕೆ ಅಂದರೆ ಬೆಳಗಿನ ತಿಂಡಿ ಅಥವಾ ಉಪಹಾರವನ್ನು ರಾಜ ಭೋಜನ ಎಂದು ಕರೆಯುತ್ತಾರೆ ಅಂದರೆ ರಾಜನ ರೀತಿ ಹೆಚ್ಚಾಗಿ ಹೊಟ್ಟೆ ತುಂಬ ಊಟ ಮಾಡಬೇಕು ಅಂತ ಅರ್ಥ.
ಮದ್ಯಾಹ್ನ ರಾಣಿ ಭೋಜನ ಅಂದರೆ ಬೆಳಗ್ಗೆ ಹೊತ್ತು ತಿಂತೀರಲ್ಲ ಅದಕ್ಕಿಂತ ಸ್ವಲ್ಪ ಕಡಿಮೆ ತಿನ್ನಬೇಕು.
ಸಂಧ್ಯಾ ಕಾಲೇ ಭಿಕ್ಷುಕ ಭೋಜನ ಅಂದರೆ ಸ್ವಲ್ಪ ಮಾತ್ರ ತಿನ್ನಬೇಕು ಅಂತ ಅರ್ಥ .
ಹೀಗೆ ಯಾಕೆ ಹೇಳಿದ್ದಾರೆ ಅಂದರೆ ಬೆಳಗ್ಗೆ ಹೊತ್ತು ನಿದ್ರೆಯಿಂದ ಎದ್ದು ನಾವು ಕೆಲಸಕ್ಕೆ ಹೋಗ್ತೀವಿ. ಆ ಕೆಲಸ ಮಾಡೋಕೆ ನಮಗೆ ಶಕ್ತಿ ಬೇಕು ಅದಕ್ಕೆ ರಾಜ ಭೋಜನ ಅಂತ ಕರೀತಾರೆ. ಇನ್ನು ಮಧ್ಯಾಹ್ನ ಸ್ವಲ್ಪ ಕಡಿಮೆ ತಿನ್ನಬೇಕು,ಸಂಜೆ ಬಿಕ್ಷುಕರ ತರ ಸ್ವಲ್ಪ ತಿನ್ನಬೇಕು ಯಾಕೆಂದರೆ ನಾವು ಏನು ಕೆಲಸ ಮಾಡಲ್ಲ ತಿಂದು ಮಲಗಿ ಬಿಡ್ತೇವೆ ಅದ್ಕಕೆ ಹಾಗೆ ಊಟ ಮಾಡಿದರೆ ಒಳ್ಳೇದು ನಮ್ಮ ಆರೋಗ್ಯ ಕೂಡ ಚೆನ್ನಾಗಿರತ್ತೆ.
ಇತ್ತೀಚಿನ ಕಾಲದಲ್ಲಿ ಪ್ಲಾಸ್ಟಿಕ್ ತಟ್ಟೇಲಿ ಊಟ ಮಾಡೋ ಟ್ರೆಂಡ್ ಫ್ಯಾಷನ್ ಆಗಿಬಿಟ್ಟಿದೆ. ಇದರಿಂದ ಅನೇಕ ಖಾಯಿಲೆಗಳು ಬಂದು ವಕ್ಕರಿಸಿಕೊಳ್ತಾವೆ.ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡ್ತಿದ್ರು ಆದ್ದರಿಂದ ಅವರ ಆರೋಗ್ಯ ಕೂಡ ಚೆನ್ನಾಗಿರತ್ತಿತ್ತು.ತಾಮ್ರ ಮತ್ತು ಬೆಳ್ಳಿಯಲ್ಲಿ ಅನೇಕ ಔಷಧಿ ಗುಣಗಳಿವೆ ಹಾಗೆ ನಮ್ಮ ದೇಹಕ್ಕೆ ಒಳ್ಳೆಯದೂ ಕೂಡ.ಆದರೆ ಈಗ ಪ್ಲಾಸ್ಟಿಕ್ ನ ಬಳಕೆಯ ಕಾರಣದಿಂದ ಎಲ್ಲರ ಆರೋಗ್ಯವು ಹದಗೆಟ್ಟಿದೆ.ಇನ್ಮೇಲಾದರೂ ಪ್ಲಾಸ್ಟಿಕ್ ಬಿಟ್ಟು ತಾಮ್ರ ಅಥವಾ ಬೆಳ್ಳಿ ತಟ್ಟೀಲಿ ಊಟ ಮಾಡಿ.
ಇದರಿಂದ ಒಬ್ಬ ಮನೆ ಯಜಮಾನ ಅಥವಾ ಯಜಮಾನಿ ಗಟ್ಟಿಯಾಗಿರ್ತಾರೆ,ಆರೋಗ್ಯವಂತರಾಗಿ ಇರ್ತಾರೆ.ಇದನ್ನ ನೋಡಿದ ಮೇಲೇ ಆದರೂ ಹೇಗೆ ಯಾವುದರಲ್ಲಿ ಊಟ ಮಾಡಬೇಕು ಅಂತ ತಿಳ್ಕೊಂಡು ಊಟ ಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
