fbpx
ಕನ್ನಡ

ಪಕ್ಷಾತೀತವಾಗಿ ದೇವೇಗೌಡ್ರನ್ನ ಪ್ರೀತಿಸೋ ಹಾಗೆ ಮಾಡುತ್ತೆ ಅವರ ಈ 13 ಅದ್ಭುತ ಗುಣಗಳು..

ಪಕ್ಷಾತೀತವಾಗಿ ದೇವೇಗೌಡ್ರನ್ನ ಪ್ರೀತಿಸೋ ಹಾಗೆ ಮಾಡುತ್ತೆ ಅವರ ಈ 13 ಅದ್ಭುತ ಗುಣಗಳು..

ಇತ್ತೀಚಿಗೆ ನಡೆದ ‘ವೀಕ್ ಎಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ನಡೆದ ಕೆಲವು ಸನ್ನಿವೇಶಗಳು ಮನಸಿಗೆ ಬಹಳ ಇಷ್ಟವಾದವು.

ತಮಗೆ ಸಿಕ್ಕ ಮೂರುವರೆ ವರ್ಷದ ಅಲ್ಪಅಧಿಕಾರದ ಕಾಲವಧಿಯಲ್ಲಿ ಗೌಡರು ಮಾಡಿದ ಕೆಲಸಗಳ ಬಗ್ಗೆ ಸಿಕ್ಕ ಕೆಲವು ಮಾಹಿತಿಗಳು ಇಲ್ಲಿವೆ

“ಮೋದಿಯವರು ನನ್ನನ್ನು , ನನ್ನ ನಡೆ ನುಡಿಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಯಾಕಂದರೆ ಬದುಕಿರುವವರಲ್ಲಿ ನಾನೊಬ್ಬನೇ ಅಕ್ಟಿವ್ ಮಾಜಿ ಪ್ರಧಾನಿ, ಆದರೆ ನನ್ನನು ಏನು ಮಾಡಲಾಗುವುದಿಲ್ಲ ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇವಲ ಹದಿನೆಂಟು ಲಕ್ಷ ರೂಪಾಯಿ ! 85 ನೇ ವಯಸ್ಸಿನಲ್ಲಿ ತಮ್ಮ ಬಗೆಗಿನ ಆತ್ಮ ವಿಶ್ವಾಸ ”

ಬಹುಶಃ ದೇವರಾಜ ಅರಸು ಮತ್ತು ರಾಮ ಕೃಷ್ಣ ಹೆಗಡೆಯವರ ನಂತರ ಕರ್ನಾಟಕ ಕಂಡ ಒಬ್ಬ ಜನಪರ ನಾಯಕ 1996 ರಲ್ಲಿ ಹಿಂದಿ ಬಾರದ ಮೊದಲ ದಕ್ಷಿಣ ಭಾರತೀಯ ದೆಲ್ಲಿ ದೊರೆಗಳಿಗೆ ಸೆಡ್ಡು ಹೊಡೆದು ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಅದೊಂದು ಕರ್ನಾಟಕದ ಇತಿಹಾಸದ ಸುವರ್ಣ ಯುಗ ಅಲ್ಲವೇ ? ಒಬ್ಬ ಸಾಮಾನ್ಯ ರೈತನ ಮಗ ದೇಶದ ಪ್ರಧಾನಿಯಾದದ್ದು ಒಂದು ಮರೆಯಲಾರದ ಸುದಿನ.

ಎಸ್.ಎಂ. ಕೃಷ್ಣ ರವರ ಮಾತುಗಳು ಹೀಗಿದ್ದವು “ನಾವು ದೇವೇಗೌಡರನ್ನ ಸೋಲಿಸಬಾರದಿತ್ತು” ರಾಜಕೀಯದಾಚೆಗೆ ಶತ್ರುವಿನಲ್ಲಿಯು ಪಶ್ಚಾತ್ತಾಪದ ಭಾವ ಮೂಡಿಸಿ ಅವರಲ್ಲೂ ಪ್ರೀತಿಯ ಸ್ಥಾನವನ್ನು ಅಲಂಕರಿಸಿದ್ದು ಸಣ್ಣ ವಿಷಯವಲ್ಲ .

ಯೋಗ, ಆಹಾರ ಪದ್ಧತಿ, ದೈವ ಭಕ್ತಿ, ಕಾಳಜಿ, ಚಿಂತನೆ, ಕುಟುಂಬ ನಿರ್ವಹಣೆ, ಛಲ, ಸೋಲದ/ಗೆಲ್ಲುವ ಆತ್ಮವಿಶ್ವಾಸ ಹೊಂದಿರುವ ೮೫ರ ಚೇತನ
ಶಾರೀರ ಹಾಗು ಶರೀರದ ಆರೋಗ್ಯ ನೋಡಿಕೊಳ್ಳುವ ಗುಣ , ತಮ್ಮ ಸ್ವಂತ ಕುಟುಂಬದವರಿಗೆ ಹೋಗಿ ಬನ್ನಿ ಎಂದು ಮಾತಾಡುವ ರೀತಿ ಎಲ್ಲರಿಗು ಇಷ್ಟವಾಗುತ್ತದೆ.

ಕೃಷ್ಣಾನೀರಾವರಿ ಯೋಜನೆಯ ಹುಟ್ಟು ಹಾಕಿ ತನ್ನ ಸ್ವಜಾತಿಯವರಲ್ಲದ ಜನ ಹಾಗು ರೈತರಿರುವ ಜಿಲ್ಲೆಗಳಿಗಾಗಿ ಹೋರಾಡಿ ನೀರಾವರಿ ಯೋಜನೆಯ ಕಟ್ಟಿದ್ದು ಹಾಗೂ ಎಂದಿಗೂ ಮಾರ್ಕೆಟಿಂಗ್ ಮಾಡದೇ ಇರುವುದು.- ಜಾತ್ಯತೀತತೆ ಹಾಗು ಕಾರ್ಯ ದಕ್ಷತೆ ಈಗ ಹೇಳಿ ಸ್ವಾಮಿ ಯಾರು ಇವರನ್ನ ಜಾತಿ ರಾಜಕಾರಣ ಮಾಡ್ತಾರೆ ಅಂದಿದ್ದು.

ಹಾಸನದ ಶ್ರವಣಬೆಳಗೋಳದ ಸಂಪೂರ್ಣ ಜೀರ್ಣೋದ್ದಾರದ ಮತ್ತು ಮಸ್ತಾಕಾಭಿಷೇಕಕ್ಕೆ ಕಳೆ ಕಟ್ಟಿಸಿದವರು ಗೌಡರು ಅಷ್ಟೇ ಅಲ್ಲದೆ 1 % ಇರುವ ಜೈನ ಧರ್ಮಿಯರ ಉದ್ದಾರಕ್ಕೆ  , ಅಲ್ಪಸಂಖ್ಯಾತರ ಮೀಸಲಾತಿ ಕೊಡಿಸುವಲ್ಲೂ ಶ್ರಮ ಪಟ್ಟವರು ಸಹ ಗೌಡರೇ.

ರಾಜ್ಯದಲ್ಲಿ ಜೆಡಿಸ್ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಪುತ್ರ ಎಚ್.ಡಿ. ಕುಮಾರಸ್ವಾಮಿ ಬೆನ್ನಿಗೆ ನಿಲ್ಲಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಲು ಬಂದ ಆಹ್ವಾನವನ್ನು ನಯವಾಗಿ ನಿರಾಕರಿಸಿದ್ದಾರೆ.
ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈಗ ನಿರ್ಣಾಯಕ ಹಂತ ತಲುಪಿದ್ದು , ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಷ್ಟ್ರಪತಿ ಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳ ವರಿಷ್ಠ ಎಚ್.ಡಿ. ದೇವೇ ಗೌಡ ಅವರ ಹೆಸರು ಪ್ರಸ್ತಾಪಿಸಿದ್ದರು , ಸೋನಿಯಾ ಅವರ ಈ ಮನವಿಯನ್ನು ನಯವಾಗಿಯೇ ನಿರಾಕರಿಸಿದ್ದು , ನಾನು ಕರ್ನಾಟಕದಲ್ಲೇ ರಾಜಕಾರಣ ಮಾಡುತ್ತೇನೆ ಎಂದಿದ್ದರು .

‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಶ್ರಮಿಸುತ್ತೇನೆ, ನನಗೆ ರಾಷ್ಟ್ರಪತಿ ಹುದ್ದೆ ಬೇಡ, ಆ ಹುದ್ದೆ ಅಲಂಕರಿಸಲು ನನಗೆ ಯಾವುದೇ ಆಸಕ್ತಿ ಇಲ್ಲ. ನಾನು ನನ್ನ ಕರ್ನಾಟಕದಲ್ಲಿ ನನ್ನ ಜನರ ಮಧ್ಯದಲ್ಲೇ ಇರಲು ಬಯಸುತ್ತೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ನಾನು ಕೂಡ ಅವರಿಗೆ ನೆರವಾಗುತ್ತೇನೆ. ಕರ್ನಾಟಕದ ಜನರ ಮಧ್ಯೆಯೇ ಬದುಕಿ ನನ್ನ ಜನಗಳ ನಡುವೆ ನನ್ನ ಜೀವನ ಮುಗಿಸುತ್ತೇನೆ ಎಂಬ ವಿಶ್ವಾಸ ನನ್ನದು’ ಎಂದು ಹೇಳಿದ್ದರು .

ರಾಮಕೃಷ್ಣ ಹೆಗ್ಗಡೆಯವರ ಆಡಳಿತ ಸಮಯದಲ್ಲಿ ದೇವೇಗೌಡರೇ ನೀರಾವರಿ ಮಂತ್ರಿಗಳಾದರು.ಆ ಸಮಯದಲ್ಲಿ ವಿಜಾಪುರ ಕಲಬುರ್ಗಿ ಭಾಗಗಳಿಗೆ ನೀರು ಒದಗಿಸಲು ಆ ಕಾಲಕ್ಕೇ 600 ಕೋಟಿ ರೂಪಾಯಿಗಳ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದರು ಇದರಲ್ಲಿ ಎಂ.ಸಿ.ಮನಗೂಳಿ ಪ್ರಯತ್ನವೂ ಸಾಕಷ್ಟಿದೆ ಇದರಿಂದ ನೀರು ಸಿಂಧಗಿ, ಇಂಡಿ ತಾಲೂಕಿಗೂ ಬರುವಂತಾಯಿತು.

 

ಅಲ್ಲಿನ ರೈತರೇ ತಮ್ಮ ಹಣದಿಂದ ಸಿಂದಗಿಯ ಗೊಳಗೆರಿಯಲ್ಲಿ ದೇವೇಗೌಡರು ಮತ್ತು ಅವರ ಶಿಷ್ಯರಾದ ಮನಗೂಳಿಯವರ ಪ್ರತಿಮೆಯನ್ನು ಸ್ಥಾಪಿಸಿ ಮಣ್ಣಿನ ಮಗನಿಗೆ ಗೌರವ ಸಲ್ಲಿಸಿದ್ದಾರೆ.
Capture-4-300x299

ಇನ್ನು 1997. ದೇವೇಗೌಡರು ಪ್ರಧಾನಿಯಾಗಿದ್ದ ಸಮಯ ,ಪಂಜಾಬಿನಲ್ಲಿ ರೈತರು ಯತೇಚ್ಚವಾಗಿ ಭತ್ತ ಬೆಳೆದ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ರೈತರಿಂದ ಭತ್ತ ಖರೀದಿಸಲು ಯಾರೂ ಮುಂದೆ ಬರಲಿಲ್ಲ ಜೊತೆಗೆ ರೈತರಿಗೆ ಆಸರೆಯಾಗಬೇಕಿದ್ದ ಅಲ್ಲಿನ ಸ್ಥಳೀಯ ಪಂಜಾಬ್ ಸರಕಾರವೂ ರೈತರಿಗೆ ಸಹಾಯ ಮಾಡಲಿಲ್ಲ ಆದರೆ ಪ್ರಧಾನಿಯಾಗಿದ್ದ ದೇವೇಗೌಡರಿಗೆ ವಿಚಾರ ತಿಳಿದು ರೈತರು ಬೆಳೆದ ಅದೇಷ್ಟೇ ಭತ್ತವಿದ್ದರೂ ಆ ಎಲ್ಲಾ ಭತ್ತವನ್ನು ರೈತರಿಂದ ಖರೀದಿಸಲು ಆದೇಶ ನೀಡುವ ಮೂಲಕ ಮಣ್ಣಿನ ಮಗ ಎಂಬುವುದನ್ನು ಮತ್ತೊಮ್ಮೆ ಸಾಭಿತು ಪಡಿಸಿದರು .ದೇವೇಗೌಡರ ಈ ಸಹಾಯವನ್ನು ಪಂಜಾಬಿನ ರೈತರು ಮರೆಯಲಿಲ್ಲ ತಾವು ಬೆಳೆಯುವ ಭತ್ತದ ತಳಿಯೊಂದಕ್ಕೆ ದೇವೇಗೌಡ ಎಂದು ನಾಮಕರಣ ಮಾಡುವ ಮೂಲಕ ದೇವೇಗೌಡರನ್ನು ಸದಾ ನೆನಪಿಸಿಕೊಳ್ಳುತ್ತಾರೆ⁠⁠⁠⁠.

‘ಮಂತ್ರ ತಂತ್ರದಾಚೆಗೆ ಮಣ್ಣಿನ ಮಗನ ಕಥೆ ಹೇಳುವೆ’ ಎಂಬ ಅಂಕಣವನ್ನು ಬಿ.ಜೆ.ಪಿ ಸಂಸದ ಪ್ರತಾಪ್ ಸಿಂಹ ಅವರು ಬರೆದಿದ್ದರು ಇಷ್ಟು ಸಾಕಲ್ಲವೇ ಅವರ ಗೌರವಯುತವಾದ ನಡೆಗೆ.

‘ನಾನು ಕನ್ನಡಿಗ’ ನನಗೆ ಹಿಂದಿ ಬರೋಲ್ಲ ಎಂದಾಗ ಆದ ಸಂತೋಷ ಅಷ್ಟಿಷ್ಟಲ್ಲ .

ತಮ್ಮ ಪತ್ನಿ ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬಂದಾಗ ಅವರು ಕೇಳಿದ್ದು “ನೀವು ಹೇಗೆ ಬಂದ್ರಿ ಮೊದ್ಲೇ ಹೇಳಿದ್ರೆ ನಾನೇ ಕರ್ಕೊಂಡು ಬರ್ತಿದ್ದೆ ” ಅಂತ ಹೆಂಡತಿಯ ಬಗೆಗಿನ ಆ ಪ್ರೀತಿ ಎಲ್ಲರಿಯೂ ಇಷ್ಟವಾಗುತ್ತೆ , ಅಷ್ಟೇ ಅಲ್ಲದೆ ತಮ್ಮ ಪತ್ನಿಯ ಜೊತೆಗೂಡಿ ಕಾರ್ಯಕ್ರಮ ವೀಕ್ಷಣೆ ಮಾಡಿದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top