fbpx
ಜೀವನ ಕ್ರಮ

ನಮ್ಮ ಕಷ್ಟ ದೊಡ್ಡದೋ ? ನಿಮ್ಮ ಕಷ್ಟ ದೊಡ್ಡಡೋ ? ಯಾರ್ಯಾರಿಗೆ ಕಷ್ಟ ಇದ್ಯೋ ಅವ್ರಿಗೆ ಉತ್ತರ ಸಿಗುತ್ತೆ ಮುಂದೆ ಓದಿ ..

ನಮ್ಮ ಕಷ್ಟ ದೊಡ್ಡದೋ ?  ನಿಮ್ಮ ಕಷ್ಟ ದೊಡ್ಡಡೋ ?

ಈಗ ನೀವೇನಾದರೂ ಕಷ್ಟ ಅನುಭವಿಸುತ್ತಿದ್ದೀರಾ ? ಹಾಗಿದ್ದರೆ ಈ ಸೂಫಿ ಕಥೆ ಓದಿ ನೋಡಿ !ಅಲ್ಲಿ ಸ್ವಲ್ಪ ತಮಾಷೆ ಇದೆ.ಸ್ವಲ್ಪ ತತ್ವವೂ ಇದೆ. ಒಬ್ಬ ಸುಲ್ತಾನ ತನ್ನ ಅಸ್ಥಾನಿಕರೊಂದಿಗೆ ಹಡಗಿನಲ್ಲಿ ವಿಹಾರ ಹೊರಟ .

ಆಸ್ಥಾನಿಕರಲ್ಲಿ ಒಬ್ಬಾತನಿಗೆ  ಅದು ಮೊಟ್ಟ ಮೊದಲ ಸಮುದ್ರಯಾನ.ಸುತ್ತಲೂ ಅಪರಿಮಿತವಾದ  ನೀರು.ಹಡಗು ಸಮುದ್ರದ ನೀರಿನಲ್ಲಿ ತೇಲಾಡುತ್ತಿತ್ತು. ಹೊಯ್ದಾಡುವ ಹಡಗು ಮುಳುಗುತ್ತದೆನೋ ಎಂದು ಭಯವಾಯಿತು.ಆತ ಪ್ರಾಣ ಭಯದಿಂದ ಕಿರುಚ ತೊಡಗಿದ. ಇತರರು ಈತನನ್ನು  ಸಮಾಧಾನಗೊಳಿಸಲು ಯತ್ನಿಸಿದರು.ಧೈರ್ಯ ಹೇಳಿದರು.

ಯಾರೇನು ಮಾಡಿದರೂ ಆತನ ಕಿರುಚಾಟ ನಿಲ್ಲಲಿಲ್ಲ. ಹೆಚ್ಚಾಗುತ್ತಲೇ ಹೋಯಿತು. ಅದು ಸುಲ್ತಾನನ ಕಿವಿಗೂ ಬಿತ್ತು. ಸುಲ್ತಾನನಿಗೆ ಸಿಟ್ಟು ಬಂತು. ಆತ ತನ್ನ ಮಂತ್ರಿಯನ್ನು ಕರೆದು , “ ಇವನ ಕಿರುಚಾಟ ವಿಹಾರದ ಅನಂದವನ್ನೇ  ಹಾಳು ಮಾಡುತ್ತಿದೆ.ಅದನ್ನು ಹೇಗಾದರೂ ನಿಲ್ಲಿಸಿ”  ಎಂದು ಆಜ್ಞಾಪಿಸಿದ.

ಮಂತ್ರಿ “ತಾವು ಅನುಮತಿ ಕೊಟ್ಟರೆ ನಾನೊಂದು ಪ್ರಯೋಗ ಮಾಡುತ್ತೇನೆ”  ಎಂದು ಕೇಳಿಕೊಂಡ.ಅವನ ಕಿರುಚಾಟ ನಿಂತರೆ ಸಾಕೆಂದುಕೊಳ್ಳುತ್ತಿದ್ದ ಸುಲ್ತಾನ ತಕ್ಷಣ ಒಪ್ಪಿಗೆಯನ್ನಿತ್ತ. ಮಂತ್ರಿ ರಾಜಭಟರನ್ನು ಕರೆದು. ಹೊಸಬನನ್ನು ಸಮುದ್ರಕ್ಕೆ ಎಸೆಯುವಂತೆ ಹೇಳಿದ.ಕಿರುಚಾಡುತ್ತಿದ್ದ ಅವನನ್ನು ರಾಜಭಟರು ಅನಾಮತ್ತಾಗಿ ಸಮುದ್ರಕ್ಕೆಸೆದರು. ಆತ ಸಮುದ್ರದ ನೀರಿನಲ್ಲಿ ದುಪ್ಪೆಂದು ಬಿದ್ದ.ಆಗ ಆತ ಇನ್ನೂ ಗಾಬರಿಗೊಂಡ. ಉಪ್ಪು ನೀರು ಕುಡಿಯುತ್ತಾ,ಉಸಿರಾಡಲು ಒದ್ದಾಡುತ್ತಾ ,ನೀರಿನಲ್ಲಿ ಒಮ್ಮೆ ಮುಳುಗುತ್ತಾ,ಒಮ್ಮೆ ತೇಲುತ್ತಾ ಇದ್ದ.

ಹೇಗೋ ಏನೋ ಮಾಡಿ ಹಡಗಿನ ಒಂದು ಗೋಡೆಯನ್ನು ಆಸರೆಯನ್ನಾಗಿ ಹಿಡಿದು ಕೊಂಡು , “ಇನ್ನೂ ಕಿರುಚುವುದಿಲ್ಲ,ನನ್ನನ್ನು ಕಾಪಾಡಿ, ನನ್ನನ್ನು ಮೇಲಕ್ಕೆ ಎತ್ತಿಕೊಳ್ಳಿ”  ಎಂದು ಗೋಗರೆದನು. ಮಂತ್ರಿಯ ಅನುಮತಿ ಪಡೆದು ರಾಜಭಟರು ಆತನನ್ನು ಮೇಲಕ್ಕೆ ಎತ್ತಿಕೊಂಡರು. ಹಡಗಿನೊಳಕ್ಕೆ ಬಂದ ಆತ ಒಂದು ಮೂಲೆಯಲ್ಲಿ ಗಂಭೀರವಾಗಿ ಕುಳಿತ,ಕೂಗಾಟವಿಲ್ಲ, ಕಿರುಚಾಟವಿಲ್ಲ. ಆಶ್ಚರ್ಯಗೊಂಡ ಸುಲ್ತಾನ ಮಂತ್ರಿಯನ್ನು “ ನೀವು ಆತನನ್ನು ಸಮುದ್ರಕ್ಕೆ ಎಸೆದಿದ್ದೇಕೆ ? ಈಗ ಆತ ಸುಮ್ಮನೇ ಕುಳಿತಿರುವುದೇಕೆ ?”  ಎಂದು ಪ್ರಶ್ನಿಸಿದ.

ಮಂತ್ರಿ, “ ಆತ  ಹಡಗಿನಲ್ಲಿ ಪ್ರಯಾಣ ಮಾಡುತ್ತಿರುವುದು ಮೊದಲನೆಯ ಬಾರಿ. ಹಡಗಿನ  ಹೊಯ್ದಾಟ ಆತನಿಗೆ ಗಾಬರಿಯುಂಟು ಮಾಡಿತ್ತು. ತನಗೆ  ಏನೋ ದೊಡ್ಡ ಕಷ್ಟ ಬಂದೊದಗಿದೆ ಎಂದು ಆತ ಭಾವಿಸಿದ. ಸಮುದ್ರಕ್ಕೆ ಎಸೆದಾಗ ಆತ ನೀರಿನಲ್ಲಿ ಬಿದ್ದ.ಉಪ್ಪು ನೀರು ಕುಡಿದ. ಉಸಿರಾಟಕ್ಕೂ ಒದ್ದಾಡಿದ. ಹಡಗಿನಲ್ಲಿ ಹೊಯ್ದಾಟ ಇತ್ತು ಆದರೂ ಉಸಿರಾಟಕ್ಕೆ ಪರದಾಟವಿರಲಿಲ್ಲ.ಮುಳುಗಿ ಹೋಗುವ ತಳಮಳವಿರಲಿಲ್ಲ. ಸಮುದ್ರದ ನೀರಿನಲ್ಲಿ ಬಿದ್ದು  ಸಾಯುವುದಕ್ಕಿಂತ  ಹಡಗಿನಲ್ಲಿದ್ದು  ಹೊಯ್ದಾಡುತ್ತಿರುವುದು ಎಷ್ಟೋ ಮೇಲು ,ಒಳ್ಳೆಯದು ಎಂದು ಆತನಿಗೆ ಅನಿಸಿರಬೇಕು.ಹಾಗಾಗಿ ಸುಮ್ಮನೇ ಕುಳಿತಿದ್ದಾನೆ”  ಎಂದ.

ಮಂತ್ರಿಯ ಮಾತಿನಲ್ಲಿನ  ಸತ್ಯವನ್ನು ಅರ್ಥ ಮಾಡಿಕೊಂಡ ಸುಲ್ತಾನ ಮೆಚ್ಚಿ ತಲೆದೂಗಿದ. ನಾವು ಬದುಕಿನಲ್ಲಿ ಯಾವಾಗಲಾದರೂ ಒಮ್ಮೆ ಕಷ್ಟಕ್ಕೆ ಸಿಲುಕಿ ಕೊಂಡಾಗ “ ಬೇರೆಯವರೆಲ್ಲಾ ಸುಖವಾಗಿದ್ದಾರೆ,ಅವರಿಗೆ ಕಷ್ಟಗಳೇ ಇಲ್ಲ.ಇದ್ದರೂ ಅವು ಸಣ್ಣ ಪುಟ್ಟ ಕಷ್ಟಗಳು.ನಮಗೆ ಬಂದೊದಗಿರುವ ಕಷ್ಟ ಮಾತ್ರ ಬಹಳ ದೊಡ್ಡದು, ನಮ್ಮ ಅದೃಷ್ಟವೇ ಸರಿಯಿಲ್ಲ.ದೇವರಿಗೆ ಕರುಣೆಯಿಲ್ಲ.ನಾವು ಇಲ್ಲಿಯೇ ಓದ್ದಾಡುತ್ತಿದ್ದೇವೆ”   ಎಂದೆಲ್ಲಾ ಯೋಚಿಸುವುದು ಸಹಜ. ಆದರೆ ನಮಗಿಂತ, ಕಷ್ಟದಲ್ಲಿರುವರೊಂದಿಗೆ ಹೋಲಿಸಿಕೊಂಡು ಸಮಾಧಾನ ಮಾಡಿಕೊಳ್ಳುವುದು. ಈ ಕಷ್ಟದಿಂದ ಪಾರಾಗುವುದರ ಬಗ್ಗೆ ಯೋಚಿಸುವುದು ಉಚಿತವಲ್ಲವೇ ?

“ಮುಂಜಾನೆ ನನ್ನ ಕಾಲಿಗೆ ಪಾದರಕ್ಷೆಗಳನ್ನು ಕೊಡದ ದೇವರನ್ನು ನಾನು ಶಪಿಸಿದೆ! ಸಂಜೆ ರಸ್ತೆಯಲ್ಲಿ ಕಾಲೇ ಇಲ್ಲದವನನ್ನು ಕಂಡಾಗ ಆ ದೇವರಿಗೆ ನಮಿಸಿದ”.

ಈ ಕಥೆಯಿಂದ ತಿಳಿದು ಬರುವ ನೀತಿಯೇನೆಂದರೆ ನಾವು ಜೀವನದಲ್ಲಿ ಯಾವಾಗಲೂ ನಮಗಿಂತ ಜಾಸ್ತಿ  ಆಸ್ತಿ, ಅಂತಸ್ತು, ಐಶ್ವರ್ಯ, ಹಣ, ಕಾರು ,ಬಂಗಲೆ, ದೊಡ್ಡ   ಮನೆ ಇರುವವರನ್ನು ನೋಡಿ ನಮಗೂ ಯಾಕೆ ದೇವರು ಅವುಗಳನ್ನೆಲ್ಲ ಕೊಟ್ಟಿಲ್ಲಾ ? ಎಂದು ಯೋಚನೆ ಮಾಡಿ ಚಿಂತಿಸುತ್ತೇವೆ, ತಲೆ ಕೆಡಿಸಿಕೊಳ್ಳುತ್ತೇವೆ ಅಲ್ಲವೇ? ಇದರ ಬದಲು ನಮಗಿಂತ ಸ್ವಲ್ಪ ಕೆಳಮಟ್ಟದಲ್ಲಿ ಇರುವವರನ್ನು ,ಏನೂ ಇಲ್ಲದೆ ನಿರ್ಗತಿಕರಾಗಿ ಊಟ,ವಸತಿ ಇಲ್ಲದವರು ಹಣ ವಿಲ್ಲದವರು ಬಡವರು ಇಂಥವರನ್ನು ನೋಡಿ ನಮಗೆ ದೇವರು ಇಷ್ಟಾದರೂ ಕೊಟ್ಟಿದ್ದಾನಲ್ಲ ಎಂದು ಮನಸ್ಸಿಗೆ ನೆಮ್ಮದಿಯನ್ನು ತಂದುಕೊಂಡು ಜೀವನದಲ್ಲಿ ತೃಪ್ತಿಯಿಂದ ಇರುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top