ಬಿಕ್ಕಳಿಸಿ ಬಿಕ್ಕಳಿಸಿ ಗಂಟಲು ನೋವು ಬಂತು ಅನ್ನೋರು ಆಯುರ್ವೇದದ ಈ ಮದ್ದುಗಳು ಬಳಸಿ ಸರಿ ಹೋಗುತ್ತೆ ..
ಬಿಕ್ಕಳಿಕೆಗೆ ಕಾರಣಗಳು :
ಅಣ್ಣ ನಾಳ ಒಣಗಿರುವುದು , ಶ್ವಾಸ ದ್ವಾರ ತಟ್ಟನೆ ಮುಚ್ಚಿಕೊಂಡಿರುವುದು , ಶ್ವಾಸಾಂಗವು ಸಣ್ಣದಾಗಿ ಸಂಕುಚಿತವಾಗಿರುವುದು.
ಆಯುರ್ವೇದದ ಮನೆಮದ್ದುಗಳು :
ಮೊದಲಿಗೆ ಗಂಟಲನ್ನು ಒಣಗಲು ಬಿಡಬೇಡಿ ಆಗಾಗ ನೀರು ಕುಡಿಯುತ್ತ ಇರಬೇಕು .
ತೆಂಗಿನ ಕಾಯಿಯ ಜುಟ್ಟನ್ನು ಸುಟ್ಟು ನೀರಿನಲ್ಲಿ ಕದಡಿ ಸೋಸಿ ನಂತ್ರ ಸೇವಿಸಬೇಕು .
ದಾಳಿಂಬೆ ಎಲೆಗಳ ರಸವನ್ನು ಸಕ್ಕರೆ ಸೇರಿಸಿ ಸೇವಿಸಬೇಕು .
ಸಕ್ಕರೆ ಚಪ್ಪರಿಸಿ , ಕಲ್ಲು ಸಕ್ಕರೆ ಆದರೆ ಇನ್ನು ಒಳ್ಳೆಯದು .
ದಾಳಿಂಬೆ ಕುಡಿ , ತುಳಸಿ ಎಲೆ , ಗರಿಕೆ ಹುಲ್ಲನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಜಜ್ಜಿ ನೀರು ತೆಗೆದು ಮೂರರಿಂದ ನಾಲ್ಕು ಹನಿ ಸೇವಿಸಿ.
ಸಾಸಿವೆ ಪುಡಿಯನ್ನು ತುಪ್ಪದಲ್ಲಿ ಬೆರೆಸಿ ಒಂದು ಚಮಚ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು .
ಬೇಲದ ಎಲೆಯನ್ನು ಮೂಸುತ್ತಾ ಇರಬೇಕು ಇದರಿಂದ ಬಿಕ್ಕಳಿಕೆ ನಿವಾರಣೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
