ಬೊಕ್ಕ ತಲೆಯಲ್ಲಿ ಮತ್ತೆ ಕೂದಲು ಬರ್ಬೇಕು ಅಂದ್ರೆ 6,000 ವರ್ಷಗಳ ಹಿಂದೆ ಬಳಸ್ತಾ ಇದ್ದ ಈ ಬೀಜ ತಿನ್ಬೇಕು..
ಅಗಸೆ ಬೀಜಗಳನ್ನು ಸುಮಾರು 6,000 ವರ್ಷಗಳ ಕಾಲದ ಹಿಂದೆ ಆಹಾರವಾಗಿ ಸೇವಿಸಲಾಗುತ್ತಿತ್ತು.
ಜೀರ್ಣಕ್ರಿಯೆಯನ್ನು ಸುಧಾರಿಸಲು, ಸ್ಪಷ್ಟ ಚರ್ಮ, ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡಲು, ಸಕ್ಕರೆ ಕಡುಬಯಕೆಗಳು ನಿಲ್ಲಿಸುತ್ತದೆ, ಹಾರ್ಮೋನುಗಳ ಸಮತೋಲನ ಮಟ್ಟ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಒಮೆಗಾ -3 ಕೊಬ್ಬಿನ ಆಮ್ಲಗಳ ಶ್ರೀಮಂತ ಮೂಲ ಆಲ್ಫಾ-ಲಿನೋಲೆನಿಕ್ ಆಮ್ಲ (ಎಎಲ್ಎ) ಹೆಚ್ಚಾಗಿರುತ್ತದೆ.
ಅಗಸೆ ಬೀಜಗಳ ಪೌಷ್ಟಿಕಾಂಶದ ಪ್ರಯೋಜನಗಳನ್ನು ನೋಡಿದಾಗ ನಿಮ್ಮ ಗಮನವನ್ನು ಸೆಳೆಯುವ ಅನೇಕ ವಿಷಯಗಳಿವೆ.
ಒಂದು ಔನ್ಸ್ (3 ಟೀಸ್ಪೂನ್) ಅಗಸೆ ಬೀಜದಲ್ಲಿ ಯಾವ ಯಾವ ಅಂಶಗಳು ಎಷ್ಟಿದೆ ನೋಡಿ !
ಒಮೆಗಾ -3 (ALA) 6,338mg
ಫೈಬರ್ 8 ಗ್ರಾಂ
ಪ್ರೋಟೀನ್ 6ಗ್ರಾಂ
ವಿಟಮಿನ್ ಬಿ 1 31%
ಮ್ಯಾಂಗನೀಸ್ 35%
ಮೆಗ್ನೀಸಿಯಮ್ 30%
ಫಾಸ್ಫರಸ್ 19%
ಸೆಲೆನಿಯಮ್ 10%
ಅಲ್ಲದೆ, ಅಗಸೆಬೀಜಗಳು ಉತ್ತಮ ಪ್ರಮಾಣದ ವಿಟಮಿನ್ ಬಿ6, ಕಬ್ಬಿಣ, ಪೊಟ್ಯಾಸಿಯಮ್, ತಾಮ್ರ ಮತ್ತು ಸತುವುಗಳನ್ನು ಹೊಂದಿರುತ್ತವೆ.
10 ಅಗಸೆ ಬೀಜದ ಪ್ರಯೋಜನಗಳು :
1 . ನಾರಿನಂಶಗಳು ಹೆಚ್ಚಾಗಿದೆ :
ಅಗಸೆ ಬೀಜಗಳಲ್ಲಿ ಮೆಸಿಲೇಜ್ ಎಂಬುವುದು ನೀರಿನಲ್ಲಿ ಕರಗುವ ಫೈಬರ್ ಆಗಿದ್ದು ಕರುಳಿನ ಮೇಲೆ ನಂಬಲಾಗದ ಪ್ರಯೋಜನಗಳನ್ನು ಮಾಡುತ್ತದೆ.
ಲೋಳೆಯು ಹೊಟ್ಟೆಯಲ್ಲಿ ಆಹಾರದ ಪೌಷ್ಟಿಕಾಂಶವನ್ನು ತ್ವರಿತವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
2. ಆರೋಗ್ಯಕರ ಚರ್ಮ ಮತ್ತು ಕೂದಲು
ನೀವು ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳು ಬಯಸಿದರೆ ನಿಮ್ಮ ದೈನಂದಿನ ಜೀವನದಲ್ಲಿ 2 ಚಮಚ ಅಗಸೆ ಬೀಜಗಳನ್ನು ಸೇರಿಸಿ
ಅಗಸೆ ಬೀಜಗಳಲ್ಲಿರುವ ಎಎಲ್ಎ ಕೊಬ್ಬಿನ ಅಂಶ , ಚರ್ಮ ಮತ್ತು ಕೂದಲಿಗೆ ಅತ್ಯಂತ ಪ್ರಯೋಜನಕಾರಿ ಕೊಬ್ಬಿನ ಅಂಶವಾಗಿದೆ ಮತ್ತು ಬಿ-ವಿಟಮಿನ್
ರೊಸಾಸಿಯ ಮತ್ತು ಎಸ್ಜಿಮಾ ರೋಗಲಕ್ಷಣಗಳನ್ನು ತಡೆಯುತ್ತದೆ ಮತ್ತು ಒಣ ಕಣ್ಣಿನ ಸಿಂಡ್ರೋಮ್ ಅನ್ನು ಕಡಿಮೆಗೊಳಿಸುತ್ತದೆ.
3 . ತೂಕ ಕಡಿಮೆ ಮಾಡಿಕೊಳ್ಳಬಹುದು
ಅಗಸೆ ಆರೋಗ್ಯಕರ ಕೊಬ್ಬು ಮತ್ತು ಫೈಬರ್ನಿಂದ ತುಂಬಿರುವುದರಿಂದ ನಿಮಗೆ ತೃಪ್ತಿಯಾಗುವಂತೆ ಮಾಡಿ ಆಹಾರ ಸೇವನೆ ಕಡಿಮೆಗೊಳಿಸುತ್ತದೆ ಇದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.
4 . ಆಂಟಿ ಒಕ್ಸಿಡಾಂಟ್ಸ್ :
ಪೌಷ್ಟಿಕ ಅಂಶಗಳ ಪೈಕಿ, ಅಗಸೆ ಬೀಜಗಳನ್ನು ಸಹ ಆಂಟಿ ಒಕ್ಸಿಡಾಂಟ್ಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ , ವಯಸ್ಸಾಗುವಿಕೆ ತಡೆಯುವುದು , ಹಾರ್ಮೋನ್ ಸಮತೋಲನ ಮತ್ತು ಜೀವ ಕೋಶಗಳ ಆರೋಗ್ಯಕ್ಕೆ ಬೇಕೇ ಬೇಕು .
5 . ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ :
ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸಬಲ್ಲ ಮತ್ತು ಕರಗಬಲ್ಲ ಫೈಬರ್ನಲ್ಲಿ ಅಗಸೆ ಬೀಜ ಕೂಡ ಒಂದು ಇದು ವಿಶ್ವದಲ್ಲೇ ಅತ್ಯಧಿಕ ಮೆಗ್ನೀಸಿಯಮ್ ಹೊಂದಿರುವ ಆಹಾರವಾಗಿದೆ.
6. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ :
ಅಗಸೆ ಬೀಜ ಸ್ತನ, ಪ್ರಾಸ್ಟೇಟ್, ಅಂಡಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಎಲ್ಲ ಕ್ಯಾನ್ಸರ್ ಗಳ ವಿರುದ್ಧ ಹೋರಾಡುತ್ತದೆ.
7 . ಒಮೆಗಾ -3 ಕೊಬ್ಬಿನ ಅಂಶ :
ಮೀನಿನ ಎಣ್ಣೆ ಅಥವಾ ಒಮೆಗಾ -3 ಕೊಬ್ಬಿನ ಅಂಶಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ ಇದು ದೇಹವನ್ನು ರಕ್ಷಿಸಲು ಬಹಳ ಮುಖ್ಯ.
8 . ಮೂಲೆ ಸವೆತದ ಅಪಾಯ ತಪ್ಪಿಸುತ್ತದೆ:
ಆಸ್ಟಿಯೊಪೊರೋಸಿಸ್ನ ಅಪಾಯವನ್ನು ಕಡಿಮೆ ಮಾಡುತ್ತದೆ , ಮಹಿಳೆಯರಲ್ಲಿ ಋತುಚಕ್ರ ಸರಿಯಾಗಿ ಆಗಲು ಸಹಾಯ ಮಾಡುತ್ತದೆ.
ದಿನನಿತ್ಯ ಊಟದಲ್ಲಿ 1 ಟೀ ಚಮಚದ ಅಗಸೆ ಬೀಜದ ಎಣ್ಣೆ ಮತ್ತು 1-2 ಚಮಚ ಅಗಸೆ ಬೀಜ ಸೇರಿಸಿ ತಿನ್ನಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
