fbpx
ಸಾಧನೆ

ಇಂಜಿನಿಯರಿಂಗ್ ಓದಿ ಬೇರೆ ಅವ್ರಿಗೆ ಯಾಕೆ ಕೆಲಸ ಮಾಡ್ಬೇಕು ಅಂತ ಸ್ಟಾರ್ಟ್ ಮಾಡಿದ ಟೀ ಅಂಗಡಿ ಇವ್ರನ್ನ ಕೋಟ್ಯಾಧಿಪತಿಗಳಾಗಿ ಮಾಡ್ಬಿಡ್ತು..

 ಇಬ್ಬರು ಇಂಜಿನಿಯರಗಳು ತಮ್ಮ ಸರಳವಾದ ಒಂದು  ಟೀ ಮಾರುವ ಕಲ್ಪನೆಯನ್ನು ಉಪಯೋಗಿಸಿಕೊಂಡು ಇಂದು ಲಕ್ಷ, ಕೋಟಿಯಷ್ಟು ವ್ಯಾಪಾರದ ವಹಿವಾಟನ್ನು ಮಾಡುತ್ತಿದ್ದಾರೆ.

ಪ್ರತಿಯೊಬ್ಬರೂ ನಾವು ಯಾವುದೇ ಪ್ರಶ್ನೆಗೆ ಉತ್ತರ ಕೊಡುವ ಮೊದಲು ನಮ್ಮ ಯೋಗ್ಯತೆಯನ್ನು ಒಮ್ಮೆ  ನೆನಪು ಮಾಡಿಕೊಳ್ಳಬೇಕು.ಆಗ ನಾವು ಜೀವನದಲ್ಲಿ ಏನು ಮಾಡಬೇಕೆಂದು ಅಂದುಕೊಂಡಿದ್ದೇವೆ ಎಂದು ಅರಿವಾಗುತ್ತದೆ.ಅದೆಷ್ಟೋ ವರ್ಷಗಳಿಗೆ  ಉತ್ತರವೂ  ನಮ್ಮ ಕೆಲವು ಆಯ್ಕೆಗಳಿಗೆ ಮಾತ್ರ  ಸೀಮಿತವಾಗಿರುತ್ತದೆ.ಅವು ವೈದ್ಯ ಶಿಕ್ಷಣ, ಇಂಜಿನಿಯರಿಂಗ್, ಬೋಧನಾ ವಿಭಾಗ ಮತ್ತು ಲೆಕ್ಕಶಾಸ್ತ್ರ ಹೀಗೆ ಇನ್ನೂ ಅನೇಕ.ಆದರೆ ಸಮಯ ಬದಲಾದ ಹಾಗೆ ಇತ್ತೀಚಿನ ಟ್ರೆಂಡ್ಗಳು ಕೂಡ ಬದಲಾಗುತ್ತಿವೆ ಮತ್ತು ಜನಗಳು ಅಸಂಪ್ರದಾಯಿಕ ಆಯ್ಕೆಗಳನ್ನು ಪರಿಗಣಿಸಲು ಆರಂಭಿಸಿದ್ದಾರೆ.

ಇತ್ತೀಚೆನ  ದಿನಗಳಲ್ಲಿ  ಯುವ ಪೀಳಿಗೆಯ ಜನಾಂಗದವರು ವೃತ್ತಿ ಶಿಕ್ಷಣದ ಬದುಕನ್ನು ಬಿಟ್ಟು ಬೇರೆ ಕಡೆಗೆ ಒಲವನ್ನು ತೋರುತ್ತಿದ್ದಾರೆ.ಇಂಜಿನಿಯರ್ ಮತ್ತು ಡಾಕ್ಟರಗಳು ಸಹ ವ್ಯಾಪಾರವನ್ನು ಮಾಡುವುದಕ್ಕೆ ಗಮನ ಕೊಡುತ್ತಿದ್ದಾರೆ ಮತ್ತು ಅವರು ತಮ್ಮ ವೃತ್ತಿ ಜೀವನದಲ್ಲಿ ಪಡೆದಿರುವ ಒಳ್ಳೆಯ ಸ್ಥಾನಗಳನ್ನು , ಆ ಬದುಕನ್ನು ಬಿಟ್ಟು ವ್ಯಾಪಾರದ ಕಡೆ  ಬರಲು ತುದಿಗಾಲಿನಲ್ಲಿ  ತಯಾರಾಗಿ ನಿಂತಿದ್ದಾರೆ.

ಅಭಿನವ್ ಟಂಡನ್ ಮತ್ತು ಪ್ರಮಿತ್ ಶರ್ಮ ಈ ಇಬ್ಬರು ಯುವಕರು ತಮ್ಮ ಕಾಲೇಜಿನ ದಿನಗಳನ್ನು ಮುಗಿಸಿದ ನಂತರ  ಇಂಜಿನಿಯರಿಂಗನಲ್ಲಿ ತಮ್ಮ  ವೃತ್ತಿ ಶಿಕ್ಷಣದಲ್ಲಿ ಕೆಲಸವನ್ನು ಮುಂದೂಡುವ ಬದಲು ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಹೊರಟರು.ಅವರ ಆರಂಭಿಕ ಕಲ್ಪನೆಯು ಉತ್ತಮ ಗುಣಮಟ್ಟದ ಟೀ ಯನ್ನು  ಜನ ಸಾಮಾನ್ಯರಿಗೆ ವಿತರಿಸುವುದಾಗಿತ್ತು. ಈಗ ತನ್ನೆಲ್ಲಾ ಖರ್ಚು ವೆಚ್ಚಗಳನ್ನು ತೆಗೆದು ಹಾಕಿ ವರ್ಷಕ್ಕೆ ಸರಾಸರಿ ಕೋಟಿ ರೂಪಾಯಿಗಳಲ್ಲಿ  ಲಾಭವನ್ನು ತಿರುಗಿ ನೋಡುತ್ತಿದ್ದಾರೆ.

ಅಭಿನವ್ ಮತ್ತು ಪ್ರಮಿತ್ ಉತ್ತರ ಪ್ರದೇಶದ ಮೂಲದವರಾಗಿದ್ದು. ತಮ್ಮ ಒಂದು ಟೀ ಮಾರುವ ಕಲ್ಪನಯು  ತಮ್ಮ ಕನಸನ್ನು ಇಂದು ನನಸು ಮಾಡಿ ವ್ಯಾಪಾರದಲ್ಲಿ ಒಂದು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ.ಅದು ಕೇವಲ ಒಂದು ಲೋಟ ಟೀ ಮಾರುವ ಮೂಲಕ.ಇಂಜಿನಿಯರಿಂಗ ಪದವಿಯನ್ನು ಮುಗಿಸಿದ ಬಳಿಕ ಇಬ್ಬರೂ ಸ್ನೇಹಿತರು ಹೊಸದೊಂದು ಒಳ್ಳೆಯ ವ್ಯಾಪಾರವನ್ನು ಮಾಡುವುದಕ್ಕೆ ನೋಡುತ್ತಿದ್ದರು. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಅವರಿಗೆ,ಸ್ವಂತವಾಗಿ ಏನನ್ನಾದರೂ  ಮಾಡಬೇಕೆಂಬ ಆಸೆಯನ್ನು ಹೊಂದಿದ್ದರು. ಅಂತಿಮವಾಗಿ ಟೀ ಮಾರುವ ಕಲ್ಪನೆಯನ್ನು ಅಸಾಂಪ್ರದಾಯಿಕವಾದ ರೀತಿಯಲ್ಲಿ  ಶುರುಮಾಡಿಕೊಂಡರು.ಇದು ಇವರ ಕೈ ಹಿಡಿಯಿತು ಮತ್ತು “ಚಾಯ್ ಕಾಲಿಂಗ್ ”  ಎನ್ನುವ ಒಂದು ಸಣ್ಣ ಚಿಲ್ಲರೆ ಅಂಗಡಿಯನ್ನು ಪ್ರಾರಂಭಿಸಿದರು.

ಅಭಿನವ್ ಮತ್ತು ಪ್ರಮಿತ್ ರವರ ಈ  ಸಾಹಸೋದ್ಯಮವು ಟೀ ಪ್ರಿಯರ ಒಂದು ದೊಡ್ಡ ಸಮಸ್ಯೆಯನ್ನು  ಬಗಹರಿಸಿಬಿಟ್ಟಿತು.ಬಿಸಿ ಬಿಸಿಯಾದ ಉತ್ತಮ ಗುಣಮಟ್ಟದ  ಟೀಯನ್ನು ವಿತರಿಸಿ ಜನ ಸಾಮಾನ್ಯರ  ಮನೆ ಬಾಗಿಲಿಗೆ ,ಕಚೇರಿಗಳಿಗೆ ಅವರಿಗೆ ಯಾವಾಗ ಬೇಕೋ ಅವಾಗ ತಲುಪಿಸುವ ಮೂಲಕ ಶುರುವಾಯಿತು.

ಇವರಲ್ಲಿ  ಈ  ಕಲ್ಪನೆ  ಹುಟ್ಟಿದ್ದು  ಹೇಗೆ ?

ಅಭಿನವ್ ಮತ್ತು ಪ್ರಮಿತ್ ಇಬ್ಬರು ಇಂಜಿನಿಯರಗಳು.ಒಬ್ಬರು ಕಂಪ್ಯೂಟರ್ ವಿಭಾಗದಲ್ಲಿ ಸಾಫ್ಟವೇರ್ ಇಂಜಿನಿಯರ್, ಇನ್ನೊಬ್ಬರು ಎಲೆಕ್ಟ್ರಿಕಲ್ ಇಂಜಿನಿಯರ್. ಇವರಿಬ್ಬರು ಬೇರೆ ಬೇರೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದು ಕೈ ತುಂಬಾ ಸಂಬಳ ಪಡೆಯುತ್ತಿದ್ದರು. ಇವರಿಬ್ಬರು ಆತ್ಮೀಯ ಗೆಳೆಯರಾಗಿದ್ದು ತಾವು ಇಂಜಿನಿಯರಿಂಗ್ ಪದವಿಯನ್ನು ಅಧ್ಯಯನ ಮಾಡುವಾಗ ಕಾಲೇಜಿನಲ್ಲಿ ವ್ಯಾಪಾರ ಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದುತ್ತಿದ್ದರು. ಪದವಿ  ಮುಗಿದ ತಕ್ಷಣ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದು ನೋಡಿದರು. ಆದರೆ ಆಗ ಹಣದ ಕೊರತೆಯಿಂದಾಗಿ ಸದ್ಯಕ್ಕೆ  ಆ ಆಸೆಯನ್ನು ಕೈ ಬಿಟ್ಟು.ಇಂಜಿನಿಯರಿಂಗ್ ಪದವಿಯ ಮೇಲೆ  ಕಂಪನಿಯಲ್ಲಿ  ಕೆಲಸಕ್ಕೆ  ಸೇರಿಕೊಂಡು ಹಣ ಸಂಪಾದಿಸಲು ಹೋದರು.ಸ್ವಲ್ಪ ಸಮಯದ  ನಂತರ ಇಬ್ಬರು ಕಡಿಮೆ ಬಂಡವಾಳ ಹೂಡಿಕೆಯಲ್ಲಿಯೇ ಕನಿಷ್ಠ ಅಗ್ಯತತೆಗಳನ್ನು ಪೂರೈಸಿ ವ್ಯಾಪಾರವನ್ನು ಮಾಡಲು ನಿರ್ಧರಿಸಿದರು ಇದರ ಜೊತೆ ಜೊತೆಗೆ ಬೇರೆಯವರಿಗೆ ಹೆಚ್ಚಿನ  ಉದ್ಯೋಗಾವಕಾಶಗಳು ಸೃಷ್ಟಿಯಾದವು.

“ಅಭಿನವ್ ಅವರು ಹೇಳುತ್ತಾರೆ ನಮ್ಮ ಕಾಲೇಜು ಮತ್ತು ವೃತ್ತಿ ಬದುಕಿನ ದಿನಗಳಲ್ಲಿ ನಾವು ಬೀದಿ ಬದಿಯಲ್ಲಿ ಮಾರುವವರ ಬಳಿ ಟೀ ಯನ್ನು ತೆಗೆದುಕೊಂಡು  ಕುಡಿಯುತ್ತಿದ್ದೆವು.ಅದರ ಗುಣಮಟ್ಟ ಅತೀ ಕಳಪೆ ಅಂದರೆ ಕೆಳ ಮಟ್ಟದಲ್ಲಿರುತ್ತಿತ್ತು.ಆದ್ದರಿಂದ ನಮಗೆ ಟೀ ಮಾರುವ ಒಂದು ಕಲ್ಪನೆ ಮನಸ್ಸಿನಲ್ಲಿ ಮೂಡಿತು.ಒಳ್ಳೆ ಗುಣಮಟ್ಟದ ಟೀ ಮಾರುವುದನ್ನೇ ವ್ಯಾಪಾರವನ್ನಾಗಿ ಶುರು ಮಾಡಿಕೊಂಡೆವು”.

 ಈ ಉದ್ಯಮವನ್ನು ಹೇಗೆ ಪ್ರಾರಂಭಿಸಿದರು ?

ಇವರು ವ್ಯಾಪಾರವನ್ನು ಶುರು ಮಾಡುವ ಸಲುವಾಗಿ,ಇಬ್ಬರು ಸ್ನೇಹಿತರು ತಮ್ಮ ಇಂಜಿನಿಯರಿಂಗ್ ವೃತ್ತಿಗೆ ವಿಧಾಯ ಹೇಳಿದರು.ಅವರು ಟೀ ಮಾರುವ ಚಿಲ್ಲರೆ ಅಂಗಡಿಯನ್ನು 16ನೇ ಕ್ಷೇತ್ರವಾದ, ನೋಯ್ಡದಲ್ಲಿ , ಮೆಟ್ರೋ ರೈಲು ನಿಲ್ದಾಣದ ಹತ್ತಿರದಲ್ಲಿ ಸ್ಥಾಪಿಸಿದರು. ಮೊದಲನೇ ಹಂತದಲ್ಲಿ  ಒಂದು ಲಕ್ಷ ಬಂಡವಾಳವನ್ನು ಹೂಡಿಕೆ ಮಾಡಿದರು.ಅದು ಅವರ ಸಂಬಳದಲ್ಲಿ ಉಳಿಸಿ ಕೂಡಿಟ್ಟಿರುವ ಹಣವಾಗಿತ್ತು.ಅತ್ಯಂತ ಶುದ್ಧ, ಬಿಸಿ, ಮತ್ತು ಉತ್ತಮ ಗುಣಮಟ್ಟದ ಟೀಯನ್ನು ವಿತರಿಸುವುದರ ಮೂಲಕ ಗ್ರಾಹಕರನ್ನು ಸೆಳೆದರು.ಸಾವಿರಾರು ಗ್ರಾಹಕರು  ಇವರ ಈ ನಿಷ್ಠಾವಂತ ಕೆಲಸಕ್ಕೆ ಮಾರುಹೋದರು ಅದು ಕೇವಲ ಕೆಲವೇ ಕೆಲವು ದಿನಗಳಲ್ಲಿ.

ಇವರ ದೊಡ್ಡ ಸಾಧನೆ.

ಮೊಟ್ಟ ಮೊದಲನೆಯ ಬಾರಿ ಇವರು ವೇಗವಾಗಿ ಮನೆ ,ಕಚೇರಿಯ ಬಾಗಿಲಿಗೆ  ಟೀ ವಿತರಣೆಯನ್ನು ಪ್ರಾರಂಭಿಸಿ.ಅವರ ಪರಿಕಲ್ಪನೆಯ ಕನಸಿಗೆ “ಚಾಯ್ ಬ್ರಿಗೇಡ್” ಎಂದು ಹೆಸರು ಕೊಟ್ಟರು. ಅದು  ಬಿಸಿಯಾದ ,ಶುದ್ದ , ಉತ್ತಮ ಗುಣಮಟ್ಟದ ಟೀಯನ್ನು 15 ನಿಮಿಷದಲ್ಲಿಯೇ ಅವರು ಕರೆ ಮಾಡಿದವರಿಗೆ  ತಲುಪಿಸುತ್ತಿದ್ದರು. ಪ್ರಸ್ತುತ ಅಭಿನವ್ ಮತ್ತು ಪ್ರಮಿತ್ ಇಬ್ಬರು ಸೇರಿ 10 ಟೀ ಸ್ಟಾಲಗಳನ್ನು ವಿವಿಧ ಕಡೆ ತೆರೆದಿದ್ದು.ಇನ್ನೂ ಮುಂದೆ ತಮ್ಮ ವ್ಯಾಪಾರವನ್ನು ಬೃಹದಾಕಾರವಾಗಿ ಬೇರೆ ನಗರಗಳಲ್ಲಿ ಬೆಳೆಸಲು ಕೂಡ ಚಿಂತನೆ ನೆಡೆಸಿದ್ದರು.ಈ ಟೀ ಸ್ಟಾಲಗಳಲ್ಲಿ 15 ವಿವಿಧ ಬಗೆಯ ಟೀ ದೊರೆಯುತ್ತದೆ. ಅದರ ಬೆಲೆ 5 ರೂಪಾಯಿಯಿಂದ ಹಿಡಿದು 25 ರೂಪಾಯಿಯವರೆಗೆ ಇದೆ.ಇದರ ಜೊತೆಗೆ ಇವರು ಬಿಸ್ಕೆಟ್,ಸಮೋಸ ಮತ್ತು ಬೇರೆ ತರದ ಸಣ್ಣ ಪುಟ್ಟ ತಿಂಡಿ ತಿನಿಸುಗಳನ್ನು ಸಹ ಮಾರುತ್ತಿದ್ದರು.

ಈ ಉದ್ಯಮವು ವರ್ಷಕ್ಕೆ ಸರಾಸರಿ ಲಕ್ಷ   ಮತ್ತು ಕೋಟಿಯ ಲೆಕ್ಕದಲ್ಲಿ  ಅದಾಯವನ್ನು  ಗಳಿಸುತ್ತಿದ್ದು.ಈ ಯುವಕರು ತಮ್ಮ ವೃತ್ತಿ ಶಿಕ್ಷಣದ ಕೆಲಸವನ್ನು,ಕೈ ತುಂಬಾ ಸಂಬಳ ಬರುವುದನ್ನು ಮುಂದುವರೆಸಬಹುದಾಗಿತ್ತು ಆದರೆ ಇದರ ಬದಲಾಗಿ ಅವರು ತಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಮೂಲಕ ವ್ಯಾಪಾರವನ್ನು ಕಟ್ಟಿ ಬೆಳೆಸಿದ್ದು  ಹಾಗೆ ಈ ಉದ್ಯಮವು  ಅನೇಕರಿಗೆ ಉದ್ಯೋಗವನ್ನು ಸಹ ಕಲ್ಪಿಸಿಕೊಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top