fbpx
ಕನ್ನಡ

ಕರ್ನಾಟಕದ ಕೀರ್ತಿ ಕಲಶ ಹೆಮ್ಮೆಯ ಕನ್ನಡಿಗ ಪ್ರಧಾನಿ ದೇವೇಗೌಡ್ರು 11 ತಿಂಗಳಲ್ಲಿ ಮಾಡಿದ 24 ಜನಪರ ,ರೈತ ಪರ ಕೆಲಸಗಳು ಹೀಗಿವೆ..

ದೇವೇಗೌಡರು ಪ್ರಧಾನಿಯಾಗಿದ್ದಾಗ ಮಾಡಿದ ಕೆಲಸಗಳು.

1.ಪ್ರಥಮವಾಗಿ ಮಾಡಿದ್ದೆ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು ಚಂದ್ರಬಾಬು ನಾಯ್ಡುವಿನ ವಿರೋಧದ ನಡುವೆಯು 524 ಮೀಟರ್ಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದರು.

2. ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ “ಗಾಡ್ಗಿಲ್ ಫಾರ್ಮುಲ”ವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಸಾವಿರ ಕೋಟಿ ಅನುದಾನ ನೀಡಿದರು.

3. ನಷ್ಟದಲ್ಲಿದ್ದ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು 600ಕೋಟಿ ಅನುದಾನ ನೀಡಿ SAILನ ಸುರ್ಪದಿಗೆ ಒಪ್ಪಿಸಿದರು.

4. ಬೆಂಗಳೂರು ಮತ್ತು ಮೈಸೂರಿಗೆ ನ್ಯಾಷನಲ್ ಗೇಮ್ ವಿಲೇಜ್ ಸ್ಥಾಪಿಸಿ ನ್ಯಾಷನಲ್ ಗೇಮ್ ನಡೆಸಿದರು.

5. ಬೆಂಗಳೂರಿನ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಗೌಡರು ತಮಿಳುನಾಡಿನ ವಿರೋಧದ ನಡುವೆಯು 9ಟಿಎಂಸಿ ನೀರು ಸಿಗುವಂತೆ ಮಾಡಿದರು, ಅದನ್ನೇ ಬೆಂಗಳೂರಿನ ಹೊರವಲಯದ ಜನ ಈಗ ಕುಡಿಯುತ್ತಿರುವುದು.

6. ಬೆಂಗಳೂರಿನ ಬೆಳವಣಿಗೆಗೆ ರಸ್ತೆಗಳ ವಿಸ್ತೀರ್ಣ ಅನಿವಾರ್ಯವಾಗಿತ್ತು ಆದರೆ ಆ ಜಾಗವೆಲ್ಲಾ ಭಾರತೀಯ ಸೇನೆಗೆ ಸೇರಿದ್ದ ಕಾರಣ ಕೇಂದ್ರ ಸರ್ಕಾರದೊಂದಿಗೆ ಏನೇ ವಿನಂತಿಗಳು ನಡೆದಿದ್ದರು 15ವರ್ಷಗಳಿಂದ ಸಾಧ್ಯವಾಗಿರಲಿಲ್ಲ, ಆದರೆ ಗೌಡರು ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಡಿಎಗೆ ವರ್ಗಾವಣೆ ಮಾಡಿ ಇಂದಿನ ಹಳೆ ವಿಮಾನ ರಸ್ತೆ, ಸಿವಿ ರಾಮನ್ ರಸ್ತೆ, ಹಲಸೂರು ಕೆರೆ ರಸ್ತೆ, ಕೋರಮಂಗಲ ರಸ್ತೆಗಳು ನಿರ್ಮಾಣವಾಗಿ ರಸ್ತೆ ಸಂಚಾರ ಸುಗುಮವಾಯಿತು.

7. ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣ ವಾಗುತ್ತಿದ್ದ ಐಟಿ ಪಾರ್ಕ್ ಗಳು ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮವನ್ನು ಉತ್ತೇಜಿಸಲು ಐಟಿ ಉದ್ಯಮಕ್ಕೆ 10ವರ್ಷ ಟ್ಯಾಕ್ಸ್ ಹಾಲಿಡೆ ಘೋಷಿಸಿ ದೇಶದಲ್ಲಿ ಐಟಿ ಕ್ರಾಂತಿಗೆ ಮುನ್ನಡಿ ಬರೆದರು.

8. ಆಗ ನಮ್ಮ ರಾಜ್ಯಕ್ಕೆ ಪ್ರತ್ಯೇಕ ರೈಲ್ವೆವಲಯವಿಲ್ಲದೆ ಉದ್ಯೋಗದಲ್ಲಿ ಮತ್ತು ರೈಲುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದಿದ್ದನ್ನು ಮನಗೊಂಡು ರಾಜ್ಯಕ್ಕೆ ಪ್ರತ್ಯೇಕ ರೈಲ್ವೆವಲಯವನ್ನು ತಂದರು.

9. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸ್ಥಾಪನೆಗೆ ರೂಪರೇಷಗಳನ್ನು ಸಿದ್ಧಪಡಿಸಿ, ಅನುಮತಿ ನೀಡಿದರು.

10. ಸೀಬರ್ಡ ನೌಕಾ ನೆಲೆಗೆ ಹೆಚ್ಚಿನ ಅನುದಾನ ನೀಡಿದರು.

11. ಘಟಪ್ರಭ ಮತ್ತು ಕಾರಂಜಿ ನೀರಾವರಿ ಯೋಜನೆಗಳಿಗೆ ಹಣ ಒದಗಿಸಿ ಅನುಷ್ಠಾನಗೊಳಿಸಿದರು.

12. ತುಮಕೂರು, ಬಳ್ಳಾರಿ, ಬೆಳಗಾವಿ, ಬಿಜಾಪುರ, ಹಾಸನ, ಧಾರವಾಡ, ಶಿವಮೊಗ್ಗ, ಮೈಸೂರು ಮುಂತಾದಡೆ 20 ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಾಡಿದ ಕೆಲಸಗಳು.

13. 1988ರ ನಂತರ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳೆ ನಡೆಯದೆ ಎಲ್ಲೆಲ್ಲೂ ಅಶಾಂತಿ ತಲೆದೂರಿದ ಸಮಯದಲ್ಲಿ ಗೌಡರು ಕಾಶ್ಮೀರಕ್ಕೆ ತೆರಳಿ, ಅಲ್ಲಿನ ಜನರಿಗೆ ವಿಶ್ವಾಸ ಮೂಡಿಸಿ, ಚುನಾವಣೆ ನಡೆಸಿ, ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸುವ ಹಾಗೆ ಮಾಡಿದರು.

14. ಬಹಳಷ್ಟು ವರ್ಷಗಳಿಂದ ಬಾಂಗ್ಲ ದೇಶದೊಂದಿಗಿದ್ದ ಫರಕ್ಕ ಬ್ಯಾರೇಜಿನ ನೀರಿನ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಾಂಗ್ಲ ಪ್ರಧಾನಿಯೊಂದಿಗೆ ಸೌಹಾರ್ದಯುತವಾಗಿ ಬಗೆಹರಿಸಿದರು.

15. ದೇಶದ 10 ಡ್ರೀಮ್ ಬಜೆಟ್ ಗಳಲ್ಲಿ ಗೌಡರದ್ದು ಓಂದು.

16. ಗುಜರಾತ್ ಮತ್ತು ಮಧ್ಯಪ್ರದೇಶಗಳ ನಡುವೆಯಿದ್ದ ನೀರಿನ ಸಮಸ್ಯೆಯನ್ನು ಚಾಣಾಕ್ಷತನದಿಂದ ಬಗೆಹರಿಸಿದರು.

17. ರಾಷ್ಟ್ರೀಯ ಕೃಷಿ ಯೋಜನೆಯನ್ನು ತಂದರು.

18. ದಿಲ್ಲಿ ಮೆಟ್ರೋಗೆ ಅನುಮತಿ ನೀಡಿ, ಕೇಂದ್ರ ಸರ್ಕಾರದಿಂದ 50%ರಷ್ಟು ಅನುದಾನ ನೀಡಿ, ಕೆಲಸಕ್ಕೆ ಚಾಲನೆ ನೀಡಿದರು.

19. ಪ್ರಥಮವಾಗಿ ಲೋಕಪಾಲ ಮಸೂದೆ ಮಂಡಿಸಿದರು.

20. ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳ ಮೀಸಲು ವಿಧೇಯಕ ಮಂಡಿಸಿದರು.

21. ದೇಶದ ಅಭಿವೃದ್ಧಿಗೆ ಹೆದ್ದಾರಿ ನಿರ್ಮಾಣದ ಮಹತ್ವವನ್ನು ಮನಗೊಂಡು, ಹೆದ್ದಾರಿ ನಿರ್ಮಾಣದ ರಹದಾರಿ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಳ್ಳುವ ಮೂಲಕ ಚಾಲನೆಯನ್ನು ನೀಡಿದರು.

22. ರೈತರ ಅನುಕೂಲಕ್ಕಾಗಿ ಟ್ರಾಕ್ಟರ್ ಮತ್ತು ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ಕೊಟ್ಟು, ಟ್ಯಾಕ್ಸ್ ಫ್ರೀ ಮಾಡಿ ರೈತರ ಕಲ್ಯಾಣಕ್ಕೆ ಮುನ್ನುಡಿ ಬರೆದರು.

23. ಪ್ರಥಮ ಬಾರಿಗೆ ಕಪ್ಪುಹಣದ ಮೇಲೆ ಕಣ್ಣಿಟ್ಟು, ಕಾಳ ಧನಿಕರಿಗೆ ಸಿಂಹಸ್ವಪ್ನರಾಗಿ 10000ಕೋಟಿ ಕಪ್ಪು ಹಣ ಹೊರತಂದರು.

24. 1997ರಲ್ಲಿ ಓಮ್ಮೆ ಪಂಜಾಬ್ ನ ರೈತರು ಯತೇಚ್ಚವಾಗಿ ಭತ್ತ ಬೆಳೆದ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ರೈತರಿಂದ ಭತ್ತ ಖರೀದಿಸಲು ಯಾರೂ ಮುಂದೆ ಬರಲಿಲ್ಲ ಜೊತೆಗೆ ರೈತರಿಗೆ ಆಸರೆಯಾಗಬೇಕಿದ್ದ ಅಲ್ಲಿನ ಸ್ಥಳೀಯ ಪಂಜಾಬ್ ಸರಕಾರವೂ ರೈತರಿಗೆ ಸಹಾಯ ಮಾಡಲಿಲ್ಲ ಆದರೆ ಪ್ರಧಾನಿಯಾಗಿದ್ದ ದೇವೇಗೌಡರಿಗೆ ವಿಚಾರ ತಿಳಿದು ರೈತರು ಬೆಳೆದ ಅದೇಷ್ಟೇ ಭತ್ತವಿದ್ದರೂ ಆ ಎಲ್ಲಾ ಭತ್ತವನ್ನು ರೈತರಿಂದ ಖರೀದಿಸಲು ಆದೇಶ ನೀಡುವ ಮೂಲಕ ಮಣ್ಣಿನ ಮಗ ಎಂಬುವುದನ್ನು ಮತ್ತೊಮ್ಮೆ ಸಾಭಿತು ಪಡಿಸಿದರು .ದೇವೇಗೌಡರ ಈ ಸಹಾಯವನ್ನು ಪಂಜಾಬಿನ ರೈತರು ಮರೆಯಲಿಲ್ಲ ತಾವು ಬೆಳೆಯುವ ಭತ್ತದ ತಳಿಯೊಂದಕ್ಕೆ ದೇವೇಗೌಡ ಎಂದು ನಾಮಕರಣ ಮಾಡುವ ಮೂಲಕ ದೇವೇಗೌಡರನ್ನು ಸದಾ ನೆನಪಿಸಿಕೊಳ್ಳುತ್ತಾರೆ.

ಕೃಪೆ :ಕರ್ತೃ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top