fbpx
ದೇವರು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಭಾಗ -1 (ಶ್ರೀ ಕ್ಷೇತ್ರ ತಲುಪುವುದು ಹೇಗೆ ?)

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವರ್ಣನೆ -1 

ಪ್ರಸ್ತಾವನೆ.

ಶ್ರೀ ಪರುಶುರಾಮರ  ಸೃಷ್ಟಿಯಲ್ಲಿರುವ ಸಪ್ತ ಮಹಾ ಕ್ಷೇತ್ರಗಳಲ್ಲಿ ಒಂದಾದ,ಪುರಾಣ ಪ್ರಸಿದ್ಧವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಹಿಂದಿನ ಕಾಲದಲ್ಲಿ ತನ್ನ ಮಹಾತ್ಮೆಯಿಂದಲೇ ಯಾತ್ರಿಕರನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು.

ಆದರೆ ಮದ್ಯ ಕಾಲದಲ್ಲಿ ಯಾತ್ರಿಕರಿಗೆ ಅನುಕೂಲಕರವಾದ ವಾಹನ ಸಂಚಾರ ಮಾರ್ಗಗಳೂ, ಶ್ರೀ ಕ್ಷೇತ್ರದಲ್ಲಿ ತಂಗಲು ತಕ್ಕ ವಸತಿ ವ್ಯವಸ್ಥೆಗಳೂ ಸರಿಯಾಗಿ ಇಲದಿದ್ದರಿಂದ ,ಹವೆಯ ದೋಷದಿಂದಲೂ ಅನೇಕರು ಇಲ್ಲಿ ಯಾತ್ರೆಗಾಗಿ ಬರಲು ಹಿಂಜರಿಯುತ್ತಿದ್ದರು. ಈಗ ಅನೇಕ ಧರ್ಮಾತ್ಮರಿಂದ ಕಟ್ಟಿ ಕೊಡಲ್ಪಟ್ಟ ಧರ್ಮಛತ್ರ ಮುಂತಾದ ವಸತಿ ವ್ಯವಸ್ಥೆಗಳು ಏರ್ಪಟ್ಟಿರುವುದರಿಂದ , ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ಸರ್ಕಾರಿ ಬಸ್ಸುಗಳ ಮತ್ತು ನಿಲ್ದಾಣ, ಇದ್ದಕ್ಕೆ ಹತ್ತಿರದಲ್ಲಿಯೇ ರೈಲ್ವೇ ನಿಲ್ದಾಣ,ಪ್ರತೀ ದಿನವೂ ಬೆಗಳೂರಿನಿಂದ ರೈಲು ನಿರಂತರವಾಗಿ ಹೋಗಿ ಬರುವ ವ್ಯವಸ್ಥೆಯಿದ್ದು.ಈಗ ಸದಾ ಕಾಲದಲ್ಲಿಯೂ  ಶ್ರೀ ಕ್ಷೇತ್ರಕ್ಕೆ ನಿರಂತರವಾಗಿ ಜನರು ನಾನಾ ಕಡೆಗಳಿಂದ ನಿರಾತಂಕವಾಗಿ  ಬಂದು ಹೋಗುತ್ತಾರೆ.

ಅನುಕೂಲತೆ ಒದಗಿರುವುದರಿಂದ  ಭಕ್ತರು ಶ್ರೀ ಸುಬ್ರಹ್ಮಣ್ಯ  ದೇವರ ಸೇವೆಯನ್ನು ಯತ್ತೆಚ್ಛವಾಗಿ ಮಾಡಿ ಕೃತಾರ್ಥರಾಗುವ ಸುಯೋಗವು ಈಗ  ಒದಗಿ ಬಂದಿದೆ.ಯಾತ್ರಿಕರ ಹಿತದೃಷ್ಟಿಯಿಂದ ಸಾಧ್ಯವಿದ್ದ ಎಲ್ಲಾ ಅನುಕೂಲತೆಗಳನ್ನು ಒದಗಿಸುತ್ತಿರುವುದು ಈ ಕ್ಷೇತ್ರದ ಶುಭೋದಯವಾಗಿದೆ.

ಈ ಕ್ಷೇತ್ರವು ಕಾಲಗತಿಯಿಂದ ಈಗ ಅರಣ್ಯ ಪ್ರಾಯವಾಗಿದ್ದರೂ, ರಾಜಧಾನಿಯಾಗಿ ಮೆರೆದಿದ್ದ ತನ್ನ ಪೂರ್ವ ವೈಭವದ ಅವಶೇಷಗಳಾದ ಸುತ್ತು ಮುತ್ತಲಿನ ಅರಣ್ಯಗಳಲ್ಲಿ ಅಡಗಿರುವ ರಾಜಬೀದಿ,ಭಿನ್ನ ಭಿನ್ನ ದೇವಮಂದಿರಗಳು,ಮೂರ್ತಿಗಳು,ನೆಲಗಟ್ಟುಗಳು,ಬಾವಿಗಳು, ಶಿಲಾಸ್ತಾಂಬಗಳು ,ಶಾಸನಗಳು ಮುಂತಾಡುವುಗಳಿಂದ  ತನ್ನ ಪೂರ್ವ ಇತಿಹಾಸವನ್ನು ಸೂಚಿಸುತ್ತಿದೆ. ಇಲ್ಲಿಯ ಪೂರ್ವ ಇತಿಹಾಸವನ್ನು ತಿಳಿಸುವ ತಾಮ್ರ ಶಾಸನ ಮುಂತಾದ ಆಧಾರಗಳು ವಿವಿಧ ವರ್ಗೀಯರ ಅಡಳಿತೆಯ ಪರಂಪರೆಯ ಕಾಲದಲ್ಲಿ ಬಹುಮಟ್ಟಿಗೆ ಲುಪ್ತವಾಗಿದೆ ಎಂದು ತಿಳಿಯಬೇಕಾಗಿದೆ.

ಕ್ಷೇತ್ರದ ವರ್ಣನೆ.

ಶ್ರೀ ಕ್ಷೇತ್ರವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಸುಳ್ಯ ತಾಲ್ಲೂಕಿನ ಅತ್ಯಂತ ಪೂರ್ವಭಾಗದಲ್ಲಿ ಇದ್ದು ಮಲೆನಾಡಿನ ಗರ್ಭದಲ್ಲಿರುವ ಸುಬ್ರಹ್ಮಣ್ಯ ಗ್ರಾಮದಲ್ಲಿದೆ.

ಈ ಗ್ರಾಮವು ದಕ್ಷಿಣ ಕನ್ನಡ,ಹಾಸನ,ಕೊಡಗು  ಜಿಲ್ಲೆಗಳೊಂದಿಗೆ ಗಡಿಯನ್ನು ಹೊಂದಿದೆ.ಸುತ್ತಲೂ ತಲೆ ಎತ್ತಿ ನಿಂತಿರುವ ಸಹ್ಯಾದ್ರಿಯ ಹಿರಿಯ ಬೆಟ್ಟಗಳು, ಸದಾ ಹಸಿರೆಲೆಯ ದಟ್ಟ ಅರಣ್ಯಗಳು,ಸುತ್ತಲೂ ಹರಿಯುವ ದೊಡ್ಡ ,ಸಣ್ಣ  ನದಿ ತೊರೆಗಳು ಈ ಕ್ಷೇತ್ರಕ್ಕೆ ಅಪೂರ್ವ ಶೋಭೆಯನ್ನು ತಂದಿವೆ.

ಪೂರ್ವ ಭಾಗದಲ್ಲಿ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ,ಶೇಷ ಪರ್ವತ, ಸಿದ್ದ ಪರ್ವತ ಶಿಖರಗಳು ಕ್ಷೇತ್ರಕ್ಕೆ ಭವ್ಯ ಹಿನ್ನೆಲೆಯನ್ನು ಒದಗಿಸಿವೆ.ಉತ್ತರ ಭಾಗದಲ್ಲಿ ಕ್ಷೇತ್ರವನ್ನು ಬಳಸಿ ಕುಮಾರಧಾರ ನದಿ ಮತ್ತು ಪೂರ್ವ, ದಕ್ಷಿಣ,ಪಶ್ಚಿಮ ಭಾಗಗಳಲ್ಲಿ ದರ್ಪಣ ತೀರ್ಥವೂ ಹರಿಯುತ್ತದೆ.

ಹತ್ತಾರು ಕಡೆಗಳಿಂದ ಕ್ಷೇತ್ರವನ್ನು ತಲುಪಲು ಒಳ್ಳೆಯ ರಸ್ತೆಯ ಸೌಕರ್ಯಗಳು ಕೂಡ ಇವೆ.ಬೆಂಗಳೂರು  ಕಡೆಯಿಂದ ಬರುವವರಿಗೆ  ಮೈಸೂರು ಮಂಗಳೂರು ಹೆದ್ದಾರಿಯಿಂದ ಸುಳ್ಯದ ಸಮೀಪದ ಪೈಚಾರಿನಿಂದ ಬಲಕ್ಕೆ ತಿರುಗು ಕ್ಷೇತ್ರವನ್ನು ತಲುಪಬಹುದು.  ಸುಳ್ಯ- ಸುಬ್ರಹ್ಮಣ್ಯ 38 ಕಿಲೋಮೀಟರ್ ಗಳು.

ಕೇರಳದ ಕಾಸರಗೋಡು ಕಡೆಯಿಂದ ಬರುವವರಿಗೆ ಜಾಲ್ಸೂರಿನ ಮೂಲಕ ಸುಬ್ರಹ್ಮಣ್ಯಕ್ಕೆ  ನೇರ ಬರಬಹುದು,ಜಾಲ್ಸೂರ ಸುಬ್ರಹ್ಮಣ್ಯ 40 ಕಿಲೋಮೀಟರ್ ಗಳು.

ಮಂಗಳೂರಿನಿಂದ ಪುತ್ತೂರು- ಬೆಳ್ಳಾರೆ ಮಾರ್ಗವಾಗಿ 112 ಕಿಲೋಮೀಟರ್ ಗಳು,ಮಂಗಳೂರು ಮೈಸೂರು ಹೆದ್ದಾರಿಯ ಕುಂಬ್ರ ಎಂಬಲ್ಲಿಂದ  ಎಡಕ್ಕೆ ತಿರುಗಿ 50 ಕಿಲೋಮೀಟರ್ ಕ್ರಮಿಸಬೇಕು.

ಮಂಗಳೂರಿನಿಂದ ಪುತ್ತೂರು ಕಾಣಿಯೂರು ಮಾರ್ಗವಾಗಿ  108 ಕಿಲೋಮೀಟರ್. ಈ ರಸ್ತೆ ಮಂಗಳೂರು ಮೈಸೂರು ಹೆದ್ದಾರಿಯ ಪುತ್ತೂರು ನಗರದ  ದರ್ಬೆ ಎಂಬಲ್ಲಿ ಎಡಕ್ಕೆ ತಿರುಗುವುದು.ದೂರ 55 ಕಿಲೋಮೀಟರ್.

ಮಂಗಳೂರಿನಿಂದ ಉಪ್ಪಿನಂಗಡಿ ಕಡಬ ಮಾರ್ಗವಾಗಿ ದೂರ 105 ಕಿಲೋಮೀಟರ್. ಈ ಮಾರ್ಗವು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪ ಬಲಕ್ಕೆ ತಿರುಗುತ್ತದೆ.ದೂರ 51 ಕಿಲೋಮೀಟರ್.

ಧರ್ಮಸ್ಥಳದಿಂದ ಉಜಿರೆ ಗುರುವಾಯನ ಕೆರೆಗಾಗಿ ಉಪ್ಪಿನಂಗಡಿ ಸೇರಿ ನಂತರ ಮೇಲೆ ಹೇಳಿದ ರಸ್ತೆಯಲ್ಲಿ ಮುಂದುವರೆಯಬಹುದು. ದೂರ 90 ಕಿಲೋಮೀಟರಗಳು.

ಧರ್ಮಸ್ಥಳದಿಂದ ನಿಡ್ಲೆ- ಕೊಕ್ಕಡ-ಗುಂಡ್ಯಕ್ಕಾಗಿ ಬರುವ ಸಮೀಪದ ರಸ್ತೆ ಇದೆ.ದೂರ 60 ಕಿಲೋಮೀಟರ್. ಈ ರಸ್ತೆಯಲ್ಲಿ ಗುಂಡೈದಿಂದ ಕೈಕಂಬದ ತನಕ 16 ಕಿಲೋಮೀಟರ್.

ಬೆಂಗಳೂರು,ಹಾಸನ ಕಡೆಗಳಿಂದ ಬರುವವರಿಗೆ ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಉಪ್ಪಿನಂಗಡಿ ತನಕ ಬಂದು ನಂತರ ಇದಕ್ಕೆ ತಿರುಗಿ ಮುಂದುವರಿಯಬಹುದು ಅಥವಾ ಗುಂಡ್ಯದಿಂದ 16 ಕಿಲೋಮೀಟರ್ ರಸ್ತೆಯಲ್ಲಿ ನೇರ ಬರಬಹುದು.

ಅರಕಲುಗೂಡು, ಶನಿವಾರ ಸಂತೆಗಳ ಕಡೆಯಿಂದ ಬರುವವರಿಗೆ ಕೂಡ ರಸ್ತೆಯಿಂದ ಬಿಸ್ಲೆ ಘಾಟ್ ರಸ್ತೆಯ ಮೂಲಕ ನೇರ ಬರಬಹುದು.ಕೂಡು ರಸ್ತೆಯಿಂದ ದೂರ 38 ಕಿಲೋಮೀಟರ್. ಈ ರಸ್ತೆ ಕೂಡ ಕೆಲವು ಭಾಗದಲ್ಲಿ ಕಚ್ಚಾ ರಸ್ತೆ.

ಮಡಿಕೇರಿಯಿಂದ ಗಾಳಿಬೀಡು- ಕೊಲ್ಲಮೊವರೆಗಾಗಿ ಸುಬ್ರಹ್ಮಣ್ಯ ಸೇರುವ ರಸ್ತೆ.ಆ ಕಡೆಯಿಂದ ಅತೀ ಸಮೀಪದ ರಸ್ತೆ.ದೂರ ಸುಮಾರು 40 ಕಿಲೋಮೀಟರ್. ಈ ರಸ್ತೆಯ ಕೆಲಸ ಈಗ ಅಭಿವೃದ್ಧಿಯ ಹಂತದಲ್ಲಿದೆ.

ಕ್ಷೇತ್ರವು ಬೆಂಗಳೂರು -ಮಂಗಳೂರು ಮೀಟರ ಗೇಜ್ ರಸ್ತೆಯ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ 12 ಕಿಲೋಮೀಟರ್ ದೂರದಲ್ಲಿದೆ. ನಿಲ್ದಾಣದ ಸಮೀಪದ ನೆಟ್ಟಣದಿಂದ ಬಸ್ ಸೌಕರ್ಯವಿದೆ. ಮಡಿಕೇರಿ ಸುಬ್ರಹ್ಮಣ್ಯ ರಸ್ತೆ  ಹೊರತು ಉಳಿದ ಎಲ್ಲಾ ರಸ್ತೆಗಳಲ್ಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳು ಒಡಾಡುತ್ತಿದ್ದು ಸದಾಕಾಲ ಕ್ಷೇತ್ರವನ್ನು ಸಂದರ್ಶಿಸಬಹುದು.ಕೂಡು ರಸ್ತೆಯಿಂದ ಬೇಸಿಗೆ ಕಾಲದಲ್ಲಿ ಮಾತ್ರ ವಾಹನ  ಸೌಕರ್ಯವಿದೆ.

ಮುಂದುವರಿಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top