fbpx
ಸಾಧನೆ

8 ನೇ ಕ್ಲಾಸ್ ಫೇಲ್ ಆದವನು 22 ವರ್ಷಕ್ಕೆ ಕೋಟಿ ಕೋಟಿ ಸಂಪಾದನೆ ಮಾಡೋ ಕಂಪನಿ ಶುರು ಮಾಡಿದ ಕಥೆ..

8 ನೇ ಕ್ಲಾಸ್ ಫೇಲ್ ಆದವನು 22 ವರ್ಷಕ್ಕೆ ಕೋಟಿ ಕೋಟಿ ಸಂಪಾದನೆ ಮಾಡೋ ಕಂಪನಿ ಶುರು ಮಾಡಿದ ಕಥೆ..

ಒಳ್ಳೆಯ ಶೈಕ್ಷಣಿಕ ಕಾರ್ಯಕ್ಷಮತೆಯೊಂದಿಗೆ ವೃತ್ತಿಜೀವನದಲ್ಲಿ ದೊಡ್ಡ ಸಾಧನೆಗಳನ್ನು ಜನರು ಮಾಡುತ್ತಾರೆ ಅದು ಸಹಜ ಕ್ರಿಯೆ ಕೂಡ , ಇವೆಲ್ಲವೂ ಕೆಲವರು ಹೆಚ್ಚೇನೂ ಓದದೇ ಬರೆಯದೆ ಮಾಡಿದಾಗ ದೊಡ್ಡ ದಾಗಿ ಕಾಣಲು ಶುರುವಾಗುತ್ತದೆ ಓದಿನಲ್ಲಿ ದುರ್ಬಲವಾಗಿದ್ದರೂ ಕೂಡ ಅವರ ಯಶಸ್ಸು ಆಶ್ಚರ್ಯಗೊಳಿಸುತ್ತದೆ.


8 ನೇ ತರಗತಿ ಫೇಲ್ ಆಗಿ ತನ್ನ 21 ನೇ ವಯಸ್ಸಿನಲ್ಲಿ ಬಹು ಮಿಲಿಯನ್ ಡಾಲರ್ ವ್ಯವಹಾರವನ್ನು ನಿರ್ಮಿಸಿದ ಹುಡುಗನ ಬಗ್ಗೆ ನಾವಿಂದು ಮಾತಾಡುತ್ತಿದ್ದೇವೆ.

ತ್ರಿಷನೀತ್ ಅರೋರಾ ಇವ್ನ ಹೆಸರು ರಿಲಯನ್ಸ್, ಅಮುಲ್, ಏವನ್ ಸೈಕಲ್ಸ್ ಇಂತಹ ಎಷ್ಟೋ ಕಂಪನಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ.
ಜಗತ್ತಿನಲ್ಲಿ ಮನೋ ಶಕ್ತಿಗಿಂತ ಬೇರಾವುದೂ ದೊಡ್ಡದಿಲ್ಲ ಎಂಬುದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆ , 23 ವರ್ಷ ವಯಸ್ಸು ಸೈಬರ್ ಭದ್ರತೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯ TAC ಭದ್ರತೆಗೆ ಮುಖ್ಯಸ್ಥರಾಗಿರುತ್ತಾರೆ. ಲುಧಿಯಾನಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಿಂದಲೂ ಕಂಪ್ಯೂಟರ್ಗಳು ನೆಚ್ಚಿನ ವಸ್ತುಗಳಾಗಿದ್ದವು.

ಹ್ಯಾಕಿಂಗ್ ಬಗ್ಗೆ ಹೆಚ್ಚು ಮಾಹಿತಿ ಪಡೆಯುವುದು ಅವನ ಗೀಳಾಯಿತು ಅವನ ಮನಸ್ಸನ್ನು ಸಂಪೂರ್ಣವಾಗಿ ಅಧ್ಯಯನದಲ್ಲಿ ಮುಳುಗುವಂತೆ ಮಾಡಿತು ಇದೆ ಕಾರಣದಿಂದ 8 ನೇ ತರಗತಿಯಲ್ಲಿ ಫೇಲ್ ಆದನು ಇದೆ ವಿಷಯ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ನಗೆಪಾಟಲಿನ ವಸ್ತುವಾಯ್ತು.

ಕೇವಲ 22 ನೇ ವಯಸ್ಸಿನಲ್ಲಿ ಅವರು ಟಿಎಸಿ ಸೆಕ್ಯೂರಿಟಿ ಕಂಪನಿಯ ಅಡಿಪಾಯ ಹಾಕಿದರು ಅವರ ಕೌಶಲ್ಯದಿಂದಾಗಿ ರಿಲಯನ್ಸ್, ಸಿಬಿಐ, ಪಂಜಾಬ್ ಪೊಲೀಸ್, ಗುಜರಾತ್ ಪೊಲೀಸ್, ಅಮುಲ್ ಮತ್ತು ಏವನ್ ಸೈಕಲ್ಸ್ ಕಂಪನಿಗಳ ಪ್ರಾಜೆಕ್ಟ್ ಪಡೆದುಕೊಂಡರು ಇದಲ್ಲದೆ ‘ಹ್ಯಾಕಿಂಗ್ ಟಾಕ್ ವಿಥ್ ತ್ರಿಷನೀತ್ ಅರೋರಾ’ , ‘ದಿ ಹ್ಯಾಕಿಂಗ್ ಎರಾ’ ಮತ್ತು ‘ಹ್ಯಾಕಿಂಗ್ ವಿತ್ ಸ್ಮಾರ್ಟ್ ಫೋನ್’ ಎಂಬ ಮೂರು ಪುಸ್ತಕಗಳನ್ನು ಸಹ ಬರೆದಿದ್ದಾರೆ.

ಅವನ ವ್ಯವಹಾರದ ಯಶಸ್ಸು ದುಬೈ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ ಅವನ ಕಚೇರಿಗಳನ್ನು ತೆರೆದಿದೆ ವಹಿವಾಟು ಪ್ರತಿ ವರ್ಷ ಕೋಟಿ ರೂಪಾಯಿಗಳಲ್ಲಿ ನಡೆಯುತ್ತದೆ.

ನಗುವವರ ಮುಂದೆ ಚೆನ್ನಾಗಿ ಬದುಕಿ ತೋರಿಸಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

4 Comments

4 Comments

Leave a Reply

Your email address will not be published. Required fields are marked *

To Top