ಆರೋಗ್ಯಕ್ಕಾಗಿ ಆವಕಾಡೊ
ಭಾರತದಲ್ಲಿ, ಆವಕಾಡೊ ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು. ಬಹಳ ಕಡಿಮೆ ಪ್ರಮಾಣದಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ದಕ್ಷಿಣ-ಮಧ್ಯ ಭಾರತದಲ್ಲಿ ಮತ್ತು ಪೂರ್ವ ಹಿಮಾಲಯನ್ ಸಿಕ್ಕಿಂ ರಾಜ್ಯದಲ್ಲಿ ಬೆಳೆಯಲಾಗುತ್ತದೆ ಆವಕಾಡೊ ಪೋಷಕಾಂಶ ಮೌಲ್ಯಗಳು(
ವಿಟಮಿನ್ C – 17%
ವಿಟಮಿನ್ E-10%
ವಿಟಮಿನ್ K-26%
ಫೋಲೆಟ್ -20%
ಪೊಟ್ಯಾಸಿಯಮ್ -14%
ಪ್ರಯೋಜನಗಳು:
ಇದು ಕ್ಯಾನ್ಸರ್, ಮಧುಮೇಹ, ಹೃದಯರಕ್ತನಾಳೀಯ ಕಾಯಿಲೆಗಳು
ರಕ್ತದೊತ್ತಡ ಮತ್ತು ಬೊಜ್ಜುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
1. ಮಧುಮೇಹ ತಡೆಗಟ್ಟುವಿಕೆ
ಆವಕಾಡೊ ಮಧುಮೇಹ ಚಿಕಿತ್ಸೆಗಾಗಿ ರಾಮಬಾಣ,ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಮತ್ತು ಕರಗಬಲ್ಲ ಫೈಬರ್ ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.
2. ತೂಕ ಕಡಿಮೆ ಮಾಡಲು ಉಪಯುಕ್ತ
ಆವಕಾಡೊದಲ್ಲಿನ ಕೊಬ್ಬು ಅಂಶವು ಉತ್ತಮವಾದ ಕೊಬ್ಬು, ಮತ್ತು ನಮ್ಮ ದೇಹಕ್ಕೆ ಹಾನಿಯಾಗದಂತೆ ಬೊಜ್ಜು ಉಂಟಾಗದಂತೆ ಮಾಡುವುದು. ಆವಕಾಡೊಗಳು ಮೆಟಾಬಾಲಿಸಮ್ ಅನ್ನು ಹೆಚ್ಚಿಸುತ್ತವೆ ಮತ್ತು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
3.ದೃಷ್ಟಿ ಸಮಸ್ಯೆಗೆ ಸಹಾಯ ಮಾಡುವುದು
ದೃಷ್ಟಿ ಸಮಸ್ಯೆಗೆ ಸಂಬಂಧಿಸಿದ ಕಣ್ಣಿನ ಪೊರೆ ಮತ್ತು ಕಣ್ಣಿನ ರೋಗಗಳಂತಹ ಕಾಯಿಲೆಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ.
4. ನಿಮ್ಮ ಕೂದಲು ರಕ್ಷಿಸುತ್ತದೆ ( ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ)
ಆವಕಾಡೊ ವಿಟಮಿನ್ B ಮತ್ತು E ಒಳಗೊಂಡಿದೆ ಆ ಕಾರಣದಿಂದಾಗಿ ಕೂದಲನ್ನು ಬಲಪಡಿಸುತ್ತದೆ ,ಡ್ಯಾಂಡ್ರಫ್ ಕಡಿಮೆ ಮಾಡುವುದು , ಒಣ ಕೂದಲು ಸಮಸ್ಯೆ ಕಡಿಮೆ ಸಹಾಯ ಮಾಡುವುದು ಮತ್ತು ನಿಮ್ಮ ಕೂದಲನ್ನು ಮಸಾಜ್ ಮಾಡಿ, ಮೃದು ಮತ್ತು ಆರೋಗ್ಯಕರ ಕೂದಲು ನೀಡುತ್ತದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
